IND vs IRE Highlights: ಐರ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಜಯ; ಇಲ್ಲಿದೆ ಹೈಲೈಟ್ಸ್
India vs Ireland ICC T20 World Cup 2024: ಐಸಿಸಿ ಟಿ20 ವಿಶ್ವಕಪ್ 2024ರ 8ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 8 ವಿಕೆಟ್ ಗೆಲುವು ತನ್ನದಾಗಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.
Wed, 05 Jun 202405:22 PM IST
ಭಾರತಕ್ಕೆ 8 ವಿಕೆಟ್ ಗೆಲುವು
ರಿಷಬ್ ಪಂತ್ ಗೆಲುವಿನ ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಿದ್ದಾರೆ. ಭಾರತ ಕೇವಲ 12.2 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 97 ರನ್ ಗಳಿಸಿ ಗುರಿ ತಲುಪಿದೆ. ರಿಷಬ್ ಪಂತ್ ಅಜೇಯ 36 ರನ್ ಗಳಿಸಿ ತಂಡವನ್ನು ಗುರಿ ತಲುಪಿಸಿದ್ದಾರೆ.
Wed, 05 Jun 202405:16 PM IST
ಸೂರ್ಯಕುಮಾರ್ ಯಾದವ್ ಔಟ್
ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಆದ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಕೇವಲ 2 ರನ್ ಗಳಿಸಿ ಔಟಾಗಿದ್ದಾರೆ. 11.4 ಓವರ್ ಬಳಿಕ ಭಾರತ 91/2 ರನ್ ಗಳಿಸಿದೆ.
Wed, 05 Jun 202405:04 PM IST
IND vs IRE live updates: ಭಾರತ 76/1 (10)
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಮೊದಲ 10 ಓವರ್ ಬಳಿಕ ಭಾರತ ತಂಡ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ರಿಷಬ್ ಪಂತ್ 18 ರನ್ ಗಳಿಸಿ ಆಡುತ್ತಿದ್ದಾರೆ. ತಂಡದ ಗೆಲುವಿಗೆ ಮುಂದಿನ 10 ಓವರ್‌ಗಳಲ್ಲಿ 21 ರನ್ ಮಾತ್ರ ಬೇಕಿದೆ.
Wed, 05 Jun 202404:55 PM IST
IND vs IRE live updates: ಭಾರತ 52/1 (8)
ಪಂತ್ ಮತ್ತು ರೋಹಿತ್ 30 ರನ್‌ಗಳ ಜೊತೆಯಾಟವಾಡಿದ್ದಾರೆ. ಹಿಟ್‌ಮ್ಯಾನ್ 30 ರನ್ ಗಳಿಸಿ ಆಡುತ್ತಿದ್ದಾರೆ. 8 ಓವರ್ ಬಳಿಕ ಭಾರತ 52 ರನ್ ಗಳಿಸಿದೆ.
Wed, 05 Jun 202404:43 PM IST
IND vs IRE live updates: ಭಾರತ 39/1 (6)
ರೋಹಿತ್ ಶರ್ಮಾ ಜೊತೆಗೂಡಿದ ರಿಷಬ್ ಪಂತ್ ಜವಾಬ್ದಾರಿಯುತ ಆಟವಾಡುತ್ತಿದ್ದಾರೆ. ಪವರ್‌ಪ್ಲೇನ ಮೊದಲ ಆರು ಓವರ್‌ಗಳ ಬಳಿಕ ಭಾರತ 39/1 ರನ್ ಗಳಿಸಿದೆ.
Wed, 05 Jun 202404:29 PM IST
IND vs IRE live updates: ಭಾರತ 22/1 (2.4)
ಚೇಸಿಂಗ್ ಆರಂಭದಲ್ಲೇ ಭಾರತಕ್ಕೆ ಆಘಾತ ಎದುರಾಗಿದೆ. ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದಾರೆ. ಮಾರ್ಕ್ ಅಡೈರ್ ಎಸೆತದಲ್ಲಿ ಬೆಂಜಮಿನ್ ವೈಟ್ ಅಮೋಘ ಕ್ಯಾಟ್ ಪಡೆದಿದ್ದಾರೆ. 2.4 ಓವರ್ ಬಳಿಕ ಭಾರತ 22/1 ರನ್ ಗಳಿಸಿದೆ.
Wed, 05 Jun 202404:25 PM IST
IND vs IRE live updates: ಭಾರತ ಉತ್ತಮ ಆರಂಭ, IND 22/0 (2)
ಭಾರತ ಉತ್ತಮ ಆರಂಭ ಪಡೆದಿದೆ. 2 ಓವರ್‌ಗಳ ಬಳಿಕ 22 ರನ್ ಗಳಿಸಿದೆ. ಕೊನೆಯ ಎರಡು ಎಸೆತಗಳಲ್ಲಿ ರೋಹಿತ್ ಶರ್ಮಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದಾರೆ.
Wed, 05 Jun 202404:16 PM IST
IND vs IRE live updates: ಭಾರತದ ಬ್ಯಾಟಿಂಗ್ ಆರಂಭ
ಭಾರತ ತಂಡ ಇನ್ನಿಂಗ್ಸ್ ಆರಂಭಿಸಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮಾರ್ಕ್ ಅಡೇರ್ ಮೊದಲ ಓವರ್ ಎಸೆಯಲಿದ್ದಾರೆ.
Wed, 05 Jun 202403:58 PM IST
IND vs IRE live updates: IRE 96 (16)
16 ಓವರ್‌ಗಳಲ್ಲಿ 96 ರನ್ ಗಳಿಸಿ ಐರ್ಲೆಂಡ್ ಆಲೌಟ್ ಆಗಿದೆ. ಕನಿಷ್ಠ ನೂರು ರನ್ ಗಳಿಸುವಲ್ಲೂ ತಂಡ ಎಡವಿದೆ. ಕೆಳಕ್ರಮಾಂಕದ ಬ್ಯಾಟರ್‌ಗಳ ಕೊಡುಗೆಯ ನೆರವಿಂದ ಐರ್ಲೆಂಡ್ 70ರ ಗಡಿ ದಾಟಿದೆ. ಭಾರತಕ್ಕೆ 97 ರನ್‌ಗಳ ಅಲ್ಪ ಗುರಿ ಸಿಕ್ಕಿದ್ದು, ನ್ಯೂಯಾರ್ಕ್‌ನ ಸವಾಲಿನ ಪಿಚ್‌ನಲ್ಲಿ ಚೇಸಿಂಗ್ ಕುತೂಹಲ ಮೂಡಿಸಿದೆ.
Wed, 05 Jun 202403:47 PM IST
IND vs IRE live updates: IRE 77/9 (14.2)
77 ರನ್ ವೇಳೆಗೆ ಐರ್ಲೆಂಡ್ 9 ವಿಕೆಟ್ ಕಳೆದುಕೊಂಡಿದೆ. 14(13) ರನ್ ಗಳಿಸಿದ್ದ ಲಿಟಲ್, ಬುಮ್ರಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
Wed, 05 Jun 202403:35 PM IST
IND vs IRE live updates: ಐರ್ಲೆಂಡ್ IRE 50/8 (11.2)
ಐರ್ಲೆಂಡ್ ಭಾರಿ ಸಂಕಷ್ಟದಲ್ಲಿದೆ. 11.2 ಓವರ್‌ಗಳಲ್ಲಿ 50 ರನ್ ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿದೆ. ಪಂದ್ಯದ ಮೊದಲ ಸ್ಪಿನ್ ಓವರ್‌ನಲ್ಲೇ ಅಕ್ಷರ್ ಪಟೇಲ್ ವಿಕೆಟ್ ಕಬಳಿಸಿದ್ದಾರೆ. ಮೆಕಾರ್ಥಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ನಡೆದಿದ್ದಾರೆ.
Wed, 05 Jun 202403:28 PM IST
IND vs IRE live updates: ಐರ್ಲೆಂಡ್ 49/7 (10.1)
ಐರ್ಲೆಂಡ್ ತಂಡ 7ನೇ ವಿಕೆಟ್ ಕಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಮಾರ್ಕ್ ಅದೈರ್ ಶಿವಂ ದುಬೆಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದ್ದಾರೆ. ಅವರ ಗಳಿಕೆ 3(2) ರನ್. ಐರ್ಲೆಂಡ್ 49 ರನ್ ವೇಳೆಗೆ ಪ್ರಮುಖ 7 ವಿಕೆಟ್ ಕಳೆದುಕೊಂಡಿದೆ.
Wed, 05 Jun 202403:22 PM IST
IND vs IRE live updates: ಐರ್ಲೆಂಡ್ 49/6 (9.5)
ಸಿರಾಜ್ ಎಸೆತದಲ್ಲಿ ಬುಮ್ರಾಗೆ ಕ್ಯಾಚ್ ನೀಡಿ ಡಾಕ್ರೆಲ್ ವಿಕೆಟ್ ಪತನವಾಗಿದೆ. 3(5) ರನ್ ಗಳಿಸಿ ಡಾಕ್ರೆಲ್ ಪೆವಲಿಯನ್ ಸೇರಿಕೊಂಡಿದ್ದಾರೆ. ಐರ್ಲೆಂಡ್ 6ನೇ ವಿಕೆಟ್ ಕಳೆದುಕೊಂಡಿದೆ.
Wed, 05 Jun 202403:20 PM IST
IND vs IRE live updates: ಐರ್ಲೆಂಡ್: 44-5
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಪಂತ್‌ಗೆ ಕ್ಯಾಚ್ ನೀಡಿ ಕ್ಯಾಂಫರ್ ಔಟ್ ಆಗಿದ್ದಾರೆ. ಅವರ ಗಳಿಕೆ 12(8) ರನ್, 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಉತ್ತಮ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದರು.
Wed, 05 Jun 202403:14 PM IST
IND vs IRE live updates: ಬುಮ್ರಾಗೆ ಮೊದಲ ವಿಕೆಟ್, IRE 36-4
ಬುಮ್ರಾ ಖಾತೆಗೆ ಮೊದಲ ವಿಕೆಟ್ ಸಿಕ್ಕಿದೆ. ಬುಮ್ರಾ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ಕೊಟ್ಟು ಟೆಕ್ಟರ್ ಔಟ್ ಆಗಿದ್ದಾರೆ. ಟೆಕ್ಟರ್ ಗಳಿಕೆ ಕೇವಲ 4(16) ರನ್ ಮಾತ್ರ. 8 ಓವರ್ ಬಳಿಕ ಐರ್ಲೆಂಡ್ 36-4 ರನ್ ಗಳಿಸಿದೆ.
Wed, 05 Jun 202403:08 PM IST
IND vs IRE live updates: ಐರ್ಲೆಂಡ್ ಮೂರನೇ ವಿಕೆಟ್ ಪತನ, IRE 32/3 (7)
ಐರ್ಲೆಂಡ್ ತಂಡದ ಮೂರನೇ ವಿಕೆಟ್ ಪತನವಾಗಿದೆ. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಟಕ್ಕರ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅವರ ಗಳಿಕೆ ಕೇವಲ 10(13) ರನ್. 7 ಓವರ್ ಬಳಿಕ ಐರ್ಲೆಂಡ್ 32/3 ರನ್ ಗಳಿಸಿದೆ.
Wed, 05 Jun 202403:05 PM IST
IND vs IRE live updates:ಪವರ್ ಪ್ಲೇ ಮುಕ್ತಾಯ
ಪವರ್ಪ್ಲೇ ಕೊನೆಯ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ಒಂದೂ ರನ್ ಬಿಟ್ಟುಕೊಟ್ಟಿಲ್ಲ. ತಮ್ಮ ಮೊದಲ ಓವರ್‌ನಲ್ಲೇ ಮೇಡನ್ ಮಾಡಿದ್ದಾರೆ.
ಐರ್ಲೆಂಡ್ 26/2 (0)
Wed, 05 Jun 202402:58 PM IST
5 ಓವರ್ ಮುಕ್ತಾಯಕ್ಕೆ 26/2
5ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ 13 ರನ್ ನೀಡಿದ್ದಾರೆ. 0, Wd5, 0, Wd, 0, Wd, 1, Wd, 0, 4, ಇದು ಅವರು ಬಿಟ್ಟು ಕೊಟ್ಟ ಸ್ಕೋರ್.
Wed, 05 Jun 202402:51 PM IST
4 ಓವರ್ ಮುಕ್ತಾಯಕ್ಕೆ ಐರ್ಲೆಂಡ್ 13/2
ನಾಲ್ಕನೇ ಓವರ್ನಲ್ಲಿ ಐರ್ಲೆಂಡ್ ಒಂದು ಬೌಂಡರಿ ಸಿಡಿಸಿತು.
13/2 (4)
ಕಳೆದ ಓವರ್ನಲ್ಲಿ ಐರ್ಲೆಂಡ್ ಎರಡು ವಿಕೆಟ್ ಕಳೆದುಕೊಂಡಿತು.
Wed, 05 Jun 202402:47 PM IST
ಐರ್ಲೆಂಡ್ ಮತ್ತೊಂದು ವಿಕೆಟ್ ಪತನ
ಐರ್ಲೆಂಡ್ ಮತ್ತೊಂದು ವಿಕೆಟ್ ಪತನಗೊಂಡಿದೆ. ಅರ್ಷದೀಪ್ ಸಿಂಗ್ ಎಸೆದ ಮೂರನೇ ಓವರ್ನ ಕೊನೆಯ ಓವರ್ನಲ್ಲಿ ಬಾಲ್ಬಿರ್ನಿ ಔಟ್ ಆಗಿದ್ದಾರೆ. 10 ಎಸೆತಗಳಲ್ಲಿ 5 ರನ್ ಗಳಿಸಿದ್ದಾರೆ. ಮೂರು ಓವರ್ ಮುಕ್ತಾಯಕ್ಕೆ 9 ರನ್ ನೀಡಿ ಭಾರತ 2 ವಿಕೆಟ್ ಪಡೆದಿದೆ.
Wed, 05 Jun 202402:41 PM IST
ಐರ್ಲೆಂಡ್ ಮೊದಲ ವಿಕೆಟ್ ಪತನ
ಐರ್ಲೆಂಡ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಪಾಲ್ ಸ್ಟಿರ್ಲಿಂಗ್ ಅವರು ಅರ್ಷದೀಪ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಕ್ಯಾಚ್ ನೀಡಿ ಹೊರ ನಡೆದರು. ಅವರು 6 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು.
Wed, 05 Jun 202402:40 PM IST
2 ಓವರ್ ಮುಕ್ತಾಯಕ್ಕೆ ಐರ್ಲೆಂಡ್ 7/0
ಎರಡು ಓವರ್ ಮುಕ್ತಾಯಕ್ಕೆ ಐರ್ಲೆಂಡ್ 7 ರನ್ ಗಳಿಸಿದೆ. ಎರಡನೇ ಓವರ್ನಲ್ಲಿ ಐರ್ಲೆಂಡ್ ಒಂದು ಬೌಂಡರಿಯನ್ನಷ್ಟೇ ಪಡೆಯಿತು.
Wed, 05 Jun 202402:37 PM IST
ಮೊದಲ ಓವರ್ ಮುಕ್ತಾಯ
ಮೊದಲ ಓವರ್ ಮುಕ್ತಾಯಕ್ಕೆ ಐರ್ಲೆಂಡ್ ಕೇವಲ 3 ರನ್ ಗಳಿಸಿದೆ.
Wed, 05 Jun 202402:30 PM IST
ಐರ್ಲೆಂಡ್ ಬ್ಯಾಟಿಂಗ್ ಆರಂಭ
ಐರ್ಲೆಂಡ್ ಬ್ಯಾಟಿಂಗ್ ಆರಂಭಿಸಿದೆ. ಆರಂಭಿಕರಾಗಿ ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ ಕಣಕ್ಕಿಳಿದಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
Wed, 05 Jun 202402:10 PM IST
ಐರ್ಲೆಂಡ್ ಪ್ಲೇಯಿಂಗ್ XI
ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಬೆಂಜಮಿನ್ ವೈಟ್.
Wed, 05 Jun 202402:09 PM IST
ಭಾರತ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್
Wed, 05 Jun 202402:05 PM IST
ಟೀಮ್ ಇಂಡಿಯಾ ಬೌಲಿಂಗ್ ಆಯ್ಕೆ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೆಗಾ ಟೂರ್ನಿಯಲ್ಲಿ ಉಭಯ ತಂಡಗಳಿಗೂ ಇದು ಮೊದಲ ಪಂದ್ಯವಾಗಿದೆ.
Wed, 05 Jun 202409:41 AM IST
IND vs IRE live updates: ಹವಾಮಾನ ವರದಿ
ಪಂದ್ಯದ ಸಮಯದಲ್ಲಿ ನ್ಯೂಯಾರ್ಕ್ ತಾಪಮಾನವು ಸುಮಾರು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಪಂದ್ಯದ ವೇಳೆ ಸ್ವಲ್ಪ ಮಟ್ಟಿಗೆ ಮೋಡ ಕವಿದ ವಾತಾವರಣ ಇಡುವ ನಿರೀಕ್ಷೆ ಇದೆ. ಮಳೆಯ ಸಾಧ್ಯತೆ ಇಲ್ಲ.
Wed, 05 Jun 202408:30 AM IST
IND vs IRE live updates: ನ್ಯೂಯಾರ್ಕ್ ಪಿಚ್ ವರದಿ
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ಸಮತೋಲಿತವಾಗಿದೆ. ಇದೇ ಮೈದಾನದಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಕನಿಷ್ಠ 100 ರನ್ ಗಳಿಸಿಲು ಲಂಕಾಗೆ ಸಾಧ್ಯವಾಗಲಿಲ್ಲ. ಅಲ್ಪ ಗುರಿಯನ್ನು ಚೇಸ್ ಮಾಡುವಾಗ ದಕ್ಷಿಣ ಆಫ್ರಿಕಾ ಕೂಡಾ ತಿಣುಕಾಡಿತು. ಪಂದ್ಯದ ಬಳಿಕ ಉಭಯ ತಂಡಗಳ ನಾಯಕರು ಮಾತನಾಡುತ್ತಾ, ಈ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಕಷ್ಟ ಎಂದು ಹೇಳಿದ್ದರು.
Wed, 05 Jun 202406:18 AM IST
IND vs IRE live updates: ಐರ್ಲೆಂಡ್ ಸಂಭಾವ್ಯ ತಂಡ
ಆಂಡಿ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್/ಬೆನ್ ವೈಟ್, ಜೋಶ್ ಲಿಟಲ್.
Wed, 05 Jun 202406:18 AM IST
IND vs IRE live updates: ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್.
Wed, 05 Jun 202406:17 AM IST
IND vs IRE live updates: ಲೈವ್ ಸ್ಟ್ರೀಮಿಂಗ್ ವಿವರ
ಟಿ20 ವಿಶ್ವಕಪ್ 2024 ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಹಕ್ಕನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಪಡೆದಿದೆ. ಭಾರತ ತಂಡ ಸೇರಿದಂತೆ ವಿಶ್ವಕಪ್ ಪಂದ್ಯಗಳನ್ನು ಹಾಟ್ಸ್ಟಾರ್ನಲ್ಲಿ ಮೊಬೈಲ್ ಮೂಲಕ ವೀಕ್ಷಿಸಬಹುದು. ಮೊಬೈಲ್ ಅಪ್ಲಿಕೇಷನ್ನಲ್ಲಿ ಉಚಿತವಾಗಿ ನೋಡಬಹುದು. ಆದರೆ ಲ್ಯಾಪ್ಟಾಪ್ ಮೂಲಕ ನೋಡಲು, ನೀವು ಚಂದಾದಾರರಾಗಬೇಕು.
Wed, 05 Jun 202406:15 AM IST
ನೇರಪ್ರಸಾರ ಎಲ್ಲಿ?
2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಎಲ್ಲಾ ಚಾನೆಲ್ಗಳಲ್ಲೂ ಪ್ರಸಾರವಾಗಲಿದೆ. ಇದಲ್ಲದೆ, ಭಾರತದ ವಿಶ್ವಕಪ್ ಪಂದ್ಯಗಳನ್ನು ಮಾತ್ರ ಡಿಡಿ ಸ್ಪೋರ್ಟ್ಸ್ ಚಾನೆಲ್ನಲ್ಲೂ ಉಚಿತವಾಗಿ ನೋಡಬಹುದು.
Wed, 05 Jun 202406:14 AM IST
ಪಂದ್ಯ ಆರಂಭ ಯಾವಾಗ
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ ಗ್ರೂಪ್ ಎ ಪಂದ್ಯವು ಜೂನ್ 5ರಂದು ನಡೆಯಲಿದೆ. ನ್ಯೂಯಾರ್ಕ್ನಲ್ಲಿ ಹೊಸದಾಗಿ ನಿರ್ಮಿಸಲಾದ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7:30ಕ್ಕೆ ನಡೆಯಲಿದೆ.