ಭಾರತ vs ಐರ್ಲೆಂಡ್ ವಿಶ್ವಕಪ್ ಪಂದ್ಯ; ರನ್ ಮಳೆಗೆ ಅಡ್ಡಿಯಾಗುತ್ತಾ ಡ್ರಾಪ್ ಇನ್ ಪಿಚ್? ನ್ಯೂಯಾರ್ಕ್ ಪಿಚ್, ಹವಾಮಾನ ವರದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಐರ್ಲೆಂಡ್ ವಿಶ್ವಕಪ್ ಪಂದ್ಯ; ರನ್ ಮಳೆಗೆ ಅಡ್ಡಿಯಾಗುತ್ತಾ ಡ್ರಾಪ್ ಇನ್ ಪಿಚ್? ನ್ಯೂಯಾರ್ಕ್ ಪಿಚ್, ಹವಾಮಾನ ವರದಿ

ಭಾರತ vs ಐರ್ಲೆಂಡ್ ವಿಶ್ವಕಪ್ ಪಂದ್ಯ; ರನ್ ಮಳೆಗೆ ಅಡ್ಡಿಯಾಗುತ್ತಾ ಡ್ರಾಪ್ ಇನ್ ಪಿಚ್? ನ್ಯೂಯಾರ್ಕ್ ಪಿಚ್, ಹವಾಮಾನ ವರದಿ

ನ್ಯೂಯಾರ್ಕ್‌ನ ನಾಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯದೊಂದಿಗೆ ಭಾರತೀಯ ಕ್ರಿಕಟ್‌ ತಂಡವು 2024ರ ಟಿ20 ವಿಶ್ವಕಪ್ ಅಭಿಯಾನ ಆರಂಭಿಸುತ್ತದೆ. ಮೈದಾನದ ಪಿಚ್ ಹಾಗೂ‌ ಹವಾಮಾನ ವರದಿ ಇಲ್ಲಿದೆ.

ಭಾರತ vs ಐರ್ಲೆಂಡ್ ವಿಶ್ವಕಪ್ ಪಂದ್ಯ; ರನ್ ಮಳೆಗೆ ಅಡ್ಡಿಯಾಗುತ್ತಾ ಡ್ರಾಪ್ ಇನ್ ಪಿಚ್
ಭಾರತ vs ಐರ್ಲೆಂಡ್ ವಿಶ್ವಕಪ್ ಪಂದ್ಯ; ರನ್ ಮಳೆಗೆ ಅಡ್ಡಿಯಾಗುತ್ತಾ ಡ್ರಾಪ್ ಇನ್ ಪಿಚ್ (PTI)

ಐಸಿಸಿ ಟಿ20 ವಿಶ್ವಕಪ್‌ 2024ರಲ್ಲಿ ಭಾರತ ಕ್ರಿಕೆಟ್‌ ತಂಡವು ಇಂದು (ಜೂನ್‌ 5, ಬುಧವಾರ) ಅಭಿಯಾನ ಆರಂಭಿಸುತ್ತಿದೆ. ನ್ಯೂಯಾರ್ಕ್‌ನಲ್ಲಿ ನಿರ್ಮಾಣವಾಗಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಪಂದ್ಯದಲ್ಲಿ ಚೊಚ್ಚಲ ಟಿ20 ವಿಶ್ವಕಪ್‌ ಚಾಂಪಿಯನ್‌ ಭಾರತ ತಂಡವು ಐರ್ಲೆಂಡ್ (India vs Ireland) ವಿರುದ್ಧ ಆಡಲಿದೆ. ಉಭಯ ತಂಡಗಳು ಕೊನೆಯ ಬಾರಿಗೆ 2023ರಲ್ಲಿ ಐರ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಇದೀಗ ಕಳೆದ ಆರು ತಿಂಗಳಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದ ರೋಹಿತ್‌ ಶರ್ಮಾ ಪಡೆಯು, ಐಪಿಎಲ್‌ ಟೂರ್ನಿ ಬಳಿಕ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ. ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಸಜ್ಜಾಗಿದೆ.

ಉಭಯ ತಂಡಗಳ ನಡುವೆ ಕ್ರಿಕೆಟ್‌ ಇತಿಹಾಸದಲ್ಲಿ ಟಿ20ಯಲ್ಲಿ ಭಾರತ ಅಜೇಯವಾಗಿದೆ. ಐರಿಷ್‌ ತಂಡದ ವಿರುದ್ಧ ಎಲ್ಲಾ 7 ಪಂದ್ಯಗಳಲ್ಲಿ ಗೆದ್ದಿದೆ. 2009ರಲ್ಲಿ ಏಕೈಕ ಬಾರಿ ವಿಶ್ವಕಪ್‌ನಲ್ಲಿ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲೂ ಭಾರತ 8 ವಿಕೆಟ್‌ಗಳಿಂದ ಜಯಿಸಿತ್ತು.

  • ಭಾರತ vs ಐರ್ಲೆಂಡ್, ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯ 8
  • ದಿನಾಂಕ: 5ನೇ ಜೂನ್ 2024
  • ಸಮಯ: ರಾತ್ರಿ 08:00 ಗಂಟೆ (ಭಾರತೀಯ ಕಾಲಮಾನ)
  • ಸ್ಥಳ: ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ನ್ಯೂಯಾರ್ಕ್

ನ್ಯೂಯಾರ್ಕ್‌ ಪಿಚ್ ವರದಿ

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ಸಮತೋಲಿತವಾಗಿದೆ. ಇದು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ಗೆ ಸಮಾನವಾಗಿ ನೆರವಾಗಲಿದೆ. ಇದೇ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಉತ್ತಮ ಮೊತ್ತ ಕಲೆ ಹಾಕಿ ಸುಲಭ ಜಯ ದಾಖಲಿಸಿತ್ತು. ಆದರೆ, ಇದೇ ಮೈದಾನದಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಆಗಿದ್ದೇ ಬೇರೆ. ಕನಿಷ್ಠ 100 ರನ್‌ ಗಳಿಸಿಲು ಲಂಕಾಗೆ ಸಾಧ್ಯವಾಗಲಿಲ್ಲ. ಅಲ್ಪ ಗುರಿಯನ್ನು ಚೇಸ್‌ ಮಾಡುವಾಗ ದಕ್ಷಿಣ ಆಫ್ರಿಕಾ ತಿಣುಕಾಡಿತು. ಪಂದ್ಯದ ಬಳಿಕ ಉಭಯ ತಂಡಗಳ ನಾಯಕರು ಮಾತನಾಡುತ್ತಾ, ಈ ಪಿಚ್‌ನಲ್ಲಿ ಬ್ಯಾಟಿಂಗ್‌ ನಡೆಸುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ತಾತ್ಕಾಲಿಕ ಡ್ರಾಪ್‌ ಇನ್‌ ಪಿಚ್‌ ಇಂದು ಹೇಗೆ ವರ್ತಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹವಾಮಾನ ವರದಿ

ಪಂದ್ಯದ ಸಮಯದಲ್ಲಿ ನ್ಯೂಯಾರ್ಕ್‌ ತಾಪಮಾನವು ಸುಮಾರು 21 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ. ಪಂದ್ಯದ ವೇಳೆ ಸ್ವಲ್ಪ ಮಟ್ಟಿಗೆ ಮೋಡ ಕವಿದ ವಾತಾವರಣ ಇಡುವ ನಿರೀಕ್ಷೆ ಇದೆ. ಮಳೆಯ ಸಾಧ್ಯತೆ ಇಲ್ಲ.

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್.

ಐರ್ಲೆಂಡ್ ಸಂಭಾವ್ಯ ತಂಡ

ಆಂಡಿ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್/ಬೆನ್ ವೈಟ್, ಜೋಶ್ ಲಿಟಲ್.

Whats_app_banner