IND vs NZ ICC World Cup Highlights:‌ ನ್ಯೂಜಿಲ್ಯಾಂಡ್ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Nz Icc World Cup Highlights:‌ ನ್ಯೂಜಿಲ್ಯಾಂಡ್ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

IND vs NZ ICC World Cup Highlights:‌ ನ್ಯೂಜಿಲ್ಯಾಂಡ್ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

India vs New Zealand World Cup 2023 Highlights: ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ 21ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡವು ರೋಚಕ ಜಯ ಸಾಧಿಸಿದೆ. ಪಂದ್ಯದ ಹೈಲೈಟ್ಸ್‌ ಇಲ್ಲಿದೆ.

ಭಾರತ-ನ್ಯೂಜಿಲ್ಯಾಂಡ್‌ ವಿಶ್ವಕಪ್‌ ಪಂದ್ಯದ ಲೈವ್ ಅಪ್ಡೇಟ್ಸ್
ಭಾರತ-ನ್ಯೂಜಿಲ್ಯಾಂಡ್‌ ವಿಶ್ವಕಪ್‌ ಪಂದ್ಯದ ಲೈವ್ ಅಪ್ಡೇಟ್ಸ್

IND vs NZ ICC World Cup 2023 Highlights: ಐಸಿಸಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ರೋಚಕ ಜಯ ದಾಖಲಿಸಿದೆ. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿದೆ. ಪಂದ್ಯದ ಹೈಲೈಟ್ಸ್‌ ಇಲ್ಲಿದೆ.

10.20 PM IND vs NZ ICC World Cup 2023 Highlights: 5ರಲ್ಲಿ 5. ಭಾರತ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆದ್ದು ವಿಶ್ವಕಪ್‌ 2023ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ನ್ಯೂಜಿಲ್ಯಾಂಡ್‌ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಭಾರತ ತಂಡವು 2019ರ ವಿಶ್ವಕಪ್‌ ಸೆಮಿಫೈನಲ್‌ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 95 ರನ್‌ಗಳಿಗೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಶೆಯಾಯ್ತು. ಆದರೂ ಕೊಹ್ಲಿಯ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವು ಭಾರತದ ಪಂದ್ಯ ಗೆಲುವಿಗೆ ಕಾರಣವಾಯ್ತು. ಪ್ರಸಕ್ತ ವಿಶ್ವಕಪ್‌ನಲ್ಲಿ ಆಡುವ ಬಳಗದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದ ಮೊಹಮ್ಮದ್‌ ಶಮಿ 5 ವಿಕೆಟ್‌ ಪಡೆಯುವುದರೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಭಾರತದ ಮುಂದಿನ ಎದುರಾಳಿ ಇಂಗ್ಲೆಂಡ್‌. ಅದು ಒಂದು ವಾರದ ಬಳಿಕ. ಅಲ್ಲಿಯವರೆಗೂ ಟೀಮ್‌ ಇಂಡಿಯಾ ಆಟಗಾರರಿಗೆ ಸುದೀರ್ಘ ವಿಶ್ರಾಂತಿ ಇದೆ. ಮತ್ತೆ ನಾಳಿನ ಲೈವ್‌ ಅಪ್ಡೇಟ್‌ ಜೊತೆಗೆ ಮತ್ತೆ ಭೇಟಿಯಾಗೋಣ. ಶುಭರಾತ್ರಿ.

10.10 PM IND vs NZ ICC World Cup 2023 Live Updates, IND 274/6 (48): ಭಾರತಕ್ಕೆ ನಾಲ್ಕು ವಿಕೆಟ್‌ಗಳ ಭರ್ಜರಿ ಗೆಲುವು‌ ಲಭಿಸಿದೆ. ರವೀಂದ್ರ ಜಡೇಜಾ ಗೆಲುವಿನ ಬೌಂಡರಿ ಸಿಡಿಸಿದ್ದಾರೆ.

10.10 PM IND vs NZ ICC World Cup 2023 Live Updates, IND 270/6 (47.5): ಶತಕದ ಹೊಸ್ತಿಲಲ್ಲಿ ವಿರಾಟ್‌ ಕೊಹ್ಲಿ 95(104) ರನ್‌ ಗಳಿಸಿ ಔಟಾಗಿದ್ದಾರೆ.

9.50 PM IND vs NZ ICC World Cup 2023 Live Updates, IND 245/5 (44): ವಿರಾಟ್‌ ಮತ್ತು ಜಡೇಜಾ 54(61) ರನ್‌ಗಳ ಜೊತೆಯಾಟವಾಡಿದ್ದಾರೆ. ಆ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ.

9.35 PM IND vs NZ ICC World Cup 2023 Live Updates, IND 225/5 (40): ವಿರಾಟ್‌ ಕೊಹ್ಲಿ ಮತ್ತು ಜಡೇಜಾ ರಕ್ಷಣಾತ್ಮಕ ಆಟವಾಡುತ್ತಿದ್ದಾರೆ. ತಂಡದ ಗೆಲುವಿಗೆ 49 ರನ್‌ಗಳ ಅಗತ್ಯವಿದೆ.

9.10 PM IND vs NZ ICC World Cup 2023 Live Updates, IND 191/5 (34): ಸೂರ್ಯಕುಮಾರ್‌ ಯಾದವ್‌ ಅನಗತ್ಯ ರನ್‌ ಗಳಿಸಲು ಹೋಗಿ ರನೌಟ್‌ ಆಗಿದ್ದಾರೆ.ಭಾರತ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ.

9.00 PM IND vs NZ ICC World Cup 2023 Live Updates, IND 182/4 (32.1): ಕೆಎಲ್‌ ರಾಹುಲ್‌ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದಾರೆ. ಭಾರತ ನಾಲ್ಕನೇ ವಿಕೆಟ್‌ ಕಳೆದುಕೊಂಡಿದೆ. ತಂಡ ಇನ್ನೂ ಗೆಲುವಿನಿಂದ 92 ರನ್‌ ದೂರವಿದೆ.

8.55 PM IND vs NZ ICC World Cup 2023 Live Updates, IND 182/3 (32): ಕೊಹ್ಲಿ ಮತ್ತು ರಾಹುಲ್‌ ಆಕರ್ಷಕ ಅರ್ಧಶತಕದ ಜೊತೆಯಾಟವಾಡಿದ್ದಾರೆ. ಈಗಾಗಲೇ ಈ ಜೋಡಿ ಬಾಂಗ್ಲಾ ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲಿಸಿದ್ದಾರೆ. ಇವರಿಂದ ಮತ್ತೊಂದು ಗೆಲುವಿನ ಜೊತೆಯಾಟದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

8.45 PM IND vs NZ ICC World Cup 2023 Live Updates, IND 168-3 (30): ಮೂವತ್ತು ಓವರ್‌ ಬಳಿಕ ಭಾರತ 168 ರನ್‌ ಕಲೆ ಹಾಕಿದೆ. ಕೊಹ್ಲಿ ಮತ್ತು ರಾಹುಲ್‌ ಆಡುತ್ತಿದ್ದಾರೆ. ಇವರಿಬ್ಬರ ಬ್ಯಾಟ್‌ನಿಂದ 42(54) ರನ್‌ ಜೊತೆಯಾಟ ಬಂದಿದೆ.

8.15 PM IND vs NZ ICC World Cup 2023 Live Updates, IND 128/3 (21.3): ಶ್ರೇಯಸ್‌ ಅಯ್ಯರ್‌ 29 ಎಸೆತಗಳಿಂದ 33 ರನ್‌ ಗಳಿಸಿ ಬೋಲ್ಟ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಭಾರತ ಮೂರು ವಿಕೆಟ್‌ ಕಳೆದುಕೊಂಡಿದೆ. ರಾಹುಲ್‌ ಮೈದಾನಕ್ಕೆ ಆಗಮಿಸಿದ್ದಾರೆ.

8.10 PM IND vs NZ ICC World Cup 2023 Live Updates, IND 127/2 (21): ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಅರ್ಧಶತಕದ ಜೊತೆಯಾಟವಾಡಿದ್ದಾರೆ. ಭಾರತದ ಗೆಲುವಿಗೆ ಮುಂದೆ 147 ರನ್‌ಗಳ ಅಗತ್ಯವಿದೆ.

7.50 PM IND vs NZ ICC World Cup 2023 Live Updates: ಮಂಜು ಮತ್ತೆ ಬಾನೆತ್ತರಕ್ಕೆ ಸಾಗುತ್ತಿದೆ. ಹೀಗಾಗಿ ಪಂದ್ಯವನ್ನು ಮರುಆರಂಭಿಸಲಾಗಿದೆ.

7.40 PM IND vs NZ ICC World Cup 2023 Live Updates, IND 100/2 (15.4): ಭಾರತ ತಂಡ ಶತಕ ಗಳಿಸಿದೆ. ಆದರೆ, ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಧರ್ಮಶಾಲಾ ಮೈದಾನವು ಶ್ವೇತವರ್ಣದ ಮಂಜಿನಿಂದ ಆವೃತವಾಗಿದೆ. ಮುಂದಿನ ಅಪ್ಡೇಟ್‌ ಬಳಿಕ ಪಂದ್ಯದ ಲೈವ್‌ ಮುಂದುವರೆಸಲಿದ್ದೇವೆ.

7.25 PM IND vs NZ ICC World Cup 2023 Live Updates, IND 76/2 (13.2): ಶುಭ್ಮನ್‌ ಗಿಲ್‌ 26 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಭಾರತ ತಂಡ ಮೇಲಿಂದ ಮೇಲೆ ಎರಡು ವಿಕೆಟ್‌ ಕಳೆದುಕೊಂಡಿದೆ

7.20 PM IND vs NZ ICC World Cup 2023 Live Updates, IND 71/1 (11.2): ಗಿಲ್‌ ಮತ್ತು ರೋಹಿತ್‌ ಶರ್ಮಾ ನಡುವಿನ 71(67) ರನ್‌ಗಳ ಜೊತೆಯಾಟವನ್ನು ಫರ್ಗ್ಯುಸನ್‌ ಮುರಿದಿದ್ದಾರೆ. 46(40) ರನ್‌ ಗಳಿಸಿ ನಾಯಕ ರೋಹಿತ್‌ ವಿಕೆಟ್‌ ಒಪ್ಪಿಸಿದ್ದಾರೆ.

7.15 PM IND vs NZ ICC World Cup 2023 Live Updates, IND 71/0 (11): ರೋಹಿತ್‌ ಮತ್ತು ಗಿಲ್‌ ಅರ್ಧಶತಕದ ಜೊತೆಯಾಟವಾಡಿದ್ದಾರೆ. ಅಲ್ಲದೆ ರನ್‌ ಗಳಿಕೆಯನ್ನು ಮತ್ತಷ್ಟು ವೇಗವಾಗಿಸಿದ್ದಾರೆ.

7.00 PM IND vs NZ ICC World Cup 2023 Live Updates, IND 48/0 (7): ಭಾರತ ಉತ್ತಮ ಆರಂಭ ಪಡೆದಿದೆ. ಈ ನಡುವೆ ಶುಭ್ಮನ್‌ ಗಿಲ್‌ ವಿಶೇಷ ದಾಖಲೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್‌ಗಳನ್ನು ಪೂರೈಸಿದ್ದಾರೆ.

6.35 PM IND vs NZ ICC World Cup 2023 Live Updates, IND 22/0 (3): ರೋಹಿತ್‌ ಶರ್ಮಾ ಕ್ಯಾಚ್‌ ಅನ್ನು ಸ್ಲಿಪ್‌ನಲ್ಲಿ ಮಿಚೆಲ್‌ ಡ್ರಾಪ್‌ ಮಾಡಿದ್ದಾರೆ. ಭಾರತ ಉತ್ತಮ ಆರಂಭ ಪಡೆದಿದೆ.

6.35 PM IND vs NZ ICC World Cup 2023 Live Updates: ಭಾರತ ತಂಡ ಚೇಸಿಂಗ್‌ ಆರಂಭಿಸಿದೆ. 274 ರನ್‌ಗಳ ಗುರಿಯೊಂದಿಗೆ ರೋಹಿತ್‌ ಶರ್ಮಾ ಮತ್ತು ಶುಭ್ಮನ್‌ ಗಿಲ್‌ ಬ್ಯಾಟಿಂಗ್‌ ಆರಂಭಿಸಿದ್ದಾರೆ.

6.05 PM IND vs NZ ICC World Cup 2023 Live Updates, NZ 273 (50): ಶಮಿ ಇನ್ನಿಂಗ್ಸ್‌ನ ಹೀರೋ ಆಗಿದ್ದಾರೆ. 5 ವಿಕೆಟ್‌ ಕಬಳಿಸಿ ಕಿವೀಸ್‌ ಬೃಹತ್‌ ಮೊತ್ತದ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ನಿಗದಿತ ಓವರ್‌ಗಳಲ್ಲಿ ಕಿವೀಸ್‌ 273 ರನ್‌ಗಳಿಗೆ ಆಲೌಟ್‌ ಆಗಿದೆ. ಭಾರತಕ್ಕೆ 274 ರನ್‌ಗಳ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ. ಒಂದು ಹಂತದಲ್ಲಿ 243 ರನ್‌ಗಳಿಗೆ ಕೇವಕ 4 ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್‌, 273 ರನ್‌ ವೇಳೆಗೆ ಆಲೌಟ್‌ ಆಗಿದೆ. ಭಾರತದ ಡೆತ್‌ ಬೌಲಿಂಗ್‌ ಅದ್ಭುತವಾಗಿತ್ತು. ಮುಂದೆ ಭಾರತದ ಚೇಸಿಂಗ್‌ ನೋಡುವ ಸಮಯ.

5.50 PM IND vs NZ ICC World Cup 2023 Live Updates, NZ 260/8 (48): ಓಹ್‌… ಮತ್ತೆ ಶಮಿ ರಾಕಿಂಗ್.‌ ಸ್ಯಾಂಟ್ನರ್‌ ಮತ್ತು ಮ್ಯಾಟ್‌ ಹೆನ್ರಿ ಕ್ಲೀನ್‌ ಬೋಲ್ಡ್.‌ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕಬಳಿಸಿದ ಶಮಿ. ಡೆತ್‌ ಓವರ್‌ಗಳಲ್ಲಿ ಇದಕ್ಕಿಂತ ಉತ್ತಮ ಬೌಲಿಂಗ್‌ ಸಾಧ್ಯವಿಲ್ಲ.

5.45 PM IND vs NZ ICC World Cup 2023 Live Updates, NZ 257/6 (47): ಮಾರ್ಕ್‌ ಚಾಪ್‌ಮನ್‌ 14 ರನ್‌ ಗಳಿಸಿ ಔಟಾಗಿದ್ದಾರೆ. ಕಿವೀಸ್‌ 6 ವಿಕೆಟ್‌ ಕಳೆದುಕೊಂಡಿದೆ. ಡೆತ್‌ ಓವರ್‌ಗಳಲ್ಲಿ ಭಾರತ ಅದ್ಭುತ ಬೌಲಿಂಗ್‌ ಮಾಡುತ್ತಿದೆ.

5.30 PM IND vs NZ ICC World Cup 2023 Live Updates, NZ 243/5 (44.2): ಮಿಚೆಲ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ಉತ್ತಮ ಮೊತ್ತದೊಂದಿಗೆ ಇನ್ನಿಂಗ್ಸ್‌ ಮುಗಿಸಲು ಪ್ರಯತ್ನಿಸುತ್ತಿದ್ದ ವೇಳೆ, ಕುಲ್ದೀಪ್‌ ಬ್ರೇಕಪ್‌ ಕೊಟ್ಟಿದ್ದಾರೆ. 38(45) ರನ್‌ ಜೊತೆಯಾಟದ ಬಳಿಕ ಫಿಲಿಪ್ಸ್‌ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

4.55 PM IND vs NZ ICC World Cup 2023 Live Updates, NZ 205/4 (36.5): ಕಿವೀಸ್‌ ನಾಯಕ ಟಾಮ್‌ ಲಥಮ್‌ 5 ರನ್‌ ಗಳಿಸಿ ಕುಲ್ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ನ್ಯೂಜಿಲ್ಯಾಂಡ್‌ ತಂಡ 4 ವಿಕೆಟ್‌ ಕಳೆದುಕೊಂಡಿದೆ.

5.10 PM IND vs NZ ICC World Cup 2023 Live Updates, NZ 222/4 (41): ಡೇರಿಲ್‌ ಮಿಚೆಲ್‌ ಆಕರ್ಷಕ ಶತಕ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ ಐದನೇ ಶತಕ.

4.40 PM IND vs NZ ICC World Cup 2023 Live Updates, NZ 179/3 (33.4): ಮತ್ತೆ ಮೊಹಮ್ಮದ್‌ ಶಮಿ ಭಾರತಕ್ಕೆ ಮುನ್ನಡೆ ತಂದುಕೊಟ್ಟಿದ್ದಾರೆ. ಮಿಚೆಲ್‌ ಜೊತೆಗಿನ ಬರೋಬ್ಬರಿ 159(152) ರನ್‌ಗಳ ಜೊತೆಯಾಟದ ಬಳಿಕ ರಚಿನ್‌ ರವೀಂದ್ರ 75(87) ರನ್‌ ಗಳಿಸಿ ಔಟಾಗಿದ್ದಾರೆ.

4.20 PM IND vs NZ ICC World Cup 2023 Live Updates, NZ 160/2 (31): ರಚಿನ್‌ ಮತ್ತು ಮಿಚೆಲ್‌ ಬ್ಯಾಟ್‌ನಿಂದ ಈಗಾಗಲೇ 141 ರನ್‌ಗಳ ಭರ್ಜರಿ ಜೊತೆಯಾಟ ಬಂದಿದೆ. ಭಾರತ ವಿಕೆಟ್‌ ಪಡೆಯಲು ಪರದಾಡುತ್ತಿದೆ.

3.55 PM IND vs NZ ICC World Cup 2023 Live Updates, NZ 125/2 (25): ರಚಿನ್‌ ಮತ್ತು ಮಿಚೆಲ್‌ 106 ರನ್‌ಗಳ ದಾಖಲೆಯ ಜೊತೆಯಾಟವಾಡಿದ್ದಾರೆ. ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧ ಕಿವೀಸ್‌ ಆಟಗಾರರು ಯಾವುದೇ ವಿಕೆಟ್‌ಗೆ ಕಲೆಹಾಕಿದ ದಾಖಲೆಯ ಜೊತೆಯಾಟ ಇದಾಗಿದೆ.

3.45 PM IND vs NZ ICC World Cup 2023 Live Updates, NZ 110/2 (22.5): ರವೀಂದ್ರ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.

3.40 PM IND vs NZ ICC World Cup 2023 Live Updates, NZ 100/2 (21): ರಚಿನ್‌ ರವೀಂದ್ರ ಮತ್ತು ಡೇರಿಲ್‌ ಮಿಚೆಲ್‌ ತಂಡದ ಮೊತ್ತವನ್ನು ಶತಕದತ್ತ ಕೊಂಡೊಯ್ದಿದ್ದಾರೆ. ಈಗಾಗಲೇ 81 ರನ್‌ಗಳ ಉತ್ತಮ ಜೊತೆಯಾಟವಾಡಿದ್ದಾರೆ.

3.20 PM IND vs NZ ICC World Cup 2023 Live Updates, NZ 61/2 (15): ರಚಿನ್‌ ರವೀಂದ್ರ ಮತ್ತು ಡೇರಿಲ್‌ ಮಿಚೆಲ್‌ ಕಿವೀಸ್‌ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಪ್ರಯತ್ನದಲ್ಲಿದ್ದಾರೆ. ಇವರಿಬ್ಬರಿಂದ ಈಗಾಗಲೇ 42(41) ರನ್‌ಗಳ ಜೊತೆಯಾಟ ಬಂದಿದೆ.

2.55 PM IND vs NZ ICC World Cup 2023 Live Updates, NZ 34/2 (10) : ಪವರ್‌ಪ್ಲೇ ಬಳಿಕ 2 ವಿಕೆಟ್‌ ಕಳೆದುಕೊಂಡು ನ್ಯೂಜಿಲ್ಯಾಂಡ್‌ 34 ರನ್‌ ಗಳಿಸಿದೆ.

2.40 PM IND vs NZ ICC World Cup 2023 Live Updates, NZ 19/2 (8.1): ಕ್ಲೀನ್‌ ಬೋಲ್ಡ್…‌ ಮೊಹಮ್ಮದ್‌ ಶಮಿ ಪ್ರಸಕ್ತ ವಿಶ್ವಕಪ್‌ನಲ್ಲಿ ಎಸೆದ ಮೊದಲ ಎಸೆತದಲ್ಲೇ ವಿಲ್‌ ಯಂಗ್‌ ಅವರನ್ನು ಇನ್‌ಸೈಡ್‌ ಎಡ್ಜ್‌ ಮೂಲಕ ಕ್ಲೀನ್‌ ಬೋಲ್ಡ್‌ ಮಾಡಿದ್ದಾರೆ. ವಿಲ್‌ ಯಂಗ್‌ 17(27) ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ.

2.35 PM IND vs NZ ICC World Cup 2023 Live Updates, NZ 18/1 (7): ವಿಲ್‌ ಯಂಗ್‌ ಮತ್ತು ರಚಿನ್‌ ರವೀಂದ್ರ ಬ್ಯಾಟಿಂಗ್‌ ಮುಂದುವರೆಸಿದ್ದಾರೆ. ವಿಕೆಟ್‌ ಉಳಿಸಿಕೊಂಡು ಬ್ಯಾಟಿಂಗ್‌ ನಡೆಸುವತ್ತ ಯೋಜಿಸಿದ್ದಾರೆ.

2.20 PM IND vs NZ ICC World Cup 2023 Live Updates, NZ 5/0 (2): ಮೊಹಮ್ಮದ್‌ ಸಿರಾಜ್‌ ಆರಂಭದಲ್ಲೇ ದೊಡ್ಡ ಮೀನಿಗೆ ಬಲೆ ಹಾಕಿ ಹಿಡಿದಿದ್ದಾರೆ. ಆದ್ರೆ ಈ ಕ್ರೆಡಿಟ್‌ ಶ್ರೇಯಸ್‌ ಅಯ್ಯರ್‌ಗೆ. ಅದ್ಭುತ ಕ್ಯಾಚ್.‌ ಡಿವೋನ್‌ ಕಾನ್ವೆ ಡಕೌಟ್!

2.10 PM IND vs NZ ICC World Cup 2023 Live Updates, NZ 5/0 (2): ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಆರಂಭಿಸಿದೆ. ಡಿವೋನ್‌ ಕಾನ್ವೆ ಮತ್ತು ವಿಲ್‌ ಯಂಗ್‌ ಆರಂಭಿಕರಾಗಿ ಆಡುತ್ತಿದ್ದಾರೆ.

1.42 PM: India vs New Zealand World Cup 2023 Live Updates: ಭಾರತದ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

1.41 PM: India vs New Zealand World Cup 2023 Live Updates: ನ್ಯೂಜಿಲೆಂಡ್ ಆಡುವ 11ರ ಬಳಗ

ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ, ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

1.34 PM: India vs New Zealand World Cup 2023 Live Updates: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಧರ್ಮಶಾಲಾದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

11.23 AM: India vs New Zealand World Cup 2023 Live Updates: ಹಿಂದಿನ ಪಂದ್ಯಗಳಲ್ಲಿ ತಂಡಗಳ ಬಲಾಬಲ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 116 ಬಾರಿ ಮುಖಾಮುಖಿಯಾಗಿದ್ದು, 58 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ 50 ಪಂದ್ಯಗಳನ್ನು ಗೆದ್ದುಕೊಂಡಿದೆ. 7 ಪಂದ್ಯಗಳು ಫಲಿತಾಂಶ ಕಾಣಲಿಲ್ಲ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

11.22 AM: India vs New Zealand World Cup 2023 Live Updates: ಎಷ್ಟು ಗಂಟೆಗೆ ಪಂದ್ಯ ಆರಂಭವಾಗುತ್ತೆ?

ನಿಗದಿಯಂತೆ ಪಂದ್ಯ ಭಾರತೀಯ ಕಾಲಮಾನದಂತೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಅಂದರೆ 1.30ಕ್ಕೆ ಟಾಸ್ ನಡೆಯಲಿದೆ. 2023ರ ವಿಶ್ವಕಪ್‌ನಲ್ಲಿ ಈವರೆಗೆ ಉಭಯ ತಂಡಗಳು ಸೋತೇ ಇಲ್ಲ. ಹೀಗಾಗಿ ಯಾವ ತಂಡ ಸೋಲಿನ ರುಚಿ ನೋಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿಯಲಿದೆ. ನ್ಯೂಜಿಲೆಂಡ್ ಆಡಿರುವ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಅದೇ ರೀತಿಯಾಗಿ ಟೀಂ ಇಂಡಿಯಾ ಕೂಡ ಉತ್ತಮ ಪ್ರದರ್ಶನದೊಂದಿಗೆ ಈವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

11.20 AM: India vs New Zealand World Cup 2023 Live Updates: ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಗೈರು

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗೈರಾಗುವುದು ಖಚಿತವಾಗಿದೆ. ಇದರಿಂದ ಟೀಂ ಇಂಡಿಯಾಗೆ ಕೊಂಚ ಹಿನ್ನಡೆಯೂ ಆಗಿದೆ. ಹಾರ್ದಿಕ್ ಬದಲಿಗೆ ಸ್ಥಾನ ಪಡೆಯಬೇಕಿದ್ದ ಸೂರ್ಯಕುಮಾರ್ ಯಾದವ್ ಕೂಡ ಗಾಯಗೊಂಡಿದ್ದಾರೆ. ಇಶಾನ್ ಕಿಶನ್‌ಗೆ ಇಂದಿನ ಪಂದ್ಯದಲ್ಲಿ ಸ್ಥಾನ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕು.

11.16 AM: India vs New Zealand World Cup 2023 Live Updates: ಹೇಗಿದೆ ತಂಡಗಳ ಬಲಾಬಲ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 116 ಬಾರಿ ಮುಖಾಮುಖಿಯಾಗಿದ್ದು, 58 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ 50 ಪಂದ್ಯಗಳನ್ನು ಗೆದ್ದುಕೊಂಡಿದೆ. 7 ಪಂದ್ಯಗಳು ಫಲಿತಾಂಶ ಕಾಣಲಿಲ್ಲ. ಒಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

10.36 AM: India vs New Zealand World Cup 2023 Live Updates: ಪಂದ್ಯ ಉಚಿತವಾಗಿ ನೋಡುವುದು ಹೇಗೆ?

ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯವನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ಟಿವಿ ಮತ್ತು ಡಿಜಿಟಲ್ ಎರಡರಲ್ಲೂ ವಿಶ್ವಕಪ್ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತದೆ.

9.23 AM: India vs New Zealand World Cup 2023 Live Updates: ಭಾರತ ಸಂಭಾವ್ಯ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

9.22 AM: India vs New Zealand World Cup 2023 Live Updates: ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ, ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

8.54 AM: India vs New Zealand World Cup 2023 Live Updates: ಹೇಗಿದೆ ಧರ್ಮಶಾಲಾ ಪಿಚ್?

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಮೈದಾನವು ಅತ್ಯಂತ ಸುಂದರ ಮೈದಾನವಾಗಿದೆ. ಹಿಮಾಲಯದ ತಪ್ಪಲಿನಲ್ಲಿ ತಲೆ ಎತ್ತಿ ನಿಂತಿರುವ ಈ ಮೈದಾನವು ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಸಮುದ್ರ ಮಟ್ಟದಿಂದ 1,317 ಮೀಟರ್ ಎತ್ತರದಲ್ಲಿರುವ ಹೆಚ್‌ಪಿಸಿಎಂ, 23 ಸಾವಿರ ಆಸನಗಳ ಸಾಮರ್ಥ್ಯವನ್ನು ಹೊಂದಿದೆ.

ತೆರೆದ ಮೈದಾನದಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಹಾಗಾಗಿ ವೇಗದ ಬೌಲರ್‌ಗಳಿಗೆ ಪಿಚ್ ಹೆಚ್ಚು ನೆರವು ನೀಡುತ್ತದೆ. ವಿಶ್ವಕಪ್‌ಗಾಗಿ ಮೈದಾನವನ್ನು ನವೀಕರಣಗೊಳಿಸಿರುವ ಕಾರಣ ಬ್ಯಾಟಿಂಗ್‌ಗೂ ಸಹಾಯ ಮಾಡುತ್ತದೆ. ಪಂದ್ಯದ ಆರಂಭದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದರೂ ಪಂದ್ಯ ಮುಂದುವರೆದಂತೆ ಹಿಡಿತ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

8.32 AM: India vs New Zealand World Cup 2023 Live Updates: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್

ನ್ಯೂಜಿಲೆಂಡ್: ಬೋಲ್ಟ್, ಮಾರ್ಕ್ ಚಾಪ್ಮನ್, ಡೆವೊನ್‌ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ನಾಯಕ), ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಟ್ರೆಂಟ್ ಬೋಲ್ಟ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮೆಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್. ಕೇನ್ ವಿಲಿಯಮ್ಸನ್

8.31AM: India vs New Zealand World Cup 2023 Live Updates: ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದ ಸಂಪೂರ್ಣ ಮಾಹಿತಿ

ಪಂದ್ಯ: ಭಾರತ ಮತ್ತು ನ್ಯೂಜಿಲೆಂಡ್, ಐಸಿಸಿ ಪುರುಷರ ವಿಶ್ವಕಪ್ 2023 21ನೇ ಪಂದ್ಯ

ದಿನಾಂಕ: ಅಕ್ಟೋಬರ್ 22, 2023 ಭಾನುವಾರ

ಸಮಯ: ಮಧ್ಯಾಹ್ನ 2 ಗಂಟೆ (ಭಾರತೀಯ ಕಾಲಮಾನ)

ಸ್ಥಳ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರ್ಮಶಾಲಾ

Whats_app_banner