ಇಂಡೋ-ಕಿವೀಸ್ ಮುಖಾಮುಖಿ ದಾಖಲೆ: ಏಕದಿನ ಇತಿಹಾಸದಲ್ಲಿ ಭಾರತವೇ ಬಲಿಷ್ಠ, ವಾಂಖೆಡೆ ರೆಕಾರ್ಡ್ಸ್ ಹೀಗಿದೆ
- ICC ODI World Cup 2023: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್‌ನಲ್ಲಿ ಮತ್ತೊಂದು ಸೆಮಿಫೈನಲ್ ಮುಖಾಮುಖಿಗೆ ಸಜ್ಜಾಗಿವೆ. ಉಭಯ ತಂಡಗಳ ಈವರೆಗಿನ ಮುಖಾಮುಖಿ ದಾಖಲೆ ಹೇಗಿದೆ ನೋಡೋಣ.
- ICC ODI World Cup 2023: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್‌ನಲ್ಲಿ ಮತ್ತೊಂದು ಸೆಮಿಫೈನಲ್ ಮುಖಾಮುಖಿಗೆ ಸಜ್ಜಾಗಿವೆ. ಉಭಯ ತಂಡಗಳ ಈವರೆಗಿನ ಮುಖಾಮುಖಿ ದಾಖಲೆ ಹೇಗಿದೆ ನೋಡೋಣ.
(1 / 5)
ಏಕದಿನ ಸ್ವರೂಪದಲ್ಲಿ ಇಲ್ಲಿಯವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಒಟ್ಟು 117 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತವು ಕಿವೀಸ್ ವಿರುದ್ಧ 59 ಬಾರಿ ಗೆದ್ದಿದೆ. ನ್ಯೂಜಿಲ್ಯಾಂಡ್ 50 ಪಂದ್ಯಗಳಲ್ಲಿ ಗೆದ್ದು ಬೀಗಿದೆ. 1 ಪಂದ್ಯ ಟೈಆದರೆ, 7 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
(2 / 5)
59 ಗೆಲುವುಗಳ ಪೈಕಿ, ಭಾರತವು ಮೊದಲು ಬ್ಯಾಟಿಂಗ್ ಮಾಡಿ 24ರಲ್ಲಿ ಗೆದ್ದರೆ, ಚೇಸಿಂಗ್ ಮೂಲಕ 35 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ನ್ಯೂಜಿಲ್ಯಾಂಡ್ ತಂಡವಯ 28 ಬಾರಿ ಚೇಸಿಂಗ್ ಮಾಡಿ ಗೆದ್ದರೆ, 22 ಬಾರಿ ಮೊಲದು ಬ್ಯಾಟ್ ಬೀಸಿ ಜಯ ತನ್ನದಾಗಿಸಿಕೊಂಡಿದೆ.
(3 / 5)
ಏಕದಿನ ವಿಶ್ವಕಪ್ ಇತಿಹಾಸದಲ್ಲಿ, ಉಭಯ ರಾಷ್ಟ್ರಗಳು ಒಂಬತ್ತು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ನ್ಯೂಜಿಲ್ಯಾಂಡ್ ಭಾರತದ ವಿರುದ್ಧ 5-4ರಿಂದ ಮುನ್ನಡೆ ಸಾಧಿಸಿದೆ. 2023ರ ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
(4 / 5)
ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳು 2017ರಲ್ಲಿ ಒಂದು ಬಾರಿ ಎದುರಾಗಿದ್ದವು. 281 ರನ್ ಗುರಿ ಬೆನ್ನಟ್ಟಿದ ಪ್ರಾವಾಸಿ ಕಿವೀಸ್, 6 ವಿಕೆಟ್‌ಗಳಿಂದ ಜಯಶಾಲಿಯಾಗಿತ್ತು. ಭಾರತವು ವಾಂಖೆಡೆ ಮೈದಾನದಲ್ಲಿ ಆಡಿದ ಒಟ್ಟಾರೆ 21 ಏಕದಿನ ಪಂದ್ಯಗಳಲ್ಲಿ 12ರಲ್ಲಿ ಗೆದ್ದು 9ರಲ್ಲಿ ಸೋತಿದೆ. ಅತ್ತ ಕಿವೀಸ್ ಈ ಮೈದಾನದಲ್ಲಿ ಒಟ್ಟಾರೆಯಾಗಿ ಆಡಿದ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, ಒಂದರಲ್ಲಿ ಮಾತ್ರ ಸೋಲೊಪ್ಪಿದೆ.
ಇತರ ಗ್ಯಾಲರಿಗಳು