IND Vs NZ World Cup Highlights: ನ್ಯೂಜಿಲೆಂಡ್ ವಿರುದ್ಧ 70 ರನ್ ಗೆಲುವು; 4ನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ
India vs New Zealand ODI World Cup 2023 Semi-Final Latest Updates: ಮುಂಬೈನ ವಾಂಖೆಡೆ ಮೈದಾನದಲ್ಲಿ ನವೆಂಬರ್ 15ರ ಗುರುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿವೆ. ಈ ಹೈವೋಲ್ಟೇಜ್ ಪಂದ್ಯದ ಲೈವ್ ಅಪ್ಡೇಟ್ಸ್ ಇಲ್ಲಿದೆ.
India vs New Zealand ODI World Cup 2023 Semi-Final Live Score: ಏಕದಿನ ವಿಶ್ವಕಪ್ 2023 ಅಂತಿಮ ಘಟ್ಟ ತಲುಪಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು (ನವೆಂಬರ್ 15ರ ಬುಧವಾರ) ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಗೆದ್ದ ತಂಡವು ನವೆಂಬರ್ 19ರಂದು ನಡೆಯುವ ಫೈನಲ್ಗೆ ಪ್ರವೇಶಿಸಲಿದೆ. ಈ ಪಂದ್ಯದ ಲೈವ್ ಅಪ್ಡೇಟ್ಸ್ ಇಲ್ಲಿದೆ.
ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ 70 ರನ್ ಜಯ; ಫೈನಲ್ ಪ್ರವೇಶ
10:29 PM: India vs New Zealand ODI World Cup 2023 Semi-Final Live Score: 327/10 (48.5): ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 70 ರನ್‌ಗಳ ಗೆಲುವು ಸಾಧಿಸಿದ್ದು, 4ನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿದೆ. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 7 ವಿಕೆಟ್ ಪಡೆದು ಹೊಸ ದಾಖಲೆ ನಿರ್ಮಿಸಿದರು. ಭಾರತ ನಿಗದಿತ 50 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಕಿವೀಸ್ 48.5 ಓವರ್‌ಗಳಲ್ಲಿ 327 ರನ್ ಗಳಿಸಿತು.
8ನೇ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್
10:23 PM: India vs New Zealand ODI World Cup 2023 Semi-Final Live Score: 319/8 (47.5): ನ್ಯೂಜಿಲೆಂಡ್ ತಂಡದ 8ನೇ ವಿಕೆಟ್ ಪತನವಾಗಿದೆ. 9 ರನ್ ಗಳಿಸಿ ಮಿಚೆಲ್ ಸ್ಯಾಂಟ್ನರ್ ಔಟಾಗಿದ್ದಾರೆ.
ನ್ಯೂಜಿಲೆಂಡ್ ತಂಡದ 7ನೇ ವಿಕೆಟ್ ಪತನ
10:12 PM: India vs New Zealand ODI World Cup 2023 Semi-Final Live Score: 307/7 (45.5): ನ್ಯೂಜಿಲೆಂಡ್ ತಂಡದ 7ನೇ ವಿಕೆಟ್ ಪತನವಾಗಿದೆ. 134 ರನ್ ಗಳಿಸಿ ಡೇರಿಲ್ ಮಿಚೆಲ್ ಅವರು ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ.
ನ್ಯೂಜಿಲೆಂಡ್ ತಂಡದ 6ನೇ ವಿಕೆಟ್ ಪತನ
10:01 PM: India vs New Zealand ODI World Cup 2023 Semi-Final Live Score: 298/6 (43.5): ನ್ಯೂಜಿಲೆಂಡ್ ತಂಡದ 6ನೇ ವಿಕೆಟ್ ಪತನವಾಗಿದೆ. ಮಾರ್ಕ್ ಚಾಪ್ಮನ್ 2 ರನ್ ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.
ನ್ಯೂಜಿಲೆಂಡ್ ತಂಡದ 5ನೇ ವಿಕೆಟ್ ಪತನ
09:57 PM: India vs New Zealand ODI World Cup 2023 Semi-Final Live Score: 295/5 (42.5): ನ್ಯೂಜಿಲೆಂಡ್ ತಂಡದ 5ನೇ ವಿಕೆಟ್ ಪತನವಾಗಿದೆ. ಗ್ಲೇನ್ ಫಿಲಿಪ್ಸ್ 41 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.
40 ಓವರ್‌ಗಳ ಮುಕ್ತಾಯಕ್ಕೆ 266 ರನ್ ಗಳಿಸಿದ ನ್ಯೂಜಿಲೆಂಡ್
09:40 PM: India vs New Zealand ODI World Cup 2023 Semi-Final Live Score: 266/4 (40): ನ್ಯೂಜಿಲೆಂಡ್ 40 ಓವರ್‌ಗಳ ಮುಕ್ತಾಯಕ್ಕೆ 266 ರನ್ ಗಳಿಸಿದೆ. ಡೇರಿಲ್ ಮಿಚೆಲ್ ಮತ್ತು ಗ್ಲೇನ್ ಫಿಲಿಪ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನ್ಯೂಜಿಲೆಂಡ್ ತಂಡದ 4ನೇ ವಿಕೆಟ್ ಪತನ
08:58 PM: India vs New Zealand ODI World Cup 2023 Semi-Final Live Score: 224/4 (33): ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ 69 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ. ಇದಾಗ ಮರು ಎಸೆತದಲ್ಲೇ ಟಾಮ್ ಲಾಥಮ್ ಶಮಿ ಅವರ ಬೌಲಿಂಗ್‌ನಲ್ಲೇ ಎಲ್‌ಬಿ ಬಲೆಗೆ ಬಿದ್ದಿದ್ದಾರೆ. ಒಂದೇ ಓವರ್‌ನಲ್ಲಿ ನ್ಯೂಜಿಲೆಂಡ್ 3 ಮತ್ತು ನಾಲ್ಕನೇ ವಿಕೆಟ್ ಕಳೆದುಕೊಂಡಿದೆ.
ಡೇರಿಲ್ ಮಿಚೆಲ್ ಆಕರ್ಷಕ ಶತಕ
08:54 PM: India vs New Zealand ODI World Cup 2023 Semi-Final Live Score: 223/3 (32.2): ನ್ಯೂಜಿಲೆಂಡ್ ಡೇರಿಲ್ ಮಿಚೆಲ್ ಆಕರ್ಷಕ ಶತಕ ಬಾರಿಸಿದ್ದಾರೆ. ಮಿಚೆಲ್ 85 ಎಸೆತಗಳಿಂದ 8 ಬೌಂಡರಿ ಹಾಗೂ 5 ಸಿಕ್ಸರ್ ಸೇರಿ 100 ರನ್ ಗಳಿಸಿದ್ದಾರೆ.
30 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದ ನ್ಯೂಜಿಲೆಂಡ್
08:40 PM: India vs New Zealand ODI World Cup 2023 Semi-Final Live Score: 199/2 (30): ನ್ಯೂಜಿಲೆಂಡ್ 30 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೇನ್ ವಿಲಿಯಮ್ಸನ್ ಅರ್ಧ ಶತಕ
08:24 PM: India vs New Zealand ODI World Cup 2023 Semi-Final Live Score: 174/2 (27): ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಅರ್ಧ ಶತಕ ಗಳಿಸಿದ್ದಾರೆ. 61 ಎಸೆತಗಳನ್ನು ಎದುರಿಸಿ 6 ಬೌಂಡರಿ 1 ಸಿಕ್ಸರ್ ಸೇರಿ 51 ರನ್ ಗಳಿಸಿ ಆಡುತ್ತಿದ್ದಾರೆ.
150 ರನ್ ಪೂರೈಸಿದ ನ್ಯೂಜಿಲೆಂಡ್
08:14 PM: India vs New Zealand ODI World Cup 2023 Semi-Final Live Score: 151/2 (24): ನ್ಯೂಜಿಲೆಂಡ್ 24 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂದುಕೊಂಡು 151 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಡೇರಿಲ್ ಮಿಚೆಲ್ ಅರ್ಧ ಶತಕ
08:09 PM: India vs New Zealand ODI World Cup 2023 Semi-Final Live Score: 142/2 (22.2): ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ ಅರ್ಧ ಶತಕ ಗಳಿಸಿದ್ದಾರೆ. 49 ಎಸೆತಗಳನ್ನು ಎದುರಿಸಿ 5 ಬೌಂಡರಿ 2 ಸಿಕ್ಸರ್ ಸೇರಿ 50 ರನ್ ಗಳಿಸಿ ಆಡುತ್ತಿದ್ದಾರೆ.
20 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ ನ್ಯೂಜಿಲೆಂಡ್
08:05 PM: India vs New Zealand ODI World Cup 2023 Semi-Final Live Score: 135/2 (21.2): ನ್ಯೂಜಿಲೆಂಡ್ 20 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
100 ರನ್ ಪೂರೈಸಿದ ನ್ಯೂಜಿಲೆಂಡ್
07:48 PM: India vs New Zealand ODI World Cup 2023 Semi-Final Live Score: 109/2 (17.3): ನ್ಯೂಜಿಲೆಂಡ್ 100ರ ಗಡಿ ದಾಟಿದೆ. ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
10 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದ ನ್ಯೂಜಿಲೆಂಡ್
07:13 PM: India vs New Zealand ODI World Cup 2023 Semi-Final Live Score: 42/2 (10): ನ್ಯೂಜಿಲೆಂಡ್ 10 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
2ನೇ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್
07:01 PM: India vs New Zealand ODI World Cup 2023 Semi-Final Live Score: 39/2 (7.4): ನ್ಯೂಜಿಲೆಂಡ್ 2ನೇ ವಿಕೆಟ್ ಪತನವಾಗಿದೆ. 13 ರನ್ ಗಳಿಸಿ ರಚಿನ್ ರವೀಂದ್ರ ಅವರು ಶಮಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರ.
ಮೊದಲ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್
06:48 PM: India vs New Zealand ODI World Cup 2023 Semi-Final Live Score: 31/1 (5.1): ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿದೆ. 13 ರನ್ ಗಳಿಸಿದ್ದ ಡೆವೊನ್ ಕಾನ್ವೆ ಅವರ ವಿಕೆಟ್ ಪಡೆಯುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾಗಿದ್ದಾರೆ.
ನ್ಯೂಜಿಲೆಂಡ್ ಬ್ಯಾಟಿಂಗ್ ಆರಂಭ
06:24 PM: India vs New Zealand ODI World Cup 2023 Semi-Final Live Score: 8/0 (1): ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ನೀಡಿರುವ 398 ರನ್‌ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಲು ನ್ಯೂಜಿಲೆಂಡ್ ಬ್ಯಾಟಿಂಗ್ ಆರಂಭಿಸಿದೆ. ಕಾನ್ವೆ ಮತ್ತು ರಚಿನ್ ರವೀಂದ್ರ ಬ್ಯಾಟಿಂಗ್ ಆರಂಭಿಸಿದ್ದಾರೆ.
ನ್ಯೂಜಿಲೆಂಡ್ ಗೆಲುವಿಗೆ 398 ರನ್‌ಗಳ ಬೃಹತ್ ಗುರಿ ನೀಡಿದ ಭಾರತ
05:52 PM: India vs New Zealand ODI World Cup 2023 Semi-Final Live Score: 397/3 (50): ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ ಟೀಂ ಇಂಡಿಯಾ 398 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ. ಭಾರತ ಪರ ರೋಹಿತ್ ಶರ್ಮಾ 49, ಶುಭ್ಮನ್ ಗಿಲ್ ಔಟಾಗದೆ 80, ವಿರಾಟ್ ಕೊಹ್ಲಿ 117, ಶ್ರೇಯಸ್ ಅಯ್ಯರ್ 105, ಕೆಎಲ್ ರಾಹುಲ್ ಔಟಾಗದೆ 39 ರನ್ ಗಳಿಸಿದ್ದಾರೆ.
105 ರನ್ ಗಳಿಸಿ ಶ್ರೇಯಸ್ ಅಯ್ಯರ್ ಔಟ್
05:44 PM: India vs New Zealand ODI World Cup 2023 Semi-Final Live Score: 381/3 (48.5): 105 ರನ್‌ಗಳ ಉಪಯುಕ್ತ ಕಾಣಿಕೆ ನೀಡಿ ಶ್ರೇಯಸ್ ಅಯ್ಯರ್ ಔಟಾಗಿದ್ದಾರೆ.
ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ
05:36 PM: India vs New Zealand ODI World Cup 2023 Semi-Final Live Score: 361/2 (47.2): ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ ಸಿಡಿಸಿದ್ದಾರೆ. 67 ಎಸೆತಗಳಲ್ಲಿ 3 ಬೌಂಡರಿ 8 ಸಿಕ್ಸರ್ ಸೇರಿ 100 ರನ್ ಬಾರಿಸಿದ್ದಾರೆ.
350 ರನ್ ಪೂರೈಸಿದ ಟೀಂ ಇಂಡಿಯಾ
05:33 PM: India vs New Zealand ODI World Cup 2023 Semi-Final Live Score: 354/2 (47): ಟೀಂ ಇಂಡಿಯಾ 47 ಓವರ್‌ಗಳ ಮುಕ್ತಾಯಕ್ಕೆ 354 ರನ್ ಬಾರಿಸಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವದಾಖಲೆಯ ಶತಕ ಸಿಡಿಸಿ ಔಟ್
05:21 PM: India vs New Zealand ODI World Cup 2023 Semi-Final Live Score: 327/2 (44): ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ವಿಶ್ವದಾಖಲೆಯ ಶತಕ ಸಿಡಿಸಿ ಔಟಾಗಿದ್ದಾರೆ. 113 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸ್ ಸೇರಿ 106 ರನ್ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರದ್ದು 50ನೇ ಶತಕವಾಗಿದೆ.
ವಿರಾಟ್ ಕೊಹ್ಲಿ ವಿಶ್ವದಾಖಲೆಯ ಶತಕ
05:09 PM: India vs New Zealand ODI World Cup 2023 Semi-Final Live Score: 303/1 (42): ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ವಿಶ್ವದಾಖಲೆಯ ಶತಕ ಬಾರಿಸಿದ್ದಾರೆ. 108 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್ ಸೇರಿ 117 ರನ್ ಗಳಿಸಿ ಔಟಾಗಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರದ್ದು 50ನೇ ಶತಕವಾಗಿದೆ.
40 ಓವರ್‌ಗಳ ಮುಕ್ತಾಯಕ್ಕೆ 287 ರನ್ ಬಾರಿಸಿದ ಟೀಂ ಇಂಡಿಯಾ
05:00 PM: India vs New Zealand ODI World Cup 2023 Semi-Final Live Score: 287/1 (40): ಟೀಂ ಇಂಡಿಯಾ 40 ಓವರ್‌ಗಳ ಮುಕ್ತಾಯಕ್ಕೆ 287 ರನ್ ಗಳಿಸಿದೆ. ವಿರಾಟ್ ಕೊಹ್ಲಿ (95) ಮತ್ತು ಶ್ರೇಯಸ್ ಅಯ್ಯರ್ (62) ಬ್ಯಾಟಂಗ್ ಮಾಡುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧ ಶತಕ
04:44 PM: India vs New Zealand ODI World Cup 2023 Semi-Final Live Score: 265/1 (36): ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧ ಶತಕ ಸಿಡಿಸಿದ್ದಾರೆ. 36 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್ ಸೇರಿ 50 ರನ್ ಪೂರೈಸಿದ್ದಾರೆ.
250 ರನ್ ಪೂರೈಸಿದ ಟೀಂ ಇಂಡಿಯಾ
04:41 PM: India vs New Zealand ODI World Cup 2023 Semi-Final Live Score: 265/1 (36): ಟೀಂ ಇಂಡಿಯಾ 36 ಓವರ್‌ಗಳ ಮುಕ್ತಾಯಕ್ಕೆ 265 ರನ್ ಪೂರೈಸಿದೆ. ವಿರಾಟ್ ಕೊಹ್ಲಿ (86) ಮತ್ತು ಶ್ರೇಯಸ್ ಅಯ್ಯರ್ (49) ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ್ದಾರೆ.
30 ಓವರ್‌ಗಳ ಮುಕ್ತಾಯಕ್ಕೆ ಟೀಂ ಇಂಡಿಯಾ 214
04:17 PM: India vs New Zealand ODI World Cup 2023 Semi-Final Live Score: 219/1 (30.3): ಟೀಂ ಇಂಡಿಯಾ 30 ಓವರ್‌ಗಳ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
200 ರನ್ ಪೂರೈಸಿದ ಟೀಂ ಇಂಡಿಯಾ
04:07 PM: India vs New Zealand ODI World Cup 2023 Semi-Final Live Score: 201/1 (28.3): ಟೀಂ ಇಂಡಿಯಾ 200 ರನ್‌ಗಳ ಗಡಿ ದಾಟಿದೆ. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಅರ್ಧ ಶತಕ
04:01 PM: India vs New Zealand ODI World Cup 2023 Semi-Final Live Score: 194/1 (27): ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ್ದಾರೆ. 60 ಎಸೆತಗಳನ್ನು ಎದುರಿಸಿದ ವಿರಾಟ್ 4 ಬೌಂಡರಿ ಸೇರಿ 50 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರು ನಾಕೌಟ್ ಪಂದ್ಯದಲ್ಲಿ ಗಳಿಸಿರುವ ವೈಯಕ್ತಿಕ ಗರಿಷ್ಠ ಸ್ಕೋರ್ ಇದಾಗಿದೆ.
ಗಾಯಗೊಂಡು ಕ್ರೀಸ್ ತೊರೆದ ಶುಭ್ಮನ್ ಗಿಲ್
03:48 PM: India vs New Zealand ODI World Cup 2023 Semi-Final Live Score: 167/1 (23.3): 79 ರನ್ ಗಳಿಸಿದ್ದ ಶುಭ್ಮನ್ ಗಿಲ್ ಗಾಯಗೊಂಡು ಕ್ರೀಸ್ ತೊರೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
150 ರನ್ ಕಲೆಹಾಕಿದ ಟೀಂ ಇಂಡಿಯಾ
03:30 PM: India vs New Zealand ODI World Cup 2023 Semi-Final Live Score: 150/1 (20): ಟೀಂ ಇಂಡಿಯಾ 20 ಓವರ್‌ಗಳ ಮುಕ್ತಾಯಕ್ಕೆ 150 ರನ್ ಬಾರಿಸಿದೆ. 74 ರನ್ ಗಳಿಸಿರುವ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ 26 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅರ್ಧ ಶತಕ ಪೂರೈಸಿದ ಶುಭ್ಮನ್ ಗಿಲ್
03:04 PM: India vs New Zealand ODI World Cup 2023 Semi-Final Live Score: 114/1 (14): ಟೀಂ ಇಂಡಿಯಾ ಪರ ಶುಭ್ಮನ್ ಗಿಲ್ ಅರ್ಧ ಶತಕ ಪೂರೈಸಿದ್ದಾರೆ. ಗಿಲ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸೇರಿ 50 ರನ್ ಗಳಿಸಿದ್ದಾರೆ.
100 ರನ್ ಪೂರೈಸಿದ ಟೀಂ ಇಂಡಿಯಾ
03:00 PM: India vs New Zealand ODI World Cup 2023 Semi-Final Live Score: 103/1 (12.4): ಟೀಂ ಇಂಡಿಯಾ 100 ರನ್‌ಗಳ ಗಡಿ ದಾಟಿದೆ. ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
10 ಓವರ್‌ಗಳ ಮುಕ್ತಾಯಕ್ಕೆ ಟೀಂ ಇಂಡಿಯಾ 84 ರನ್
02:50 PM: India vs New Zealand ODI World Cup 2023 Semi-Final Live Score: 84/1 (10): ಟೀಂ ಇಂಡಿಯಾ 10 ಓವರ್‌ಗಳ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ. ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
47 ರನ್ ಗಳಿಸಿ ರೋಹಿತ್ ಶರ್ಮಾ ಔಟ್
02:41 PM: India vs New Zealand ODI World Cup 2023 Semi-Final Live Score: 71/1 (8.2): ರೋಹಿತ್ ಶರ್ಮಾ ಔಟಾಗಿದ್ದಾರೆ. ಕೇವಲ 29 ಎಸೆತಗಳಲ್ಲಿ ಎದುರಿಸಿದ ರೋಹಿತ್ 4 ಬೌಂಡರಿ 4 ಅಮೋಘ ಸಿಕ್ಸರ್‌ಗಳು ಸೇರಿ 47 ರನ್ ಬಾರಿಸಿದರು.
ಟೀಂ ಇಂಡಿಯಾ ವೇಗದ ಅರ್ಧ ಶತಕ
02:28 PM: India vs New Zealand ODI World Cup 2023 Semi-Final Live Score: 58/0 (6.1): ಟೀಂ ಇಂಡಿಯಾ ವೇಗದ ಬ್ಯಾಟಿಂಗ್ ಮಾಡುತ್ತಿದ್ದು, 5.2 ಓವರ್‌ಗಳಲ್ಲಿ 50 ರನ್ ಗಳಿಸಿದೆ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಬ್ಯಾಟಿಂಗ್ ಆರಂಭ
02:01 PM: India vs New Zealand ODI World Cup 2023 Semi-Final Live Score: ಟೀಂ ಇಂಡಿಯಾ ಬ್ಯಾಟಿಂಗ್ ಆರಂಭವಾಗಿದ್ದು, ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನ್ಯೂಜಿಲೆಂಡ್ ಆಡುವ 11ರ ಬಳಗ
ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ಭಾರತ ಆಡುವ 11 ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
1.30 PM: IND Vs NZ ICC ODI World Cup 2023 Semi-Final Live Score: ಬಹುನಿರೀಕ್ಷಿತ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಮೊದಲು ಬ್ಯಾಟಿಂಗ್ ನಡೆಸುವ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಭಾರತ ತಂಡದಲ್ಲಿಲ್ಲ ಬದಲಾವಣೆ.
ಮುಂಬೈ ಹವಾಮಾನ ಈಗ ಹೇಗಿದೆ?
12.10 PM IND Vs NZ ICC ODI World Cup 2023 Semi-Final Live Updates: ಮುಂಬೈನಲ್ಲಿ ಈಗ ಬಿಸಿಲಿನ ವಾತಾವರಣವಿದೆ. ನಗರದಲ್ಲಿ ಮಳೆಯ ಸಾಧ್ಯತೆಗಳು ಇಲ್ಲ.ಹೀಗಾಗಿ ಪಂದ್ಯವು ಮೀಸಲು ದಿನಕ್ಕೆ ಹೋಗುವ ಸಾಧ್ಯತೆ ಇಲ್ಲ.
ನಾವು ವಿಶ್ವಕಪ್ ಗೆದ್ದಾಗ ಅರ್ಧದಷ್ಟು ಆಟಗಾರರು ಹುಟ್ಟಿರಲಿಲ್ಲ; ರೋಹಿತ್ ಶರ್ಮಾ
IND Vs NZ ICC ODI World Cup 2023 Semi-Final Live Updates: “ನಾವು ನಮ್ಮ ಮೊದಲ ವಿಶ್ವಕಪ್ (1983) ಗೆದ್ದಾಗ ಅರ್ಧದಷ್ಟು ಆಟಗಾರರು ಹುಟ್ಟಿರಲಿಲ್ಲ. ನಂತರ ನಾವು ನಮ್ಮ ಎರಡನೇ ವಿಶ್ವಕಪ್ (2011) ಗೆದ್ದಾಗ, ಅರ್ಧದಷ್ಟು ಹುಡುಗರು ಇನ್ನೂ ಆಟವಾಡುತ್ತಿರಲಿಲ್ಲ. ನಮ್ಮಲ್ಲಿ ಪ್ರಸ್ತುತ ಏನಾಗಬಹುದು ಎಂಬುದರ ಕುರಿತು ತಂಡದ ಆಟಗಾರರು ತುಂಬಾ ಆಸಕ್ತಿ ಹೊಂದಿದ್ದಾರೆ. ನಾವು ಕಳೆದ ವಿಶ್ವಕಪ್ ಅಥವಾ ಮೊದಲ ವಿಶ್ವಕಪ್ ಅನ್ನು ಹೇಗೆ ಗೆದ್ದಿದ್ದೇವೆ ಎಂಬುದರ ಕುರಿತು ಅವರು ಮಾತನಾಡುವುದನ್ನು ನಾನು ನೋಡಿಲ್ಲ. ಸುಧಾರಿಸಬೇಕಾದ ಅಂಶಗಳ ಮೇಲೆ ಆಟಗಾರರು ಗಮನ ಕೇಂದ್ರೀಕರಿಸುತ್ತಿದ್ದಾರೆ. ಯಾವಾಗಲೂ ವಾಸ್ತವದಲ್ಲಿನ ಇರುತ್ತಾರೆ” ಎಂದು ತಂಡದ ಧನಾತ್ಮಕ ಮನಸ್ಥಿತಿ ಕುರಿತು ಹಿಟ್‌ಮ್ಯಾನ್ ಮಾತನಾಡಿದ್ದಾರೆ. ಕಿವೀಸ್ ವಿರುದ್ಧ ಭಾರತದ ಇತಿಹಾಸದ ಕುರಿತ ಪ್ರಶ್ನೆಗೆ ಭಾರತ ತಂಡದ ನಾಯಕ ಉತ್ತರಿಸಿದ್ದಾರೆ.
IND Vs NZ ICC ODI World Cup 2023 Semi-Final Live Updates: ನ್ಯೂಜಿಲ್ಯಾಂಡ್ ತಂಡ ಎದ್ದು ಬಿದ್ದು ಸೆಮಿಫೈನಲ್ ಪ್ರವೇಶಿಸಿದೆ. ಆರಂಭದಲ್ಲಿ ಸತತ ಗೆಲುವುಗಳನ್ನು ಪಡೆದ ಕಿವೀಸ್, ಆ ಬಳಿಕ ಸತತ 4 ಸೋಲುಗಳಿಂದ ಹಿನ್ನಡೆ ಅನುಭವಿಸಿತು. ಆದರೂ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್, ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯ ಸಾಧಿಸಿ ನಾಕೌಟ್ ಹಂತ ಪ್ರವೇಶಿಸಿತು.
- ಪಂದ್ಯ: ಭಾರತ-ನ್ಯೂಜಿಲೆಂಡ್, ಐಸಿಸಿ ಪುರುಷರ ವಿಶ್ವಕಪ್ 2023 ಸೆಮಿ ಫೈನಲ್
- ದಿನಾಂಕ: ನವೆಂಬರ್ 15, 2023 ಬುಧವಾರ
- ಸಮಯ: ಮಧ್ಯಾಹ್ನ 2 ಗಂಟೆ
- ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ
- ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
- ಲೈವ್ ಸ್ಟ್ರೀಮ್: ಡಿಸ್ನಿ ಪ್ಲಸ್ ಹಾಟ್ ಸ್ಟಾರ್
ವಾಂಖೆಡೆ ಪಿಚ್ ವರದಿ
IND Vs NZ ICC ODI World Cup 2023 Semi-Final Live Updates: ಮುಂಬೈನ ವಾಂಖೆಡೆ ಸ್ಟೇಡಿಯಂ ಪಿಚ್ ಸಮಯತೋಲಿತ ಟ್ರ್ಯಾಕ್‌ಅನ್ನು ಹೊಂದಿದೆ. ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ನೆರವಾಗಲಿದೆ. ಅಲ್ಲದೆ ವೇಗಿಗಳು ಕೂಡಾ ಮೇಲುಗೈ ಸಾಧಿಸಬಹುದು. ಈ ಹಿಂದಿನ 10 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ 318 ರನ್ ಬಂದಿದೆ. ಇದೇ ಮೈದಾನದಲ್ಲಿ ಶ್ರೀಲಂಕಾವನ್ನು 55 ರನ್‌ಗಳಿಗೆ ಆಲೌಟ್ ಮಾಡಿಸಿದ್ದ ಟೀಂ ಇಂಡಿಯಾ 302 ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿತ್ತು. ಹೀಗಾಗಿ ಇಲ್ಲಿ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು.
ಸೆಮಿಫೈನಲ್ ಪಂದ್ಯ ರದ್ದಾದರೆ ಮುಂದೇನು?
IND Vs NZ ICC ODI World Cup 2023 Semi-Final Live Updates: ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ನಾಕೌಟ್ ಪಂದ್ಯಗಳಿಗೆ (ಸೆಮಿಫೈನಲ್ ಮತ್ತು ಫೈನಲ್) ರಿಸರ್ವ್ ಡೇ ಇರಲಿದೆ.
ರಿಸರ್ವ್ ಡೇ ದಿನವೂ ಮಳೆಯಾದರೆ ಮತ್ತೇನು?
IND Vs NZ ICC ODI World Cup 2023 Semi-Final Live Updates: ಸೆಮಿಫೈನಲ್ ಪಂದ್ಯಕ್ಕೆ ನಿಗದಿಪಡಿಸಿರುವ ಮೀಸಲು ದಿನವೂ ಪಂದ್ಯ ರದ್ದಾದರೆ, ಆಗ ಲೀಗ್ನಲ್ಲಿ ಹೆಚ್ಚು ಅಂಕ ಪಡೆದ ತಂಡವು ಫೈನಲ್ಗೆ ಪ್ರವೇಶಿಸಲಿದೆ. ಅಂದರೆ, ಮೊದಲ ಸೆಮಿಫೈನಲ್ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಮಳೆ ತೊಂದರೆ ನೀಡಿದರೆ, 18 ಅಂಕ ಪಡೆದಿರುವ ಭಾರತ ಫೈನಲ್ಗೆ ಪ್ರವೇಶಿಸುತ್ತದೆ.
ಮುಂಬೈನಲ್ಲಿ ಹವಾಮಾನ ಹೇಗಿದೆ?
IND Vs NZ ICC ODI World Cup 2023 Semi-Final Live Updates: ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಆತಿಥ್ಯ ವಹಿಸಿದ್ದು, ಬುಧವಾರ (ನವೆಂಬರ್ 15) ವಾಣಿಜ್ಯ ನಗರಿ ಮುಂಬೈನಲ್ಲಿ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಯಾಗಿದೆ.
ಭಾರತ-ನ್ಯೂಜಿಲ್ಯಾಂಡ್ ಮುಖಾಮುಖಿ ದಾಖಲೆ
IND Vs NZ ICC ODI World Cup 2023 Semi-Final Live Updates: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 117 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 59 ಬಾರಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಕಿವೀಸ್ 50 ಪಂದ್ಯಗಳಲ್ಲಿ ಜಯ ಕಂಡಿದೆ. 1 ಪಂದ್ಯ ಟೈ ಆಗಿದ್ದರೆ, 7 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
ಟೀಂ ಇಂಡಿಯಾ ಆಡುವ ಸಂಭಾವ್ಯ 11ರ ಬಳಗ
IND Vs NZ ICC ODI World Cup 2023 Semi-Final Live Updates: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.
ನ್ಯೂಜಿಲೆಂಡ್ ಆಡುವ ಸಂಭಾವ್ಯ 11ರ ಬಳಗ
IND Vs NZ ICC ODI World Cup 2023 Semi-Final Live Updates:ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಟೀಮ್ ಸೌಥಿ.