ನಟಿ ಊರ್ವಶಿ ರೌಟೆಲಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ನಸೀಮ್ ಶಾ ವಿಡಿಯೋ; ಸೀಕ್ರೆಟ್ ಆಗಿ ಪಾಕ್​ಗೆ ಸಪೋರ್ಟ್ ಮಾಡ್ತಿದ್ದೀರಾ ಎಂದ ನೆಟಿಜನ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ನಟಿ ಊರ್ವಶಿ ರೌಟೆಲಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ನಸೀಮ್ ಶಾ ವಿಡಿಯೋ; ಸೀಕ್ರೆಟ್ ಆಗಿ ಪಾಕ್​ಗೆ ಸಪೋರ್ಟ್ ಮಾಡ್ತಿದ್ದೀರಾ ಎಂದ ನೆಟಿಜನ್ಸ್

ನಟಿ ಊರ್ವಶಿ ರೌಟೆಲಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ನಸೀಮ್ ಶಾ ವಿಡಿಯೋ; ಸೀಕ್ರೆಟ್ ಆಗಿ ಪಾಕ್​ಗೆ ಸಪೋರ್ಟ್ ಮಾಡ್ತಿದ್ದೀರಾ ಎಂದ ನೆಟಿಜನ್ಸ್

India vs Pakistan-Asia Cup 2023-Urvashi Rautela: ಇನ್​ಸ್ಟಾಗ್ರಾಂ ಸ್ಟೋರಿ ಪಾಕಿಸ್ತಾನ ತಂಡವು ಅಭ್ಯಾಸದ ಅವಧಿಯಲ್ಲಿ ಚರ್ಚೆ ನಡೆಸುತ್ತಿರುವ ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಟ್ರೋಲ್ ಆಗುತ್ತಿದ್ದಾರೆ.

ಊರ್ವಶಿ ರೌಟೆಲಾ ಟ್ರೋಲ್
ಊರ್ವಶಿ ರೌಟೆಲಾ ಟ್ರೋಲ್

ಏಷ್ಯಾಕಪ್ ಟೂರ್ನಿಯ 3ನೇ ಪಂದ್ಯದಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ನಡೆಸುತ್ತಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ, ಆರಂಭದ ನೀರಸ ಪ್ರದರ್ಶನದಿಂದ ಚೇತರಿಸಿಕೊಳ್ಳುತ್ತಿದೆ. ಪಾಕಿಸ್ತಾನ ಬೌಲರ್​​ಗಳ ಎದುರು ತತ್ತರಿಸಿದ ಅಗ್ರ ಕ್ರಮಾಂಕದ ಭಾರತೀಯ ಬ್ಯಾಟರ್ಸ್​ ತೀವ್ರ ನಿರಾಸೆ ಮೂಡಿಸಿದ್ದಾರೆ.

ಆರಂಭಿಕರಾದ ರೋಹಿತ್​ ಶರ್ಮಾ 11 ರನ್, ಶುಭ್ಮನ್ ಗಿಲ್ 10, ವಿರಾಟ್ ಕೊಹ್ಲಿ 4 ರನ್, ಶ್ರೇಯಸ್ ಅಯ್ಯರ್ 14 ರನ್ ಸಿಡಿಸಿ ವೈಫಲ್ಯ ಅನುಭವಿಸಿದರು. ಇದರೊಂದಿಗೆ ಪಾಕಿಸ್ತಾನ ಸಂಪೂರ್ಣ ಮೇಲುಗೈ ಸಾಧಿಸಿತು. ಸತತ ವಿಕೆಟ್​ ನಡುವೆಯೂ ಎಡಗೈ ಬ್ಯಾಟ್ಸ್​​ಮನ್​ ವಿಕೆಟ್ ಕೀಪರ್ ಇಶಾನ್ ಕಿಶನ್ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅದ್ಭುತ ಸಾಥ್ ಕೊಡುತ್ತಿದ್ದಾರೆ.

ನಟಿ ಟ್ರೋಲ್

ಆದರೆ ಪಂದ್ಯವನ್ನು ಆಡುತ್ತಿರುವ ಆಟಗಾರರು ವೈಫಲ್ಯ ಅನುಭವಿಸಿದರೆ ಟ್ರೋಲ್ ಆಗುವುದು ಸಹಜ. ಆದರೆ ಪಂದ್ಯಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಭಾರತ-ಪಾಕಿಸ್ತಾನದ ಕಾದಾಟದ ಸಂಭ್ರಮವನ್ನು ವ್ಯಕ್ತಪಡಿಸಿರುವ ನಟಿ ಊರ್ವಶಿ ರೌಟೇಲಾ, ನೆಟ್ಟಿಗರು ಒಂದು ವಿಷಯಕ್ಕೆ ಟ್ರೋಲ್ ಮಾಡುತ್ತಿದ್ದಾರೆ.

ತಮ್ಮ ಸ್ಟೋರಿಯಲ್ಲಿ ಪಾಕಿಸ್ತಾನ ತಂಡವು ಅಭ್ಯಾಸದ ಸಂದರ್ಭದಲ್ಲಿ ಚರ್ಚೆ ನಡೆಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಕೆ ಮುಂಜಾನೆ ವರ್ಕೌಟ್ ಮಾಡುವ ಅವಧಿಯಲ್ಲಿ ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿದ್ದಾರೆ. ಅದರಲ್ಲಿ ವೇಗಿ ನಸೀಮ್ ಶಾ ಹೈಲೈಟ್ ಆಗಿ ಕಾಣಿಸಿಕೊಂಡಿದ್ದಾರೆ.  ಹಾಗಾಗಿ, ರಹಸ್ಯವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಪಾಕಿಸ್ತಾನಕ್ಕೆ ಬೆಂಬಲ ಎನ್ನುತ್ತಿದ್ದಾರೆ ನೆಟ್ಟಿಗರು

ನಟಿ ಊರ್ವಶಿ ರೌಟೆಲಾ ಪಾಕಿಸ್ತಾನ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆಯೇ ಅಥವಾ ನಸೀಮ್ ಶಾಗೆ ಸಪೋರ್ಟ್​ ಮಾಡುತ್ತಿದ್ದಾರೆಯೇ ಎಂದು ಕೇಳುತ್ತಿದ್ದಾರೆ. ಇದರ ಮಧ್ಯೆ ರಿಷಭ್ ಪಂತ್​ ಅವರನ್ನು ಎಳೆದು ಅಭಿಮಾನಿಯೊಬ್ಬ, ಪಂತ್​ರನ್ನು ರಕ್ಷಿಸುವ ಸಲುವಾಗಿ ಇಂದು ಶುಭ್ಮನ್​ ಗಿಲ್​, ನಸೀಮ್​ ಶಾ ಬೌಲಿಂಗ್​ ಗೌರವಯುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ ಎಂದು ಅಣಕಿಸುತ್ತಿದ್ದಾರೆ.

2021ರಲ್ಲೂ ರೌಟೆಲಾ ಟ್ರೋಲ್

2021ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​​ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಊರ್ವಶಿ ರೌಟೆಲಾ ಹಾಜರಾಗಿದ್ದರು. ಅಂದು ನಸೀಮ್ ಅವರನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡು ಟ್ರೋಲ್​ ಆಗಿದ್ದರು. ಇದೀಗ ನಸೀಮ್​ ಶಾ ಚಿತ್ರವನ್ನೇ ಶೇರ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಾಗಾಗಿ ಅಭಿಮಾನಿಗಳು ಈ ವಿಡಿಯೋವನ್ನು ಮುಂದಿಟ್ಟುಕೊಂಡು ಬಗೆಬಗೆಯ ಕಮೆಂಟ್​ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್​, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರವೂಫ್.

Whats_app_banner