India vs Pakistan highlights: ಪಾಕ್ ವಿರುದ್ಧ ಭಾರತಕ್ಕೆ 6 ರನ್‌ಗಳ ರೋಚಕ ಜಯ; ಪಂದ್ಯದ ಹೈಲೈಟ್ಸ್
India vs Pakistan highlights: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಡಿವೆ. ನ್ಯೂಯಾರ್ಕ್‌ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ ನೋಡಿ.
Mon, 10 Jun 202407:41 PM IST
ಭಾರತಕ್ಕೆ ರೋಚಕ ಜಯ
ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ. ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಭಾರತ 6 ರನ್‌ಗಳ ಜಯ ಸಾಧಿಸಿದೆ. ಅಲ್ಪಮೊತ್ತ ಪೇರಿಸಿದರೂ ಭಾರತ ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡಿದೆ. ಪಾಕಿಸ್ತಾನ ಸರಳ ಗುರಿ ಬೆನ್ನಟ್ಟಲು ವಿಫಲವಾಗಿದೆ.
Mon, 10 Jun 202407:35 PM IST
IND vs PAK live score: ಇಮಾದ್ ವಾಸಿಮ್ ಔಟ್!
ಕೊನೆಯ ಓವರ್‌ನ ಮೊದಲ ಎಸೆತದಲ್ಲೇ ಅರ್ಷದೀಪ್ ವಿಕೆಟ್ ಕಬಳಿಸಿದ್ದಾರೆ. ಇಮಾದ್ ವಾಸಿಮ್ ಔಟಾಗಿದ್ದಾರೆ. ಕ್ರೀಸ್‌ಗೆ ನಸೀಮ್ ಶಾ ಬಂದಿದ್ದು, 18 ರನ್ ಬೇಕಿದೆ.
Mon, 10 Jun 202407:32 PM IST
IND vs PAK live score: ಕೊನೆಯ ಓವರ್‌ನಲ್ಲಿ ಪಾಕ್‌ಗೆ ಬೇಕು 18 ರನ್
19ನೇ ಓವರ್ ಎಸೆದ ಜಸ್ಪ್ರೀತ್ ಬುಮ್ರಾ ಕೇವಲ 3 ರನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಇಫ್ತಿಕರ್ ಅಹ್ಮದ್ ವಿಕೆಟ್ ಕೂಡಾ ಕಬಳಿಸಿದ್ದಾರೆ. ಪಾಕ್ ಗೆಲುವಿಗೆ ಕೊನೆಯ ಒಂದು ಓವರ್‌ನಲ್ಲಿ 18 ರನ್ ಅಗತ್ಯವಿದೆ. ಅರ್ಷದೀಪ್ ಕೊನೆಯ ಓವರ್ ಎಸೆಯಲಿದ್ದಾರೆ.
Mon, 10 Jun 202407:16 PM IST
IND vs PAK live score: ಪಾಕಿಸ್ತಾನ 88/5 (16.3)
ಪಾಕಿಸ್ತಾನ 5ನೇ ವಿಕೆಟ್ ಕಳೆದುಕೊಂಡಿದೆ. ತಂಡದ ಮೊತ್ತ 88 ಆಗಿದ್ದಾಗ ಶಾದಾಬ್ ಖಾನ್ ಔಟಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಕೀಪರ್ ಪಂತ್ ಆದ್ಭುತ ಕ್ಯಾಚ್ ಪಡೆದಿದ್ದಾರೆ.
Mon, 10 Jun 202407:13 PM IST
IND vs PAK live score: ಪಾಕಿಸ್ತಾನ 85/4 (16)
16 ಓವರ್ ಬಳಿಕ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿದೆ. ತಂಡದ ಗೆಲುವಿಗೆ ಮುಂದಿನ 24 ಎಸೆತಗಳಲ್ಲಿ 35 ರನ್ ಬೇಕಿದೆ.
Mon, 10 Jun 202407:05 PM IST
ಪಾಕಿಸ್ತಾನದ 4 ವಿಕೆಟ್ ಪತನ
ಮೊಹಮ್ಮದ್ ರಿಜ್ವಾನ್ ಔಟ್! ಪಾಕಿಸ್ತಾನ ಬತ್ತಳಿಕೆಯ ಪ್ರಮುಖ ಅಸ್ತ್ರ ಡಗೌಟ್‌ಗೆ ಮರಳಿದೆ. 14.1 ಓವರ್‌ಗಳಲ್ಲಿ ಪಾಕಿಸ್ತಾನ 80 ರನ್‌ಗೆ 4 ವಿಕೆಟ್ ಕಳೆದುಕೊಂಡಿದೆ.
Mon, 10 Jun 202406:54 PM IST
IND vs PAK live score: ಪಾಕಿಸ್ತಾನ 73/3 (12.2)
ಪಾಕಿಸ್ತಾನ ಮೂರನೇ ವಿಎಕಟ್ ಕಳೆದುಕೊಂಡಿದೆ. 13(8) ರನ್ ಗಳಿಸಿದ್ದ ಫಕರ್ ಜಮಾನ್, ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಪಾಕಿಸ್ತಾನ 73 ರನ್ ವೇಳೆಗೆ 3 ವಿಕೆಟ್ ಕಳೆದುಕೊಂಡಿದೆ.
Mon, 10 Jun 202406:45 PM IST
IND vs PAK live score: ಉಸ್ಮಾನ್ ಖಾನ್ ವಿಕೆಟ್ ಪಡೆದ ಅಕ್ಷರ್
ಉಸ್ಮಾನ್ ಖಾನ್ 13(15) ರನ್ ಗಳಿಸಿ ಎರಡನೆಯವರಾಗಿ ಔಟಾಗಿದ್ದಾರೆ. ಅಕ್ಷರ್ ಪಟೇಲ್ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನ ಈಗ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ.
Mon, 10 Jun 202406:41 PM IST
IND vs PAK live score: ಪಾಕಿಸ್ತಾನ 57/1 (10)
10 ಓವರ್ ಬಳಿಕ ಪಾಕಿಸ್ತಾನ 57 ರನ್ ಗಳಿಸಿದೆ. ತಂಡ 1 ವಿಕೆಟ್ ಮಾತ್ರ ಕಳೆದುಕೊಂಡಿದ್ದು, ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿದೆ.
Mon, 10 Jun 202406:33 PM IST
IND vs PAK live score: ಪಾಕಿಸ್ತಾನ 42/1 (8)
8 ಓವರ್ ಬಳಿಕ ಪಾಕಿಸ್ತಾನ 42 ರನ್ ಗಳಿಸಿದೆ. ರಿಜ್ವಾನ್ ಕೊತೆಗೆ ಉಸ್ಮಾನ್ ಖಾನ್ ಕೂಡಾ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಜಡೇಜಾ ತಮ್ಮ ಮೊದಲ ಓವರ್‌ನಲ್ಲಿ 4 ರನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ.
ಮೊಹಮ್ಮದ್ ರಿಜ್ವಾನ್20(28)
ಉಸ್ಮಾನ್ ಖಾನ್5(10)
Sun, 09 Jun 202406:26 PM IST
ಪಾಕಿಸ್ತಾನ ಜವಾಬ್ದಾರಿಯುತ ಬ್ಯಾಟಿಂಗ್
ಪವರ್‌ಪ್ಲೇ 6 ಓವರ್ ಬಳಿಕ ಪಾಕಿಸ್ತಾನ 1 ವಿಕೆಟ್ ಕಳೆದುಕೊಂಡು 35 ರನ್ ಪೇರಿಸಿದೆ. ರಿಜ್ವಾನ್ ಜವಾಬ್ದಾರಿಯುತ ಆಟವಾಡುತ್ತಿದ್ದಾರೆ.
ಮೊಹಮ್ಮದ್ ರಿಜ್ವಾನ್17(23)
ಉಸ್ಮಾನ್ ಖಾನ್1(3).
Sun, 09 Jun 202406:16 PM IST
IND vs PAK live score: ಬಾಬರ್ ಔಟ್!
ಪಾಕಿಸ್ತಾನ ಮೊದಲ ವಿಕೆಟ್ ಕಳೆದುಕೊಂಡಿದೆ. ಬಾಬರ್ ಅಜಮ್ ಔಟಾಗಿದ್ದಾರೆ. ಬುಮ್ರಾ ಎಸೆತದಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ಕೊಟ್ಟು ಪಾಕ್ ನಾಯಕ ಔಟಾಗಿದ್ದಾರೆ.
Sun, 09 Jun 202406:13 PM IST
IND vs PAK live score: ಪಾಕಿಸ್ತಾನ 21/0 (4)
4 ಓವರ್ ಬಳಿಕ ಪಾಕಿಸ್ತಾನ 21 ರನ್ ಗಳಿಸಿದೆ. ಭಾರತ ಈವರೆಗೆ ವಿಕೆಟ್ ಪಡೆಯುವಲ್ಲಿ ವಿಫಲವಾಗಿದೆ. ರಿಜ್ವಾನ್ ಹಾಗೂ ಬಾಬರ್ ರಕ್ಷಣಾತ್ಮಕ ಆಟವಾಡುತ್ತಿದ್ದಾರೆ.
Sun, 09 Jun 202406:09 PM IST
IND vs PAK live score: ಮೊಹಮ್ಮದ್ ರಿಜ್ವಾನ್‌ಗೆ ಜೀವದಾನ
ಶಿವಂ ದುಬೆ ಸುಲಭ ಕ್ಯಾಚ್ ಕೈಚೆಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಫೈನ್ ಲೆಗ್‌ನತ್ತ ಬಾರಿಸಿದ ರಿಜ್ವಾನ್, ದುಬೆ ಕೈಗೆ ಚೆಂಡು ಕೊಟ್ಟಿದ್ದಾರೆ. ಆದರೆ, ದುಬೆ ಕೈಗೆ ಬಂದ ಚೆಂಡನ್ನು ಕೈಚೆಲ್ಲಿದ್ದಾರೆ.
Sun, 09 Jun 202406:04 PM IST
IND vs PAK live score: ಪಾಕಿಸ್ತಾನ 15/0 (2)
ಎರಡು ಓವರ್ ಬಳಿಕ ಪಾಕಿಸ್ತಾನ 15/0 ರನ್ ಗಳಿಸಿದೆ. ಬಾಬರ್ ಹಾಗೂ ರಿಜ್ವಾನ್ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದಾರೆ.
Sun, 09 Jun 202405:56 PM IST
IND vs PAK live score: ಪಾಕಿಸ್ತಾನ ಚೇಸಿಂಗ್ ಆರಂಭ
ಪಾಕಿಸ್ತಾನ ಚೇಸಿಂಗ್ ಆರಂಭಿಸಿದೆ. ಬಾಬರ್ ಅಜಮ್ ಮತ್ತು ರಿಜ್ವಾನ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಷದೀಪ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
Sun, 09 Jun 202405:44 PM IST
IND vs PAK live score: ಪಾಕಿಸ್ತಾನಕ್ಕೆ 120 ರನ್ ಗುರಿ
ಭಾರತ ತಂಡವು 19 ಓವರ್‌ಗಳಲ್ಲಿ ಕೇವಲ 119 ರನ್ ಗಳಿಸಿ ಆಲೌಟ್ ಆಗಿದೆ. ಪಾಕಿಸ್ತಾನ ಗೆಲುವಿಗೆ 120 ರನ್‌ಗಳ ಸಾಧಾರಣ ಗುರಿ ತಲುಪುವ ಅಗತ್ಯವಿದೆ. ಭಾರತದ ಪರ ರಿಷಬ್ ಪಂತ್ ಹೊರತುಪಡಿಸಿ, ಯಾರಿಂದಲೂ ತಂಡಕ್ಕೆ ಕೊಡುಗೆ ಸಿಕ್ಕಿಲ್ಲ. ಕೆಲವೊಂದು ಅನಗತ್ಯ ಹೊಡೆತಗಳ ಹೊರತಾಗಿಯೂ ಅದೃಷ್ಟದಿಂದ ಮೈದಾನದಲ್ಲಿ ಉಳಿದ ಪಂತ್ 40 ರನ್ ಗಡಿ ದಾಟಿದ ಏಕೈಕ ಆಟಗಾರ. ಪಿಚ್ ಸಂಪೂರ್ಣ ಬೌಲರ್ ಸ್ನೇಹಿಯಾಗಿದ್ದು, ಖರಾರುವಕ್ ದಾಳಿ ನಡೆಸಿದರೆ ಪಾಕಿಸ್ತಾನವನ್ನು ಕಟ್ಟಿಹಾಕುವ ಅವಕಾಶ ಭಾರತಕ್ಕಿದೆ.
Sun, 09 Jun 202405:32 PM IST
IND vs PAK live score: ಹಾರ್ದಿಕ್ ಪಾಂಡ್ಯ ಔಟ್! ಭಾರತ 112/9 (17.5)
ಹಾರ್ದಿಕ್ ಪಾಂಡ್ಯ ಔಟ್! ಭಾರತ ಎಲ್ಲಾ ಬ್ಯಾಟರ್‌ಗಳನ್ನು ಕಳೆದುಕೊಂಡಿದೆ. 7(12) ರನ್ ಗಳಿಸಿದ ಪಾಂಡ್ಯ ಬೌಂಡರಿ ಲೈನ್ ಬಳಿ ಇಫ್ತಿಕರ್‌ಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಭಾರತದ 8 ವಿಕೆಟ್ ಪತನವಾಗಿದೆ.
Sun, 09 Jun 202405:22 PM IST
IND vs PAK live score: ಭಾರತ 100/7 (16)
16 ಓವರ್ ಬಳಿಕ ಭಾರತ 100 ರನ್ ಪೂರೈಸಿದೆ. ತಂಡದ ಮೊತ್ತ ತೀರಾ ಕಡಿಮೆಯಾಗಿದ್ದು, ಸ್ಪರ್ಧಾತ್ಮಕ ಟಾರ್ಗೆಟ್ ನೀಡಲು ಇನ್ನೂ ಕನಿಷ್ಠ 40 ರನ್‌ಗಳ ಅಗತ್ಯವಿದೆ.
Sun, 09 Jun 202405:14 PM IST
IND vs PAK live score: ಜಡೇಜಾ ಗೋಲ್ಡನ್ ಡಕ್!
ರವೀಂದ್ರ ಜಡೇಜಾ ಮೈದಾನಕ್ಕೆ ಬರುತ್ತಿದ್ದಂತೆ ಗೋಲ್ಡನ್ ಡಕ್ ಆಗಿದ್ದಾರೆ. ಮೊಹಮ್ಮದ್ ಅಮೀರ್ ಸತತ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆಯ ಅಂಚಿನಲ್ಲಿದ್ದಾರೆ.
Sun, 09 Jun 202405:13 PM IST
ಪಂತ್ ಔಟ್!
ಪಾಕಿಸ್ತಾನ ಪ್ರಮುಖ ವಿಕೆಟ್ ಪಡೆದಿದೆ. ಕ್ರೀಸ್‌ಕಚ್ಚಿ ಆಡುತ್ತಿದ್ದ ಏಕೈಕ ಬ್ಯಾಟರ್ ರಿಷಬ್ ಪಂತ್ ವಿಕೆಟ್ ಕಬಳಿಸಿದೆ. 42(31) ರನ್ ಗಳಿಸಿ ಆಡುತ್ತಿದ್ದ ಪಂತ್, ಅಮೀರ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಭಾರತ 14.1 ಓವರ್‌ಗಳಲ್ಲಿ 96 ರನ್ ವೇಳೆಗೆ 6 ವಿಕೆಟ್ ಕಳೆದುಕೊಂಡಿದೆ.
Sun, 09 Jun 202405:07 PM IST
IND vs PAK live score: ಶಿವಂ ದುಬೆ ಔಟ್, ಭಾರತ 95/5 (13.3)
ಶಿವಂ ದುಬೆ ಔಟ್. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಬಲ್ಲ ಬ್ಯಾಟರ್ ಶಿವಂ ದುಬೆ ಕೇವಲ 3(9) ರನ್ ಗಳಿಸಿ ಔಟಾಗಿದ್ದಾರೆ. ಭಾರತ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.
Sun, 09 Jun 202404:58 PM IST
IND vs PAK live score: ಸೂರ್ಯಕುಮಾರ್ ಔಟ್!
ಕೇವಲ 7(8) ರನ್ ಗಳಿಸಿ ಟಿ20ಯ ನಂಬರ್ ವನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದ್ದಾರೆ. ಹ್ಯಾರಿಸ್ ರೌಫ್ ಮೊದಲ ವಿಕೆಟ್ ಕಬಳಿಸಿದ್ದಾರೆ.
Sun, 09 Jun 202404:55 PM IST
IND vs PAK live score: ಭಾರತ 89/3 (11)
11 ಓವರ್ ಬಳಿಕ ಭಾರತದ ಮೊತ್ತ 89 ರನ್. ರಿಷಬ್ ಪಂತ್ ನಿರ್ಭೀತಿಯಿಂದ ಬ್ಯಾಟ್ ಬೀಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಸಾಥ್ ನೀಡುತ್ತಿದ್ದಾರೆ.
Sun, 09 Jun 202404:49 PM IST
IND vs PAK live score: ಭಾರತ 81/3 (10)
ಪಂದ್ಯದಲ್ಲಿ ಹ್ಯಾರಿಸ್ ರೌಫ್ ಎಸೆದ ಮೊದಲ ಓವರ್‌ನಲ್ಲಿ ರಿಷಬ್ ಪಂತ್ 3 ಬೌಂಡರಿ ಸಹಿತ 13 ರನ್ ಗಳಿಸಿದರು. ಇನ್ನಿಂಗ್ಸ್‌ನ ಮೊದಲಾರ್ಧದ 10 ಓವರ್ ಬಳಿಕ ಭಾರತ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.
Sun, 09 Jun 202404:44 PM IST
IND vs PAK live score: ಭಾರತ 68/3 (9)
9 ಓವರ್ ಬಳಿಕ ಭಾರತ 3 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ. ರಿಷಭ್ ಪಂತ್ 21(18) ಮತ್ತು ಸೂರ್ಯಕುಮಾರ್ ಯಾದವ್ 5(3) ರನ್ ಗಳಿಸಿ ಆಡುತ್ತಿದ್ದಾರೆ.
Sun, 09 Jun 202404:39 PM IST
IND vs PAK live score: ಭಾರತ 62/3 (8)
20(18) ರನ್ ಗಳಿಸಿ ಅಕ್ಷರ್ ಪಟೇಲ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ನಸೀಮ್ ಶಾ ಎರಡನೇ ವಿಕೆಟ್ ಪಡೆದಿದ್ದು, ಭಾರತದ 3 ವಿಕೆಟ್ ಪತನವಾಗಿದೆ. ಇದೀಗ ರಿಷಬ್ ಪಂತ್ ಜೊತೆಗೆ ಸೂರ್ಯಕುಮಾರ್ ಯಾದವ್ ಮೈದಾನಕ್ಕೆ ಬಂದಿದ್ದಾರೆ.
Sun, 09 Jun 202404:34 PM IST
IND vs PAK live score: ಭಾರತ 57/2 (7)
7 ಓವರ್ ಬಳಿಕ ಭಾರತ 2 ವಿಕೆಟ್ ಕಳೆದುಕೊಂಡು 57 ರನ್ ಪೇರಿಸಿದೆ. ಪಂತ್ ಹಾಗೂ ಅಕ್ಷರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
Sun, 09 Jun 202404:30 PM IST
IND vs PAK live score: ಭಾರತ 50/2 (6)
ಪವರ್‌ಪ್ಲೇನ 6 ಓವರ್‌ಗಳಲ್ಲಿ ಭಾರತವು 2 ವಿಕೆಟ್ ನಷ್ಟಕ್ಕೆ 50 ರನ್ ಕಲೆ ಹಾಕಿದೆ. ಅಮಿರ್ ಓವರ್‌ನಲ್ಲಿ ಪಂತ್ ಎರಡು ಬೌಂಡರಿ ಸಿಡಿಸಿದ್ದಾರೆ.
Sun, 09 Jun 202404:23 PM IST
IND vs PAK live score: ಭಾರತ 38/2 (5)
4,6 ಶಾಹಿನ್ ಅಫ್ರಿದಿ ಓವರ್‌ನಲ್ಲಿ ಅಕ್ಷರ್ ಪಟೇಲ್ ಒಂದು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ. ತಂಡದ ರನ್ ವೇಗ ನಿಧಾನವಾಗಿ ಹೆಚ್ಚುತ್ತಿದೆ. ಐದನೇ ಓವರ್‌ನಲ್ಲಿ 14 ರನ್ ಬಂದಿದೆ.
Sun, 09 Jun 202404:18 PM IST
IND vs PAK live score: ಭಾರತ 24/2 (4)
4 ಓವರ್ ಬಳಿಕ ಭಾರತ 24 ರನ್ ಗಳಿಸಿದೆ. ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ. ಪವರ್‌ಪ್ಲೇನಲ್ಲಿ ಇನ್ನೆರಡು ಓವರ್‌ಗಳು ಮಾತ್ರ ಬಾಕಿ ಉಳಿದಿವೆ.
Sun, 09 Jun 202404:10 PM IST
IND vs PAK live score: ರೋಹಿತ್ ಶರ್ಮಾ ಔಟ್!
ದೊಡ್ಡ ಹೊಡೆತಕೆ ಕೈ ಹಾಕಿ ರೋಹಿತ್ ಶರ್ಮಾ ಔಟಾಗಿದ್ದಾರೆ. 13(12) ರನ್ ಗಳಿಸಿದ್ದ ಹಿರ್‌ಮ್ಯಾನ್, ಶಹೀನ್ ಅಫ್ರಿದಿ ಎಸೆತದಲ್ಲಿ ಹ್ಯಾರಿಸ್ ರೌಫ್‌ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದ್ದಾರೆ. ಭಾರತ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
Sun, 09 Jun 202404:07 PM IST
IND vs PAK live score: ಭಾರತ 19/1 (2)
ಎರಡು ಓವರ್‌ಗಳ ಬಳಿಕ ಭಾರತ 1 ವಿಕೆಟ್ ಕಳೆದುಕೊಂಡು 19 ರನ್ ಪೇರಿಸಿದೆ. ನಸೀಮ್ ಶಾ ಎಸೆದ ಎರಡನೇ ಓವರ್‌ನಲ್ಲಿ 11 ರನ್‌ಗಳು ಬಂದಿವೆ. ರೋಹಿತ್ ಶರ್ಮಾ 13(8) ರನ್ ಗಳಿಸಿದ್ದಾರೆ.
Sun, 09 Jun 202404:04 PM IST
IND vs PAK live score: ವಿರಾಟ್ ಕೊಹ್ಲಿ ಔಟ್
ಎದುರಿಸಿದ ಮೂರನೇ ಎಸೆತದಲ್ಲೇ ವಿರಾಟ್ ಕೊಹ್ಲಿ ಔಟಾಗಿದ್ದಾರೆ. ನಸೀಮ್ ಶಾ ಓವರ್‌ನ ಮೂರನೇ ಎಸೆತದಲ್ಲಿ ಕೊಹ್ಲಿ ಔಟಗಿದ್ದಾರೆ.
Sun, 09 Jun 202404:01 PM IST
IND vs PAK live score: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಬೌಂಡರಿ ಬಾರಿಸುವುದರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಸೀಮ್ ಶಾ ಓವರ್‌ನಲ್ಲಿ ಫೋರ್ ಬಾರಿಸಿದ್ದಾರೆ.
Sun, 09 Jun 202403:49 PM IST
IND vs PAK live score: 9.30ಕ್ಕೆ ಪಂದ್ಯ ಮರುಆರಂಭ
ಮಳೆ ನಿಂತಿದೆ. ಅಧಿಕಾರಿಗಳು ಮೈದಾನ ತಪಾಸಣೆ ನಡೆಸಿದ್ದಾರೆ. ಪಂದ್ಯವು 9.30ಕ್ಕೆ ಮತ್ತೆ ಆರಂಭವಾಗಲಿದೆ. ಯಾವುದೇ ಓವರ್ ನಷ್ಟವಿಲ್ಲ.
Sun, 09 Jun 202403:27 PM IST
IND vs PAK live score: ಮತ್ತೆ ವರುಣಾಗಮ!
ಮೊದಲ ಓವರ್ ಪೂರ್ಣಗೊಳ್ಳುತ್ತಿದ್ದಂತೆಯೇ ನ್ಯೂಯಾರ್ಕ್‌ನಲ್ಲಿ ಮತ್ತೆ ಮಳೆ ಸುರಿಯಲು ಆರಂಭಿಸಿದೆ. ಆಟಗಾರರು ಡಗೌಟ್ ಸೇರಿಕೊಂಡಿದ್ದಾರೆ. ಪಿಚ್ ಮೇಲೆ ಕವರ್ ಬಂದು ಕುಳಿತಿದೆ. ಪಂದ್ಯ ಆರಂಭಕ್ಕೆ ಮತ್ತು ಕಾಯುವಿಕೆ ಶುರುವಾಗಿದೆ.
Sun, 09 Jun 202403:25 PM IST
IND vs PAK live score: ಭಾರತದ ಉತ್ತಮ ಆರಂಭ, IND 8/0 (1)
ಮೊದಲ ಓವರ್ ಬಳಿಕ ಭಾರತ 8 ರನ್ ಗಳಿಸಿದೆ.
Sun, 09 Jun 202403:24 PM IST
ಸಿಕ್ಸರ್!!!
ವಾಹ್, ಏನ್ ಶಾಟ್ ಇದು. ಶಾಹೀನ್ ಅಫ್ರಿದಿ ಎಸೆತಕ್ಕೆ ಹಿಟ್‌ಮ್ಯಾನ್ ಸಿಕ್ಸರ್ ಸಿಡಿಸಿದ್ದಾರೆ. ತುಂಬಾ ಸಲೀಸಾಗಿ ಡೀಪ್ ಸ್ಕ್ವೇರ್ ಲೆಗ್ ಮೇಲೆ ಬಾರಿಸಿ ಆರು ರನ್ ಕದ್ದಿದ್ದಾರೆ.
Sun, 09 Jun 202403:18 PM IST
ಭಾರತ ಬ್ಯಾಟಿಂಗ್ ಆರಂಭ
ಮೆಗಾ ಫೈಟ್ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಶಾಹೀನ್ ಶಾ ಅಫ್ರಿದಿ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
Sun, 09 Jun 202403:06 PM IST
8.50ಕ್ಕೆ ಪಂದ್ಯ ಆರಂಭ
ಇಂಡೋ-ಪಾಕ್ ಪಂದ್ಯ 8.50ಕ್ಕೆ ಆರಂಭಗೊಳ್ಳಲಿದೆ. ಆದರೆ ಓವರ್‌ಗಳ ಕಡಿತ ಇರುವುದಿಲ್ಲ.
Sun, 09 Jun 202402:57 PM IST
ಮತ್ತೆ ಮಳೆ
ಟಾಸ್ ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೆ ಮತ್ತೆ ಮಳೆ ಆರಂಭಗೊಂಡಿದೆ. ಪಂದ್ಯ ಆರಂಭವಾಗಲು ಇನ್ನೂ ಅರ್ಧ ಗಂಟೆಯಾಗಬಹುದು.
Sun, 09 Jun 202402:52 PM IST
ಭಾರತ (ಪ್ಲೇಯಿಂಗ್ XI):
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
Sun, 09 Jun 202402:52 PM IST
ಪಾಕಿಸ್ತಾನ (ಪ್ಲೇಯಿಂಗ್ XI):
ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಉಸ್ಮಾನ್ ಖಾನ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್,
Sun, 09 Jun 202403:03 PM IST
ಟಾಸ್ ಗೆದ್ದ ಪಾಕಿಸ್ತಾನ
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 19ನೇ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.