IND vs PAK ICC World Cup Highlights: ಪಾಕ್ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಜಯ, ವಿಶ್ವಕಪ್ ಗೆಲುವಿನ ಅಂತರ 8-0ಗೆ ಏರಿಕೆ
India vs Pakistan ICC Cricket World Cup 2023 Highlights: ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ 12ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಪಂದ್ಯದ ಸಂಪೂರ್ಣ ಸಾರಾಂಶ ಇಲ್ಲಿದೆ.
IND vs PAK ICC ODI World Cup Highlights: ಐಸಿಸಿ ವಿಶ್ವಕಪ್‌ನಲ್ಲಿ (ICC ODI World Cup 2023) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ (India vs Pakistan) ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಪಂದ್ಯದಲ್ಲಿ ಬಾಬರ್ ಅಜಾಮ್ ಬಳಗದ ವಿರುದ್ಧ ಭಾರತ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.
8.10 PM IND vs PAK ICC ODI World Cup Highlights: ಪಾಕ್ ವಿರುದ್ಧ ಭಾರತದ ಅಜೇಯ ಓಟ ಮುಂದುವರೆದಿದೆ. ಇಲ್ಲಿಗೆ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ಅಂತರ 8-0 ಆಗಿದೆ. ಬ್ಯಾಟಿಂಗ್ ಪಿಚ್‌ನಲ್ಲಿ ದಿಢೀರ್ ಕುಸಿತ ಕಂಡ ಪಾಕ್ ಬ್ಯಾಟಿಂಗ್ ಲೈನಪ್, ಬಳಿಕ ಬೌಲಿಂಗ್‌ನಲ್ಲಿ ಭಾರತವನ್ನು ಬೆದರಿಸಲು ವಿಫಲವಾಯ್ತು. ಅಫ್ರಿದಿ, ರೌಫ್‌ರಂಥ ಪಾಕಿಸ್ತಾನದ ವೇಗದ ಅಸ್ತ್ರಗಳನ್ನು ರೋಹಿತ್ ಶರ್ಮಾ ಸರಿಯಾಗಿ ದಂಡಿಸಿದರು. ಅಂತಿಮವಾಗಿ ಶ್ರೇಯಸ್ ಅಯ್ಯರ್ ಕೂಡಾ ಅರ್ಧಶತಕದೊಂದಿಗೆ ತಂಡವನ್ನು ಗೆಲ್ಲಿಸಿದರು. ಭಾರತ ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಾಕ್ ವಿರುದ್ಧ ಎಲ್ಲಾ ವಿಶ್ವಕಪ್ ಪಂದ್ಯಗಳಲ್ಲಿಯೂ ಭಾರಿ ಅಂತರದಿಂದ ಗೆದ್ದ ದಾಖಲೆ ಮಾಡಿದೆ. ಈ ಬಾರಿಯೂ 7 ವಿಕೆಟ್ ಮತ್ತು 117 ಎಸೆತಗಳನ್ನು ಉಳಿಸಿ ಗೆಲುವು ಸಾಧಿಸಿದೆ. ನಾಳೆ (ಭಾನುವಾರ) ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಮತ್ತೆ ಲೈವ್ ಅಪ್ಡೇಟ್ ಜೊತೆಗೆ ನಾಳೆ ಭೇಟಿಯಾಗೋಣ. ಶುಭರಾತ್ರಿ.
8.05 PM IND vs PAK ICC ODI World Cup Live Updates, IND 192/3 (30.3): ಪಾಕಿಸ್ತಾನ ವಿರುದ್ಧ ಭಾರತ ತಂಡವು 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಶ್ರೇಯಸ್ ಅಯ್ಯರ್ ಗೆಲುವಿನ ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಅಲ್ಲದೆ ಅರ್ಧಶತಕ ಸಂಭ್ರಮಿಸಿದ್ದಾರೆ.
7.45 PM IND vs PAK ICC ODI World Cup Live Updates, IND 165/3 (25): ಭಾರತವು ಗೆಲುವಿನತ್ತ ಸಾಗುತ್ತಿದೆ. ಗೆಲುವಿಗೆ ಕೇವಲ 27 ರನ್ ಬೇಕಾಗಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಆಡುತ್ತಿದ್ದಾರೆ.
7.30 PM IND vs PAK ICC ODI World Cup Live Updates, IND 156/3 (21.4): ರೋಹಿತ್ ಮತ್ತು ಶ್ರೇಯಸ್ ನಡುವಿನ 77(71) ರನ್ ಜೊತೆಯಾಟ ಅಂತ್ಯವಾಗಿದೆ. 86 ರನ್ ಗಳಿಸಿ ರೋಹಿತ್ ಶರ್ಮಾ ಔಟಾಗಿದ್ದಾರೆ.
7.25 PM IND vs PAK ICC ODI World Cup Live Updates, IND 148/2 (20.1) ಶ್ರೇಯಸ್ ಅಯ್ಯರ್ ಮತ್ತು ರೋಹಿತ್ ಶರ್ಮಾ ಬೇಗನೆ ಪಂದ್ಯ ಮುಗಿಸಲು ನೋಡುತ್ತಿದ್ದಾರೆ. ಇಬ್ಬರೂ ಈಗಾಗಲೇ ಅರ್ಧಶತಕದ ಜೊತೆಯಾಟವಾಡಿದ್ದಾರೆ.
7.00 PM IND vs PAK ICC ODI World Cup Live Updates, IND 101/2 (14): ಭಾರತದ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರು ಶತಕ ಸಿಡಿಸಿದ್ದರು.
6.40 PM IND vs PAK ICC ODI World Cup Live Updates, IND 79-2: ಭಾರತ ಕೊಹ್ಲಿ ವಿಕೆಟ್ ಕಳೆದುಕೊಂಡಿದೆ. 16(18) ರನ್ ಗಳಿಸಿ ವಿರಾಟ್ ವಿಕೆಟ್ ಒಪ್ಪಿಸಿದ್ದಾರೆ.
6.25 PM IND vs PAK ICC ODI World Cup Live Updates, IND 54/1 (7) : ನಾಯಕನ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ನಡೆಸುತ್ತಿದ್ದಾರೆ. ಪಾಕ್ ವೇಗಿಗಳ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ.
6.10 PM IND vs PAK ICC ODI World Cup Live Updates, IND 23/1 (2.5): ಭಾರತ ತಂಡ ಮೊದಲ ವಿಕೆಟ್ ಕಳೆದುಕೊಂಡಿದೆ. ಶುಭ್ಮನ್ ಗಿಲ್ 16(11) ರನ್ ಗಳಿಸಿ ಅಫ್ರಿದಿಗೆ ವಿಕೆಟ್ ಒಪ್ಪಿಸಿದ್ದಾರೆ.
6.05 PM IND vs PAK ICC ODI World Cup Live Updates, IND 22/0 (2): ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಗಿಲ್ ಸ್ಫೋಟಕ ಆರಂಭ ಕೊಟ್ಟಿದ್ದಾರೆ.
5.55 PM IND vs PAK ICC ODI World Cup Live Updates: ಭಾರತ ತಂಡ ಚೇಸಿಂಗ್ ಆರಂಭಿಸಿದೆ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
5.30 PM IND vs PAK ICC ODI World Cup Live Updates : ಆರಂಭದಲ್ಲಿ ವಿಕೆಟ್ ಕಬಳಿಸಲು ಪರದಾಡಿದ ಭಾರತ, 30 ಓವರ್ ಬಳಿಕ ಸಂಪೂರ್ಣ ಮೇಲುಗೈ ಸಾಧಿಸಿತು, 10 ಓವರ್‌ಗಳಲ್ಲಿ 5 ವಿಕೆಟ್ ಪಡೆದುಕೊಂಡಿತು. ಅಹಮದಾಬಾದ್‌ನ ಬ್ಯಾಟಿಂಗ್ ಪಿಚ್‌ನಲ್ಲಿ 191 ರನ್ ಅಲ್ಪ ಮೊತ್ತ. ಇದು ಭಾರತದ ಪಾಲಿಗೆ ಸುಲಭ ತುತ್ತಾಗುವ ಎಲ್ಲಾ ಸಾಧ್ಯತೆಗಳಿವೆ. ಒಂದು ಹಂತದಲ್ಲಿ 155 ರನ್‌ಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಪಾಕ್, ಕೆಲವೇ ಓವರ್‌ಗಳಲ್ಲಿ ಎಲ್ಲಾ ಹತ್ತು ವಿಕೆಟ್ ಕಳೆದುಕೊಂಡಿತು.
5.25 PM IND vs PAK ICC ODI World Cup Live Updates, PAK 191 (42.5): ಪಾಕಿಸ್ತಾನ ತಂಡ ಕೇವಲ 191 ರನ್‌ಗಳಿಗೆ ಆಲೌಟ್ ಆಗಿದೆ. ಭಾರತೀಯ ಬೌಲರ್‌ಗಳು ಸಮರ್ಥ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ.
5.15 PM IND vs PAK ICC ODI World Cup Live Updates, PAK 189/9 (41): ಪಾಕಿಸ್ತಾನ ತಂಡ 9ನೇ ವಿಕೆಟ್ ಕಳೆದುಕೊಂಡಿದೆ. ತಂಡ 200ರನ್ ಒಳಗೆ ಆಲೌಟ್ ಆಗುವ ಲಕ್ಷಣ ಕಾಣುತ್ತಿದೆ.
5.10 PM IND vs PAK ICC ODI World Cup Live Updates, PAK 187/8 (40): ಪಾಕಿಸ್ತಾನ ತಂಡ 8ನೇ ವಿಕೆಟ್ ಕಳೆದುಕೊಂಡಿದೆ, ನವಾಜ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
4.50 PM IND vs PAK ICC ODI World Cup Live Updates, PAK 171/7 (35.2): ಪಾಕ್ ತಂಡ 7ನೇ ವಿಕೆಟ್ ಕಳೆದುಕೊಂಡಿದೆ. ಬುಮ್ರಾ ಮ್ಯಾಜಿಕ್ ಮತ್ತೆ ವರ್ಕೌಟ್ ಆಗಿದೆ. ಶಾದಾಬ್ ಖಾನ್ ಕ್ಲೀನ್ ಬೋಲ್ಡ್…
4.40 PM IND vs PAK ICC ODI World Cup Live Updates, PAK 168/6 (34): ರಿಜ್ವಾನ್ ಅರ್ಧಶತಕದ ಅಂಚಿನಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. 49(69) ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
4.40 PM IND vs PAK ICC ODI World Cup Live Updates, PAK 166/5 (33): ಕುಲ್ದೀಪ್ ಎಸೆತದಲ್ಲಿ ಇಫ್ತಿಕರ್ ಅಹ್ಮದ್ 4(4) ರನ್ ಗಳಿಸಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಒಂದೇ ಓವರ್‌ನಲ್ಲಿ ಅವರು ಎರಡು ವಿಕೆಟ್ ಕಬಳಿಸಿದ್ದಾರೆ. ಪಾಕ್ ಸಂಕಷ್ಟದಲ್ಲಿದೆ. ತಂಡದ ಕೊನೆಯ 5 ಓವರ್‌ಗಳಲ್ಲಿ 21 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.
04.35 PM IND vs PAK ICC ODI World Cup Live Updates : ಸೌದ್ ಶಕೀಲ್ ಬಂದ ವೇಗದಲ್ಲೇ ಮರಳಿದ್ದಾರೆ. ಕುಲ್ದೀಪ್ ಸ್ಪಿನ್ ಮೋಡಿಗೆ ಎಲ್‌ಬಿಡಬ್ಲ್ಯೂ ಆಗಿ ಪೆವಿಲಿಯನ್ ಮರಳಿದ್ದಾರೆ.
04.15 PM IND vs PAK ICC ODI World Cup Live Updates, PAK 156/3 (29.5): ಅರ್ಧಶತಕ ಸಿಡಿಸಿ ನಾಯಕ ಬಾಬಾರ್ ಅಜಾಮ್ ಔಟಾಗಿದ್ದಾರೆ. ಆ ಮೂಲಕ ಬಾಬರ್ ಮತ್ತು ರಿಜ್ವಾನ್ ನಡುವಿನ 82(103) ರನ್‌ಗಳ ಜೊತೆಯಾಟವನ್ನು ಮೊಹಮ್ಮದ್ ಸಿರಾಜ್ ಮುರಿದಿದ್ದಾರೆ.
04.10 PM IND vs PAK ICC ODI World Cup Live Updates, PAK 144/2 (28): ರಿಜ್ವಾನ್ ಮತ್ತು ಬಾಬರ್ ಜೊತೆಯಾಟವನ್ನು ಮುಂದುವರೆಸಿದ್ದಾರೆ. ಉಭಯ ಆಟಗಾರರು ಅರ್ಧಶತಕದತ್ತ ಮುನ್ನಡೆಸಿಯುತ್ತಿದ್ದಾರೆ.
03.50 PM IND vs PAK ICC ODI World Cup Live Updates, PAK 123/2 (24): ರಿಜ್ವಾನ್ ಮತ್ತು ಬಾಬರ್ ಅಜಾಮ್ ಅರ್ಧಶತಕದ 50(69) ಜೊತೆಯಾಟವಾಡಿದ್ದಾರೆ.
03.35 PM IND vs PAK ICC ODI World Cup Live Updates, PAK 102/2 (19): ಪಾಕಿಸ್ತಾನ 100 ರನ್ ಗಡಿ ದಾಟಿದೆ. 19 ಓವರ್ ವೇಳೆಗೆ ಶತಕ ಗಳಿಸಿದೆ. ಬಾಬರ್ ಹಾಗೂ ರಿಜ್ವಾನ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
03.20 PM IND vs PAK ICC ODI World Cup Live Updates, PAK : 79/2 (15): ಬಾಬರ್ ಅಜಾಮ್ ಜೊತೆಗೆ ಶತಕವೀರ ರಿಜ್ವಾನ್ ಸೇರಿಕೊಂಡಿದ್ದಾರೆ. ಉತ್ತಮ ಜೊತೆಯಾಟ ನಿರ್ಮಿಸುವ ಗುರಿಯೊಂದಿಗೆ ಬ್ಯಾಟ್ ಬೀಸುತ್ತಿದ್ದಾರೆ.
03.05 PM IND vs PAK ICC ODI World Cup Live Updates, PAK 73/2 (12.3): ಎರಡನೇ ವಿಕೆಟ್‌ಗೆ ಬಾಬರ್ ಮತ್ತು ಇಮಾಮ್ ಉಲ್ ಹಕ್ ನಡುವಿನ 32(27) ರನ್‌ಗಳ ಜೊತೆಯಾಟವನ್ನು ಹಾರ್ದಿಕ್ ಪಾಂಡ್ಯ ಬ್ರೇಕ್ ಮಾಡಿದ್ದಾರೆ. ಇಮಾಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಅವರ ಗಳಿಕೆ 36(38) ರನ್.
02.50 PM IND vs PAK ICC ODI World Cup Live Updates, PAK 49/1 (10): ಪವರ್‌ಪ್ಲೇ ಬಳಿಕ ಪಾಕಿಸ್ತಾನ 49 ರನ್ ಪೇರಿಸಿದೆ. ಅಲ್ಲದೆ ಒಂದು ವಿಕೆಟ್ ಕಳೆದುಕೊಂಡಿದೆ. ಇದೀಗ ಬಾಬರ್ ಅಜಾಮ್ ಮತ್ತು ಇಮಾಮ್ ಉಲ್ ಹಕ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
02.40 PM IND vs PAK ICC ODI World Cup Live Updates, PAK 41/1 (8): ಪಾಕಿಸ್ತಾನ ತಂಡ ಮೊದಲ ವಿಕೆಟ್ ಕಳೆದುಕೊಂಡಿದೆ. ಅಬ್ದುಲ್ಲಾ ಶಫೀಕ್ 20(24)ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ವಿಕೆಟ್‌ಗೆ 41(48) ರನ್ ಜೊತೆಯಾಟ ಅಂತ್ಯವಾಗಿದೆ. ಈಗ ನಾಯಕ ಬಾಬರ್ ಅಜಾಮ್ ಎಂಟ್ರಿ ಕೊಟ್ಟಿದ್ದಾರೆ…
02.30 PM IND vs PAK ICC ODI World Cup Live Updates, PAK 28/0 (6) : ಪಾಕಿಸ್ತಾನವು ರಕ್ಷಣಾತ್ಮಕ ಆಟ ಆರಂಭಿಸಿದೆ. ವಿಕೆಟ್ ಉಳಿಸಿಕೊಂಡು ರನ್ ಕಲೆಹಾಕುತ್ತಿದೆ. ಇಮಾಮ್ ಉಲ್ ಮತ್ತು ಶಫೀಕ್ ರನ್ ಕಲೆ ಹಾಕುತ್ತಿದ್ದಾರೆ.
02.10 PM IND vs PAK ICC ODI World Cup Live Updates, PAK 16/0 (2): ಪಾಕಿಸ್ತಾನ ಉತ್ತಮ ಆರಂಭ ಪಡೆದಿದೆ. ಮೊದಲ ಎರಡು ಓವರ್‌ಗಳಲ್ಲೇ 16 ರನ್ ಗಳಿಸಿದೆ. ಸಿರಾಜ್ ಎಸೆದ ಎರಡನೇ ಓವರ್‌ನಲ್ಲಿ ಇಮಾಮ್ ಉಲ್ ಹಕ್ ಮೂರು ಬೌಂಡರಿ ಗಳಿಸಿದ್ದಾರೆ.
02.00 PM IND vs PAK ICC ODI World Cup Live Updates: ಟಾಸ್ ಸೋತು ಪಾಕಿಸ್ತಾನ ತಂಡ ಬ್ಯಾಟಿಂಗ್‌ಗೆ ಇಳಿದಿದೆ. ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನೊಂದಿಗೆ ಬೌಲಿಂಗ್ ಆರಂಭಿಸಿದ್ದಾರೆ.
01.35 PM IND vs PAK ICC ODI World Cup Live Updates, ಭಾರತ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
01.35 PM IND vs PAK ICC ODI World Cup Live Updates, ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
01.30 PM IND vs PAK ICC ODI World Cup Live Updates: ಭಾರತ ಪಾಕಿಸ್ತಾನ ನಡುವಿನ ರೋಚಕ ವಿಶ್ವಕಪ್ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಶುಭ್ಮನ್ ಗಿಲ್ ತಂಡ ಸೇರಿಕೊಂಡಿದ್ದಾರೆ.
12.54 PM IND vs PAK ICC ODI World Cup Live Updates: ಅಹಮದಾಬಾದ್ ಪಿಚ್ ರಿಪೋರ್ಟ್
ಅಹಮದಾಬಾದ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸುವ ಅವಕಾಶ ತುಂಬಾ ಕಡಿಮೆ ಇದೆ. ಇಬ್ಬನಿ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ಸಮಸ್ಯೆಯಾಗಲಿದೆ. ದೊಡ್ಡ ಮೊತ್ತವನ್ನು ನಿರೀಕ್ಷಿಸಲಾಗಿದೆ.
12.47 PM IND vs PAK ICC ODI World Cup Live Updates: ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಹಿನ್ನೆಲೆಯಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಜ್ಯೋತಿರ್ಲಿಂಗವನ್ನು ವಿಶೇಷವಾಗಿ ಅಲಕಂರಿಸಲಾಗಿದೆ.
12.41 PM: ಸಚಿನ್, ದಿನೇಶ್ ಕಾರ್ತಿ, ಅನುಷ್ಕಾ ಅಹಮದಾಬಾದ್‌ಗೆ ಆಗಮನ
ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಣೆಗಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ದಿನೇಶ್ ಕಾರ್ತಿಕ್ ಹಾಗೂ ವಿರಾಟ್ ಕೊಹ್ಲಿ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅಹಮದಾಬಾದ್‌ಗೆ ಆಗಮಿಸಿದ್ದಾರೆ.
12.37 PM: ಪಾಕಿಸ್ತಾನ ಬಗ್ಗೆ ಟೀಂ ಇಂಡಿಯಾ ಎಚ್ಚರಿಕೆಯಿಂದಿರಬೇಕು-ಗಂಭೀರ್
ಪಾಕಿಸ್ತಾನ ಕೂಡ ಒಳ್ಳೆಯ ತಂಡವಾಗಿದ್ದು, ಅವರಲ್ಲೂ ಪಂದ್ಯ ಗೆಲ್ಲುವ ಸಾಮರ್ಥ್ಯವಿದೆ. ನನಗೆ ವಿಶ್ವಾಸ ಇದೆ ಪಾಕಿಸ್ತಾನ ಬಗ್ಗೆ ಟೀಂ ಇಂಡಿಯಾ ಎಚ್ಚರಿಕೆಯಿಂದ ಇರಲಿದೆ. 100 ಓವರ್‌ಗಳ ಪಂದ್ಯದಲ್ಲಿ ಗುಣಮಟ್ಟದ ಆಟವನ್ನು ಆಡಲಿದ್ದಾರೆ. ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಮಾಜಿ ಕ್ರಿಕೆಟರ್ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
11.35 AM: ಅಹಮದಾಬಾದ್‌ನಲ್ಲಿ ಹಬ್ಬದ ವಾತಾವರಣ
ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಕದನ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಎಲ್ಲಿ ನೋಡಿದರೂ ಟೀಂ ಇಂಡಿಯಾ ಟಿ ಶರ್ಟ್‌ಗಳನ್ನು ಧರಿಸಿರುವ ಕ್ರಿಕೆಟ್ ಅಭಿಮಾನಿಗಳೇ ಕಾಣುತ್ತಿದ್ದು, ಅಹಮದಾಬಾದ್ ಸಂಪೂರ್ಣ ಬ್ಲೂಮಯವಾಗಿದೆ. ನರೇಂದ್ರ ಮೋದಿ ಸ್ಟೋಡಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ.
11.32 AM: ವಿರಾಟ್ ಕೊಹ್ಲಿ ಹೆಸರು ಕೇಳಿದ್ರೆ ಪಾಕ್ ತಂಡಕ್ಕೆ ನಡುಕ-ಅಭಿಮಾನಿ
ವಿರಾಟ್ ಕೊಹ್ಲಿ ಹೆಸರಿಗೆ ಪಾಕಿಸ್ತಾನ ತಂಡ ಹೆದರುತ್ತದೆ. ಇಂದು ವಿರಾಟ್ ಶತಕ ಬಾರಿಸುತ್ತಾರೆ ಎಂದು ಪಂದ್ಯ ನಡಯಲಿರುವ ಗುಜರಾತ್‌ನ ಅಹಮದಾಬಾದ್‌ನಲ್ಲಿ ಕ್ರಿಕೆಟ್ ಅಭಿಮಾನಿಯೊಬ್ಬರು ಹೇಳಿದ್ದಾರೆ.
11.27 AM: ಟೀಂ ಇಂಡಿಯಾ ಗೆಲುವಿಗಾಗಿ ಹೋಮ ಹವನ
ಬಿಹಾರದ ಪಾಟ್ನಾದಲ್ಲಿ ಟೀಂ ಇಂಡಿಯಾ ಗೆಲುವಿಗೆ ಕ್ರಿಕೆಟ್ ಅಭಿಮಾನಿಗಳು ಹೋಮ-ಹವನ ನಡೆಸುತ್ತಿದ್ದಾರೆ. ವಿಶ್ವಕಪ್ ಭಾರತ ತಂಡದ ಎಲ್ಲಾ ಆಟಗಾರರ ಭಾವಚಿತ್ರಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
11.24 AM: ಇದ್ದಿಲಿನಲ್ಲಿ ಮೂಡಿದ ರೋಹಿತ್, ಬಾಬರ್ ಚಿತ್ರ
ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾಗೆ ಬೆಂಬಲವಾಗಿ ಉತ್ತರ ಪ್ರದೇಶದ ಕಲಾವಿದೊಬ್ಬ ಇದ್ದಿಲಿನಲ್ಲಿ ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ಚಿತ್ರವನ್ನು ಬಿಡಿಸಿದ್ದಾರೆ.
11.00 AM: ಭಾರತ-ಪಾಕಿಸ್ತಾನ ಆಡುವ 11ರ ಬಳಗ
ಟೀಂ ಇಂಡಿಯಾ ಆಡುವ ಸಂಭಾವ್ಯ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್/ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ ಆಡುವ ಸಂಭಾವ್ಯ 11ರ ಬಳಗ
ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ. ಹ್ಯಾರಿಸ್ ರೌಫ್.
9.51 AM: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಆತಂಕ ಇಲ್ಲ
ಇಂದು (ಅಕ್ಟೋಬರ್ 14, ಶನಿವಾರ) ಅಹಮದಾಬಾದ್‌ನಲ್ಲಿ ಮೋಡ ರಹಿತ ವಾತಾವರಣ ಇದ್ದು, ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇದೆ. ಗಾಳಿಯ ವೇಗ ಗಂಟೆಗೆ 8 ಕಿಲೋ ಮೀಟರ್ ಇರಲಿದೆ. ಶೇಕಡಾ 95 ರಷ್ಟು ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ವರದಿಯಾಗಿದೆ.
9.46 AM: ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಿಲ್ಲದ ಸರದಾರ
ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈವರೆಗೆ 134 ಪಂದ್ಯಗಳನ್ನು ಆಡಿವೆ. ಇದರಲ್ಲಿ 73 ಪಂದ್ಯಗಳನ್ನು ಪಾಕಿಸ್ತಾನವೇ ಗೆದ್ದಿದೆ. ಟೀಂ ಇಂಡಿಯಾ 56 ಪಂದ್ಯಗಳಲ್ಲಿ ಜಯ ಸಾಧಿಸಿದೆ. 5 ಪಂದ್ಯಗಳು ಫಲಿತಾಂಶ ಇಲ್ಲದೆ ಅಂತ್ಯ ಕಂಡಿವೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೆ ಭಾರತ ತಂಡವನ್ನು ಸೋಲಿಸಲು ಆಗಲೇ ಇಲ್ಲ.
9.41 AM: ಐಸಿಸಿ ವಿಶ್ವಕಪ್‌ಗೆ ಭಾರತ-ಪಾಕಿಸ್ತಾನ ತಂಡಗಳು
ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್
ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಶಾಹೀನ್ ಶಾ ಅಫ್ರಿದಿ, ಹಸನ್ ಅಲಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ.
9.17 AM: ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಂಪೂರ್ಣ ಮಾಹಿತಿ
ಪಂದ್ಯ: ಭಾರತ ಮತ್ತು ಪಾಕಿಸ್ತಾನ, ಐಸಿಸಿ ಪುರುಷರ ವಿಶ್ವಕಪ್ 2023 12ನೇ ಪಂದ್ಯ
ದಿನಾಂಕ: ಅಕ್ಟೋಬರ್ 14, 2023 ಶನಿವಾರ
ಸಮಯ: ಮಧ್ಯಾಹ್ನ 2 ಗಂಟೆ (ಭಾರತೀಯ ಕಾಲಮಾನ)
ಸ್ಥಳ: ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ, ಅಹಮದಾಬಾದ್