ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲ್ಲೋದು ಪಕ್ಕಾ; ಅದಕ್ಕೆ ಕಾರಣ ಟಿ20 ವಿಶ್ವಕಪ್ ಇತಿಹಾಸವೇ ಹೇಳುತ್ತೆ!
India vs Pakistan: ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲಿ ಎಷ್ಟು ಬಾರಿ ಮುಖಾಮುಖಿಯಾಗಿವೆ, ಯಾರು ಹೆಚ್ಚು ಮೇಲುಗೈ ಸಾಧಿಸಿದ್ದಾರೆ ಎಂಬುದರ ವಿವರ ಇಲ್ಲಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಟಿ20 ವಿಶ್ವಕಪ್‌ನ 19ನೇ ಪಂದ್ಯ ಜೂನ್ 9ರ ಭಾನುವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ 8 ವಿಕೆಟ್ಗಳ ಗೆಲುವು ಸಾಧಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಮತ್ತೊಂದೆಡೆ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲೇ ಅಮೆರಿಕ ವಿರುದ್ಧ ಸೋಲು ಮುಖಭಂಗಕ್ಕೆ ಒಳಗಾಗಿದೆ.
ಎ ಗುಂಪಿನಲ್ಲಿ ಸೆಣಸಾಟ ನಡೆಸುವ ಉಭಯ ತಂಡಗಳು ಭರ್ಜರಿ ಗೆಲುವಿನ ಕನಸಿನಲ್ಲಿದೆ. ಆದರೆ, ಪಾಕಿಸ್ತಾನ ಈ ಪಂದ್ಯ ಸೋತರೆ, ಸೂಪರ್-8 ಪ್ರವೇಶಿಸುವ ಕನಸನ್ನು ಬಹುತೇಕ ಕಳೆದುಕೊಳ್ಳಲಿದೆ. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆಯಿಡಲು ಪಾಕ್ ಸಿದ್ಧವಾಗುತ್ತಿದೆ. ಉಭಯ ತಂಡಗಳ ನಡುವಿನ ಕಾದಾಟಕ್ಕೆ ಇಡೀ ಪ್ರಪಂಚವೇ ಕಾತರದಿಂದ ಕಾಯುತ್ತಿದೆ. ಹಾಗಾದರೆ, ಎರಡೂ ತಂಡಗಳು ಎಷ್ಟು ಬಾರಿ ಮುಖಾಮುಖಿಯಾಗಿವೆ? ಗೆದ್ದವರು, ಸೋತವರು ಯಾರು?
ಟಿ20 ವಿಶ್ವಕಪ್‌ನಲ್ಲಿ ಹೆಡ್ ಟು ಹೆಡ್ ರೆಕಾರ್ಡ್
ಇಂಡೋ-ಪಾಕ್ ನಡುವಿನ ಪಂದ್ಯದ ತೀವ್ರತೆ ಹೆಚ್ಚಾಗಿದೆ. 2007ರ ಟಿ20 ವಿಶ್ವಕಪ್ನಿಂದಲೂ ಮುಖಾಮುಖಿಯಾಗ್ತಿರುವ ಉಭಯ ತಂಡಗಳು, 8ನೇ ಬಾರಿಗೆ ಸೆಣಸಾಟಕ್ಕೆ ಸಿದ್ಧಗೊಂಡಿವೆ. ವಿಶ್ವಕಪ್ ಇತಿಹಾಸದಲ್ಲಿ ಹಿಂದಿನ 7 ಪಂದ್ಯಗಳಲ್ಲಿ ಪಾಕಿಸ್ತಾನದ ಮೇಲೆ ಭಾರತ ಮೇಲುಗೈ ಸಾಧಿಸಿದೆ. ಭಾರತ 6 ಬಾರಿ, ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಮುಖಾಮುಖಿಯಾದ 2ರಲ್ಲಿ ಭಾರತ ಎರಡೂ ಬಾರಿ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ಗೆದ್ದಿತ್ತು.
ಭಾರತ vs ಪಾಕಿಸ್ತಾನ ಟಿ20ಐ ಪಂದ್ಯಗಳ ಪಟ್ಟಿ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಇಂಡೋ-ಪಾಕ್ ದೇಶಗಳು 12 ಸಲ ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯಗಳಲ್ಲಿ ಪಾಕ್ 3 ಬಾರಿ ಗೆದ್ದಿದ್ದರೆ, ಟೀಮ್ ಇಂಡಿಯಾ 9ರಲ್ಲಿ ಜಯಿಸಿದೆ.
2007: T20 ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ಗುಂಪು ಹಂತದ ಪಂದ್ಯ ಟೈ ಆಗಿ ಕೊನೆಗೊಂಡಿತ್ತು. (ಭಾರತ ಬೌಲ್ ಔಟ್ನಲ್ಲಿ ಗೆದ್ದಿತ್ತು)
2007: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ 5 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.
2012: ಭಾರತ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು.
2012: ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತ್ತು.
2012: ಭಾರತ ತಂಡವು ಪಾಕಿಸ್ತಾನ ತಂಡವನ್ನು 11 ರನ್‌ಗಳಿಂದ ಸೋಲಿಸಿತ್ತು.
2014: ಟಿ20 ವಿಶ್ವಕಪ್‌ನಲ್ಲಿ ಭಾರತ ಏಳು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು.
2016: ಏಷ್ಯಾಕಪ್‌ನಲ್ಲಿ ಭಾರತ ಐದು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವವನ್ನು ಸೋಲಿಸಿತ್ತು.
2016: ಟಿ20 ವಿಶ್ವಕಪ್‌ನಲ್ಲಿ ಭಾರತ ಆರು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು.
2021: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು.
2022: ಏಷ್ಯಾಕಪ್‌ನಲ್ಲಿ ಭಾರತ ಐದು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. (ಗುಂಪು ಹಂತ)
2022: ಏಷ್ಯಾಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ ಐದು ವಿಕೆಟ್‌ಗಳಿಂದ ಸೋಲಿಸಿತ್ತು. (ಸೂಪರ್ ಫೋರ್ಸ್)
2022: ಭಾರತ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿತ್ತು.
ನ್ಯೂಯಾರ್ಕ್ನಲ್ಲೇ ಪಂದ್ಯವೇಕೆ?
ಉಭಯ ತಂಡಗಳ ನಡುವಿನ ಸಮರಕ್ಕೆ ನ್ಯೂಯಾರ್ಕ್ ಸಿದ್ಧಗೊಂಡಿದೆ. ಈ ಪಂದ್ಯಕ್ಕೆ 34,000 ಪ್ರೇಕ್ಷಕರ ಸಾಮರ್ಥ್ಯವುಳ್ಳ ತಾತ್ಕಾಲಿಕ ಮೈದಾನ ಈ ವೇದಿಕೆ ಒದಗಿಸಲಿದೆ. ಆದರೆ ಈ ಪಂದ್ಯ ನ್ಯೂಯಾರ್ಕ್ನಲ್ಲೇ ನಡೆಸಲು ಪ್ರಮುಖ ಕಾರಣ ಇದೆ. ಅಮೆರಿಕದಲ್ಲಿ 7,11,000 ಭಾರತೀಯ ಮತ್ತು 1,00,000 ಪಾಕಿಸ್ತಾನ ಮೂಲದ ಜನರು ವಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಪಂದ್ಯವನ್ನು ನಡೆಸಲಾಗ್ತಿದೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
