ಕನ್ನಡ ಸುದ್ದಿ  /  ಕ್ರಿಕೆಟ್  /  Kamran Akmal: ಭಾರತ ಮತ್ತು ಪಾಕಿಸ್ತಾನ ನಡುವೆ ಗೆಲ್ಲುವ ತಂಡವನ್ನು ಹೆಸರಿಸಿದ ಕಮ್ರಾನ್ ಅಕ್ಮಲ್

Kamran Akmal: ಭಾರತ ಮತ್ತು ಪಾಕಿಸ್ತಾನ ನಡುವೆ ಗೆಲ್ಲುವ ತಂಡವನ್ನು ಹೆಸರಿಸಿದ ಕಮ್ರಾನ್ ಅಕ್ಮಲ್

Kamran Akmal: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜೂನ್ 9ರಂದು ನಡೆಯುವ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದೆಂದು ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಭವಿಷ್ಯ ನುಡಿದಿದ್ದಾರೆ.

Kamran Akmal: ಭಾರತ ಮತ್ತು ಪಾಕಿಸ್ತಾನ ನಡುವೆ ಗೆಲ್ಲುವ ತಂಡವನ್ನು ಹೆಸರಿಸಿದ ಕಮ್ರಾನ್ ಅಕ್ಮಲ್
Kamran Akmal: ಭಾರತ ಮತ್ತು ಪಾಕಿಸ್ತಾನ ನಡುವೆ ಗೆಲ್ಲುವ ತಂಡವನ್ನು ಹೆಸರಿಸಿದ ಕಮ್ರಾನ್ ಅಕ್ಮಲ್

ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024ರ (T20 World Cup 2024) ಬ್ಲಾಕ್‌ಬಸ್ಟರ್ ಮುಖಾಮುಖಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (India vs Pakistan) ಸೆಣಸಾಟ ನಡೆಸಲಿವೆ. ಈ ಉಭಯ ತಂಡಗಳ ನಡುವೆ ಗೆಲ್ಲುವ ತಂಡ ಯಾವುದೆಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಅವರು ಭವಿಷ್ಯ ನುಡಿದಿದ್ದಾರೆ. ಆದರೆ ತನ್ನ ದೇಶದವರನ್ನೇ ಅಕ್ಮಲ್ ಕೈಬಿಟ್ಟು ಭಾರತವನ್ನು ಬೆಂಬಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಸಿಸಿ ಈವೆಂಟ್‌ಗಳಲ್ಲಿ ಇಂಡೋ-ಪಾಕ್ ನಡುವಿನ ಕದನ ವಿಶೇಷ ಸ್ಥಾನಮಾನ ಪಡೆದಿದೆ. 2021ರ ಟಿ20 ವಿಶ್ವಕಪ್​ನಲ್ಲಿ 10 ವಿಕೆಟ್​ಗಳಿಂದ ಸೋತಿದ್ದು ಬಿಟ್ಟರೆ ಪಾಕ್ ವಿರುದ್ಧ ಭಾರತ ಸೋತಿದ್ದೇ ಇಲ್ಲ. ಕಳೆದ ಆವೃತ್ತಿಯಲ್ಲೂ ಬಾಬರ್ ಪಡೆ ಎದುರು ರೋಹಿತ್ ಪಡೆ ರೋಚಕ ಗೆಲುವು ಸಾಧಿಸಿತ್ತು. 2024ರ ಟಿ20 ವಿಶ್ವಕಪ್​ನಲ್ಲೂ ಭಾರತವೇ ಗೆಲ್ಲುವ ಫೇವರಿಟ್ ಎಂದು ಹೇಳಲಾಗುತ್ತಿದೆ. ಇದರ ನಡುವೆ ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಪಂಡಿತರು ಸಹ ಭಾರತವನ್ನೇ ಬೆಂಬಲಿಸುತ್ತಿದ್ದಾರೆ.

ಭಾರತ ಗೆಲ್ಲುತ್ತದೆ ಎಂದು ಹೇಳಿದ ಕಮ್ರಾನ್ ಅಕ್ಮಲ್

ಏತನ್ಮಧ್ಯೆ, ನ್ಯೂಯಾರ್ಕ್‌ನಲ್ಲಿ ನಡೆಯುವ ಬ್ಲಾಕ್‌ಬಸ್ಟರ್ ಪಂದ್ಯಕ್ಕೂ ಮೊದಲು ಭವಿಷ್ಯ ನುಡಿಯುತ್ತಿರುವವರ ಸಾಲಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಸೇರಿದ್ದಾರೆ. 42 ವರ್ಷದ ಮಾಜಿ ವಿಕೆಟ್ ಕೀಪರ್​ಗೆ ಪ್ರಶ್ನೆ ಕೇಳಿದಾಗ, ರೋಹಿತ್ ಶರ್ಮಾ ನೇತೃತ್ವದ ತಂಡದ ಪರವಾಗಿ ನಿಂತಿದ್ದಾರೆ. ಖಂಡಿತವಾಗಿಯೂ ಭಾರತ ಎಂದು ಅಕ್ಮಲ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಇಂಡೋ-ಪಾಕ್ ವಿಜೇತರ ಭವಿಷ್ಯವಾಣಿಗೆ ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದಾರೆ.

ಟಿ20 ವಿಶ್ವಕಪ್‌ಗೆ ತೆರಳಿರುವ ಹೆಚ್ಚಿನ ಭಾರತೀಯ ಆಟಗಾರರು ಈಗಾಗಲೇ ಯುಎಸ್‌ಎ ತಲುಪಿದ್ದಾರೆ. ಅವರು ಟಿ20 ವಿಶ್ವಕಪ್ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಇನ್ನೂ ಇಂಗ್ಲೆಂಡ್‌ನಲ್ಲಿದ್ದು, 4 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಆದಾಗ್ಯೂ, ಮಳೆಯಿಂದಾಗಿ ಸರಣಿಯ ಮೊದಲ ಮತ್ತು 3ನೇ ಟಿ20ಐ ರದ್ದಾಗಿದೆ. ಕೆಟ್ಟ ಹವಾಮಾನದ ಕಾರಣ ಪ್ರವಾಸದಲ್ಲಿ ಹೆಚ್ಚು ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ.

ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್‌ನ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ಜೂನ್ 5 ರಂದು ಐರ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ತಂಡವು ಜೂನ್ 12 ರಂದು ಯುಎಸ್​ಎ ಮತ್ತು ಜೂನ್ 15 ರಂದು ಕೆನಡಾವನ್ನು ಎದುರಿಸಲಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ಜೂನ್ 6ರಂದು ಕೆನಡಾವನ್ನು ಎದುರಿಸಲಿದೆ. ಹೈ-ಪ್ರೊಫೈಲ್ ಕದನದ ನಂತರ, ಪಾಕ್ ಜೂನ್ 11 ರಂದು ಯುಎಸ್​ಎ, ಜೂನ್ 16ರಂದು ಐರ್ಲೆಂಡ್ ವಿರುದ್ಧ ಆಡಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್

ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ, ಉಸ್ಮಾನ್ ಖಾನ್.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ