ಎಲ್ಗರ್ ಅಜೇಯ ಶತಕ, 11 ರನ್‌ಗಳ ಮುನ್ನಡೆಯಲ್ಲಿ ದಕ್ಷಿಣ ಆಫ್ರಿಕಾ; ಕುತೂಹಲ ಕೆರಳಿಸಿದ ಮೂರನೇ ದಿನದಾಟ
South Africa vs India: ಆತಿಥೇಯ ದಕ್ಷಿಣ ಆಫ್ರಿಕಾ 11 ರನ್‌ಗಳ ಮುನ್ನಡೆ ಸಾಧಿಸಿದೆ. ಡೀನ್ ಎಲ್ಗರ್ ಟೆಸ್ಟ್ ಕ್ರಿಕೆಟ್‌ನಲ್ಲಿ 14ನೇ ಶತಕ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನ (South Africa vs India) ಎರಡನೇ ದಿನದಾಟದ ಅಂತ್ಯಕ್ಕೆ ಹರಿಣಗಳ ಬಳಗ ಮುನ್ನಡೆ ಕಾಯ್ದುಕೊಂಡಿದೆ. ಮೈದಾನಕ್ಕೆ ಬೆಳಕಿನ ಸಮಸ್ಯೆಯಾದ ಕಾರಣ ದಿನದಾಟ ಬೇಗನೆ ಅಂತ್ಯಗೊಂಡಿತು. ಕೇವಲ 66 ಓವರ್‌ಗಳನ್ನು ಮಾತ್ರ ಆಡಿದ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 256 ರನ್ ಕಲೆ ಹಾಕಿದೆ. ಡೀನ್ ಎಲ್ಗರ್ ಮತ್ತು ಮಾರ್ಕೊ ಜಾನ್ಸೆನ್ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸದ್ಯ ಆತಿಥೇಯರು ಭಾರತಕ್ಕಿಂತ 11 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನಿಂಗ್ಸ್‌ನಲ್ಲಿ ಕ್ರೀಸ್ ಕಚ್ಚಿ ಆಡಿ ಭಾರತೀಯ ಬೌಲರ್‌ಗಳನ್ನು ದಂಡಿಸಿದ ಡೀನ್ ಎಲ್ಗರ್, ಟೆಸ್ಟ್ ಕ್ರಿಕೆಟ್‌ನಲ್ಲಿ 14ನೇ ಶತಕ ಸಿಡಿಸಿದರು. ಅಲ್ಲದೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊದೆಡೆ ಡೇವಿಡ್ ಬೆಡಿಂಗ್‌ಹ್ಯಾಮ್ ಅರ್ಧಶತಕ ಗಳಿಸಿದರು. ಇವರಿಬ್ಬರೂ ಶತಕದ ಜೊತೆಯಾಟವಾಡಿ ಮಿಂಚಿದರು.
ಇದನ್ನೂ ಓದಿ | ಭಾರತೀಯ ಬೌಲರ್‌ಗಳ ದಂಡಿಸಿದ ಡೀನ್ ಎಲ್ಗರ್; ರೋಹಿತ್ ಶರ್ಮಾ ಕಳಪೆ ನಾಯಕತ್ವಕ್ಕೆ ರವಿ ಶಾಸ್ತ್ರಿ ಅಸಮಾಧಾನ
ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ, ಮೊದಲ ಟೆಸ್ಟ್ ವಿಕೆಟ್ ಪಡೆದು ಮಿಂಚಿದರು. ಕೈಲ್ ವೆರ್ರೆನ್ ಅವರನ್ನು ಕೇವಲ 4 ರನ್‌ಗೆ ಪೆವಿಲಿಯನ್ ಕಳಿಸಿದರು.
ತಡವಾಗಿ ಆರಂಭ
2ನೇ ದಿನದಾಟ ಕೂಡಾ ಮಳೆಯಿಂದಾಗಿ ತುಸು ತಡವಾಗಿ ಆರಂಭವಾಯ್ತು. ಭಾರತದ ಇನ್ನಿಂಗ್ಸ್ ಮುಂದುವರೆಸಿದ ಕೆಎಲ್ ರಾಹುಲ್, ಶತಕ ಸಿಡಿಸಿದರು. ಅಂತಿಮವಾಗಿ ಭಾರತವು 245 ರನ್‌ಗಳಿಗೆ ಆಲೌಟ್ ಆಯ್ತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಮೊಹಮ್ಮದ್ ಸಿರಾಜ್ ಹೊಸ ಚೆಂಡಿನೊಂದಿಗೆ ಮುನ್ನಡೆ ತಂದುಕೊಟ್ಟರು. ಐಡೆನ್ ಮಾರ್ಕ್ರಾಮ್ ಕೇವಲ ಐದು ರನ್ ಗಳಿಸಿ ಔಟಾದರು.
ಊಟದ ಅವಧಿಗೆ ಆತಿಥೇಯರ ಮೊತ್ತ 16 ಓವರ್‌ಗಳಲ್ಲಿ 49/1 ಆಗಿತ್ತು. ಆ ಬಳಿಕ 62 ಎಸೆತಗಳಲ್ಲಿ 28 ರನ್ ಗಳಿಸಿದ್ದ ಡಿ ಜೊರ್ಜಿ ಅವರನ್ನು ಜಸ್ಪ್ರೀತ್ ಬುಮ್ರಾ ಔಟ್ ಮಾಡಿದರು. ಅದಾದ ಬೆನ್ನಲ್ಲೇ ಕೀಗನ್ ಪೀಟರ್ಸನ್ ಕೂಡಾ ಬುಮ್ರಾ ವೇಗಕ್ಕೆ ಬಲಿಯಾದರು. ಈ ನಡುವೆ ಬೆಡಿಂಗ್ಹ್ಯಾಮ್ ಅರ್ಧಶತಕ ಸಿಡಿಸಿ ಸಿರಾಜ್ ಎಸೆತದಲ್ಲಿ ಬೌಲ್ಡ್ ಆದರು.
ಸದ್ಯ ಮಾರ್ಕೊ ಜಾನ್ಸೆನ್ ಕೂಡಾ 3 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಬುಮ್ರಾ ಹಾಗೂ ಸಿರಾಜ್ ತಲಾ 2 ವಿಕೆಟ್ ಪಡೆದುಕೊಂಡರೆ, ಪ್ರಸಿದ್ಧ 1 ವಿಕೆಟ್ ಪಡೆದರು.
ಇದನ್ನೂ ಓದಿ | ಸೆಂಚುರಿಯನ್‌ನಲ್ಲಿ ಸೆಂಚುರಿ ಸಾಧನೆ; ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಮತ್ತೊಂದು ಶತಕ ದಾಖಲೆ
ಮೊದಲ ಇನ್ನಿಂಗ್ಸ್‌ನಲ್ಲಿ 67.4 ಓವರ್‌ಗಳಲ್ಲಿ 245 ರನ್ ಗಳಿಸಿ ಭಾರತ ಆಲೌಟ್ ಆಯ್ತು. ಭಾರತದ ಪರ ಕೆಎಲ್ ರಾಹುಲ್ 137 ಎಸೆತಗಳಲ್ಲಿ 101 ರನ್ ಗಳಿಸಿ ತಂಡದ ಪರ ಅಧಿಕ ರನ್ ಗಳಿಸಿದ ಆಟಗಾರನಾದರು. ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8ನೇ ಸೆಂಚುರಿ ಗಳಿಸಿದರು. ಕೇವಲ 133 ಎಸೆತಗಳಲ್ಲಿ ಮೂರಂಕಿ ಮೊತ್ತ ತಲುಪಿದ ರಾಹುಲ್, ಸೆಂಚುರಿಯನ್ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಮೊದಲನೇ ವಿದೇಶಿ ಬ್ಯಾಟರ್ ಎನಿಸಿಕೊಂಡು. 2021/22ರ ಪ್ರವಾಸದ ವೇಳೆ ರಾಹುಲ್ ಇದೇ ಮೈದಾನದಲ್ಲಿ 260 ಎಸೆತಗಳಲ್ಲಿ 123 ರನ್ ಗಳಿಸಿದ್ದರು.