ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Sa Final: ಟಿ20 ವಿಶ್ವಕಪ್; ಆರಂಭದಿಂದ ಅಬ್ಬರಿಸಿದ್ದ ರಿಷಭ್ ಪಂತ್ ಫೈನಲ್‌ನಲ್ಲಿ ನಿರಾಸೆ; ಜಾಲತಾಣದಲ್ಲಿ ಮೀಮ್ಸ್ ವೈರಲ್

IND vs SA Final: ಟಿ20 ವಿಶ್ವಕಪ್; ಆರಂಭದಿಂದ ಅಬ್ಬರಿಸಿದ್ದ ರಿಷಭ್ ಪಂತ್ ಫೈನಲ್‌ನಲ್ಲಿ ನಿರಾಸೆ; ಜಾಲತಾಣದಲ್ಲಿ ಮೀಮ್ಸ್ ವೈರಲ್

ವೆಸ್ಟ್‌ ಇಂಡೀಸ್‌ನ ಬಾರ್ಬಡೊಸ್‌ನಲ್ಲಿನ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರಿಷಭ್ ಪಂತ್ ಶೂನ್ಯಕ್ಕೆ ಔಟಾದರು. ಪಂತ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ವೈರಲ್ ಆಗಿವೆ.

ಟಿ20 ವಿಶ್ವಕಪ್; ಆರಂಭದಿಂದ ಅಬ್ಬರಿಸಿದ್ದ ರಿಷಭ್ ಪಂತ್ ಫೈನಲ್‌ನಲ್ಲಿ ನಿರಾಸೆ; ಜಾಲತಾಣದಲ್ಲಿ ಮೀಮ್ಸ್ ವೈರಲ್
ಟಿ20 ವಿಶ್ವಕಪ್; ಆರಂಭದಿಂದ ಅಬ್ಬರಿಸಿದ್ದ ರಿಷಭ್ ಪಂತ್ ಫೈನಲ್‌ನಲ್ಲಿ ನಿರಾಸೆ; ಜಾಲತಾಣದಲ್ಲಿ ಮೀಮ್ಸ್ ವೈರಲ್

ಬಾರ್ಬಡೊಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದ್ದು, ಹರಿಣಗಳಿಗೆ 177 ರನ್‌ಗಳ ಸವಾಲಿನ ಗುರಿಯನ್ನು ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಕೇಶವ್ ಮಹಾರಾಜ್ ಅವರ ಇನ್ನಿಂಗ್ಸ್‌ನ 2ನೇ ಓವರ್‌ನ 4ನೇ ಎಸೆತದಲ್ಲಿ ರೋಹಿತ್ ಶರ್ಮಾ ಔಟಾದರೆ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ರಿಷಭ್ ಪಂತ್ ಕೂಡ ಔಟಾಗುವ ಮೂಲಕ ಭಾರಿ ನಿರಾಸೆ ಮೂಡಿಸಿದರು. ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಂತ್ ಮಹತ್ವದ ಫೈನಲ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಟೀಕೆಗಳು ಮಿಶ್ರಿತ ಮೀಮ್ಸ್‌ಗಳು ಹರಿದಾಡುತ್ತಿವೆ.

ನೆಟ್ಟಿಗರೊಬ್ಬರು ರಿಷಭ್ ಪಂತ್ ಶೂನ್ಯಕ್ಕೆ ಔಟಾಗಿರುವುದಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಷಭ್ ಪಂತ್ ಅವರು ಟಿ20 ಕ್ರಿಕೆಟರ್ ಅಲ್ಲ ಎಂದು ವೇಗವಾಗಿ ಅರಿತುಕೊಂಡರೆ ಅದು ಭಾರತಕ್ಕೆ ಉತ್ತಮವಾಗಿರುತ್ತದೆ ಎಂದು ತಮ್ಮದೇ ದಾಟಿಯಲ್ಲಿ ಟೀಂ ಇಂಡಿಯಾ ಆಯ್ಕೆಗಾರರ ವಿರುದ್ಧ ಕಿಡಿಕಾರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮತ್ತೊಬ್ಬ ನೆಟ್ಟಿಗರು ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ಫೋಟೊ ಹಂಚಿಕೊಂಡು ಎರಡು ಎಸೆತಗಳಲ್ಲಿ ರಿಷಭ್ ಪಂತ್ ಡಕ್ ಔಟ್ ಎಂದಿದ್ದಾರೆ.

ಅಭಿಷೇಕ್ ಎಂಬುವರು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ಸ್ವರ್ಗದ ದೃಶ್ಯಗಳು ಅಂತ ಮೀಮ್ಸ್‌ ಹಂಚಿಕೊಂಡಿದ್ದಾರೆ.

ರಿಷಭ್ ಪಂತ್ ಔಟಾಗಿರುವುದು ದಕ್ಷಿಣ ಆಫ್ರಿಕಾಗೆ ಇದು ದೊಡ್ಡ ವಿಕೆಟ್ ಎಂದು ತಂಡರ್ ಎಂಬ ಖಾತೆಯಿಂದ ಮೀಮ್ಸ್ ಹರಿ ಬಿಡಲಾಗಿದೆ.

ಐದನೇ ನೆಟ್ಟಿಗರು ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಸಮಯದಲ್ಲಿ ನಾನು ಎಂಬ ಬರಹದೊಂದಿಗೆ ಪ್ರಧಾನಿ ಮೋದಿ ಅವರ ಭಾಷಣದ ಪಂತ್ ಶೂನ್ಯಕ್ಕೆ ಔಟಾಗಿರುವುದಕ್ಕೆ ಹೋಲಿಸಿ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿನ ಐಸಿಸಿ ಟಿ20 ವಿಶ್ವಕಪ್‌ 2024 ನಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರರನಂತೆ ಫೈನಲ್‌ಗೆ ಬಂದಿದೆ.