ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ 2024 ಫೈನಲ್​ಗೂ ಅದೇ ತಂಡವನ್ನು ಕಣಕ್ಕಿಳಿಸಲಿದೆ ಭಾರತ; ಸೌತ್ ಆಫ್ರಿಕಾ ಪ್ಲೇಯಿಂಗ್ Xi ಹೀಗಿದೆ

ಟಿ20 ವಿಶ್ವಕಪ್​ 2024 ಫೈನಲ್​ಗೂ ಅದೇ ತಂಡವನ್ನು ಕಣಕ್ಕಿಳಿಸಲಿದೆ ಭಾರತ; ಸೌತ್ ಆಫ್ರಿಕಾ ಪ್ಲೇಯಿಂಗ್ XI ಹೀಗಿದೆ

India vs South Africa: ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ XI ಇಲ್ಲಿದೆ.

ಟಿ20 ವಿಶ್ವಕಪ್​ 2024 ಫೈನಲ್​ಗೂ ಅದೇ ತಂಡವನ್ನು ಕಣಕ್ಕಿಳಿಸಲಿದೆ ಭಾರತ; ಸೌತ್ ಆಫ್ರಿಕಾ ಪ್ಲೇಯಿಂಗ್ XI ಹೀಗಿದೆ
ಟಿ20 ವಿಶ್ವಕಪ್​ 2024 ಫೈನಲ್​ಗೂ ಅದೇ ತಂಡವನ್ನು ಕಣಕ್ಕಿಳಿಸಲಿದೆ ಭಾರತ; ಸೌತ್ ಆಫ್ರಿಕಾ ಪ್ಲೇಯಿಂಗ್ XI ಹೀಗಿದೆ

ಜೂನ್ 29ರ ಶನಿವಾರ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024ರ ಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ಪರಸ್ಪರ ಸೆಣಸಲಿವೆ. 2 ತಂಡಗಳು ಅಜೇಯವಾಗಿ ಮೆಗಾ ಈವೆಂಟ್‌ನ ಫೈನಲ್​ ಪ್ರವೇಶಿಸಿದ್ದು ಇದೇ ಮೊದಲ ಬಾರಿಗೆ. ಐತಿಹಾಸಿಕ ಮಹತ್ವ ಪಡೆದ ಈ ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರಲಿದೆ.

1992 ರಿಂದ ಐಸಿಸಿ ಈವೆಂಟ್‌ಗಳಲ್ಲಿ ದಕ್ಷಿಣ ಆಫ್ರಿಕಾ 7 ಸೆಮಿಫೈನಲ್​​ಗಳನ್ನು ಕಳೆದುಕೊಂಡಿತ್ತು. ಆದರೆ, ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಸೆಮೀಸ್​ನಲ್ಲಿ ಅಫ್ಘಾನಿಸ್ತಾನ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್​ಗಳಲ್ಲಿ (ಟಿ20, ಒಡಿಐ) ಫೈನಲ್ ಪ್ರವೇಶಿಸಿದೆ. ಒಂದೂ ಪಂದ್ಯವನ್ನು ಸೋಲದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಕೆರಿಬಿಯನ್ನರ ನಾಡಿನಲ್ಲಿ ಟ್ರೋಫಿಗೆ ಮುತ್ತಿಕ್ಕಲು ಸಜ್ಜಾಗಿವೆ.

ಭಾರತ ಅಮೋಘ ಫಾರ್ಮ್‌ನಲ್ಲಿದೆ. ರೋಹಿತ್ ಶರ್ಮಾ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಭಾರತದ ಪರ ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ರೋಹಿತ್ ತಡವಾಗಿ ಸಾಕಷ್ಟು ಉದ್ದೇಶದಿಂದ ಬ್ಯಾಟಿಂಗ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ತಂಡಕ್ಕೆ ಕಾಣಿಕೆ ನೀಡುತ್ತಿದ್ದಾರೆ. ಬೌಲಿಂಗ್​​ನಲ್ಲೂ ಸ್ಪಿನ್ನರ್​​ಗಳು ಸಖತ್ ದಾಳಿ ನಡೆಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಕೂಡ ಮಾರಕ ದಾಳಿ ನಡೆಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾರತ ತಂಡವು ಐಸಿಸಿ ಈವೆಂಟ್‌ಗಳಲ್ಲಿ ಹಲವು ನಾಕೌಟ್ ಪಂದ್ಯಗಳಲ್ಲಿ ಆಡಿದೆ. ಆದರೆ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಇದೀಗ ಟೂರ್ನಿಯಲ್ಲಿ ಅಜೇಯವಾಗಿ ಟೂರ್ನಿಯನ್ನು ಮುಗಿಸಲು ರೋಹಿತ್ ಪಡೆ ನೋಡುತ್ತಿದೆ. ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​ನಲ್ಲೂ ಭಾರತ ರನ್ನರ್​ಅಪ್ ಆಗಿತ್ತು. ಇದೀಗ 11 ವರ್ಷಗಳ ನಂತರ ಟ್ರೋಫಿ ಬರ ನೀಗಿಸಲು ಸಜ್ಜಾಗಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI

ಭಾರತ ತಂಡವು ಫೈನಲ್​ ಪಂದ್ಯಕ್ಕೆ ಬದಲಾವಣೆ ಮಾಡುವುದು ಅಸಂಭವವಾಗಿದೆ. ಶಿವಂ ದುಬೆ ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೂ, ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಮೊಹಮ್ಮದ್ ಸಿರಾಜ್ ಗ್ರ್ಯಾಂಡ್ ಫಿನಾಲೆಗೂ ಬೆಂಚ್ ಕಾಯಬಹುದು. ಸ್ಪಿನ್ ದಾಳಿಯಲ್ಲಿ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಪ್ರಮುಖ ಪಾತ್ರ ವಹಿಸಲಿದ್ದಾರೆ. ಯಾವುದೇ ಬದಲಾವಣೆ ಮಾಡುವುದು ಕಷ್ಟವಾಗಿದೆ.

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್​ ಯಾದವ್, ಅರ್ಷದೀಪ್​ ಸಿಂಗ್, ಜಸ್ಪ್ರೀತ್ ಬುಮ್ರಾ.

ಸೌತ್ ಆಫ್ರಿಕಾ ಸಂಭಾವ್ಯ ತಂಡ

ದಕ್ಷಿಣ ಆಫ್ರಿಕಾ ಕೂಡ ತಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ತೀರಾ ಕಡಿಮೆ. ಕ್ವಿಂಟನ್ ಡಿ ಕಾಕ್ ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದರೂ ಲೀಗ್ ಮತ್ತು ಸೂಪರ್-8 ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ರೀಜಾ ಹೆಂಡ್ರಿಕ್ಸ್, ಮಾರ್ಕ್ರಮ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಆನ್ರಿಚ್ ನೋಕಿಯಾ, ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ಬೌಲಿಂಗ್​ನಲ್ಲಿ ಟೂರ್ನಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ತಬ್ರೈಜ್ ಶಮ್ಸಿ ವಿಕೆಟ್‌ ಬೇಟೆಯಾಡಿದ್ದಾರೆ.

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನೋಕಿಯಾ, ತಬ್ರೈಜ್ ಶಮ್ಸಿ.