ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Sa Final: ಐತಿಹಾಸಿಕ ಟ್ರೋಫಿಗೆ ಒಂದೇ ಹೆಜ್ಜೆ ಬಾಕಿ; ಅಜೇಯರ ಕಾಳಗದಲ್ಲಿ ಚಾಂಪಿಯನ್ ಪಟ್ಟಕ್ಕೇರೋದ್ಯಾರು?

IND vs SA Final: ಐತಿಹಾಸಿಕ ಟ್ರೋಫಿಗೆ ಒಂದೇ ಹೆಜ್ಜೆ ಬಾಕಿ; ಅಜೇಯರ ಕಾಳಗದಲ್ಲಿ ಚಾಂಪಿಯನ್ ಪಟ್ಟಕ್ಕೇರೋದ್ಯಾರು?

India vs South Africa: 2024ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಬಾರ್ಬಡೋಸ್​ನ ಕೆನ್ಸಿಂಗ್ಟನ್​ ಓವಲ್​​ನಲ್ಲಿ ನಡೆಯಲಿದೆ.

IND vs SA Final: ಐತಿಹಾಸಿಕ ಟ್ರೋಫಿಗೆ ಒಂದೇ ಹೆಜ್ಜೆ ಬಾಕಿ; ಅಜೇಯರ ಕಾಳಗದಲ್ಲಿ ಚಾಂಪಿಯನ್ ಪಟ್ಟಕ್ಕೇರೋದ್ಯಾರು?
IND vs SA Final: ಐತಿಹಾಸಿಕ ಟ್ರೋಫಿಗೆ ಒಂದೇ ಹೆಜ್ಜೆ ಬಾಕಿ; ಅಜೇಯರ ಕಾಳಗದಲ್ಲಿ ಚಾಂಪಿಯನ್ ಪಟ್ಟಕ್ಕೇರೋದ್ಯಾರು?

ಟಿ20 ವಿಶ್ವಕಪ್ 2024 ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಜೂನ್ 29, ರಾತ್ರಿ 8ಕ್ಕೆ) ನಡೆಯುವ ಫೈನಲ್ ಪಂದ್ಯದಲ್ಲಿ 2007ರ ಚಾಂಪಿಯನ್ ಟೀಮ್ ಇಂಡಿಯಾ ಹಾಗೂ ಚೊಚ್ಚಲ ಐಸಿಸಿ ಟ್ರೋಫಿ ಕನಸಿನಲ್ಲಿರುವ ಸೌತ್ ಆಫ್ರಿಕಾ (India vs South Africa) ತಂಡಗಳು ಕಾದಾಟ ನಡೆಸಲಿವೆ. ಹಾಲಿ ವಿಶ್ವಕಪ್​ನಲ್ಲಿ ಉಭಯ ತಂಡಗಳು ಅಜೇಯವಾಗಿ ಅಂತಿಮ ಹಂತ ಸೇರಿದ್ದು, ಐತಿಹಾಸಿಕ ಕ್ಷಣಕ್ಕೆ ಕಾತರದಿಂದ ಕಾಯುತ್ತಿವೆ.

2007ರಲ್ಲಿ ಆರಂಭಗೊಂಡ ಚುಟುಕು ವಿಶ್ವಕಪ್​ನಲ್ಲೇ ಚಾಂಪಿಯನ್​ ಆಗಿದ್ದ ಟೀಮ್ ಇಂಡಿಯಾ, 2014ರಲ್ಲೂ ಫೈನಲ್​ಗೇರಿತ್ತು. ಆದರೆ ಶ್ರೀಲಂಕಾ ವಿರುದ್ಧ ಸೋತು ರನ್ನರ್​ಅಪ್​ ಆಗಿತ್ತು. ತದ ನಂತರ 2016 ಮತ್ತು 2022ರಲ್ಲಿ ಸೆಮಿಫೈನಲ್​ಗೆ ಆಟ ಮುಗಿಸಿತ್ತು. ಇದೀಗ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದು, ಎರಡನೇ ಟ್ರೋಫಿಯನ್ನು ವಶಪಡಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ.

2007ರಿಂದ 2022ರ ತನಕ ಟೂರ್ನಿ ಆರಂಭವಾದಾಗಿನಿಂದಲೂ ಒಂದು ಬಾರಿಯೂ ಫೈನಲ್​​ಗೇರದ ದಕ್ಷಿಣ ಆಫ್ರಿಕಾ, 2024ರಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಕ್ವಾಲಿಫೈ ಆಗಿದೆ. ಏಕದಿನ ಹಾಗೂ ಟಿ20 ಐಸಿಸಿ ವಿಶ್ವಕಪ್​​ಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಸೌತ್ ಆಫ್ರಿಕಾ ಇದುವರೆಗಿನ ಸಾಧನೆ ಸೆಮಿಫೈನಲ್​ ಪ್ರವೇಶಿಸಿದ್ದಷ್ಟೆ. ಹೀಗಾಗಿ, ಚೊಚ್ಚಲ ವಿಶ್ವಕಪ್​ ಗೆಲ್ಲುವ ಕನಸಿನಲ್ಲಿದೆ ಆಫ್ರಿಕಾ.

ಟ್ರೆಂಡಿಂಗ್​ ಸುದ್ದಿ

ತಂಡಗಳ ಬಲಾಬಲ

ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ, ಶಿವಂ ದುಬೆ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್​ ಶರ್ಮಾ ಭರ್ಜರಿ ಫಾರ್ಮ್​ನಲ್ಲಿದ್ದು, ಬಲ ಹೆಚ್ಚಿಸಿದ್ದಾರೆ. ಬೌಲಿಂಗ್​ ವಿಭಾಗದಲ್ಲೂ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದೇ ರೀತಿ ಸೌತ್ ಆಫ್ರಿಕಾಗೆ ವೇಗದ ಬೌಲರ್​ಗಳಾದ ಕಗಿಸೋ ರಬಾಡ, ಮಾರ್ಕೊ ಜಾನ್ಸನ್, ಆನ್ರಿಚ್ ನೋಕಿಯಾ ಮ್ಯಾಚ್​ಗಳಾಗಿದ್ದಾರೆ. ಬ್ಯಾಟರ್​​​ಗಳು ಸಹ ಉತ್ತಮ ಲಯದಲ್ಲಿದ್ದು, ಭಾರತ ತಂಡದ ಎದುರು ಅಬ್ಬರಿಸಲು ಕಾತರದಿಂದ ಕಾಯುತ್ತಿದ್ದಾರೆ.

ಟಿ20 ವಿಶ್ವಕಪ್ 2024ರಲ್ಲಿ ಭಾರತ ಪ್ರಯಾಣ

ಲೀಗ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್​ಎ ವಿರುದ್ಧ ಜಯಿಸಿದ ಭಾರತ ಸೂಪರ್​-8 ಸುತ್ತಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಎದುರು ಗೆದ್ದಿತ್ತು. ಇದರೊಂದಿಗೆ ಸೆಮೀಸ್​​​​ ಹಂತಕ್ಕೆ ಪ್ರವೇಶಿಸಿತು. ಇಲ್ಲೂ ಇಂಗ್ಲೆಂಡ್ ತಂಡವನ್ನೂ ಮಣಿಸಿ ಫೈನಲ್​ಗೇರಿತು.

ಟಿ20 ವಿಶ್ವಕಪ್ 2024ರಲ್ಲಿ ಸೌತ್ ಆಫ್ರಿಕಾ ಪ್ರಯಾಣ

ಗುಂಪು ಹಂತದಲ್ಲಿ ಶ್ರೀಲಂಕಾ, ನೆದರ್ಲೆಂಡ್ಸ್, ಬಾಂಗ್ಲಾದೇಶ, ನೇಪಾಳ ಎದುರು ಜಯಿಸಿದ್ದ ಸೌತ್ ಆಫ್ರಿಕಾ, ಸೂಪರ್​-8 ಹಂತದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಎದುರು ಜಯದ ನಗೆ ಬೀರಿತು. ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ಗೆದ್ದ ನಂತರ ಚೊಚ್ಚಲ ಫೈನಲ್​ ಪ್ರವೇಶಿಸಿತು.

ಟಿ20ಐ ಕ್ರಿಕೆಟ್​ನಲ್ಲಿ ಮುಖಾಮುಖಿ ದಾಖಲೆ

ಪಂದ್ಯಗಳು - 26

ಭಾರತ ಗೆಲುವು - 14

ಸೌತ್ ಆಫ್ರಿಕಾ ಗೆಲುವು - 11

ರದ್ದು - 1

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್​ ಯಾದವ್, ಅರ್ಷದೀಪ್​ ಸಿಂಗ್, ಜಸ್ಪ್ರೀತ್ ಬುಮ್ರಾ.

ಸೌತ್ ಆಫ್ರಿಕಾ ಸಂಭಾವ್ಯ ತಂಡ

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನೋಕಿಯಾ, ತಬ್ರೈಜ್ ಶಮ್ಸಿ.

ಹವಾಮಾನ ವರದಿ

ಇಂಡೋ-ಆಫ್ರಿಕಾ ನಡುವಿನ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಶೇ 99ರಷ್ಟು ಮೋಡ ಕವಿದ ವಾತಾವರಣ ಇರಲಿದ್ದು, ಶೇ.70ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಆಕ್ಯುವೆದರ್​ ವರದಿಯಲ್ಲಿ ಉಲ್ಲೇಖಿಸಿದೆ. ಒಂದು ವೇಳೆ ನಿಗದಿತ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ ಮೀಸಲು ದಿನದಂದು ಮುಂದುವರೆಯಲಿದೆ. ರಿಸರ್ವ್​ ಡೇಯಲ್ಲೂ ಮಳೆ ಆಡಲು ಅವಕಾಶ ನೀಡದಿದ್ದರೆ, ಎರಡು ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಪಿಚ್ ರಿಪೋರ್ಟ್

ಕೆನ್ಸಿಂಗ್ಟನ್ ಓವಲ್​ ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗಗಳ ನಡುವೆ ಸಮಾನ ಪೈಪೋಟಿ ನಡೆಯಲಿದೆ. ಆದರೆ ಪಂದ್ಯ ಮುಂದುವರೆದಂತೆ ಸ್ಪಿನ್ನರ್​ಗಳ ದರ್ಬಾರ್ ಹೆಚ್ಚಾಗಲಿದೆ. ಅದರಲ್ಲೂ ಮಧ್ಯಮ ಓವರ್​​ಗಳಲ್ಲೇ ಸ್ಪಿನ್ನರ್​ಗಳು ಮೇಲುಗೈ ಸಾಧಿಸುತ್ತಾರೆ. ಈ ಮೈದಾನದಲ್ಲಿ 150 ಕ್ಕಿಂತ ಹೆಚ್ಚು ರನ್​ಗಳನ್ನು ಸುಲಭವಾಗಿ ಗಳಿಸಬಹುದು. ಟಾಸ್ ಗೆದ್ದ ತಂಡವೇ ಮೊದಲು ಬ್ಯಾಟಿಂಗ್ ಮಾಡುತ್ತದೆ. ಈ ಮೈದಾನದಲ್ಲಿ ಆಡಿರುವ 32 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟ್ ನಡೆಸಿದ ತಂಡಗಳೇ ಗೆದ್ದಿವೆ.