ಭಾರತ vs ಶ್ರೀಲಂಕಾ ಏಕದಿನ ಸರಣಿ: ವೇಳಾಪಟ್ಟಿ, ತಂಡಗಳು ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಶ್ರೀಲಂಕಾ ಏಕದಿನ ಸರಣಿ: ವೇಳಾಪಟ್ಟಿ, ತಂಡಗಳು ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ಭಾರತ vs ಶ್ರೀಲಂಕಾ ಏಕದಿನ ಸರಣಿ: ವೇಳಾಪಟ್ಟಿ, ತಂಡಗಳು ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

ನಾಯಕ ರೋಹಿತ್‌ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್‌ ಅವರ ಮುಂದಿನ ನೈಜ ಸವಾಲು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ.‌ ಈಗಾಗಲೇ ಚುಟುಕು ಸರಣಿ ವಶಪಡಿಸಿಕೊಂಡಿರುವ ಭಾರತ, ಏಕದಿನ ಸರಣಿಯನ್ನೂ ಗೆದ್ದು ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸುವ ಲೆಕ್ಕಾಚಾರದಲ್ಲಿದೆ.

ಭಾರತ vs ಶ್ರೀಲಂಕಾ ಏಕದಿನ ಸರಣಿ: ವೇಳಾಪಟ್ಟಿ, ತಂಡಗಳು ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ
ಭಾರತ vs ಶ್ರೀಲಂಕಾ ಏಕದಿನ ಸರಣಿ: ವೇಳಾಪಟ್ಟಿ, ತಂಡಗಳು ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ (PTI)

ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದ ಬಳಿಕ, ಶ್ರೀಲಂಕಾ ವಿರುದ್ಧದ (Sri Lanka vs India) ಏಕದಿನ ಸರಣಿಯನ್ನು ವಶಪಡಿಸುವ ಲೆಕ್ಕಾಚಾರ ಭಾರತ ಕ್ರಿಕೆಟ್‌ (Indian Cricket Team) ತಂಡದ್ದು. ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ, ಮುಂದಿನ ವರ್ಷ ಮಹತ್ವದ ಚಾಂಪಿಯನ್‌ ಟ್ರೋಫಿ ಇರುವ ಕಾರಣದಿಂದಾಗಿ ಅಸಲಿ ಸವಾಲು ಏಕದಿನ ಸರಣಿಯಲ್ಲಿ ಎದುರಾಗಲಿದೆ. ಏಕದಿನ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಗಂಭೀರ್‌ ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡಾ ತಂಡ ಸೇರಿಕೊಂಡಿದ್ದು, ಆಗಸ್ಟ್ 2ರಿಂದ ಇಂಡೋ-ಲಂಕಾ ಸರಣಿ ಆರಂಭವಾಗಲಿದೆ.

ಏಕದಿನ ಸರಣಿಗಾಗಿ ಭಾರತ ಹಾಗೂ ಲಂಕಾ ತಂಡಗಳು ಪಲ್ಲೆಕೆಲೆಯಿಂದ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದತ್ತ ಬಂದಿವೆ. ಆಗಸ್ಟ್ 2ರ ಶುಕ್ರವಾರ ಮೊದಲ ಏಕದಿನ ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2, 4 ಮತ್ತು 7ರಂದು ನಡೆಯಲಿದೆ.

ಟಿ20 ತಂಡಕ್ಕಿಂತ ಭಾರತ ಏಕದಿನ ತಂಡ ಭಿನ್ನವಾಗಿದೆ. ರೋಹಿತ್‌ ಶರ್ಮಾ ನಾಯಕನಾಗಿದ್ದಾರೆ. ಇದೇ ವೇಳೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಕನ್ನಡಿಗ ಕೆಎಲ್‌ ರಾಹುಲ್‌ ಕೂಡಾ ತಂಡ ಸೇರಿಕೊಂಡಿದ್ದಾರೆ. ಅತ್ತ ಆತಿಥೇಯ ಶ್ರೀಲಂಕಾ ಪರ, ಆಲ್‌ರೌಂಡರ್ ಚಾಮಿಕ ಕರುಣಾರತ್ನೆ ಮತ್ತು ಯುವ ಬ್ಯಾಟರ್‌ಗಳಾದ ಜನಿತ್ ಲಿಯಾನಗೆ ಮತ್ತು ನಿಶಾನ್ ಮದುಷ್ಕ ತಂಡದಲ್ಲಿದ್ದಾರೆ.

ಭಾರತ Vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ಯಾವಾಗ?

ಭಾರತ ಮತ್ತು ಶ್ರೀಲಂಕಾ ತಂಡಗಳ 1ನೇ ಟಿ20 ಪಂದ್ಯವು ಆಗಸ್ಟ್ 2ರ ಶುಕ್ರವಾರ ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಮಧ್ಯಾಹ್ನ 2:30 ಗಂಟೆಗೆ ಆರಂಭವಾಗಲಿದೆ.

ವೇಳಾಪಟ್ಟಿ

  • ಭಾರತ vs ಶ್ರೀಲಂಕಾ 1ನೇ ಏಕದಿನ: ಆಗಸ್ಟ್ 2, ಕೊಲಂಬೋ
  • ಭಾರತ vs ಶ್ರೀಲಂಕಾ 2ನೇ ಏಕದಿನ: ಆಗಸ್ಟ್ 4, ಕೊಲಂಬೋ
  • ಭಾರತ vs ಶ್ರೀಲಂಕಾ 3ನೇ ಏಕದಿನ: ಆಗಸ್ಟ್ 7, ಕೊಲಂಬೋ

ಇದನ್ನೂ ಓದಿ | ಗೆಲ್ಲುವ ಪಂದ್ಯ ಕೊನೆಯ ಕ್ಷಣದಲ್ಲಿ ಕೈಚೆಲ್ಲಿದ ಶ್ರೀಲಂಕಾ; 3ನೇ ಟಿ20ಯಲ್ಲಿ ಭಾರತಕ್ಕೆ ಸೂಪರ್ ಓವರ್‌ನಲ್ಲಿ ಗೆಲುವು, ಸರಣಿ ಕ್ಲೀನ್ ಸ್ವೀಪ್

ಲೈವ್‌ ಸ್ಟ್ರೀಮಿಂಗ್

ಭಾರತ vs ಶ್ರೀಲಂಕಾ ಏಕದಿನ ಪಂದ್ಯಗಳನ್ನು ಟಿವಿ ಮೂಲಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇದೇ ಸರಣಿಯ ಎಲ್ಲಾ ಪಂದ್ಯಗಳು ಸೋನಿ LIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಮೊಬೈಲ್‌ ಮೂಲಕ ಚಂದಾದಾರಿಕೆ ಪಡೆದು ಇದರಲ್ಲಿ ನೋಡಬಹುದು.

ಭಾರತ ಏಕದಿನ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ರಿಷಬ್ ಪಂತ್ (ವಿಕೆಟ್‌ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

ಶ್ರೀಲಂಕಾ ಏಕದಿನ ತಂಡ

ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಸದೀರ ಸಮರವಿಕ್ರಮ, ಕಮಿಂದು ಮೆಂಡಿಸ್, ಜನಿತ್ ಲಿಯಾನಗೆ, ನಿಶಾನ್ ಮದುಷ್ಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಾಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಅಕಿಲ ದನಂಜಯ, ದಿಲ್ಶನ್ ಮಧುಶಂಕ, ಮಥೀಶ ಪತಿರಾನ, ಅಸಿತ ಫೆರ್ನಾಂಡೋ.