ಕನ್ನಡ ಸುದ್ದಿ  /  ಕ್ರಿಕೆಟ್  /  ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಪದಾರ್ಪಣೆ; ಜಿಂಬಾಬ್ವೆ ವಿರುದ್ಧ ಮೊದಲ ಟಿ20ಐಗೆ ಟೀಮ್ ಇಂಡಿಯಾ ಪ್ಲೇಯಿಂಗ್ Xi

ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಪದಾರ್ಪಣೆ; ಜಿಂಬಾಬ್ವೆ ವಿರುದ್ಧ ಮೊದಲ ಟಿ20ಐಗೆ ಟೀಮ್ ಇಂಡಿಯಾ ಪ್ಲೇಯಿಂಗ್ XI

India vs Zimbabwe 1st T20I: ಜಿಂಬಾಬ್ವೆ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಭಾರತದ ಇಬ್ಬರು ಪದಾರ್ಪಣೆ ಮಾಡಲಿದ್ದಾರೆ. ಉಭಯ ತಂಡಗಳ ಪ್ಲೇಯಿಂಗ್ XI ಇಲ್ಲಿದೆ ನೋಡಿ.

ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಪದಾರ್ಪಣೆ; ಜಿಂಬಾಬ್ವೆ ವಿರುದ್ಧ ಮೊದಲ ಟಿ20ಐಗೆ ಟೀಮ್ ಇಂಡಿಯಾ ಪ್ಲೇಯಿಂಗ್ XI
ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಪದಾರ್ಪಣೆ; ಜಿಂಬಾಬ್ವೆ ವಿರುದ್ಧ ಮೊದಲ ಟಿ20ಐಗೆ ಟೀಮ್ ಇಂಡಿಯಾ ಪ್ಲೇಯಿಂಗ್ XI

ಟಿ20 ವಿಶ್ವಕಪ್​ ಗೆದ್ದು ವಿಜಯೋತ್ಸವ ಆಚರಿಸಿದ ಟೀಮ್ ಇಂಡಿಯಾ (Team India), ಇಂದಿನಿಂದ (ಜುಲೈ 6) ಜಿಂಬಾಬ್ವೆ ವಿರುದ್ಧ ಟಿ20ಐ (India vs Zimbabwe 1st T20I) ಸರಣಿಯನ್ನಾಡಲಿದೆ. ವಿಶ್ವಕಪ್​ ಫೈನಲ್​ಗೂ ಮುನ್ನವೇ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡಕ್ಕೆ ಶುಭ್ಮನ್ ಗಿಲ್ (Shubman Gill) ನಾಯಕತ್ವ ವಹಿಸಿದ್ದಾರೆ. ಸರಣಿಯ ಮೊದಲ ಪಂದ್ಯವು ಇಂದು ಹರಾರೆಯ ಸ್ಪೋರ್ಟ್ಸ್ ಕ್ಲಬ್​ನಲ್ಲಿ (Harare Sports Club) ನಡೆಯಲಿದೆ. ಈ ಪಂದ್ಯ ರಾತ್ರಿ 7 ಅಥವಾ 8 ಗಂಟೆಗೆ ಅಲ್ಲ, ಸಂಜೆ 4.30ಕ್ಕೆ ಆರಂಭಗೊಳ್ಳಿದೆ.

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಹಾಗಾಗಿ ಅನುಭವಿ ಆಟಗಾರರ ವಿದಾಯದಿಂದ ಖಾಲಿಯಾಗಿರುವ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಈಗ ಯುವ ಪ್ಲೇಯರ್ಸ್​ ಪೈಪೋಟಿಗಿಳಿದಿದ್ದಾರೆ. ಹಾಗೆಯೇ 2026ರ ಟಿ20 ವಿಶ್ವಕಪ್​ಗೂ ಸಿದ್ಧತೆಯೂ ಆಗಿದೆ. ಇದೆಲ್ಲದಕ್ಕೂ ಜಿಂಬಾಬ್ವೆ ವಿರುದ್ಧದ ಸರಣಿ ಉತ್ತಮ ವೇದಿಕೆ.

ಈ ಸರಣಿಗೆ ಐಪಿಎಲ್‌ನ ಹಲವು ಸ್ಟಾರ್ ಆಟಗಾರರನ್ನು ಭಾರತ ತಂಡದಲ್ಲಿ ಸೇರಿಸಲಾಗಿದೆ. ಅನೇಕರು ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆಯಬಹುದು. ನಾಯಕ ಶುಭ್ಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಬಹುದು. ಯುವ ಬ್ಯಾಟರ್​ ಅಭಿಷೇಕ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ರಿಯಾನ್ ಪರಾಗ್ 4ನೇ ಸ್ಥಾನ ಮತ್ತು ಫಿನಿಶರ್ ರಿಂಕು ಸಿಂಗ್ 5ನೇ ಸ್ಥಾನದಲ್ಲಿ ಅವಕಾಶ ನೀಡಬಹುದು. ಜಿತೇಶ್ ಶರ್ಮಾಗೆ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಬಹುದು.

ಟ್ರೆಂಡಿಂಗ್​ ಸುದ್ದಿ

ಸ್ಪಿನ್​ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಸ್ಪೆಷಲಿಸ್ಟ್ ಸ್ಪಿನ್ನರ್​ ಆಗಿ ರವಿ ಬಿಷ್ಣೋಯ್ ರೂಪದಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಅಲ್ಲದೇ ಭಾರತ ತಂಡ 3 ವೇಗದ ಬೌಲರ್‌ಗಳ ಮೇಲೂ ಅವಲಂಬಿತವಾಗಿದೆ. ಇವರಲ್ಲಿ ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ಮುಕೇಶ್ ಕುಮಾರ್ ಸೇರಿದ್ದಾರೆ. ಆದರೆ ಅಂತಿಮ ತಂಡದಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತ ಸಂಭಾವ್ಯ ತಂಡ

ಶುಭ್ಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್.

ಜಿಂಬಾಬ್ವೆ ಸಂಭಾವ್ಯ ತಂಡ

ಇನ್ನೋಸೆಂಟ್ ಕೈಯಾ, ತಡಿವಾನಾಶೆ ಮರುಮಾನಿ, ಬ್ರಿಯಾನ್ ಬೆನೆಟ್, ಅಲೆಕ್ಸಾಂಡರ್ ರಜಾ (ನಾಯಕ), ವೆಸ್ಲಿ ಮಾಧೆವೆರೆ, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಲ್ಯೂಕ್ ಜೊಂಗ್ವೆ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ, ಟೆಂಡೈ ಚಟಾರಾ, ರಿಚರ್ಡ್ ನಾಗರವಾ.

ಜಿಂಬಾಬ್ವೆ ವಿರುದ್ಧದ 1ನೇ ಮತ್ತು 2ನೇ ಟಿ20ಐಗೆ ಭಾರತ ತಂಡ

ಶುಭ್ಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್​, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್ಷಿತ್ ರಾಣಾ.