4ನೇ ಟಿ20ಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ; ಇಂಗ್ಲೆಂಡ್‌ ವಿರುದ್ಧ 15 ರನ್‌ ವಿಜಯ, ಸರಣಿ ವಶ
ಕನ್ನಡ ಸುದ್ದಿ  /  ಕ್ರಿಕೆಟ್  /  4ನೇ ಟಿ20ಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ; ಇಂಗ್ಲೆಂಡ್‌ ವಿರುದ್ಧ 15 ರನ್‌ ವಿಜಯ, ಸರಣಿ ವಶ

4ನೇ ಟಿ20ಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ; ಇಂಗ್ಲೆಂಡ್‌ ವಿರುದ್ಧ 15 ರನ್‌ ವಿಜಯ, ಸರಣಿ ವಶ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 9 ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಇಂಗ್ಲೆಂಡ್‌, 19.4 ಓವರ್‌ಗಳಲ್ಲಿ 166‌ ರನ್‌ ಗಳಿಸಿ ಆಲೌಟ್‌ ಆಯ್ತು. 15 ರನ್‌ಗಳಿಂದ ಗೆದ್ದ ಭಾರತ ಸರಣಿ ವಶಪಡಿಸಿಕೊಂಡಿತು.

4ನೇ ಟಿ20ಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ; ಇಂಗ್ಲೆಂಡ್‌ ವಿರುದ್ಧ 12 ರನ್‌ ವಿಜಯ, ಸರಣಿ ವಶ
4ನೇ ಟಿ20ಯಲ್ಲಿ ಗೆಲುವಿನ ಹಳಿಗೆ ಮರಳಿದ ಭಾರತ; ಇಂಗ್ಲೆಂಡ್‌ ವಿರುದ್ಧ 12 ರನ್‌ ವಿಜಯ, ಸರಣಿ ವಶ (PTI)

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 15 ರನ್‌ಗಳ ರೋಚಕ ಜಯ ಸಾಧಿಸಿದೆ. ಪಂದ್ಯದ ಚೇಸಿಂಗ್‌ ವೇಳೆಗೆ ಶಿವಂ ದುಬೆಗೆ ಬದಲಿ ಆಟಗಾರನಾಗಿ (concussion substitute) ಬೌಲಿಂಗ್‌ ಮಾಡಿದ ಹರ್ಷಿತ್‌ ರಾಣಾ, ನಿರ್ಣಾಯಕ 3 ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೆಲುವಿನೊಂದಿಗೆ ಭಾರತ ತಂಡವು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ. ಸುದೀರ್ಘ ಅಂತರದ ಬಳಿಕ ತಂಡಕ್ಕೆ ಮರಳಿದ ಸ್ಫೋಟಕ ಬ್ಯಾಟರ್‌ ಶಿವಂ ದುಬೆ, ಅರ್ಧಶತಕ ಸಿಡಿಸಿ ಪಂದ್ಯಶ್ರೇಷ್ಠರಾದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 9 ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಇಂಗ್ಲೆಂಡ್‌, 19.4 ಓವರ್‌ಗಳಲ್ಲಿ 166‌ ರನ್‌ ಗಳಿಸಿ ಆಲೌಟ್‌ ಆಯ್ತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತವು ಆರಂಭದಲ್ಲೇ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಭಾರತದ ಇನ್ನಿಂಗ್ಸ್‌ನ ಎರಡನೇ ಓವರ್‌ ಎಸೆದ ವೇಗಿ ಸಾಕಿಬ್ ಮಹಮೂದ್, ಒಂದೇ ಓವರ್‌ನಲ್ಲಿ ಭಾರತದ ಪ್ರಮುಖ 3 ವಿಕೆಟ್‌ ಕಬಳಿಸಿದರು. ಹೀಗಾಗಿ ಭಾರತ 3 ವಿಕೆಟ್‌ ನಷ್ಟಕ್ಕೆ 12 ರನ್‌ಗೆ ಕುಸಿಯಿತು. ಈ ವೇಳೆ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ (53) ಮತ್ತು ಶಿವಂ ದುಬೆ (53) ತಲಾ ಅರ್ಧಶತಕ ಸಿಡಿಸಿದರು. ರಿಂಕು ಸಿಂಗ್‌ 30 ರನ್‌ ಗಳಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ಹೀಗಾಗಿ ಭಾರತವು ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯ್ತು.

ಉತ್ತಮ ಆರಂಭ ಪಡೆದು ಕುಸಿದ ಇಂಗ್ಲೆಂಡ್‌

ಬೃಹತ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಉತ್ತಮ ಆರಂಭ ಪಡೆಯಿತು. ತಂಡದ ಪರ ಅಬ್ಬರಿಸಿದ ಹ್ಯಾರಿ ಬ್ರೂಕ್ ಸರಣಿಯಲ್ಲಿ ಮೊದಲ ಅರ್ಧಶತಕ ಗಳಿಸಿದರು. 51 ರನ್‌ ಗಳಿಸಿ ವರುಣ್‌ ಚಕ್ರವರ್ತಿಗೆ ವಿಕೆಟ್‌ ಒಪ್ಪಿಸಿದರು. ಬೆನ್ ಡಕೆಟ್ 39 ರನ್‌ ಗಳಿಸಿದರು. ಭಾರತದ ಪರ ಸ್ಪಿನ್ನರ್ ರವಿ ಬಿಷ್ಣೋಯ್ 28 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಪಡೆದರು. ಕನ್ಕಷನ್ ಬದಲಿ ಆಟಗಾರನಾಗಿ ಆಡಿದ ಹರ್ಷಿತ್ ರಾಣಾ 33 ರನ್‌ ಬಿಟ್ಟುಕೊಟ್ಟು 3 ಪ್ರಮುಖ ವಿಕೆಟ್‌ ಪಡೆದರು. ವರುಣ್ ಚಕ್ರವರ್ತಿ 2 ವಿಕೆಟ್‌ ಕಬಳಿಸಿದರು.

ಮಹಮೂದ್ ವಿಶಿಷ್ಠ ದಾಖಲೆ

ಸರಣಿಯ ಮೊದಲ ಪಂದ್ಯವನ್ನು ಆಡಿದ ಮಹಮೂದ್, ತಮ್ಮ ಮೊದಲ ಓವರ್‌ನಲ್ಲೇ ಮೂರು ವಿಕೆಟ್‌ ಪಡೆದರು. ಇದು ಭಾರತದ ಬೃಹತ್‌ ಮೊತ್ತದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಸಂಜು ಸ್ಯಾಮ್ಸನ್ 1 ರನ್‌ ಗಳಿಸಿ ಔಟಾದರೆ, ಇನ್‌ ಫಾರ್ಮ್ ಆಟಗಾರ ತಿಲಕ್ ವರ್ಮಾ ಶೂನ್ಯಕ್ಕೆ ಔಟಾದರು. ಟಿ20 ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಕಳಪೆ ಫಾರ್ಮ್‌ನಲ್ಲಿರುವ ನಾಯಕ ಸೂರ್ಯಕುಮಾರ್ ಯಾದವ್ ಕೂಡಾ ಡಕೌಟ್‌ ಆದರು. ಆದರೂ, ಭಾರತದ ಮಧ್ಯಮ ಕ್ರಮಾಂಕದ ಅಬ್ಬರದ ಫಲವಾಗಿ ಸ್ಪರ್ಧಾತ್ಮಕ ಮೊತ್ತ ದಾಖಲಾಯ್ತು.

ಈ ಸರಣಿ ಗೆಲುವಿನೊಂದಿಗೆ ಭಾರತವು 2019ರಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಅಜೇಯವಾಗಿದೆ. ಅಂದರೆ ಸತತ 17 ಸರಣಿಗಳಲ್ಲಿ ಭಾರತ ಸೋತಿಲ್ಲ.

Whats_app_banner