ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ; ಲೈವ್​​ ಸ್ಟ್ರೀಮಿಂಗ್, ದಿನಾಂಕ, ಸಮಯ, ತಂಡಗಳ ವಿವರ ಇಲ್ಲಿದೆ

ಭಾರತ vs ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ; ಲೈವ್​​ ಸ್ಟ್ರೀಮಿಂಗ್, ದಿನಾಂಕ, ಸಮಯ, ತಂಡಗಳ ವಿವರ ಇಲ್ಲಿದೆ

India Women vs South Africa Women: ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿ ಶುರುವಾಗಲಿದೆ. ಆ ಬಳಿಕ ಏಕೈಕ ಟೆಸ್ಟ್, ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಭಾರತ vs ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ; ಲೈವ್​​ ಸ್ಟ್ರೀಮಿಂಗ್, ದಿನಾಂಕ, ಸಮಯ, ತಂಡಗಳ ವಿವರ ಇಲ್ಲಿದೆ
ಭಾರತ vs ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ; ಲೈವ್​​ ಸ್ಟ್ರೀಮಿಂಗ್, ದಿನಾಂಕ, ಸಮಯ, ತಂಡಗಳ ವಿವರ ಇಲ್ಲಿದೆ

ಮೂರು ಏಕದಿನ, ಏಕೈಕ ಟೆಸ್ಟ್, 3 ಪಂದ್ಯಗಳ ಟಿ20 ಸರಣಿಗಳಿಗೆ ಸೌತ್ ಆಫ್ರಿಕಾ ತಂಡವು ಭಾರತದ ಪ್ರವಾಸ ಕೈಗೊಂಡಿದೆ. ಜೂನ್ 16 ರಿಂದ 3 ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ಈ 3 ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಟೆಸ್ಟ್ ಮತ್ತು ಟಿ20ಐ ಸರಣಿಗಳು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ವೇಳಾಪಟ್ಟಿ, ತಂಡಗಳು, ಲೈವ್​ಸ್ಟ್ರೀಮ್ ವಿವರ, ಸಮಯ ಮತ್ತು ದಿನಾಂಕದ ವಿವರ ಇಲ್ಲಿದೆ.

ಭಾರತ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಏಕದಿನ ಮತ್ತು ಟಿ20 ತಂಡದ ಭಾಗವಾಗಿದ್ದಾರೆ. ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ಕೂಡ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಕೊನೆಯ ಟೆಸ್ಟ್ ಮುಖಾಮುಖಿಯಾಗಿತ್ತು. ಇದನ್ನು ಭಾರತ ಗೆದ್ದಿತ್ತು.

2020-21ರಲ್ಲಿ ಏಕದಿನ ಮತ್ತು ಟಿ20ಐ ಸರಣಿಗಳಿಗೆ ದಕ್ಷಿಣ ಆಫ್ರಿಕಾ ಸಹ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಆದರೆ, ಟೀಮ್ ಇಂಡಿಯಾ ಎರಡೂ ಸರಣಿಗಳಲ್ಲೂ ಸೋಲು ಕಂಡಿತ್ತು.

ಟ್ರೆಂಡಿಂಗ್​ ಸುದ್ದಿ

ಭಾರತ vs ದಕ್ಷಿಣ ಆಫ್ರಿಕಾ ಮಹಿಳಾ ವೇಳಾಪಟ್ಟಿ

ಜೂನ್ 16: ಮೊದಲ ಏಕದಿನ, ಚಿನ್ನಸ್ವಾಮಿ ಮೈದಾನ, ಬೆಂಗಳೂರು

ಜೂನ್ 19: ಎರಡನೇ ಏಕದಿನ, ಚಿನ್ನಸ್ವಾಮಿ ಮೈದಾನ, ಬೆಂಗಳೂರು

ಜೂನ್ 23: ಮೂರನೇ ಏಕದಿನ, ಚಿನ್ನಸ್ವಾಮಿ ಮೈದಾನ, ಬೆಂಗಳೂರು

ಜೂನ್ 28-ಜುಲೈ 1: ಏಕೈಕ ಟೆಸ್ಟ್​, ಚೆನ್ನೈನ ಚಿದಂಬರಂ ಕ್ರೀಡಾಂಗಣ

ಜುಲೈ 5: ಮೊದಲ ಟಿ20ಐ ಪಂದ್ಯ, ಚೆನ್ನೈನ ಚಿದಂಬರಂ ಕ್ರೀಡಾಂಗಣ

ಜುಲೈ 7: ಎರಡನೇ ಟಿ20ಐ ಪಂದ್ಯ, ಚೆನ್ನೈನ ಚಿದಂಬರಂ ಕ್ರೀಡಾಂಗಣ

ಜುಲೈ 9: 3ನೇ ಟಿ20ಐ ಪಂದ್ಯ, ಚೆನ್ನೈನ ಚಿದಂಬರಂ ಕ್ರೀಡಾಂಗಣ

ಭಾರತ-ಸೌತ್ ಆಫ್ರಿಕಾ ಸರಣಿಯನ್ನು ಎಲ್ಲಿ ವೀಕ್ಷಿಸಬೇಕು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿ ಭಾರತದಲ್ಲಿ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್-ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್*, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್​), ದಯಾಲನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭಾನಾ, ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್*, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪುನಿಯಾ.

ಏಕೈಕ ಟೆಸ್ಟ್‌ಗೆ ಭಾರತದ ಟೆಸ್ಟ್ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನ (ಉಪನಾಯಕ), ಶಫಾಲಿ ವರ್ಮಾ, ಶುಭಾ ಸತೀಶ್, ಜೆಮಿಮಾ ರೋಡ್ರಿಗಸ್*, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸ್ನೇಹ ರಾಣಾ, ಸೈಕಾ ಇಶಾಕ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಮೇಘನಾ ಸಿಂಗ್, ಪ್ರಿಯಾ ಪುನಿಯಾ.

ಮೂರು ಪಂದ್ಯಗಳ ಟಿ20ಐ ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನ (ಉಪನಾಯಕ), ಶಫಾಲಿ ವರ್ಮಾ, ದಯಾಲನ್ ಹೇಮಲತಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಜೆಮಿಮಾ ರೋಡ್ರಿಗಸ್*, ಸಜನಾ ಸಜೀವನ್, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ಅಮನ್ಜೋತ್ ಕೌರ್ , ಆಶಾ ಸೋಭಾನಾ, ಪೂಜಾ ವಸ್ತ್ರಾಕರ್ *, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ.

ಸ್ಟ್ಯಾಂಡ್‌ಬೈ: ಸೈಕಾ ಇಶಾಕ್.

ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ/ಟಿ20 ತಂಡ

ಲಾರಾ ವೊಲ್ವಾರ್ಡ್ಟ್ (ನಾಯಕ), ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್‌ಸೆನ್, ಮೈಕೆ ಡಿ ರಿಡರ್, ಸಿನಾಲೊ ಜಾಫ್ತಾ, ಕಪ್, ಅಯಾಬೊಂಗಾ ಖಾಕಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಜ್-ಮಾರಿ ಮಾರ್ಜ್, ನೊನ್ಕುಲುಲೆಕೊ ಮ್ಲಾಬಾ, ತುಮಿ ಸೆಖುಕುನೆ, ನಂದುಮಿಸೊ ಶಾಂಗಸೆ, ಡೆಲ್ಮಿ ಟಕರ್.

ದಕ್ಷಿಣ ಆಫ್ರಿಕಾ ಮಹಿಳಾ ಟೆಸ್ಟ್ ತಂಡ

ಲಾರಾ ವೊಲ್ವಾರ್ಡ್ಟ್ (ನಾಯಕ), ಅನ್ನೆಕೆ ಬಾಷ್, ತಜ್ಮಿನ್ ಬ್ರಿಟ್ಸ್, ನಾಡಿನ್ ಡಿ ಕ್ಲರ್ಕ್, ಅನ್ನೇರಿ ಡೆರ್ಕ್ಸೆನ್, ಮೈಕೆ ಡಿ ರಿಡ್ಡರ್, ಸಿನಾಲೊ ಜಾಫ್ತಾ, ಮರಿಜಾನ್ನೆ ಕಪ್ಪ್, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಜ್-ಮಾರಿ ಮಾರ್ಜ್, ನಾನ್ಕುಲು, ಟುಮಿಕೊ ಮ್ಲಾಹುಕುಲ್ಕೊ ಮ್ಲಾಹುಕ್ , ನಂದುಮಿಸೊ ಶಾಂಗಸೆ, ಡೆಲ್ಮಿ ಟಕರ್.