2016ರ ಫೈನಲ್ ನೆನಪಿಸಿದ ಐಪಿಎಲ್ ತಂಡಗಳ ಗಾಳಿಪಟ ಸ್ಪರ್ಧೆ; ಎಸ್​ಆರ್​ಎಚ್​ಗೆ​ ಗೆಲುವು, ಆರ್​ಸಿಬಿಗೆ ಇಲ್ಲೂ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  2016ರ ಫೈನಲ್ ನೆನಪಿಸಿದ ಐಪಿಎಲ್ ತಂಡಗಳ ಗಾಳಿಪಟ ಸ್ಪರ್ಧೆ; ಎಸ್​ಆರ್​ಎಚ್​ಗೆ​ ಗೆಲುವು, ಆರ್​ಸಿಬಿಗೆ ಇಲ್ಲೂ ಸೋಲು

2016ರ ಫೈನಲ್ ನೆನಪಿಸಿದ ಐಪಿಎಲ್ ತಂಡಗಳ ಗಾಳಿಪಟ ಸ್ಪರ್ಧೆ; ಎಸ್​ಆರ್​ಎಚ್​ಗೆ​ ಗೆಲುವು, ಆರ್​ಸಿಬಿಗೆ ಇಲ್ಲೂ ಸೋಲು

IPL Teams Kite Flying Competition: ಸಂಕ್ರಾತಿ ಹಬ್ಬದ ವಿಶೇಷವಾಗಿ ಆಯೋಜಿಸಲಾಗಿದ್ದ ಐಪಿಎಲ್ ತಂಡಗಳ ಗಾಳಿಪಟ ಸ್ಪರ್ಧೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ತಂಡ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಐಪಿಎಲ್ ತಂಡಗಳ ನಡುವೆ ಗಾಳಿಪಟ ಸ್ಪರ್ಧೆ.
ಐಪಿಎಲ್ ತಂಡಗಳ ನಡುವೆ ಗಾಳಿಪಟ ಸ್ಪರ್ಧೆ.

17ನೇ ಆವೃತ್ತಿಯ ಐಪಿಎಲ್ (IPL 2024) ಆರಂಭಕ್ಕೆ ಇನ್ನೂ 3 ತಿಂಗಳು ಬಾಕಿ ಉಳಿದಿದೆ. ಅದಾಗಲೇ ಸನ್​ರೈಸರ್ಸ್ ಹೈದರಾಬಾದ್​ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ರನ್ನರ್​ಅಪ್ (Royal Challengers Bangalore vs Sunrisers Hyderabad) ಸ್ಥಾನಕ್ಕೆ ತೃಪ್ತಿಯಾಗಿದ್ದು ಮತ್ತೆ ನಿರಾಸೆ ಅನುಭವಿಸಿದೆ. ಹೌದು, ಅಹ್ಮದಾಬಾದ್​​ನಲ್ಲಿ ನಡೆ ಗಾಳಿಪಟ ಸ್ಪರ್ಧೆಯಲ್ಲಿ (IPL Kite competition) ಆರ್​ಸಿಬಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಇದು ಐಪಿಎಲ್ ತಂಡಗಳ ನಡುವೆ ಜರುಗಿದ ಗಾಳಿಪಟಗಳ ಸ್ಪರ್ಧೆ. ಹೌದು, ನಿಕಟ ಸ್ಪರ್ಧೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ಸಲುವಾಗಿ ಐಪಿಎಲ್ ತಂಡಗಳು ಜನವರಿ 13ರ ಶನಿವಾರ ಗಾಳಿಪಟ ಸ್ಫರ್ಧೆಯ ಅಖಾಡಕ್ಕಿಳಿದಿದ್ದವು. ಐಪಿಎಲ್ 2024ರ ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಇಂಟೆನ್ಸ್​ ಕೈಟ್​ ಫ್ಲಯಿಂಗ್​ ಕಾರ್ಯಕ್ರಮ ಪ್ರಸಾರವಾಗಿದ್ದು, ಎಲ್ಲ ತಂಡಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂಬುದು ವಿಶೇಷ.

2016ರ ನಂತರ ಮತ್ತೊಮ್ಮೆ ಸೋತ ಆರ್​ಸಿಬಿ

ರೋಚಕತೆಯಿಂದ ಸಾಗಿದ ಗಾಳಿಪಟ ಸ್ಪರ್ಧೆಯಲ್ಲಿ ಎರಡು ತಂಡಗಳು ಫೈನಲ್​ಗೆ ಲಗ್ಗೆ ಇಟ್ಟವು. ಕಾಕತಾಳೀಯ ಎಂಬಂತೆ 2016ರಲ್ಲಿ ಫೈನಲ್​​ನಲ್ಲಿ ಸೆಣಸಾಟ ನಡೆಸಿದ್ದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳೇ ಮತ್ತೆ ಮುಖಾಮುಖಿ ಆದರು. ಅಂದು ಫೈನಲ್​​ನಲ್ಲಿ ಆರ್​ಸಿಬಿಯನ್ನು ಸೋಲಿಸಿದಂತೆ ಸೋಲಿಸಿದ ಎಸ್​ಆರ್​ಎಚ್​ ಗಾಳಿಪಟ ಸ್ಪರ್ಧೆಯನ್ನು ಗೆದ್ದುಕೊಂಡಿತು. ರೋಚಕ ಸ್ಪರ್ಧೆಯಲ್ಲಿ ಆರ್​ಸಿಬಿ ಅಭಿಮಾನಿಗಳು ನಿರಾಸೆ ಅನುಭವಿಸಿದರು.

ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್, ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್​ ಶರ್ಮಾ, ಪಂಜಾಬ್ ಕಿಂಗ್ಸ್​​ ತಂಡದ ನಾಯಕ ಶಿಖರ್ ಧವನ್ ಮತ್ತು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮುಖಗಳನ್ನು ಗಾಳಿಪಟದಲ್ಲಿ ಚಿತ್ರಿಸಲಾಗಿತ್ತು. ಅಚ್ಚರಿ ಅಂದರೆ ಆರ್​​ಸಿಬಿಗೆ ನಾಯಕ ಫಾಫ್ ಡು ಪ್ಲೆಸಿಸ್ ಆದರೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಖವನ್ನೇ ಚಿತ್ರಿಸಲಾಗಿತ್ತು. ಆಯಾ ತಂಡದ ಜೆರ್ಸಿ ಬಣ್ಣವನ್ನೇ ನಕ್ಷತ್ರ ಆಕಾರದಲ್ಲಿದ್ದ ಗಾಳಿಪಟದಲ್ಲಿ ಚಿತ್ರಿಸಲಾಗಿತ್ತು.

ಮಾರ್ಚ್​ 22ರಿಂದ ಐಪಿಎಲ್

ಈ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಅದರ ಹೊರತಾಗಿ 17ನೇ ಆವೃತ್ತಿಯ ಐಪಿಎಲ್​ ಅನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ವರದಿಗಳ ಪ್ರಕಾರ 2024ರ ಐಪಿಎಲ್​ ಮಾರ್ಚ್ 22 ರಿಂದ ಟೂರ್ನಿಗೆ ಚಾಲನೆ ಸಿಗಲಿದೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದ್ದು, ಅದಕ್ಕೆ ತಕ್ಕಂತೆ ವೇಳಾಪಟ್ಟಿ ಸಿದ್ಧಪಡಿಸಿಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಅಲ್ಲದೆ, ಇದರೊಂದಿಗೆ ಭಾರತದ ಹೊರಗೆ ನಡೆಯುವುದಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

ಸನ್​ರೈಸರ್ಸ್​ ಹೈದರಾಬಾದ್ ತಂಡ

ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಮ್ (ನಾಯಕ), ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ.ನಟರಾಜನ್, ಅನ್ಮೋಲ್​ಪ್ರೀತ್​ ಸಿಂಗ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮಿನ್ಸ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಹ್ಮಣ್ಯನ್.

Whats_app_banner