IPL 2025 Mega Auction: ಐಪಿಎಲ್ ಇತಿಹಾಸದಲ್ಲಿ ಈವರೆಗಿನ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2025 Mega Auction: ಐಪಿಎಲ್ ಇತಿಹಾಸದಲ್ಲಿ ಈವರೆಗಿನ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು

IPL 2025 Mega Auction: ಐಪಿಎಲ್ ಇತಿಹಾಸದಲ್ಲಿ ಈವರೆಗಿನ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು

Most expensive Indian players: ಐಪಿಎಲ್ ಇತಿಹಾಸದ ಮೆಗಾ ಹರಾಜುಗಳಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು ಯಾರು? ಇಲ್ಲಿದೆ ನೋಡಿ ಆ ಪಟ್ಟಿ.

ಐಪಿಎಲ್ ಇತಿಹಾಸದಲ್ಲಿ ಈವರೆಗಿನ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು
ಐಪಿಎಲ್ ಇತಿಹಾಸದಲ್ಲಿ ಈವರೆಗಿನ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಬಹು ನಿರೀಕ್ಷಿತ ಮೆಗಾ ಆಕ್ಷನ್ ನಡೆಯಲಿದೆ. ಈ ಎರಡು ದಿನಗಳಲ್ಲಿ ಒಟ್ಟು 574 ಆಟಗಾರರ ಐಪಿಎಲ್ ಭವಿಷ್ಯ ನಿರ್ಧಾರವಾಗಲಿದೆ. ಈ ಹರಾಜು ಪ್ರಕ್ರಿಯೆ ಎಲ್ಲಾ 10 ತಂಡಗಳಿಗೆ ನಿರ್ಣಾಯಕವಾಗಿರುತ್ತದೆ. ಏಕೆಂದರೆ ಇದು ಹೊಸ ತಂಡಗಳನ್ನು ಪುನರ್ನಿರ್ಮಿಸಲು ಮತ್ತು ಬಲಪಡಿಸಲು ಒಂದೊಳ್ಳೆ ಅವಕಾಶವಾಗಿದೆ.

ಭಾರತದ ಪ್ರಮುಖ ಆಟಗಾರರು, ವಿಕೆಟ್‌ಕೀಪರ್‌ಗಳಾದ ರಿಷಭ್ ಪಂತ್, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ಐಪಿಎಲ್ 2024 ವಿಜೇತ ನಾಯಕ ಶ್ರೇಯಸ್ ಅಯ್ಯರ್ ಈ ಹರಾಜಿನಲ್ಲಿ ಪ್ರಮುಖರಾಗಿದ್ದಾರೆ. ಅಲ್ಲದೆ, ಜನಪ್ರಿಯ ವೇಗಿಗಳಾದ ಮೊಹಮ್ಮದ್ ಶಮಿ ಅವರಿಗೂ ಹೆಚ್ಚಿನ ಬೇಡಿಕೆ ಇದೆ. ಹಿಂದಿನ ಮೆಗಾ ಹರಾಜುಗಳನ್ನು ನೋಡಿದರೆ, ಐಪಿಎಲ್ ಹರಾಜಿನಲ್ಲಿ ಭಾರತೀಯ ಆಟಗಾರರು ಪ್ರಮುಖರಾಗಿದ್ದಾರೆ. ಹಾಗಾದರೆ ಮೆಗಾ ಹರಾಜುಗಳಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್ ಆದ ಭಾರತೀಯ ಆಟಗಾರರು ಯಾರು?

ಈವರೆಗಿನ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದವರ ಪಟ್ಟಿ

ಇಶಾನ್ ಕಿಶನ್: 2022 ರ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿಗೆ ಇಶಾನ್ ಕಿಶನ್ ಅವರನ್ನು ಖರೀದಿಸಿತ್ತು. ಆದರೆ ಆ ಸೀಸನ್​ನಲ್ಲಿ ಅವರ ಪ್ರದರ್ಶನ ಅದ್ಭುತ ಎಂಬಂತಿರಲಿಲ್ಲ. 2020ರಲ್ಲಿ ಅವರು ಮುಂಬೈ ಇಂಡಿಯನ್ಸ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರನ್ನು ಬೃಹತ್ ಮೊತ್ತಕ್ಕೆ ಖರೀದಿ ಮಾಡಲಾಗಿತ್ತು.

ಯುವರಾಜ್ ಸಿಂಗ್: 2014ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯುವರಾಜ್ ಸಿಂಗ್ ಅವರನ್ನು 14 ಕೋಟಿ ರೂಪಾಯಿಗೆ ಖರೀದಿಸಿತ್ತು. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಯುವಿಗೆ ಭಾರಿ ಬೆಲೆ ನೀಡಿತ್ತು. ಆದರೆ ಅವರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ದೀಪಕ್ ಚಹರ್: 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹರ್ ಅವರನ್ನು 14 ಕೋಟಿ ರೂಪಾಯಿಗೆ ಖರೀದಿಸಿತು. ಆದರೆ ಇಂಜುರಿಗೆ ತುತ್ತಾದ ಕಾರಣ ಅವರು ಆ ಋತುವಿನ ಹೆಚ್ಚಿನ ಪಂದ್ಯಗಳಿಗೆ ಅಲಭ್ಯರಾಗಿದ್ದರು.

ದಿನೇಶ್ ಕಾರ್ತಿಕ್: 2014 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದಿನೇಶ್ ಕಾರ್ತಿಕ್ ಅವರನ್ನು 12.50 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

20 ಕೋಟಿಗೂ ಹೆಚ್ಚು ಮೊತ್ತಕ್ಕೆ ಸೇಲ್

ಐಪಿಎಲ್​ ಇತಿಹಾಸದಲ್ಲಿ ಇಬ್ಬರು ಆಟಗಾರರು 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇವರನ್ನು ಖರೀದಿಸಿದ ತಂಡಗಳು ಕ್ರಮವಾಗಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್. ಐಪಿಎಲ್ 2024ರ ಹರಾಜಿನಲ್ಲಿ ಫ್ರಾಂಚೈಸಿ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿ ರೂಪಾಯಿಗೆ ಖರೀದಿಸಿತು. ಹಾಗೆಯೆ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಆದರೆ ಈ ಬಾರಿ ಈ ಇಬ್ಬರ ದಾಖಲೆ ಉಡೀಸ್ ಆಗುವ ಸಾಧ್ಯತೆ ಇದೆ.

Whats_app_banner