ಪ್ಯಾರಿಸ್ ಒಲಿಂಪಿಕ್ಸ್‌-2024: ಮೊದಲ ಬಾರಿಗೆ ಭದ್ರತೆ ಒದಗಿಸಲಿವೆ ಸಿಆರ್‌ಪಿಎಫ್​​​ ಶ್ವಾನದಳ ಕೆ9 ತಂಡಗಳು!
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್‌-2024: ಮೊದಲ ಬಾರಿಗೆ ಭದ್ರತೆ ಒದಗಿಸಲಿವೆ ಸಿಆರ್‌ಪಿಎಫ್​​​ ಶ್ವಾನದಳ ಕೆ9 ತಂಡಗಳು!

ಪ್ಯಾರಿಸ್ ಒಲಿಂಪಿಕ್ಸ್‌-2024: ಮೊದಲ ಬಾರಿಗೆ ಭದ್ರತೆ ಒದಗಿಸಲಿವೆ ಸಿಆರ್‌ಪಿಎಫ್​​​ ಶ್ವಾನದಳ ಕೆ9 ತಂಡಗಳು!

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭದ್ರತೆ ಒದಗಿಸುವ ಸಲುವಾಗಿ ನಡೆದ ಪರೀಕ್ಷೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಶ್ವಾನ ದಳ ಆಯ್ಕೆಯಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌-2024: ಮೊದಲ ಬಾರಿಗೆ ಭದ್ರತೆ ಒದಗಿಸಲಿವೆ ಸಿಆರ್‌ಪಿಎಫ್​​​ ಶ್ವಾನದಳ ಕೆ9 ತಂಡಗಳು!
ಪ್ಯಾರಿಸ್ ಒಲಿಂಪಿಕ್ಸ್‌-2024: ಮೊದಲ ಬಾರಿಗೆ ಭದ್ರತೆ ಒದಗಿಸಲಿವೆ ಸಿಆರ್‌ಪಿಎಫ್​​​ ಶ್ವಾನದಳ ಕೆ9 ತಂಡಗಳು!

ಜುಲೈ 26 ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ನ ವಿವಿಧ ಸ್ಥಳಗಳಲ್ಲಿ ಭದ್ರತೆ ಒದಗಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಭಾರತದ ಗಣ್ಯ ಶ್ವಾನದಳ ಕೆ9 ತಂಡಗಳು (ಪೋಲೀಸ್ ಶ್ವಾನ ಘಟಕ) ಸಜ್ಜಾಗಿವೆ. ಒಟ್ಟು 10 ಕೆ9 ತಂಡಗಳು ಭದ್ರತೆಯನ್ನು ಒದಗಿಸಲು ಕೆಲಸ ಮಾಡಲಿವೆ. ಅವುಗಳಲ್ಲಿ 2 ತಂಡಗಳು ಮೊದಲ ಬಾರಿಗೆ ಭಾರತದಿಂದ ಪ್ಯಾರಿಸ್​​ಗೆ ಬಂದಿಳಿದಿವೆ. ಜುಲೈ 10ರಂದೇ ಪ್ಯಾರಿಸ್‌ಗೆ ತೆರಳಿರುವ ತಂಡಗಳಿಗೆ ಕಠಿಣ ಪರೀಕ್ಷೆ ನೀಡಿದ ನಂತರವೇ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ಎಎನ್‌ಐ ಪ್ರಕಾರ, ಸಿಆರ್‌ಪಿಎಫ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಬೆಳವಣಿಗೆ ಖಚಿತಪಡಿಸಿದೆ. ಸಿಆರ್‌ಪಿಎಫ್‌ನ ತರಬೇತಿ ಶಾಲೆಯಲ್ಲಿ ನಡೆದ ತರಬೇತಿ, ಪರೀಕ್ಷೆಗಳ ನಂತರ ಕೆ9 ತಂಡಗಳಾದ ವ್ಯಾಸ್ಟ್ ಮತ್ತು ಡೆನ್‌ಬಿಯನ್ನು ಭದ್ರತಾ ಸೇವೆಗೆ ಆಯ್ಕೆ ಮಾಡಲಾಗಿದೆ. 'ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಯಿಂದ ಎರಡು ಕೆ9 ತಂಡಗಳು ಜುಲೈ 10ರಂದು ಪ್ಯಾರಿಸ್‌ಗೆ ತೆರಳಿದವು. ಜುಲೈ 26 ರಿಂದ ಆಗಸ್ಟ್ 11ರವರೆಗೆ ನಡೆಯಲಿರುವ ಒಲಿಂಪಿಕ್ಸ್​ಗೆ​ ನಿಗದಿಪಡಿಸಲಾದ ವಿವಿಧ ಸ್ಥಳಗಳಿಗೆ ಭದ್ರತೆ ಒದಗಿಸಲು ಆಯ್ಕೆ ಮಾಡಲಾಗಿದೆ.

ಶ್ವಾನಗಳ ಸಾಮರ್ಥ್ಯವೇನು?

ಕೆ9 ವ್ಯಾಸ್ಟ್ ಮತ್ತು ಡೆನ್‌ಬಿ ಕ್ರಮವಾಗಿ 5 ಮತ್ತು 3 ವರ್ಷದ ಶ್ವಾನಗಳು. ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್, ಸಿಆರ್​​​ಪಿಎಫ್​ನ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ನಡೆದ ಕಠಿಣ ಪರೀಕ್ಷೆಗಳ ನಂತರ ಕೆಲಸಕ್ಕೆ ಆಯ್ಕೆಯಾಗಿವೆ ಎಂದು ಸಿಆರ್​​ಪಿಎಫ್​ ಹೇಳಿಕೆಯಲ್ಲಿ ತಿಳಿಸಿದೆ. ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಖಾತ್ರಿಪಡಿಸುವಲ್ಲಿ ಹೆಚ್ಚು ತರಬೇತಿ ಪಡೆದ ಶ್ವಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕೆ9 ತಂಡಗಳು ಸ್ಫೋಟಕಗಳು, ಮದ್ದುಗುಂಡುಗಳು ಮತ್ತು ಮಾದಕ ದ್ರವ್ಯಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವಾಲಯವು 117 ಅಥ್ಲೀಟ್‌ಗಳ ಪಟ್ಟಿಯನ್ನು ಅನುಮೋದಿಸಿದೆ. ಜೊತೆಗೆ 140 ಸಹಾಯಕ ಸಿಬ್ಬಂದಿಗಳು ಕ್ರೀಡಾಪಟುಗಳೊಂದಿಗೆ ಪ್ರತ್ಯೇಕವಾಗಿ ಪ್ರಯಾಣಿಸುತ್ತಾರೆ. ಒಟ್ಟು 72 ಅಥ್ಲೀಟ್‌ಗಳು ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರೆ, ಟೋಕಿಯೊ ಒಲಿಂಪಿಕ್ಸ್‌ನಿಂದ ಐದು ಪದಕ ವಿಜೇತರು ಮತ್ತೊಂದು ಪದಕ ಗೆಲ್ಲುವ ಪ್ರಯತ್ನದಲ್ಲಿ ಮತ್ತೆ ಭಾಗವಹಿಸುತ್ತಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.