WTC Final Road: ಸೋತರೂ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತಕ್ಕಿದೆ ಅವಕಾಶ; ಹೀಗಿದೆ ಲೆಕ್ಕಾಚಾರ!
World Test Championship: ಅಡಿಲೇಡ್ ಟೆಸ್ಟ್ ಪಂದ್ಯ ಸೋತಿರುವ ಟೀಮ್ ಇಂಡಿಯಾ, ಡಬ್ಲ್ಯುಟಿಸಿ ಫೈನಲ್ ಹಾದಿ ತುಂಬಾ ಕಠಿಣವಾಗಿದೆ. ಹಾಗಂತ ಅವಕಾಶ ಇಲ್ಲ ಎಂದಲ್ಲ. ಇಲ್ಲಿದೆ ನೋಡಿ ಡಬ್ಲ್ಯುಟಿಸಿ ಫೈನಲ್ ಲೆಕ್ಕಾಚಾರ.
![ಸೋತರೂ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತಕ್ಕಿದೆ ಅವಕಾಶ; ಹೀಗಿದೆ ಲೆಕ್ಕಾಚಾರ! ಸೋತರೂ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತಕ್ಕಿದೆ ಅವಕಾಶ; ಹೀಗಿದೆ ಲೆಕ್ಕಾಚಾರ!](https://images.hindustantimes.com/kannada/img/2024/12/08/550x309/Australia-India-Cricket-139_1733632532848_1733650999821.jpg)
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳ ಅಂತರದಿಂದ ಹೀನಾಯ ಸೋಲನುಭವಿಸಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2025) ಫೈನಲ್ಗೆ ಭಾರತದ ಹಾದಿ ಕಠಿಣವಾಗಿದೆ. ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ನಲ್ಲಿ ಸೋತ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಗೆಲುವಿನ ಶೇಕಡಾವಾರು 57.29ಕ್ಕೆ ಇಳಿದಿದೆ. 3ನೇ ಸ್ಥಾನದಲ್ಲಿದ್ದ ಆಸೀಸ್, ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ.
2023-25ರ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಭಾರತಕ್ಕೆ ಉಳಿದಿರುವುದು ಮೂರು ಟೆಸ್ಟ್ ಪಂದ್ಯಗಳು. 2 ತಿಂಗಳಲ್ಲಿ 4ನೇ ಟೆಸ್ಟ್ ಸೋಲು ಕಂಡಿರುವ ಭಾರತ, ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಹಾದಿ ತುಂಬಾ ಕಠಿಣವಾಗಿದೆ. ಅಡಿಲೇಡ್ ಟೆಸ್ಟ್ನಲ್ಲಿನ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು, ಗೆಲುವಿನ ಶೇಕಡಾ 57.69 ರಿಂದ 60.71ಕೆ ಏರಿಕೆ ಕಂಡಿದೆ. ಆದಾಗ್ಯೂ, 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಗ್ಕೆಬೆರ್ಹಾದಲ್ಲಿ ನಡೆಯಲಿರುವ 2ನೇ ಟೆಸ್ಟ್ನಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿದರೆ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಲಿದೆ.
ಭಾರತ ತಂಡ ಮುಂದೆ ಮಾಡಬೇಕಿರುವುದೇನು?
ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆಯಲು ಭಾರತ ತಂಡ ಉಳಿದ 3 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೂ ಪರವಾಗಿಲ್ಲ, ಒಂದನ್ನೂ ಸೋಲಬಾರದು. ಒಂದು ವೇಳೆ ಭಾರತ ಎರಡು ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಭಾರತ ಗೆಲುವಿನ ಶೇಕಡಾ 60.52ಕ್ಕೆ ಕೊನೆಗೊಳ್ಳಲಿದೆ. ಭಾರತ ಉಳಿದ 3 ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಗೆಲುವಿನ ಶೇ 64.05ಕ್ಕೆ ಏರಲಿದೆ. ಇದು ಸತತ 3ನೇ ಡಬ್ಲ್ಯುಟಿಸಿ ಫೈನಲ್ಗೆ ದಾರಿ ಮಾಡಿಕೊಡುತ್ತದೆ.
ಭಾರತ 4-1 ಅಂತರದಲ್ಲಿ ಗೆಲ್ಲದಿದ್ದರೆ ಏನಾಗುತ್ತದೆ: ಒಂದು ವೇಳೆ ಭಾರತ ಉಳಿದ 3 ಟೆಸ್ಟ್ ಪಂದ್ಯಗಳನ್ನು ಗೆಲ್ಲದೇ ಸೋತರೇ ಡಬ್ಲ್ಯುಟಿಸಿ ಫೈನಲ್ ರೇಸ್ನಿಂದ ಹೊರಬೀಳಲಿದೆ. ಭಾರತ 3-2 ಅಥವಾ 3-1 ಅಂತರದಲ್ಲಿ ಗೆದ್ದರೆ ಅಥವಾ ಬಾರ್ಡರ್-ಗವಾಸ್ಕರ್ ಟ್ರೋಫಿ 2-2ರಲ್ಲಿ ಡ್ರಾಗೊಂಡರೆ ಸಂಭವನೀಯ ಸನ್ನಿವೇಶಗಳು ಇಲ್ಲಿವೆ.
ಭಾರತ 3-2ರಲ್ಲಿ ಗೆದ್ದರೆ: ಭಾರತ 3-2ರಲ್ಲಿ ಜಯಿಸಿದರೆ ಗೆಲುವಿನ ಶೇಕಡವಾರು 58.77 ಅಂಕಗಳೊಂದಿಗೆ ಮುಗಿಸಲಿದೆ. ಆದರೆ ಆಸ್ಟ್ರೇಲಿಯಾ, ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ಗಳನ್ನು ಹೊಂದಿದ್ದು, ಎರಡು ಗೆದ್ದರೂ ಭಾರತದ ಅಂಕವನ್ನು ಮುಟ್ಟಲು ಸಾಧ್ಯವಿಲ್ಲ. ಮತ್ತೊಂದೆಡೆ, ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಗೆದ್ದರೆ, ಭಾರತಕ್ಕಿಂತ ಹೆಚ್ಚಿನ ಗೆಲುವಿನ ಶೇಕಡವಾರನ್ನು ಹೊಂದಲಿದೆ. ಈ ಫಲಿತಾಂಶಗಳ ಆಧಾರದ ಮೇಲೆ ಭಾರತ ಫೈನಲ್ ಪ್ರವೇಶಿಸಲಿದೆ.
ಭಾರತ 3-1ರಲ್ಲಿ ಗೆದ್ದರೆ: ಭಾರತ 3-1 ಅಂತರದಲ್ಲಿ ಗೆದ್ದರೆ 138 ಅಂಕ ಗಳಿಸಲಿದೆ. ಅಲ್ಲದೆ, ಗೆಲುವಿನ ಶೇಕಡವಾರು 60.52ಕ್ಕೆ ಏರಿಕೆಯಾಗಲಿದೆ. ಆಸ್ಟ್ರೇಲಿಯಾ ಮತ್ತೊಮ್ಮೆ ಈ ಗೆಲುವಿನ ಶೇಕಡಾವಾರು ದಾಟಲು ವಿಫಲವಾಗುತ್ತದೆ. ಇದರೊಂದಿಗೆ ಭಾರತ ತಂಡ ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ.
2-2ರಲ್ಲಿ ಡ್ರಾ ಆದರೆ: ಒಂದು ವೇಳೆ ಭಾರತ 2-2 ಗೋಲುಗಳಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಡ್ರಾ ಮಾಡಿಕೊಂಡರೆ 126 ಅಂಕ ಮತ್ತು ಗೆಲುವಿನ ಶೇಕಡವಾರು 57.01 ಹೊಂದಲಿದೆ. ಇದರೊಂದಿಗೆ ಡಬ್ಲ್ಯುಟಿಸಿ ಆವೃತ್ತಿಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ. ಏಕೆಂದರೆ ಶ್ರೀಲಂಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದರೆ, ಭಾರತದ ಗೆಲುವಿನ ಶೇಕಡವಾರಿಗಿಂತ ಹೆಚ್ಚಾಗಲಿದೆ. ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ 2-0 ಅಂತರದಲ್ಲಿ ಗೆದ್ದರೆ ಭಾರತ ನಾಕೌಟ್ ಆಗಲಿದೆ.
ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ ಅಪ್ಡೇಟೆಡ್
ಆಸ್ಟ್ರೇಲಿಯಾ (ಗೆಲುವಿನ ಶೇಕಡಾ 60.71)
ದಕ್ಷಿಣ ಆಫ್ರಿಕಾ (ಗೆಲುವಿನ ಶೇಕಡಾ 59.26)
ಭಾರತ (ಗೆಲುವಿನ ಶೇಕಡಾ 57.29)
ಶ್ರೀಲಂಕಾ (ಗೆಲುವಿನ ಶೇಕಡಾ 50.00)
ಇಂಗ್ಲೆಂಡ್ (ಗೆಲುವಿನ ಶೇಕಡಾ 45.24)
ನ್ಯೂಜಿಲೆಂಡ್ ಗೆಲುವಿನ ಶೇಕಡಾ 44.23)
ಪಾಕಿಸ್ತಾನ (ಗೆಲುವಿನ ಶೇಕಡಾ 33.33)
ಬಾಂಗ್ಲಾದೇಶ (ಗೆಲುವಿನ ಶೇಕಡಾ 31.25)
ವೆಸ್ಟ್ ಇಂಡೀಸ್ (ಗೆಲುವಿನ ಶೇಕಡಾ 24.24)
![Whats_app_banner Whats_app_banner](https://kannada.hindustantimes.com/static-content/1y/wBanner.png)