ಡೆಲ್ಲಿ ವಿರುದ್ಧ ಟಾಸ್ ಗೆದ್ದ ಪಂಜಾಬ್ ಚೇಸಿಂಗ್; ನಾಲ್ವರು ವಿದೇಶಿ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದ ಕ್ಯಾಪಿಟಲ್ಸ್
Delhi Capitals Playing XI: ಚಂಡಿಗಢದ ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲಿಗೆ ಬ್ಯಾಟಿಂಗ್ ಮಾಡುತ್ತಿದೆ.
ಐಪಿಎಲ್ 2024ರ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮತ್ತೊಂದು ರೋಚಕ ಪಂದ್ಯ ನಡೆಯುತ್ತಿದೆ. ಮಾರ್ಚ್ 23ರ ಶನಿವಾರ ವಾರಾಂತ್ಯವಾದ ಕಾರಣ 2 ಪಂದ್ಯಗಳು ನಡೆತ್ತಿವೆ. ದಿನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಪಂಜಾಬ್ ತವರು ಚಂಡಿಗಢದ ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಈ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಡೆಲ್ಲಿ ತಂಡವು ನಾಲ್ವರು ವಿದೇಶಿ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿದಿದೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಆಡುತ್ತಿದ್ದಾರೆ. ಬೌಲಿಂಗ್ ಬಳಗದಲ್ಲಿ ಎಲ್ಲಾ ಭಾರತೀಯರೇ ಕಾಣಿಸಿಕೊಂಡಿದ್ದಾರೆ. ಅತ್ತ ಪಂಜಾಬ್ ತಂಡವು ಇಬ್ಬರು ವಿದೇಶಿ ಆಲ್‌ರೌಂಡರ್‌ಗಳ ಜೊತೆಗೆ ತಲಾ ಒಬ್ಬ ಬ್ಯಾಟರ್ ಹಾಗೂ ಬೌಲರ್ ಸೇರಿಸಿಕೊಂಡಿದೆ. ಬೈರ್‌ಸ್ಟೋವ್, ಲಿವಿಂಗ್‌ಸ್ಟನ್, ಕರನ್ ಮತ್ತು ರಬಾಡ ವಿದೇಶಿಗರ ಸ್ಥಾನ ತುಂಬಿದ್ದಾರೆ.
ಡಲ್ಲಿ ನಾಯಕ ರಿಷಬ್ ಪಂತ್ ಅವರಿಗೆ ಈ ಪಂದ್ಯ ತುಂಬಾ ವಿಶೇಷ. ಬರೋಬ್ಬರಿ 14 ತಿಂಗಳ ಬಳಿಕ ಮೈದಾನಕ್ಕಿಳಿಯುತ್ತಿರುವ ಅವರು, ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದ್ದಾರೆ. ಅತ್ತ ಪಂಜಾಬ್ ಕಿಂಗ್ಸ್ ತಂಡವನ್ನು ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಅಪಘಾತಕ್ಕೊಳಗಾದ ರಿಷಭ್ ಪಂತ್, 14 ತಿಂಗಳು ಚೇತರಿಸಿಕೊಂಡ ನಂತರ ಕ್ಯಾಪಿಟಲ್ಸ್ ನಾಯಕನಾಗಿ ಆಡುತ್ತಿದ್ದಾರೆ. ಉಭಯ ತಂಡಗಳು ಕೂಡಾ ಇದುವರೆಗೂ ಟ್ರೋಫಿ ಗೆದ್ದಿಲ್ಲ. ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಉಭಯ ತಂಡಗಳು ಪಣ ತೊಟ್ಟಿದ್ದು, ಮೊದಲ ಗೆಲುವು ಯಾರದ್ದಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಭ್ ಪಂತ್(w/c), ರಿಕಿ ಭುಯಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ.
ಪಂಜಾಬ್ ಕಿಂಗ್ಸ್ ಆಡುವ ಬಳಗ
ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್, ಶಶಾಂಕ್ ಸಿಂಗ್.
ಇದನ್ನು ಓದಿ | ಧೋನಿ ಈ ಬಾರಿಯ ಎಲ್ಲಾ ಐಪಿಎಲ್ ಪಂದ್ಯ ಆಡಲ್ಲ, ನಡುವೆ ವಿರಾಮ ತೆಗೆದುಕೊಳ್ಳಬಹುದು ಎಂದ ಕ್ರಿಸ್ ಗೇಲ್
ಕ್ಯಾಪಿಟಲ್ಸ್ ಸಬ್ಸ್ಟಿಟ್ಯೂಟ್: ಅಭಿಷೇಕ್ ಪೊರೆಲ್, ಮುಖೇಶ್ ಕುಮಾರ್, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ವಿಕ್ಕಿ ಓಸ್ಟ್ವಾಲ್, ಪ್ರವೀಣ್ ದುಬೆ
ಪಂಜಾಬ್ ಕಿಂಗ್ಸ್ ಸಬ್ಸ್ಟಿಟ್ಯೂಟ್: ರಿಲೀ ರೋಸ್ಸೌ, ಪ್ರಭ್‌ಸಿಮ್ರಾನ್ ಸಿಂಗ್, ತನಯ್ ತ್ಯಾಗರಾಜನ್, ಹರ್ಪ್ರೀತ್ ಸಿಂಗ್ ಭಾಟಿಯಾ, ವಿಧ್ವತ್ ಕಾವೇರಪ್ಪ