IPL 2024: ಚೆನ್ನೈನಲ್ಲಿಂದು 17ನೇ ಆವೃತ್ತಿಯ ಐಪಿಎಲ್ ಸಮಾರೋಪಕ್ಕೆ ಕ್ಷಣಗಣನೆ; ಸಂಗೀತ, ನೃತ್ಯ ಸೇರಿ ಏನೆಲ್ಲಾ ಇರುತ್ತೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಚೆನ್ನೈನಲ್ಲಿಂದು 17ನೇ ಆವೃತ್ತಿಯ ಐಪಿಎಲ್ ಸಮಾರೋಪಕ್ಕೆ ಕ್ಷಣಗಣನೆ; ಸಂಗೀತ, ನೃತ್ಯ ಸೇರಿ ಏನೆಲ್ಲಾ ಇರುತ್ತೆ

IPL 2024: ಚೆನ್ನೈನಲ್ಲಿಂದು 17ನೇ ಆವೃತ್ತಿಯ ಐಪಿಎಲ್ ಸಮಾರೋಪಕ್ಕೆ ಕ್ಷಣಗಣನೆ; ಸಂಗೀತ, ನೃತ್ಯ ಸೇರಿ ಏನೆಲ್ಲಾ ಇರುತ್ತೆ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿಂದು ಕೆಕೆಆರ್ ಮತ್ತು ಎಸ್‌ಆರ್‌ಎಚ್‌ ಫೈನಲ್ ಪಂದ್ಯದೊಂದಿಗೆ ಐಪಿಎಲ್ 17ನೇ ಆವೃತ್ತಿಗೆ ತೆರೆ ಬೀಳಲಿದೆ. ಪಂದ್ಯಕ್ಕೆ ಮುನ್ನ ನಡೆಯಲಿರುವ ಸಮಾರೋಪ ಸಮಾರಂಭದ ಡಿಟೇಲ್ಸ್ ಇಲ್ಲಿದೆ.

ಚೆನ್ನೈನಲ್ಲಿಂದು 17ನೇ ಆವೃತ್ತಿಯ ಐಪಿಎಲ್ ಸಮಾರೋಪಕ್ಕೆ ಕ್ಷಣಗಣನೆ; ಸಂಗೀತ, ನೃತ್ಯ ಸೇರಿ ಏನೆಲ್ಲಾ ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ
ಚೆನ್ನೈನಲ್ಲಿಂದು 17ನೇ ಆವೃತ್ತಿಯ ಐಪಿಎಲ್ ಸಮಾರೋಪಕ್ಕೆ ಕ್ಷಣಗಣನೆ; ಸಂಗೀತ, ನೃತ್ಯ ಸೇರಿ ಏನೆಲ್ಲಾ ಇರುತ್ತೆ ಅನ್ನೋದರ ಮಾಹಿತಿ ಇಲ್ಲಿದೆ

ಚೆನ್ನೈ (ತಮಿಳುನಾಡು): ಚುಕುಟು ಕ್ರಿಕೆಟ್ ಇಂಡಿಯನ್ ಪ್ರಿಮೀಯರ್ ಲೀಗ್ (IPL 2024)ನ ಟಿ-20 17ನೇ ಆವೃತ್ತಿಯ ಟೂರ್ನಿ ಕೊನೆಯ ಹಂತಕ್ಕೆ ಬಂದಿದ್ದು, ಇವತ್ತು (ಮೇ 26, ಭಾನುವಾರ) ಚೆನ್ನೈನ (Chennai) ಎಂಎ ಚಿದಂಬರಂ ಸ್ಟೇಡಿಯಲ್ಲಿ (MA Chidambaram Stadium) ಕೆಕೆಆರ್ ಮತ್ತು ಎಸ್‌ಆರ್‌ಹೆಚ್‌ (KKR vs SRH IPL Final 2024)) ನಡುವೆ ಪ್ರಶಸ್ತಿಗಾಗಿ ಫೈನಲ್ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಫೈನಲ್ ಪಂದ್ಯಕ್ಕೂ ಮುನ್ನ ಐಪಿಎಲ್ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಲರ್‌ಫುಲ್ ಕಾರ್ಯಕ್ರಮ ಎಷ್ಟು ಗಂಟೆಗೆ ಆರಂಭವಾಗುತ್ತದೆ, ಸಂಗೀತ, ನೃತ್ಯ ಸೇರಿದಂತೆ ಏನೆಲ್ಲಾ ಇರುತ್ತೆ ಅನ್ನೋದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 2016ರ ಬಳಿಕ ತನ್ನ ಐಪಿಎಲ್ ಟ್ರೋಫಿಯ ಬರವನ್ನು ನೀಗಿಸಿಕೊಳ್ಳುವ ಅವಕಾಶವನ್ನು ಪಡೆದಿದೆ. ಅದೇ ರೀತಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ತಂಡ 2014ರ ಬಳಿಕ 10 ವರ್ಷಗಳಿಂದ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಹೀಗಾಗಿ ಇತ್ತಂಡಗಳು ಶತಾಯಗತಾಯ ಪ್ರಶಸ್ತಿಯನ್ನು ಗೆಲ್ಲಲೇಬೇಕೆಂಬ ಛಲದೊಂದಿಗೆ ಇವತ್ತಿನ (ಮೇ 26, ಭಾನುವಾರ) ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆಯಲಿರುವ ಸಮಾರೋಪ ಸಮಾರಂಭದ ಮಾಹಿತಿಯನ್ನು ನೋಡವುದಾದರೆ ಕಾರ್ಯಕ್ರಮವನ್ನು ಕಲರ್‌ಫುಲ್ ಆಗಿ ಆಯೋಜಿಸಲಾಗಿದೆ.

ವಿಶ್ವ ಪ್ರಸಿದ್ದ ಅಮೆರಿಕನ್ ರಾಕ್ ಬ್ಯಾಂಡ್ ಇಮ್ಯಾಜಿನ್ ಡ್ರಾಗನ್ಸ್ ಐಪಿಎಲ್ ಸಮಾರೋಪ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಲಿದೆ. ಈ ಮಾಹಿತಿಯನ್ನು ಖುದ್ದು ರಾಕ್ ಬ್ಯಾಂಡ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡು ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ವಿಶೇಷವಾಗಿ ಬ್ಯಾಂಡ್‌ನ ಪ್ರಮುಖ ಗಾಯಕ ಡಾನ್ ರೆನಾಲ್ಡ್ಸ್ ಅವರು ಐಪಿಎಲ್ ಸಮಾರೋಪದಲ್ಲಿ ಭಾಗವಹಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಮಾಹಿತಿಯನ್ನು ಸ್ಟಾರ್ ಸ್ಪೋರ್ಟ್ಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಐಪಿಎಲ್ ಸಮಾರೋಪ ಸಮಾರಂಭ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು (ಮೇ 26, ಭಾನುವಾರ) 6 ಗಂಟೆಗೆ ಆರಂಭವಾಗಲಿದೆ. ನೃತ್ಯ ಸೇರಿದಂತೆ ಇನ್ನೂ ಇನ್ನೆಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ಇವೆ ಎಂಬುದನ್ನು ಸಂಜೆ ಗೊತ್ತಾಗಲಿದೆ.

ಕೆಕೆಆರ್ ಮತ್ತು ಎಸ್‌ಆರ್‌ಎಚ್‌ ನಡುವಿನ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆದ್ದು ಟ್ರೋಪಿಯನ್ನು ಎತ್ತಿಹಿಡಿಯಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಹೀಗಾಗಿ ಅಂತಿಮ ಕದನವನ್ನು ವೀಕ್ಷಿಸಲು ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು, ಟಾಸ್ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.

ಕೋಲ್ಕತ್ತ ನೈಟ್ ರೈಡರ್ಸ್ ಆಡುವ ಸಂಭಾವ್ಯ 11ರ ಬಳಗ

ಕೆಕೆಆರ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಸನ್‌ರೈಸರ್ಸ್ ಹೈದರಾಬಾದ್ ಆಡುವ ಸಂಭಾವ್ಯ 11ರ ಬಳಗ

ಎಸ್‌ಆರ್‌ಎಚ್‌: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹಮದ್, ಸನ್ವೀರ್ ಸಿಂಗ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner