ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024: ಡೆಲ್ಲಿ ಕ್ಯಾಪಿಟಲ್ಸ್ Vs ಗುಜರಾತ್ ಟೈಟಾನ್ಸ್; ಆಡುವ ಬಳಗ, ದೆಹಲಿ ಪಿಚ್‌ ಹಾಗೂ ಹವಾಮಾನ ವರದಿ

IPL 2024: ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್; ಆಡುವ ಬಳಗ, ದೆಹಲಿ ಪಿಚ್‌ ಹಾಗೂ ಹವಾಮಾನ ವರದಿ

DC vs GT: ಏಪ್ರಿಲ್ 24ರ ಬುಧವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಶುಭ್ಮನ್ ಗಿಲ್ ಬಳಗದ ವಿರುದ್ಧ ರಿಷಭ್ ಪಂತ್ ಪಡೆ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ಆಡುವ ಬಳಗ, ದೆಹಲಿ ಪಿಚ್‌ ಹಾಗೂ ಹವಾಮಾನ ವರದಿ
ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ ಸಂಭಾವ್ಯ ಆಡುವ ಬಳಗ, ದೆಹಲಿ ಪಿಚ್‌ ಹಾಗೂ ಹವಾಮಾನ ವರದಿ

ಗುಜರಾತ್‌ ಟೈಟಾನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಎರಡನೇ ಸುಲಭ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ. ಐಪಿಎಲ್‌ 2024ರಲ್ಲಿ ಈಗಾಗಲೇ ಒಂದು ಬಾರಿ ಮುಖಾಮುಖಿಯಾಗಿರುವ ತಂಡಗಳು, ಎರಡನೇ ಪೈಪೋಟಿಗೆ ಸಜ್ಜಾಗಿವೆ. ಅಹಮದಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶುಭ್ಮನ್‌ ಗಿಲ್‌ ಬಳಗವನ್ನು 89 ರನ್‌ಗಳಿಗೆ ಆಲೌಟ್ ಮಾಡಿದ್ದ ಡಿಸಿ, ಕೇವಲ 8.5 ಓವರ್‌ಗಳಲ್ಲಿ ಚೇಸಿಂಗ್‌ ಪೂರ್ಣಗೊಳಿಸಿತ್ತು. ವೇಗಿಗಳಾದ ಮುಖೇಶ್ ಕುಮಾರ್, ಇಶಾಂತ್ ಕುಮಾರ್ ಮತ್ತು ಖಲೀಲ್ ಅಹ್ಮದ್ ಮಾರಕ ಎಸೆತಗಳಿಂದ ತಂಡದ ಗೆಲುವಿಗೆ ಕಾರಣರಾದರು. ಇದೀಗ ಡೆಲ್ಲಿಯ ಖರಾರುವಕ್‌ ಬೌಲಿಂಗ್‌ ವಿರುದ್ಧ ಟೈಟಾನ್ಸ್‌ ತೊಡೆ ತಟ್ಟಿ ಆಡಬೇಕಾದ ಅವಶ್ಯಕತೆ ಇದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ 2024ರ ಆವೃತ್ತಿಯ 40ನೇ ಪಂದ್ಯವು ದೆಹಲಿಯ ಅರುಣ್‌ ಜೇಟ್ಲಿ ಕೀಡಾಂಗಣದಲ್ಲಿ ನಡೆಯುತ್ತಿದೆ. ಡೆಲ್ಲಿ ತಂಡವು ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಅತ್ತ ಗುಜರಾತ್‌ 4 ಪಂದ್ಯಗಳಲ್ಲಿ ಗೆಲುವಿನೊಂದಿಗೆ 6ನೇ ಸ್ಥಾನದಲ್ಲಿ ಕೂತಿದೆ.

ಡೆಲ್ಲಿ ಪಿಚ್‌ ವರದಿ

ಪ್ರಸಕ್ತ ಆವೃತ್ತಿಯಲ್ಲಿ ದೆಹಲಿಯ ಅರುಣ ಜೇಟ್ಲಿ ಮೈದಾನದಲ್ಲಿ ಒಂದು ಪಂದ್ಯ ಮಾತ್ರ ನಡೆದಿದೆ. ಕಳೆದ ವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ದಾಖಲೆಯ 266 ರನ್ ಕಲೆ ಹಾಕಿತು. ಹೀಗಾಗಿ ಈ ಪಂದ್ಯದಲ್ಲೂ ರನ್‌ ಮಳೆ ಹರಿಯುವ ಸಾಧ್ಯತೆ ಇದೆ.

ದೆಹಲಿ ಹವಾಮಾನ ವರದಿ

ಗುಡುಗು ಸಹಿತ ಮಳೆಯಿಂದಾಗಿ ಪಂದ್ಯದ ಹಿಂದಿನ ದಿನವಾದ ಮಂಗಳವಾರ ಉಭಯ ತಂಡಗಳ ತರಬೇತಿ ರದ್ದಾಯ್ತು. ಪಂದ್ಯದ ದಿನ ನವದೆಹಲಿಯಲ್ಲಿ ತಾಪಮಾನವು ಸುಮಾರು 30 ಡಿಗ್ರಿಗಳಷ್ಟಿರುವ ನಿರೀಕ್ಷೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಮಳೆಯಾಗುವ ಸಾಧ್ಯತೆ ಇಲ್ಲ.

ಇದನ್ನೂ ಓದಿ | ಐಪಿಎಲ್‌ನಲ್ಲಿ ಎರಡನೇ ಶತಕ ಬಾರಿಸಿದ ಋತುರಾಜ್ ಗಾಯಕ್ವಾಡ್; ಸಿಎಸ್‌ಕೆ ಪರ ಈ ಸಾಧನೆ ಮಾಡಿದ ಮೊದಲ ನಾಯಕ

ಗಾಯದಿಂದಾಗಿ ಆಸೀಸ್‌ ಆಟಗಾರ ಮಿಚೆಲ್ ಮಾರ್ಷ್ ಡೆಲ್ಲಿ ತಂಡದ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅತ್ತ ಬೆನ್ನಿನ ಸೆಳೆತದಿಂದಾಗಿ ವೇಗಿ ಇಶಾಂತ್ ಆರ್ಮಾ ಕೂಡಾ ಆಡುವುದು ಅನುಮಾನ. ತಂಡದಲ್ಲಿ ಬೌಲರ್‌ಗಳಾಗಿ ಖಲೀಲ್ ಅಹ್ಮದ್ ಅಥವಾ ಮುಖೇಶ್ ಕುಮಾರ್ ಅವರಲ್ಲಿ ಒಬ್ಬರು ಇಂಪ್ಯಾಕ್ಟ್‌ ಆಟಗಾರರಾಗಿ ಆಡುವ ಸಾಧ್ಯತೆ ಇದೆ. ತಂಡವು ಚೇಸಿಂಗ್‌ ಮಾಡಿದರೆ, ಪೃಥ್ವಿ ಶಾ ಹೊರಗುಳಿಯುವ ಸಾಧ್ಯತೆಯಿದೆ. ಮೊದಲು ಬ್ಯಾಟಿಂಗ್ ಮಾಡಿ ಹೆಚ್ಚುವರಿ ಬ್ಯಾಟರ್ ಅಗತ್ಯ ಬಿದ್ದರೆ, ಕುಮಾರ್ ಕುಶಾಗ್ರಾ ಇಂಪ್ಯಾಕ್ಟ್‌ ಆಟಗಾರನಾಗಬಹುದು.

ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಗುಜರಾತ್ ಟೈಟಾನ್ಸ್, ಸಾಯಿ ಸುದರ್ಶನ್ ಮತ್ತು ಮೋಹಿತ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬದಲಾಯಿಸುವ ನಿರೀಕ್ಷೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಡೇವಿಡ್ ವಾರ್ನರ್, ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್ (ಇಂಪ್ಯಾಕ್ಟ್‌ ಆಟಗಾರ).

ಗುಜರಾತ್‌ ಟೈಟಾನ್ಸ್‌ ಸಂಭಾವ್ಯ ತಂಡ

ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ, ಬಿ ಸಾಯಿ ಸುದರ್ಶನ್, ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಉಮೇಶ್ ಯಾದವ್, ಉಮೇಶ್ ಯಾದವ್, ನೂರ್‌ ಅಹ್ಮದ್, ಮೋಹಿತ್ ಶರ್ಮಾ (ಇಂಪ್ಯಾಕ್ಟ್‌ ಆಟಗಾರ).

IPL_Entry_Point