ಕನ್ನಡ ಸುದ್ದಿ  /  ಕ್ರಿಕೆಟ್  /  Rcb Vs Csk: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

RCB vs CSK: ಬೆಂಗಳೂರಿನಲ್ಲಿ ಪಂದ್ಯ ಆರಂಭಕ್ಕೂ ಮುನ್ನ ನಗರದಲ್ಲಿ ಮಳೆ ಹಾಗೂ ವಾತಾವರಣ ಹೇಗಿದೆ ಎಂಬ ದೃಶ್ಯಗಳು ವೈರಲ್‌ ಆಗುತ್ತಿವೆ. ಪಂದ್ಯದ ಆರಂಭಕ್ಕೂ ಮುನ್ನ, ನಗರದಲ್ಲಿ ಮಳೆ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ
ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ

ವಾರಗಳ ಹಿಂದಷ್ಟೇ ನೀರಿಲ್ಲದೆ ಪರದಾಡುತ್ತಿದ್ದ ಬೆಂಗಳೂರು ಜನತೆ, ಬಾ ಬಾ ಎಂದು ಮಳೆರಾಯನನ್ನು ಕೈಬೀಸಿ ಕರೆಯುತ್ತಿದ್ದರು. ಇದೀಗ ಒಮ್ಮೆ ಹೋಗು ವರುಣ ಎಂದು ಪ್ರಾರ್ಥಿಸುತ್ತಿದ್ದಾರೆ. ಇದಕ್ಕೆ ಕಾರಣ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್‌ ಪಂದ್ಯ. ಇಂದು ಬೆಳಗ್ಗಿನಿಂತ ಉದ್ಯಾನ ನಗರಿಯ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ನಡುವೆ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್‌ ಪಂದ್ಯಾವಳಿಯ ಮಹತ್ವದ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಮಳೆಯ ಆತಂಕ ಕಾಡುತ್ತಿದೆ. ಹೀಗಾಗಿ ಪಂದ್ಯ ರದ್ದಾಗುವ ಭೀತಿ ಇದೆ. ಹೀಗಾಗಿ ವರುಣದೇವನಲ್ಲಿ ಅಭಿಮಾನಿಗಳು ಬಿನ್ನಹ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಜನರು ನಗರದ ಹವಾಮಾನ ಕುರಿತು ಪೋಸ್ಟ್‌ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಆರ್‌ಸಿಬಿ ತಂಡವು ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಪಂದ್ಯ ನಡೆಯಲು ಸಾಧ್ಯವಾಗಬೇಕಾದರೆ ನಗರದಲ್ಲಿ ಮಳೆ ನಿಲ್ಲಬೇಕಿದೆ. ಮಳೆ ನಿಂತರೆ ಮಾತ್ರ ಕನಿಷ್ಠ 5 ಓವರ್‌ಗಳ ಪಂದ್ಯವನ್ನಾದರೂ ನಡೆಸಬಹುದಾಗಿದೆ. ಕ್ರಿಕೆಟ್ ಪ್ರಿಯರು ಮಳೆರಾಯನ ಮೊರೆ ಹೋಗುತ್ತಿದ್ದು, ಇವತ್ತು ಒಂದು ದಿನ ಬರಬೇಡ ಎಂದು ಮನವಿ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ನಗರದಲ್ಲಿ ಮಳೆಯ ಕುರಿತು ಪೋಸ್ಟ್‌ ಮಾಡುತ್ತಿದ್ದಾರೆ.

ಬೆಂಗಳೂರಿನ ಜನರು ನಗರದ ವಿವಿಧ ಭಾಗಗಳಿಂದ ಆಗಸ ಹಾಗೂ ಮೋಡದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಮೋಡಕವಿದ ವಾತಾವರಣವಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಈಗ ಹೇಗಿದೆ ಎಂಬ ದೃಶ್ಯಗಳನ್ನು ಕೂಡಾ ನೆಟ್ಟಿಗರು ಹಂಚಿಕೊಂಡಿದ್ದಾರೆ. ಪಂದ್ಯಕ್ಕೆ ಗಂಟೆಗಳಿಗೂ ಮುನ್ನವೇ ಅಭಿಮಾನಿಗಳು ಮೈದಾನದತ್ತ ಬರುತ್ತಿದ್ದಾರೆ. ಮಳೆ ಬರುವ ಸಾಧ್ಯತೆ ಇದ್ದರೆ ಅದಕ್ಕೂ ಮುಂಚಿತವಾಗಿ ಸ್ಟೇಡಿಯಂ ಸೇರಿಕೊಳ್ಳುವ ಯೋಚನೆಯಲ್ಲಿದ್ದಾರೆ.

ಸ್ಟೇಡಿಯಂ ಬಳಿ ಸಿಎಸ್‌ಕೆ ಅಭಿಮಾನಿಗಳು ಕೂಡಾ ನೆರೆದಿದ್ದಾರೆ. ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿದ್ದರೂ, ದೊಡ್ಡ ಸಂಖ್ಯೆಯಲ್ಲಿ ಧೋನಿ ಅಭಿಮಾನಿಗಳು ಮೈದಾನದಲ್ಲಿ ಸೇರುವ ಸಾಧ್ಯತೆ ಇದೆ.‌

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಟಾಸ್‌ ಪ್ರಕ್ರಿಯೆ ಸೇರಿದಂತೆ ಪಂದ್ಯ ಆರಂಭ ವಿಳಂಬವಾಗುತ್ತದೆ. ಪಂದ್ಯವು 7.30ಕ್ಕೆ ಆರಂಭವಾಗಬೇಕು. ಮಳೆಯಿಂದಾಗಿ ಇದು ಸಾಧ್ಯವಾಗದಿದ್ದರೆ ಟಾಸ್ ಮುಂದೂಡಲಾಗುತ್ತದೆ. ಮಳೆ ನಿಂತ ಬಳಿಕ, ಸಮಯದ ಆಧಾರದಲ್ಲಿ ಓವರ್‌ ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ.‌ ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲೇಬೇಕು. ಅದು ಸಾಧ್ಯವಾಗದಿದ್ದರೆ, ಅಧಿಕೃತವಾಗಿ ಪಂದ್ಯವನ್ನು ರದ್ದು ಮಾಡಲಾಗುತ್ತದೆ.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ: ಬೆಂಗಳೂರಲ್ಲಿ ಭಾರಿ ಮಳೆ; ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024