ಕೆಕೆಆರ್ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯ; ಆರಂಭದಲ್ಲಿ ಬಿಸಿಲು, ಸಂಜೆ ಮಳೆ; ಈಡನ್ ಗಾರ್ಡನ್ಸ್ ಪಿಚ್ ವರದಿ ಹೀಗಿದೆ
KKR vs LSG: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊಟ್ಟ ಮೊದಲ ಗೆಲುವಿನ ರುಚಿ ನೋಡಲು ಕೋಲ್ಕತಾ ನೈಟ್ ರೈಡರ್ಸ್ ತಂಡವು ತಂಡತ್ರ ರೂಪಿಸಿದೆ. ಕೆಎಲ್ ರಾಹುಲ್ ಬಳಗದ ವಿರುದ್ಧ ಆಡಿರುವ 3 ಐಪಿಎಲ್ ಪಂದ್ಯಗಳಲ್ಲಿ ಕೆಕೆಆರ್ ಒಂದನ್ನೂ ಗೆದ್ದಿಲ್ಲ. ಇದೀಗ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ತಂಡ ಅದೃಷ್ಟ ಪರೀಕ್ಷೆಗಳಿದಿದೆ.
ಐಪಿಎಲ್ 2024ರಲ್ಲಿ ಏಪ್ರಿಲ್ 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ (KKR vs LSG) ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ಭಾನುವಾರ ಆಗಿರುವುದರಿಂದ ಒಂದೇ ದಿನ ಎರಡು ಪಂದ್ಯಗಳು ನಡೆಯುತ್ತಿವೆ. ದಿನದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಈವರೆಗೆ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಕೆಕೆಆರ್ ತಂಡವು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇದೇ ವೇಳೆ, ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ ತಂಡವು ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಸೋತು 4ನೇ ಸ್ಥಾನದಲ್ಲಿದೆ.
ಉಭಯ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 3 ಬಾರಿ ಮಾತ್ರ ಮುಖಾಮುಖಿಯಾಗಿವೆ. ಈ ಎಲ್ಲಾ ಮೂರು ಪಂದ್ಯಗಳಲ್ಲೂ ಲಕ್ನೋ ಗೆದ್ದು ಬೀಗಿದೆ. ಹೀಗಾಗಿ ರಾಹುಲ್ ಪಡೆಯ ವಿರುದ್ಧ ಮೊಟ್ಟ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಕೆಕೆಆರ್ ತಂಡವಿದೆ.
ಈಡನ್ ಗಾರ್ಡನ್ಸ್ ಪಿಚ್ ವರದಿ
ಈಡನ್ ಗಾರ್ಡನ್ಸ್ ಮೈದಾನವು ಬ್ಯಾಟಿಂಗ್ ಪಿಚ್ ಹೊಂದಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 164 ರನ್. ಕ್ರಿಕೆಟ್ ಕಾಶಿಯಲ್ಲಿ ವೇಗಿಗಳು ಇದುವರೆಗೆ 512 ವಿಕೆಟ್ ಪಡೆದಿದ್ದರೆ, ಸ್ಪಿನ್ನರ್‌ಗಳು 388 ವಿಕೆಟ್ ಕಬಳಿಸಿದ್ದಾರೆ. ಕೋಲ್ಕತಾ ತಂಡವು ಇದುವರೆಗೆ ಈ ಕ್ರೀಡಾಂಗಣದಲ್ಲಿ 82 ಪಂದ್ಯಗಳನ್ನು ಆಡಿದೆ. ಅದರಲ್ಲಿ 48 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ.
ಇದನ್ನೂ ಓದಿ | ಸೀತಾ ಮತ್ತು ಗೀತಾ; ಶುಭ್ಮನ್-ಇಶಾನ್ ಕಿಶನ್ ಬ್ರೋಮಾನ್ಸ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆಗೆ ಎದ್ದು ಬಿದ್ದು ನಕ್ಕ ಪ್ರೇಕ್ಷಕರು
ಕೋಲ್ಕತಾ ಹವಾಮಾನ ವರದಿ
ನಗರದಲ್ಲಿ ಮಧ್ಯಾಹ್ನ ಪಂದ್ಯ ಆರಂಭ ಮತ್ತು ಟಾಸ್ ಪ್ರಕ್ರಿಯೆ ಸಮಯದಲ್ಲಿ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ. ಸಹಜವಾಗಿ ಬಿಸಿಲಿನಿಂದಾಗಿ ಮೊದಲ ಇನ್ನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುವುದು ಕಷ್ಟ. ಸಂಜೆ ವೇಳೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಆದರೂ, ಐತಿಹಾಸಿಕ ಮೈದಾನದಲ್ಲಿ ತಂಡಗಳು ಚೇಸಿಂಗ್‌ಗೆ ಆದ್ಯತೆ ನೀಡಲಿವೆ.
ಲಕ್ನೋ ಸಂಭಾವ್ಯ ತಂಡ: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ ಹಾಗೂ ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ರವಿ ಬಿಷ್ಣೋಯ್, ನವೀನ್ ಖಾನ್, ಅರ್ಷದ್ ಖಾನ್ -ಉಲ್-ಹಕ್, ಯಶ್ ಠಾಕೂರ್.
ಕೆಕೆಆರ್ ಸಂಭಾವ್ಯ ತಂಡ: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಮಿಚೆಲ್ ವೈಬ್, ಅರೋರಾ/ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.