ಕನ್ನಡ ಸುದ್ದಿ  /  Cricket  /  Ipl 2024 Kolkata Knight Riders Vs Sunrisers Hyderabad Predicted Playing Eleven Kkr Vs Srh Team News Pat Cummins Jra

KKR vs SRH: ಹೊಸ ನಾಯಕರಿಗೆ ಹೊಸ ಸವಾಲು; ಕೋಲ್ಕತ್ತಾ-ಹೈದರಾಬಾದ್ ಮೊದಲ ಮುಖಾಮುಖಿಗೆ ಸಂಭಾವ್ಯ ತಂಡ ಹೀಗಿದೆ

ದುಬಾರಿ ಬೆಲೆ ಕೊಟ್ಟು ಪ್ಯಾಟ್ ಕಮಿನ್ಸ್ ಅವರನ್ನು ನಾಯಕನಾಗಿ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್, ಹೊಸತನದೊಂದಿಗೆ ಕಣಕ್ಕಿಳಿಯುತ್ತಿದೆ. ಅತ್ತ ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಮಿಚೆಲ್‌ ಸ್ಟಾರ್ಕ್‌ ಇರುವ ಕೆಕೆಆರ್‌ ಮತ್ತು ಎಸ್‌ಆರ್‌ಎಚ್‌ ತಂಡಗಳು, ಪ್ರಸಕ್ತ ಆವೃತ್ತಿಯ ಮೊದಲ ಮುಖಾಮುಖಿಗೆ ಸಜ್ಜಾಗಿವೆ.

ಕೋಲ್ಕತ್ತಾ-ಹೈದರಾಬಾದ್ ಮೊದಲ ಮುಖಾಮುಖಿಗೆ ಸಂಭಾವ್ಯ ತಂಡ ಹೀಗಿದೆ
ಕೋಲ್ಕತ್ತಾ-ಹೈದರಾಬಾದ್ ಮೊದಲ ಮುಖಾಮುಖಿಗೆ ಸಂಭಾವ್ಯ ತಂಡ ಹೀಗಿದೆ

ಐಪಿಎಲ್‌ 2024ರ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಮಿಲಿಯನ್‌ ಡಾಲರ್‌ ಟೂರ್ನಿಯ ಎರಡನೇ ದಿನದಾಟದಲ್ಲಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಖಚಿತ. ವಾರಾಂತ್ಯದಲ್ಲಿ ಒಂದೇ ದಿನ ಎರಡು ಪಂದ್ಯಗಳು ನಡೆಯುತ್ತಿವೆ. ಬ್ಲಾಕ್‌ಬಸ್ಟರ್ ದಿನದ ಎರಡನೇ ಪಂದ್ಯದಲ್ಲಿ 2016ರ ಐಪಿಎಲ್ ಚಾಂಪಿಯನ್‌ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಎರಡು ಬಾರಿಯ ಐಪಿಎಲ್ ವಿನ್ನರ್‌ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders vs Sunrisers Hyderabad) ವಿರುದ್ಧ ಸೆಣಸುತ್ತಿದೆ. ಉಭಯ ತಂಡಗಳು ಈ ಬಾರಿ ನೂತನ ನಾಯಕನೊಂದಿಗೆ ಕಣಕ್ಕಿಳಿಯುತ್ತಿದ್ದು, ರೋಚಕ ಹಣಾಹಣಿಕಗೆ ಕೆಕೆಆರ್‌ ತವರು ಮೈದಾನ ಈಡನ್ ಗಾರ್ಡನ್ಸ್‌ ಆತಿಥ್ಯ ವಹಿಸುತ್ತಿದೆ.

ಈ ಪಂದ್ಯವು, ಐಪಿಎಲ್‌ನ ಇಬ್ಬರು ದುಬಾರಿ ಆಟಗಾರರ ಮುಖಾಮುಖಿಯೂ ಹೌದು. ವಿಶ್ವವಿಜೇತ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಮುಖಾಮುಖಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ, ಮಿಚೆಲ್ ಸ್ಟಾರ್ಕ್ ಐಪಿಎಲ್‌ ಆಡುತ್ತಿದ್ದಾರೆ. ಅತ್ತ, ಈ ಹಿಂದೆ ಲಕ್ನೋ ತಂಡದೊಂದಿಗೆ ಇದ್ದ ಗೌತಮ್ ಗಂಭೀರ್‌, ಈ ಬಾರಿ ತಮ್ಮ ಪರಂಪರೆ ಬೆಳೆದ ಕೆಕೆಆರ್‌ ಬಳಗ ಸೇರಿಕೊಂಡಿದ್ದಾರೆ. ಇದೇ ವೇಳೆ, ಶ್ರೇಯಸ್‌‌ ಅಯ್ಯರ್‌ ಮತ್ತೆ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ನಾಯಕನಾಗಿ ನೇಮಿಸಿದ ಸನ್‌ರೈಸರ್ಸ್ ಹೈದರಾಬಾದ್, ಹೊಸತನದೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಬಾರಿ ನಾಯಕತ್ವ ವಹಿಸಿದ್ದ ಐಡೆನ್ ಮರ್ಕ್ರಾಮ್‌ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಏಕದಿನ ವಿಶ್ವಕಪ್‌ ಗೆದ್ದ ಕಮಿನ್ಸ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಸ್‌ಆರ್‌ಎಚ್‌ ಮಾಲಕಿ ಕಾವ್ಯಾ ಮಾರನ್ ಬರೋಬ್ಬರಿ 20.25 ಕೋಟಿ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ | ಇತಿಹಾಸ ನಿರ್ಮಿಸಿದ ಭಾರತದ ಜಿ ಸತ್ಯನ್; ವಿಶ್ವ ಟೇಬಲ್ ಟೆನಿಸ್ ಫೀಡರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯನೆಂಬ ದಾಖಲೆ

ವಿದೇಶಿ ಆಟಗಾರರು ಯಾರು?

ಸದ್ಯ ಕೆಕೆಆರ್‌ ತಂಡದಲ್ಲಿ ಯಾವುದೇ ಗಾಯಾಳುಗಳ ಸಮಸ್ಯೆ ಇಲ್ಲ. ಹೀಗಾಗಿ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಜೊತೆಗೆ ಫಿಲ್ ಸಾಲ್ಟ್ ವಿದೇಶಿ ಆಟಗಾರರ ಸ್ಥಾನ ತುಂಬುವ ಸಾಧ್ಯತೆ ಹೆಚ್ಚಿದೆ. ಅತ್ತ ಸನ್‌ರೈಸರ್ಸ್ ಪರ ವನಿಂದು ಹಸರಂಗ ಆರಂಭಿಕ ಪಂದ್ಯಗಳಲ್ಲಿ ಆಡುತ್ತಿಲ್ಲ. ಪ್ಯಾಟ್ ಕಮ್ಮಿನ್ಸ್ ಜೊತೆಗೆ ಹೆನ್ರಿಚ್ ಕ್ಲಾಸೆನ್ ಆಡುವುದು ಬಹುತೇಕ ಖಚಿತ. ಐಡೆನ್ ಮರ್ಕ್ರಾಮ್‌, ಟ್ರಾವಿಸ್ ಹೆಡ್ ಮತ್ತು ಮಾರ್ಕೊ ಜಾನ್ಸೆನ್ ಈ ಮೂವರಲ್ಲಿ ಯಾರಿಬ್ಬರು ಆಡಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಕೆಕೆಆರ್‌ ಸಂಭಾವ್ಯ ಆಡುವ ಬಳಗ

ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.

ಎಸ್‌ಆರ್‌ಎಚ್‌ ಆಡುವ ಬಳಗ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಅಬ್ದುಲ್ ಸಮದ್, ವಾಷಿಂಗ್ಟನ್‌ ಸುಂದರ್, ಶಹಬಾಜ್‌ ಅಹ್ಮದ್‌, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಫಿಲ್ ಸಾಲ್ಟ್, ಸುನಿಲ್ ನರೈನ್, ಸುಯಾಶ್ ಶರ್ಮಾ, ಅನುಕುಲ್ ರಾಯ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕೆಎಸ್ ಭರತ್, ಚೇತನ್ ಸಕರಿಯಾ, ಮಿಚೆಲ್ ಸ್ಟಾರ್ಕ್, ಅಂಗ್‌ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಶೆರ್ಫಾನೆ ರುದರ್‌ಫೋರ್ಡ್, ಮನೀಶ್ ಪಾಂಡೆ, ಮುಜೀಬ್ ಉರ್ ರೆಹಮಾನ್, ದುಷ್ಮಂತ ಚಮೀರಾ, ಸಾಕಿಬ್ ಹುಸೇನ್

ಸನ್‌ರೈಸರ್ಸ್ ಹೈದರಾಬಾದ್

ಪ್ಯಾಟ್ ಕಮ್ಮಿನ್ಸ್ (ನಾಯಕ), ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ ನಟರಾಜನ್, ಅನ್ಮೋಲ್‌ಪ್ರೀತ್ ಸಿಂಗ್, ಮಯಾಂಕ್ ಮಾರ್ಕಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಹ್ಮಣ್ಯನ್.

IPL_Entry_Point