ಕನ್ನಡ ಸುದ್ದಿ  /  Cricket  /  Ipl 2024 Lucknow Super Giants Predicted Playing Eleven Against Royal Challengers Bengaluru Pitch And Weather Report Jra

RCB vs LSG: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಲಕ್ನೋ ಸಂಭಾವ್ಯ ತಂಡ; ಬೆಂಗಳೂರು ಪಿಚ್, ಹವಾಮಾನ ವರದಿ ಹೀಗಿದೆ

RCB vs LSG: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್‌ 2ರ ಮಂಗಳವಾರ ನಡೆಯುವ ಐಪಿಎಲ್ 2024ರ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಲ್ಎಸ್‌ಜಿ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಸಂಭಾವ್ಯ ಆಡುವ ಬಳಗ, ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಲಕ್ನೋ ಸಂಭಾವ್ಯ ತಂಡ
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಲಕ್ನೋ ಸಂಭಾವ್ಯ ತಂಡ (AFP)

ಇಂಡಿಯನ್ ಪ್ರೀಮಿಯರ್ ಲೀಗ್ 2024ರ 15ನೇ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ತಂಡಗಳು ಎದುರಾಗುತ್ತಿವೆ. ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಸೋತ ಆರ್‌ಸಿಬಿ, ಮತ್ತೆ ಅದೇ ಚಿನ್ನಸ್ವಾಮಿ ಮೈದಾನದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಸಾರಥ್ಯದ ಎಲ್‌ಎಸ್‌ಜಿ ತಂಡವನ್ನು ಎದುರಿಸುತ್ತಿದೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಆಡಿರುವ ಲಕ್ನೋ, ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗೆದ್ದು ಎರಡು ಅಂಕ ಸಂಪಾದಿಸಿದೆ. ಅತ್ತ ಬೆಂಗಳೂರು ತಂಡವು ಆಡಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 20 ರನ್‌ಗಳ ಸೋಲಿನೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಿದ ಎಲ್ಎಸ್‌ಜಿ, ಆ ಬಳಿಕ ಲಕ್ನೋದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ 21 ರನ್‌ಗಳ ಜಯದೊಂದಿಗೆ ಪುಟಿದೆದ್ದಿತು. ಗಾಯದಿಂದಾಗಿ ಕಳೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಇಂಪ್ಯಾಕ್ಸ್‌ ಆಟಗಾರನಾಗಿ ಬ್ಯಾಟಿಂಗ್‌ ಮಾತ್ರ ಮಾಡಿದ್ದರು. ಹೀಗಾಗಿ ಆರ್‌ಸಿಬಿ ವಿರುದ್ಧವೂ ಅವರು ಕೀಪಿಂಗ್‌ ಮಾಡುವ ಸಾಧ್ಯತೆ ಇಲ್ಲ. ಹೀಗಾಗಿ ಫೀಲ್ಡಿಂಗ್‌ ವೇಳೆ ಅವರ ಬದಲಿಗೆ ನವೀನ್-ಉಲ್-ಹಕ್ ಬೌಲಿಂಗ್‌ ಮಾಡಿದರು. ಆರ್‌ಸಿಬಿ ವಿರುದ್ಧ ಆಡುವ ಬಳಗದಲ್ಲಿದ್ದು ಬ್ಯಾಟಿಂಗ್‌ ಮಾಡುವ ಸಾಧ್ಯತೆ ಇದೆ.

ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಬೆಂಗಳೂರು ವಿರುದ್ಧವೂ ಆಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ಇದೇ ವೇಳೆ ಕನ್ನಡಿಗ ದೇವದತ್ ಪಡಿಕ್ಕಲ್, ಸ್ಟೊಯ್ನಿಸ್ ಹಾಗೂ ಆಯುಷ್ ಬದೋನಿ ಉತ್ತಮ ಪ್ರದರ್ಶನ ನೀಡಿಲ್ಲ.

ಆರ್‌ಸಿಬಿ ಎಲ್ಎಸ್‌ಜಿ ಮುಖಾಮುಖಿ ದಾಖಲೆ

ಉಭಯ ತಂಡಗಳು ಐಪಿಎಲ್‌ನಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ ತಂಡವು 3-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಕ್ನೋ ಕೊನೆಯ ಹಂತದಲ್ಲಿ ರೋಚಕವಾಗಿ ಗೆದ್ದಿತ್ತು.

ಚಿನ್ನಸ್ವಾಮಿ‌ ಮೈದಾನದ ಪಿಚ್ ವರದಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್, ಸ್ಫೋಟಕ ಆಟಕ್ಕೆ ಅವಕಾಶ ನೀಡುತ್ತದೆ. ಬೌಲರ್‌ಗಳಿಗೆ ಈ ಪಿಚ್ ಹೆಚ್ಚು ನೆರವಾಗುವುದಿಲ್ಲ. ಕಳೆದ 20 ಪಂದ್ಯಗಳಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 165 ರನ್. ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು 37 ಶೇಕಡದಷ್ಟು ಗೆಲುವು ಸಾಧಿಸಿದೆ. ಹೀಗಾಗಿ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಹೆಚ್ಚು ಆದ್ಯತೆ ನೀಡುತ್ತದೆ. ಈ ಬಾರಿಯ ಎರಡೂ ಪಂದ್ಯಗಳಲ್ಲಿ ಇದೇ ಸಂಪ್ರದಾಯ ನಡೆದಿತ್ತು.

ಇದನ್ನೂ ಓದಿ | ಅವರಿಗೆ 42 ವರ್ಷವೇ? ವಿಂಟೇಜ್ ಧೋನಿ ಆಟಕ್ಕೆ ಶ್ಲಾಘನೆ; ಇನ್ನೂ 2 ವರ್ಷ ಐಪಿಎಲ್‌ ಆಡ್ತಾರೆ ಎಂದ ಕ್ರಿಸ್ ಶ್ರೀಕಾಂತ್

ಬೆಂಗಳೂರು ಹವಾಮಾನ ವರದಿ

ಉದ್ಯಾನ ನಗರಿಯಲ್ಲಿ ಪಂದ್ಯದ ದಿನ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಳೆಯಾಗುವ ಸಾಧ್ಯತೆ ಶೇಕಡಾ 1 ರಷ್ಟು ಮಾತ್ರವೇ ಇದೆ. ಹೀಗಾಗಿ ಪಂದ್ಯಕ್ಕೆ ವರುಣನ ಆತಂಕವಿಲ್ಲ.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಆಡುವ ಬಳಗ

ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ನವೀನ್-ಉಲ್-ಹಕ್, ಮಯಾಂಕ್ ಯಾದವ್.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಮಯಾಂಕ್ ಡಾಗರ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.