ಧೋನಿಯಿಂದ ದಿನೇಶ್ ಕಾರ್ತಿಕ್​ವರೆಗೆ; 2024ರ ಐಪಿಎಲ್ ನಂತರ ವಿದಾಯ ಹೇಳಲಿರುವ ಹಿರಿಯ ಆಟಗಾರರು
ಕನ್ನಡ ಸುದ್ದಿ  /  ಕ್ರಿಕೆಟ್  /  ಧೋನಿಯಿಂದ ದಿನೇಶ್ ಕಾರ್ತಿಕ್​ವರೆಗೆ; 2024ರ ಐಪಿಎಲ್ ನಂತರ ವಿದಾಯ ಹೇಳಲಿರುವ ಹಿರಿಯ ಆಟಗಾರರು

ಧೋನಿಯಿಂದ ದಿನೇಶ್ ಕಾರ್ತಿಕ್​ವರೆಗೆ; 2024ರ ಐಪಿಎಲ್ ನಂತರ ವಿದಾಯ ಹೇಳಲಿರುವ ಹಿರಿಯ ಆಟಗಾರರು

IPL 2024: 17ನೇ ಆವೃತ್ತಿಯ ಐಪಿಎಲ್ ನಂತರ ಕೆಲ ಹಿರಿಯ ಆಟಗಾರರು ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳುವ ಸಾಧ್ಯತೆ ಇದೆ. ಅಂತಹ ಟಾಪ್​-5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

ಎಂಎಸ್ ಧೋನಿ ಮತ್ತು ದಿನೇಶ್ ಕಾರ್ತಿಕ್.
ಎಂಎಸ್ ಧೋನಿ ಮತ್ತು ದಿನೇಶ್ ಕಾರ್ತಿಕ್.

2024ರ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ (IPL 2024) ಬಿಸಿಸಿಐ (BCCI) ಭರ್ಜರಿ ಸಿದ್ಧತೆ ನಡೆಸುತ್ತಿದೆ. ಮಾರ್ಚ್​ 22ರಿಂದ 17ನೇ ಆವೃತ್ತಿಯು ಆರಂಭವಾಗುವ ಸಾಧ್ಯತೆ ಇದೆ. ಪ್ರತಿ ಸೀಸನ್​​ನಂತೆ ಈ ಬಾರಿಯೂ ರಣರೋಚಕವಾಗಿ ಸಾಗುವುದು ಖಚಿತವಾಗಿದೆ. ಹಿರಿಯ ಮತ್ತು ಯುವ ಆಟಗಾರರ ಮಧ್ಯೆ ದೊಡ್ಡ ಪೈಪೋಟಿ ಏರ್ಪಡಲಿದೆ.

ಆದರೆ ಕೆಲವು ಆಟಗಾರರಿಗೆ ಇದೇ ಕೊನೆಯ ಐಪಿಎಲ್ ಆಗಬಹುದು. ಹೌದು, ಆಡುತ್ತಿರುವ ಹಿರಿಯ ಹಾಗೂ ಅನುಭವಿ ಆಟಗಾರರು 17ನೇ ಆವೃತ್ತಿಯ ನಂತರ ಐಪಿಎಲ್​ ತೊರೆಯುವ ಸಾಧ್ಯತೆ ಇದೆ. ಏಕೆಂದರೆ ಅವರಿಗೆ ಏರುತ್ತಿದ್ದಂತೆ ಫಿಟ್​ನೆಸ್​​ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹಾಗಾದ್ರೆ ಐಪಿಎಲ್ ನಂತರ ವಿದಾಯ ಹೇಳುವ ಆಟಗಾರರು ಯಾರು?

ಎಂಎಸ್ ಧೋನಿ, 42 ವರ್ಷ

2008 ರಿಂದ ಐಪಿಎಲ್ ಆಡುತ್ತಿರುವ ಎಂಎಸ್ ಧೋನಿ, ಲೀಗ್‌ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 250 ಪಂದ್ಯಗಳಲ್ಲಿ 5082 ರನ್ ಗಳಿಸಿರುವ ಮಾಹಿ, ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಕಳೆದ ವರ್ಷವೇ ನಿವೃತ್ತಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ತಂಡಕ್ಕೆ ಸಮರ್ಥ ನಾಯಕ ಸಿಗದ ಕಾರಣ, ಅವರನ್ನು ಮುಂದುವರೆಸಲಾಗುತ್ತಿದೆ. 2025ರ ಐಪಿಎಲ್ ವೇಳೆ ಅವರಿಗೆ 44ರ ಸಮೀಪಕ್ಕೆ ಬರುತ್ತದೆ. ಹಾಗಾಗಿ ಫಿಟ್​ನೆಸ್ ಸಹ ಕಳೆಗುಂದಲಿದ್ದು, ಆಡುವುದು ಅಸಂಭವ.

ಅಮಿತ್ ಮಿಶ್ರಾ, 41 ವರ್ಷ

ಐಪಿಎಲ್​ನಲ್ಲಿ ಆಡುತ್ತಿರುವ ಹಿರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಅಮಿತ್ ಮಿಶ್ರಾ, ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ ಆಡುತ್ತಿದ್ದಾರೆ. 2008ರಿಂದಲೂ ಶ್ರೀಮಂತ ಲೀಗ್​ ಆಡುತ್ತಿರುವ ಮಿಶ್ರಾ, 161 ಪಂದ್ಯಗಳಲ್ಲಿ 173 ವಿಕೆಟ್ ಉರುಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಹ್ಯಾಟ್ರಿಕ್ ಮ್ಯಾನ್ ಎಂದು ಉಲ್ಲೇಖಿಸಲ್ಪಟ್ಟಿರುವ ಅಮಿತ್ ಮಿಶ್ರಾ 2008, 2011 ಮತ್ತು 2012ರ ಐಪಿಎಲ್‌ನಲ್ಲಿ 3 ಹ್ಯಾಟ್ರಿಕ್‌ಗಳನ್ನು ಪಡೆದ ಏಕೈಕ ಬೌಲರ್.

ಫಾಫ್ ಡು‌ ಪ್ಲೆಸಿಸ್, 39 ವರ್ಷ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಈವರೆಗೂ 130 ಪಂದ್ಯಗಳನ್ನಾಡಿದ್ದು, 36.9ರ ಸರಾಸರಿಯಲ್ಲಿ 4133 ರನ್ ಗಳಿಸಿದ್ದಾರೆ. 33 ಅರ್ಧಶತಕ ಸಿಡಿಸಿರುವ ಪ್ಲೆಸಿಸ್ ಈ ವರ್ಷವೇ ಕೊನೆಯದಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿಯಾಗಿ ಹಲವು ವರ್ಷಗಳೇ ಕಳೆದಿದ್ದು, ಕೇವಲ ಫ್ರಾಂಚೈಸಿ ಲೀಗ್​​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಟಿ20 ಕ್ರಿಕೆಟ್​ ಇತಿಹಾಸದಲ್ಲಿ 9500+ ರನ್ ಸಿಡಿಸಿರುವ ಫಾಫ್, ಆರ್​ಸಿಬಿಗೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡುವ ಆತ್ಮವಿಶ್ವಾಸದ್ದಾರೆ.

ದಿನೇಶ್ ಕಾರ್ತಿಕ್, 39 ವರ್ಷ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್​ ದಿನೇಶ್ ಕಾರ್ತಿಕ್, ಐಪಿಎಲ್ ಹೊರತುಪಡಿಸಿ ಬೇರೆ ಎಲ್ಲೂ ಆಡುತ್ತಿಲ್ಲ. 242 ಐಪಿಎಲ್ ಪಂದ್ಯಗಳಲ್ಲಿ 25.81ರ ಸರಾಸರಿಯಲ್ಲಿ 4516 ರನ್ ಸಿಡಿಸಿದ್ದಾರೆ. 20 ಅರ್ಧಶತಕ ಸಿಡಿಸಿದ್ದಾರೆ. ಕಳೆದ ಬಾರಿ ಕಳಪೆ ಪ್ರದರ್ಶನ ನೀಡಲು ಫಿಟ್​ನೆಸ್​ ಕೂಡ ಕಾರಣ. ಈ ಸೀಸನ್​ ನಂತರ ಕಾಮೆಂಟೇಟರ್ ವೃತ್ತಿಜೀವನದತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ.

ಪಿಯೂಷ್ ಚಾವ್ಲಾ 35 ವರ್ಷ

ಪಿಯೂಷ್ ಚಾವ್ಲಾಗಿಂತಲೂ ಹೆಚ್ಚಿನ ವಯಸ್ಸಿನವರು ಐಪಿಎಲ್​ನಲ್ಲಿ ಆಡುತ್ತಿದ್ದಾರೆ. ಅವರಿಗೆ ಇನ್ನೂ ಕೆಲವು ವರ್ಷಗಳನ್ನು ಆಡುವ ಶಕ್ತಿ ಇದೆ. ಆದರೆ ಚಾವ್ಲಾ ಕೇವಲ 35 ವರ್ಷದವರೇ ಆದರೂ ಈ ಬಾರಿ ನಿವೃತ್ತಿಯಾಗುತ್ತಾರೆ ಎನ್ನಲು ವಿಶೇಷ ಕಾರಣ ಇದೆ. ಹೌದು, ಹಿರಿಯ ಆಟಗಾರ ಐಪಿಎಲ್ ಹೊರತುಪಡಿಸಿ ಎಲ್ಲೂ ಆಡುತ್ತಿಲ್ಲ. ತಮ್ಮ ಸ್ಪಿನ್​ ಬೌಲಿಂಗ್​ನಲ್ಲಿ ತಮ್ಮ ಕೈಚಳಕ ಮುಂದುವರೆಸುತ್ತಿದ್ದರೂ ಅವರಿಗೆ ಫಿಟ್​ನೆಸ್ ಅಡ್ಡಿಯಾಗುತ್ತಿದೆ. 181 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮುಂಬೈ ಇಂಡಿಯನ್ಸ್ ಸ್ಪಿನ್ನರ್, 179 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 3ನೇ ಅತಿ ಹೆಚ್ಚು ವಿಕೆಟ್ ಟೇಕರ್. ಆಗಿದ್ದಾರೆ.

Whats_app_banner