ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಾಂಡ್ಯ ಬಳಗದ ರೆಕಾರ್ಡ್ ಪಟ್ಟಿ

ಟಿ20 ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಾಂಡ್ಯ ಬಳಗದ ರೆಕಾರ್ಡ್ ಪಟ್ಟಿ

Mumbai Indians vs Delhi Capitals: ಮುಂಬೈ ಇಂಡಿಯನ್ಸ್‌ ತಂಡವು ಟಿ20 ಕ್ರಿಕೆಟ್‌ನಲ್ಲೇ ವಿಶಿಷ್ಠ ದಾಖಲೆಯೊಂದನ್ನು ನಿರ್ಮಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅಬ್ಬರಿಸಿ ದಾಖಲೆಯ ಮೊತ್ತದೊಂದಿಗೆ ಜಯ ಸಾಧಿಸಿದ ತಂಡವು, ಚುಟುಕು ಸ್ವರೂಪದಲ್ಲಿ ವಿಶ್ವದಾಖಲೆ ಬರೆದಿದೆ.

ಟಿ20 ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್
ಟಿ20 ಇತಿಹಾಸದಲ್ಲೇ ವಿಶಿಷ್ಟ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್ (AFP)

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರೋಚಕ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್‌ (Mumbai Indians), ಪಂದ್ಯದಲ್ಲಿ ಹಲವು ದಾಖಲೆಯನ್ನೂ ನಿರ್ಮಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್‌ 7ರ ಭಾನುವಾರ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಎಂಐ ಬ್ಯಾಟರ್‌ಗಳು, ಅತಿ ಹೆಚ್ಚು ಮೊತ್ತ ಕಲೆ ಹಾಕುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾರ್ದಿಕ್‌ ಪಾಂಡ್ಯ ಬಳಗವು, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಕೊನೆಯ ಐದು ಓವರ್‌ಗಳಲ್ಲಿ 96 ರನ್‌ ಕಲೆ ಹಾಕಿದ ತಂಡವು, ಸ್ಫೋಟಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಆದರೆ, ತಂಡದ ಇನ್ನಿಂಗ್ಸ್‌ನಲ್ಲಿ ಒಬ್ಬರು ಕೂಡಾ ಕನಿಷ್ಠ ಅರ್ಧಶತಕ ದಾಖಲಿಸಿಲ್ಲ ಎಂಬುದು ವಿಶೇಷ.

ಟ್ರೆಂಡಿಂಗ್​ ಸುದ್ದಿ

ತಂಡದ ಪರ ಗರಿಷ್ಠ‌ ಮೊತ್ತ ಕಲೆ ಹಾಕಿದವರು ರೋಹಿತ್ ಶರ್ಮಾ. 49 ರನ್ ಗಳಿಸಿದ ಅವರು, ಕೇವಲ ಒಂದು ರನ್‌ನಿಂದ ಅರ್ಧಶತಕ ಮಿಸ್‌ ಮಾಡಿಕೊಂಡರು. ಆ ಬಳಿಕ ಇಶಾನ್ ಕಿಶನ್, ಟಿಮ್‌ ಡೇವಿಡ್‌, ರೊಮಾರಿಯೋ ಶೆಫರ್ಡ್‌ ಸೇರಿದಂತೆ ತಂಡದ ಇತರ ಆಟಗಾರರು ಕೂಡಾ ಅಬ್ಬರಿಸಿದರು. ಆದರೆ, ಯಾರೊಬ್ಬರು ಕೂಡಾ ಹಾಫ್‌ ಸೆಂಚುರಿ ಬಾರಿಸಿಲ್ಲ. ಟಿಮ್ ಡೇವಿಡ್ ಅಜೇಯ 42 ರನ್ ಗಳಿಸಿದರೆ, ರೊಮಾರಿಯೊ ಶೆಫರ್ಡ್ ಕೇವಲ 10 ಎಸೆತಗಳಲ್ಲಿ 39 ರನ್‌ ಕಲೆ ಹಾಕಿದರು. ಅದರಲ್ಲೂ ಕೊನೆಯ ಒಂದು ಓವರ್‌ನಲ್ಲಿ ಸ್ಫೋಟಕ 32 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಮುಂಬೈ ಇನ್ನಿಂಗ್ಸ್‌ ಹೊಸ ದಾಖಲೆಗೆ ಕಾರಣವಾಗಿದೆ. ಯಾವೊಬ್ಬ ಬ್ಯಾಟರ್‌ ಕೂಡಾ ಅರ್ಧಶತಕ ಗಳಿಸದೆ ತಂಡವೊಂದು ಅತ್ಯಧಿಕ ಮೊತ್ತಕ್ಕೆ ಸಾಕ್ಷಿಯಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಅರ್ಧಶತಕವಿಲ್ಲದೆ, ತಂಡವೊಂದರ ಗರಿಷ್ಠ ಮೊತ್ತ

 • ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್: 234/5 (ಐಪಿಎಲ್ 2024)
 • ಸೊಮರ್ಸೆಟ್ vs ಕೆಂಟ್: 226/5 (ವಿಟಾಲಿಟಿ ಟಿ20 ಬ್ಲಾಸ್ಟ್, 2018)
 • ಆಸ್ಟ್ರೇಲಿಯಾ vs ಇಂಗ್ಲೆಂಡ್: 221/5 (2007)
 • ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ: 220/8 (2023)
 • ಮಲೇಷ್ಯಾ vs ನೇಪಾಳ: 217/7 (2021)

ಇದನ್ನೂ ಓದಿ | ಕಂಬ್ಯಾಕ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್; ಫಾರ್ಮ್ ಸಮಸ್ಯೆಯಲ್ಲಿ ವಿಶ್ವದ ನಂಬರ್ 1 ಬ್ಯಾಟರ್‌

ಕೊನೆಯ 5 ಓವರ್‌ಗಳಲ್ಲಿ ತಂಡವೊಂದು ಗಳಿಸಿದ ಅತಿ ಹೆಚ್ಚು ರನ್‌

 • 112 - ಆರ್‌ಸಿಬಿ vs ಗುಜರಾತ್‌ ಲಯನ್ಸ್‌ (ಬೆಂಗಳೂರು, 2016)
 • 96 - ಮುಂಬೈ vs ಪಿಬಿಕೆಎಸ್ (ವಾಂಖೆಡೆ, 2023)
 • 96 - ಮುಂಬೈ vs ಡೆಲ್ಲಿ ಕ್ಯಾಪಿಟಲ್ಸ್ (ವಾಂಖೆಡೆ, 2024)
 • 91 - ಕೆಕೆಆರ್ vs ಆರ್‌ಸಿಬಿ (ಈಡನ್ ಗಾರ್ಡನ್ಸ್, 2019)

ಐಪಿಎಲ್‌ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಬಾರಿ 200ಕ್ಕೂ ಅಧಿಕ ರನ್ ಗಳಿಸಿದ ತಂಡ

 • ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ -6
 • ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬಬೈ ಇಂಡಿಯನ್ಸ್ -6‌

ಇಂದು 200ರನ್‌ ಗಡಿ ದಾಟುವುದರೊಂದಿಗೆ, ಮುಂಬೈ ತಂಡವು 24ನೇ ಬಾರಿಗೆ ಐಪಿಎಲ್‌ನಲ್ಲಿ 200 ರನ್‌ಗೂ ಅಧಿಕ ಮೊತ್ತ ಕಲೆ ಹಾಕಿದೆ. ಇದರೊಂದಿಗೆ ಆರ್‌ಸಿಬಿ ದಾಖಲೆಯನ್ನು ಸರಿಗಟ್ಟಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 200+ ರನ್‌ ಕಲೆಹಾಕಿದ ತಂಡ

 • 29 - ಸಿಎಸ್‌ಕೆ
 • 24 - ಆರ್‌ಸಿಬಿ
 • 24 - ಎಂಐ
 • 22 - ಪಿಬಿಕೆಎಸ್
 • 21 - ಕೆಕೆಆರ್

ಇದನ್ನು ಓದಿ | ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ರುಚಿ ಕಂಡ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ನಿಟ್ಟುಸಿರು ಬಿಟ್ಟ ಪಾಂಡ್ಯ ಪಡೆ

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point