ಐಪಿಎಲ್ 2024 ಉದ್ಘಾಟನಾ ಸಮಾರಂಭ ದಿನಾಂಕ, ಸಮಯ, ಲೈವ್ ಸ್ಟ್ರೀಮಿಂಗ್, ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ
IPL 2024 Opening Ceremony : 2024ರ ಐಪಿಎಲ್ ಉದ್ಘಾಟನಾ ಸಮಾರಂಭ ಎಷ್ಟೊತ್ತಿಗೆ, ಯಾವಾಗ, ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ ಎಂಬುದರ ವಿವರವನ್ನು ಈ ಮುಂದೆ ನೋಡೋಣ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಮಾರ್ಚ್ 22ರಿಂದ ಟೂರ್ನಿ ಪ್ರಾರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಉದ್ಘಾಟನಾ ಸಮಾರಂಭ (IPL 2024 Opening Ceremony) ಅದ್ಧೂರಿಯಾಗಿ ನಡೆಯಲಿದೆ. ಮೈದಾನಕ್ಕೆ ಆಗಮಿಸಲಿರುವ 38 ಸಾವಿರ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಬಾಲಿವುಡ್ ತಾರೆಗಳು ಸಜ್ಜಾಗಿದ್ದಾರೆ. ಎಲ್ಲಾ 10 ಕ್ಯಾಪ್ಟನ್ಗಳು ಸಮಾರಂಭದಲ್ಲಿ ಹಾಜರಿರಲಿದ್ದಾರೆ. ಹಾಗಾದರೆ, ಉದ್ಘಾಟನಾ ಸಮಾರಂಭ ಎಷ್ಟೊತ್ತಿಗೆ, ಯಾವಾಗ, ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.
ಐಪಿಎಲ್ ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
ಐಪಿಎಲ್ 2024ರ ಉದ್ಘಾಟನಾ ಸಮಾರಂಭವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಮತ್ತು ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಲಭ್ಯವಿರುತ್ತದೆ. ಜಿಯೋದಲ್ಲಿ ವೀಕ್ಷಣೆ ಸಂಪೂರ್ಣ ಉಚಿತವಾಗಿರಲಿದೆ.
ಐಪಿಎಲ್ ಉದ್ಘಾಟನಾ ಸಮಾರಂಭ ಯಾವಾಗ ಪ್ರಾರಂಭವಾಗುತ್ತದೆ?
ಐಪಿಎಲ್ ಉದ್ಘಾಟನಾ ಸಮಾರಂಭ ಮಾರ್ಚ್ 22 ರಂದು ಸಂಜೆ 6:30 ಕ್ಕೆ ಪ್ರಾರಂಭವಾಗಲಿದೆ.
ಐಪಿಎಲ್ 2024ರ ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ?
ಐಪಿಎಲ್ 2024ರ ಉದ್ಘಾಟನಾ ಸಮಾರಂಭವು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿರುವ ತಾರೆಗಳು ಯಾರು?
ಐಪಿಎಲ್ 2024ರ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿರುವ ದೊಡ್ಡ ತಾರೆಗಳೆಂದರೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಹಿನ್ನೆಲೆ ಗಾಯಕರಾದ ಎಆರ್ ರೆಹಮಾನ್ ಮತ್ತು ಸೋನು ನಿಗಮ್ ಇತರರು.
ಐಪಿಎಲ್ ಪಂದ್ಯಗಳ ಸಮಯ
ಐಪಿಎಲ್ 2024ರ ಉದ್ಘಾಟನಾ ಪಂದ್ಯ ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಐಪಿಎಲ್ನ ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗುತ್ತದೆ. ಡಬಲ್ ಹೆಡ್ಡರ್ ದಿನದಂದು ಮಧ್ಯಾಹ್ನದ ಪಂದ್ಯಗಳು 3.30ಕ್ಕೆ ಆರಂಭವಾಗಲಿವೆ.
ಚೆನ್ನೈ ಮತ್ತು ಬೆಂಗಳೂರು ಮುಖಾಮುಖಿ ದಾಖಲೆ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್‌ನಲ್ಲಿ 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್‌ಕೆ 20 ಗೆಲುವುಗಳೊಂದಿಗೆ ಮುನ್ನಡೆಯಲ್ಲಿದೆ. ಆದರೆ ಆರ್ಸಿಬಿ 10 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಎರಡೂ ತಂಡಗಳು ಐಪಿಎಲ್ 2008ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 28 ರಂದು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ಸಿಎಸ್‌ಕೆ 13 ರನ್‌ಗಳಿಂದ ಗೆದ್ದುಕೊಂಡಿತ್ತು.
ಚೆಪಾಕ್ ಸ್ಟೇಡಿಯಂನಲ್ಲಿ ಸಿಎಸ್‌ಕೆ VS ಆರ್ಸಿಬಿ ಹೆಡ್-ಟು-ಹೆಡ್ ರೆಕಾರ್ಡ್
ಎಂಎ ಚಿದಂಬರಂ ಅಥವಾ ಚೆಪಾಕ್ ಸ್ಟೇಡಿಯಂನಲ್ಲಿ ಸಿಎಸ್‌ಕೆ ಮತ್ತು ಆರ್ಸಿಬಿ ತಂಡಗಳು 8 ಬಾರಿ ಮುಖಾಮುಖಿಯಾಗಿವೆ. ಆದರೆ, ತವರಿನಲ್ಲಿ ಚೆನ್ನೈ, ಬೆಂಗಳೂರು ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಮುಖಾಮುಖಿಯಾದ 8 ಪಂದ್ಯಗಳ ಪೈಕಿ ಚೆನ್ನೈ 7ರಲ್ಲಿ ಗೆದ್ದಿದೆ. ಆರ್ಸಿಬಿ 1ರಲ್ಲಿ ಜಯಿಸಿದೆ. ಅದು ಕೂಡ 2008ರಲ್ಲಿ. ಆ ಬಳಿಕ ಈ ಮೈದಾನದಲ್ಲಿ ಬೆಂಗಳೂರು ಗೆಲುವು ಕಂಡಿಲ್ಲ.