ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್ ಕಿಂಗ್ಸ್ Vs ಸನ್‌ರೈಸರ್ಸ್ ಹೈದರಾಬಾದ್; ಮುಲ್ಲಾನ್‌ಪುರ ಸ್ಟೇಡಿಯಂ ಪಿಚ್ ಹಾಗೂ ಚಂಡೀಗಢ ಹವಾಮಾನ ವರದಿ ಹೀಗಿದೆ

ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್; ಮುಲ್ಲಾನ್‌ಪುರ ಸ್ಟೇಡಿಯಂ ಪಿಚ್ ಹಾಗೂ ಚಂಡೀಗಢ ಹವಾಮಾನ ವರದಿ ಹೀಗಿದೆ

PBKS vs SRH: ಚಂಡೀಗಂಢದ ಮುಲ್ಲಾನ್‌ಪುರದಲ್ಲಿ ನಿರ್ಮಾಣವಾಗಿರುವ ಹೊಸ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು‌ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿವೆ.

ಮುಲ್ಲಾನ್‌ಪುರ ಸ್ಟೇಡಿಯಂ ಪಿಚ್ ಹಾಗೂ ಚಂಡೀಗಢ ಹವಾಮಾನ ವರದಿ ಹೀಗಿದೆ
ಮುಲ್ಲಾನ್‌ಪುರ ಸ್ಟೇಡಿಯಂ ಪಿಚ್ ಹಾಗೂ ಚಂಡೀಗಢ ಹವಾಮಾನ ವರದಿ ಹೀಗಿದೆ

ಏಪ್ರಿಲ್ 9ರಂದು ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Punjab Kings vs Sunrisers Hyderabad) ತಂಡಗಳು ಮುಖಾಮುಖಿಯಾಗುತ್ತಿವೆ. ಚಂಡೀಗಂಢದ ಮುಲ್ಲಾನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Maharaja Yadavindra Singh International Cricket Stadium, Mullanpur) ನಡೆಯಲಿರುವ ಪಂದ್ಯದಲ್ಲಿ, ಪಂಜಾಬ್ ಮತ್ತು ಹೈದರಾಬಾದ್ ಎರಡೂ ತಂಡಗಳು ಗೆಲುವಿನ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಪಂದ್ಯಾವಳಿಯಲ್ಲಿ ಈವರೆಗೆ ಎಸ್ಆರ್‌ಎಚ್ ಮತ್ತು ಪಂಜಾಬ್‌ ತಂಡಗಳು ತಲಾ ನಾಲ್ಕು ಪಂದ್ಯಗಳಲ್ಲಿ ಆಡಿದ್ದು, ಅದರಲ್ಲಿ ತಲಾ ಎರಡು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿವೆ.

ಟ್ರೆಂಡಿಂಗ್​ ಸುದ್ದಿ

ಶಿಖರ್ ಧವನ್ ನೇತೃತ್ವದ ಪಿಬಿಕೆಎಸ್ ತಂಡವು, ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಚೇಸಿಂಗ್‌ ಮೂಲಕ 3 ವಿಕೆಟ್‌ಗಳಿಂದ ಗೆದ್ದಿತ್ತು. ಮತ್ತೊಂದೆಡೆ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತ ಪ್ಯಾಟ್‌ ಕಮಿನ್ಸ್‌ ಪಡೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಅದೇ ವಿಶ್ವಾದಲ್ಲಿ ಇದೀಗ ಪಂಜಾಬ್‌ ತಂಡವನ್ನು ಅದರದ್ದೇ ತವರಲ್ಲಿ ಮಣಿಸುವ ಲೆಕ್ಕಾಚಾರದಲ್ಲಿದೆ.

ಮುಖಾಮುಖಿ ದಾಖಲೆ

ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್ 7 ಪಂದ್ಯದಲ್ಲಿ ಮಾತ್ರ ಗೆದ್ದರೆ, ಎಸ್ಆರ್‌ಎಚ್ 14 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವಿನ ಕೊನೆಯ 5 ಪಂದ್ಯಗಳಲ್ಲಿ ಹೈದರಾಬಾದ್ 3ರಲ್ಲಿ ಗೆದ್ದಿದೆ.

ಇದನ್ನೂ ಓದಿ | ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಅತ್ಯಂತ ಯಶಸ್ವಿ ನಾಯಕ; ಆ ಹಂತ ತಲುಪಲು ಯಾರಿಂದಲೂ ಸಾಧ್ಯವಿಲ್ಲ ಎಂದ ಗೌತಮ್ ಗಂಭೀರ್

ಪಿಬಿಕೆಎಸ್ vs ಎಸ್ಆರ್‌ಎಚ್ ಪಿಚ್ ವರದಿ

ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್‌, ಸ್ಪರ್ಧಾತ್ಮಕ ಪಂದ್ಯಕ್ಕೆ ಅನುವು ಮಾಡಿಕೊಡುತ್ತದೆ. ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗೆ ಸಮಾನವಾಗಿ ನೆರವಾಗುವ ನಿರೀಕ್ಷೆ ಇದೆ. ಈ ಪಿಚ್‌ನಲ್ಲಿ ಪ್ರಸಕ್ತ ಆವೃತ್ತಿಯ ಒಂದು ಪಂದ್ಯ ಮಾತ್ರ ನಡೆದಿದ್ದು, ಚೇಸಿಂಗ್‌ ನಡೆಸಿದ್ದ ಪಂಜಾಬ್‌ ಗೆದ್ದು ಬೀಗಿತ್ತು. ಚಂಡೀಗಢದ ಹೊಸ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

ಪಿಬಿಕೆಎಸ್ ಮತ್ತು ಎಸ್ಆರ್‌ಎಚ್; ಚಂಡೀಗಢ ಹವಾಮಾನ ವರದಿ

ಚಂಡೀಗಢ ನಗರದಲ್ಲಿ ಹೊಸದಾಗಿ ನಿರ್ಮಿಸಲಾದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯುತ್ತಿದೆ. ಪಂದ್ಯದ ದಿನ ಹಗಲಿನಲ್ಲಿ ತಾಪಮಾನವು 40 ಡಿಗ್ರಿಗಳಷ್ಟು ಇರುವ ಸಾಧ್ಯತೆ ಇದೆ. ಉತ್ತರ ಮತ್ತು ಪೂರ್ವ ಭಾರತದಲ್ಲಿ ಹೆಚ್ಚು ಬಿಸಿಯ ವಾತಾವರಣ ಇರಲಿದೆ. ಆದರೆ, ಸಂಜೆ ವೇಳೆಗೆ ತಾಪಮಾನವು ಸುಮಾರು 24 ಡಿಗ್ರಿಗಳಷ್ಟು ಇರುವ ನಿರೀಕ್ಷೆ ಇದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.

IPL_Entry_Point