ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಅಂತಿಮ ಲೆಕ್ಕಾಚಾರ?

IPL 2024 Play-off Scenarios: 17ನೇ ಆವೃತ್ತಿಯ ಐಪಿಎಲ್​ನಲ್ಲಿ ಮೂರು ತಂಡಗಳು ಪ್ಲೇಆಫ್ ಪ್ರವೇಶಿಸಿವೆ. ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಪೈಪೋಟಿ ಏರ್ಪಟ್ಟಿದೆ.

ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಲೆಕ್ಕಾಚಾರ?
ಪ್ಲೇಆಫ್​ಗೆ 3 ತಂಡಗಳು ಅಂತಿಮ; ಉಳಿದೊಂದು ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಹೇಗಿದೆ ಲೆಕ್ಕಾಚಾರ?

ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ (IPL) 3ನೇ ತಂಡವಾಗಿ ಮೇ 16ರಂದು ಸನ್‌ರೈಸರ್ಸ್ ಹೈದರಾಬಾದ್‌ ಪ್ಲೇ-ಆಫ್​​ ಪ್ರವೇಶಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಂತರ ಎಸ್​ಆರ್​​ಹೆಚ್​​ ಪ್ಲೇಆಫ್​ ಪ್ರವೇಶಿಸಿತು. ಹೈದರಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಎಸ್‌ಆರ್‌ಎಚ್ 15 ಅಂಕಗಳಿಂದ ಅಂಕಪಟ್ಟಿಯಲ್ಲಿ ಅಗ್ರ-4 ರೊಳಗೆ ಸ್ಥಾನ ಖಚಿತಪಡಿಸಿಕೊಂಡಿತು.

ಆದರೆ, 14 ಅಂಕ ಪಡೆದು ಮೈನಸ್ ರನ್​ರೇಟ್ (-0.377) ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತವಾಗಿ ಹೊರಬಿತ್ತು. 14 ಪಂದ್ಯಗಳಲ್ಲಿ 7 ಗೆಲುವು, 7 ಸೋಲು ಕಂಡಿರುವ ಡೆಲ್ಲಿ ಪ್ಲೇಆಫ್ ಕನಸು ಭಗ್ನವಾಯಿತು. ಆದರೆ, ಲಕ್ನೋ ಸೂಪರ್ ಜೈಂಟ್ಸ್ (13 ಪಂದ್ಯಗಳಲ್ಲಿ 12 ಅಂಕಗಳು, ರನ್​ರೇಟ್​ -0.787) ಅರ್ಹತೆ ಪಡೆಯುವ ದುರ್ಬಲ ಭರವಸೆ ಹೊಂದಿದೆ. ಆದರೆ ಕಳಪೆ ನಿವ್ವಳ ರನ್-ರೇಟ್ ಒಂದು ದೊಡ್ಡ ಸಮಸ್ಯೆಯಾಗಿದೆ. ಈಗ ಉಳಿದಿರುವ ಒಂದು ಸ್ಥಾನಕ್ಕೆ ಸಿಎಸ್​ಕೆ ಮತ್ತು ಆರ್​ಸಿಬಿ ತಂಡಗಳ ನಡುವೆ ಮಾತ್ರ ಪೈಪೋಟಿ ಉಳಿದಿದೆ.

ಅಗ್ರ-4ರಲ್ಲಿ ಯಾವುದಕ್ಕೆ ಯಾವ ಸ್ಥಾನ ಪಡೆಯಲು ಅವಕಾಶ ಇದೆ?

  • ಸನ್​ರೈಸರ್ಸ್​ ಹೈದರಾಬಾದ್ ಅಧಿಕೃತವಾಗಿ ಪ್ಲೇಆಫ್​ ಟಿಕೆಟ್ ಪಡೆದುಕೊಂಡಿತು. ಪ್ರಸ್ತುತ 15 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಈಗ ಎರಡನೇ ಸ್ಥಾನ ಪಡೆಯಲು ಸಹ ಉತ್ತಮ ಅವಕಾಶ ಇದೆ.
  • 2ನೇ ಸ್ಥಾನಕ್ಕೇರುವ ಅವಕಾಶ ಹೊಂದಿರುವ ಎಸ್​​ಆರ್​​ಹೆಚ್, ಪಿಬಿಕೆಎಸ್ ವಿರುದ್ಧ ಗೆಲ್ಲಬೇಕು. ಮತ್ತೊಂದು ಪಂದ್ಯದಲ್ಲಿ ಆರ್​​ಆರ್ ತಂಡವನ್ನು ಕೆಕೆಆರ್ ಸೋಲಿಸಬೇಕು. ಆಗ ಹೈದರಾಬಾದ್​​ 2ನೇ ಸ್ಥಾನ ಪಡೆಯಬಹುದು.
  • ಕೆಕೆಆರ್​ ವಿರುದ್ಧ ಗೆಲುವು ಸಾಧಿಸಿದರೆ ರಾಜಸ್ಥಾನ್ ರಾಯಲ್ಸ್ 2ನೇ ಸ್ಥಾನವನ್ನು ಖಚಿತಪಡಿಸುತ್ತದೆ. ಆದರೆ ಮೊದಲ ಸ್ಥಾನವನ್ನು ಕೆಕೆಆರ್​ ಭದ್ರಪಡಿಸಿಕೊಂಡಿದೆ.
  • ಚೆನ್ನೈ ತಂಡಕ್ಕೂ 2ನೇ ಸ್ಥಾನ ಪಡೆಯುವ ಅವಕಾಶ ಇದೆ. ಅದಕ್ಕಾಗಿ ಆರ್​ಸಿಬಿ ತಂಡವನ್ನು ಸೋಲಿಸಬೇಕು. ಆರ್​ಆರ್​ ಮತ್ತು ಎಸ್​​ಆರ್​​ಹೆಚ್​ ಉಳಿದ ಪಂದ್ಯಗಳಲ್ಲಿ ಸೋತರೆ ಸಿಎಸ್​ಕೆ 2ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ.

    ಇದನ್ನೂ ಓದಿ: ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ
  • ಆರ್​​ಸಿಬಿ ಪ್ಲೇಆಫ್​​ ಪ್ರವೇಶಿಸಲು ಗೆಲುವು ಸಾಧಿಸುವುದು ಅನಿವಾರ್ಯ. ಸಿಎಸ್​ಕೆ ವಿರುದ್ದ ಗೆಲ್ಲುವುದರ ಜೊತೆಗೆ ರನ್​ರೇಟ್​ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಆರ್​​ಸಿಬಿ ಚೇಸಿಂಗ್ ಮಾಡುವಾಗ 18.1 ಓವರ್​ಗಳಲ್ಲಿ ಗುರಿ ಮುಟ್ಟಬೇಕು. ಅಥವಾ ಮೊದಲು ಬ್ಯಾಟಿಂಗ್ ನಡೆಸಿದ ಯಲ್ಲೋ ಆರ್ಮಿ ಎದುರು 18 ರನ್​ಗಳಿಂದ ಸೋಲಿಸಬೇಕು. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಸಿಎಸ್​ಕೆ ಪ್ಲೇಆಫ್​ ಪ್ರವೇಶಿಸುತ್ತದೆ.
  • ಎಸ್​ಆರ್​ಹೆಚ್​ ಪ್ಲೇಆಫ್​ ಪ್ರವೇಶದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಧಿಕೃತವಾಗಿ ಎಲಿಮಿನೇಟ್ ಆಯಿತು. 14 ಅಂಕ ಪಡೆದಿದ್ದ ಡೆಲ್ಲಿ ರನ್​ ರೇಟ್​ ಕಳಪೆಯಾಗಿತ್ತು.
  • ಸಾಸಿವೆ ಕಾಳಿನಷ್ಟು ಅವಕಾಶ ಹೊಂದಿರುವ ಲಕ್ನೋ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೂ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಅನುಮಾನ. ಏಕೆಂದರೆ ರನ್​ರೇಟ್​ ಅತ್ಯಂತ ಕೆಟ್ಟದಾಗಿದೆ.

ಇದನ್ನೂ ಓದಿ: Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner