ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಈ ತಂಡಗಳು ಸೋಲಲೇಬೇಕು; ಹೀಗಾದರೆ ನಾಲ್ಕಲ್ಲ, 3ನೇ ಸ್ಥಾನಕ್ಕೂ ಹೋಗಬಹುದು!

ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಈ ತಂಡಗಳು ಸೋಲಲೇಬೇಕು; ಹೀಗಾದರೆ ನಾಲ್ಕಲ್ಲ, 3ನೇ ಸ್ಥಾನಕ್ಕೂ ಹೋಗಬಹುದು!

IPL 2024 Playoffs Scenario: ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳಿಂದ ಗೆಲುವು ಸಾಧಿಸುತ್ತಿದ್ದಂತೆ ಆರ್​ಸಿಬಿ ಪ್ಲೇಆಫ್ ಆಸೆ ಮತ್ತಷ್ಟು ಚಿಗುರೊಡೆದಿದೆ. ಎರಡು ಹಂತಗಳಲ್ಲಿ ಬೆಂಗಳೂರು ತಂಡ ಪ್ಲೇಆಫ್​ ಪ್ರವೇಶಿಸಲು ಅವಕಾಶ ಇದೆ. ಅದರ ವಿವರಣೆ ಇಲ್ಲಿದೆ.

ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಈ ತಂಡಗಳು ಸೋಲಲೇಬೇಕು; ಹೀಗಾದರೆ ನಾಲ್ಕಲ್ಲ, 3ನೇ ಸ್ಥಾನಕ್ಕೂ ಹೋಗಬಹುದು!
ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಈ ತಂಡಗಳು ಸೋಲಲೇಬೇಕು; ಹೀಗಾದರೆ ನಾಲ್ಕಲ್ಲ, 3ನೇ ಸ್ಥಾನಕ್ಕೂ ಹೋಗಬಹುದು!

2024ರ ಐಪಿಎಲ್ (IPL 2024) ಕೊನೆಯ ಘಟ್ಟ ತಲುಪುತ್ತಿದ್ದಂತೆ ದಿನದಿಂದ ದಿನಕ್ಕೆ ರೋಚಕತೆ ಮತ್ತು ಕುತೂಹಲ ಹೆಚ್ಚಿಸುತ್ತಿದೆ. ರೇಸ್​​ನಿಂದ 2 ತಂಡಗಳು ಅಧಿಕೃತವಾಗಿ ಹೊರಬಿದ್ದರೂ ಯಾವುದೇ ತಂಡ ಪ್ಲೇಆಫ್​ಗೆ ಅರ್ಹತೆ ಪಡೆದಿಲ್ಲ. ಅದಕ್ಕಾಗಿ 8 ತಂಡಗಳ ನಡುವೆ ಪೈಪೋಟಿ ತೀವ್ರಗೊಂಡಿದೆ. ಸದ್ಯದ ಮಟ್ಟಿಗೆ ಒಂದು ತಂಡದ ಸೋಲು ಮತ್ತೊಂದು ತಂಡಕ್ಕೆ ಲಾಭ ತಂದುಕೊಡುತ್ತಿದೆ. ಮೊದಲಾರ್ಧದಲ್ಲಿ ಗೆಲುವೇ ಕಾರಣ ಆರ್​ಸಿಬಿ (RCB), ಈಗ ಸತತ ನಾಲ್ಕು ಗೆಲುವು ಸಾಧಿಸಿ ಪ್ರಬಲ ಪೈಪೋಟಿ ನೀಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮೇ 9ರ ರಾತ್ರಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​​ಗಳಿಂದ ದೊಡ್ಡ ಅಂತರದ ಗೆಲುವು ಸಾಧಿಸುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕ್ಯಾಲ್ಕುಲೇಟರ್ ‌ಹಿಡಿದು ಕೂತಿದ್ದಾರೆ. ಆರ್​​ಸಿಬಿ ಪ್ಲೇಆಫ್ ಪ್ರವೇಶಿಸಲು ಏನೆಲ್ಲಾ ಮಾಡಬೇಕು? ಯಾವ ತಂಡಗಳು ಸೋತರೆ ಲಾಭ? ಎಂಬ ಲೆಕ್ಕಾಚಾರ ಹಾಕುವಲ್ಲಿ ಅಭಿಮಾನಿಗಳು ಬ್ಯುಸಿಯಾಗಿದ್ದಾರೆ. ಆರ್​ಸಿಬಿ ಮ್ಯಾನೇಜ್​ಮೆಂಟ್ ಇಷ್ಟು ತಲೆಕೆಡಿಸಿಕೊಂಡಿದ್ಯೋ ಗೊತ್ತಿಲ್ಲ. ಆದರೆ ಅಭಿಮಾನಿಗಳಂತೂ ಇಂಚಿಂಚು ಅವಕಾಶವನ್ನು ಹುಡುಕಾಡುತ್ತಿದ್ದಾರೆ.

ಪ್ರಸ್ತುತ ಆರ್​​ಸಿಬಿ ಅಂಕ ಮತ್ತು ಸ್ಥಾನ

ಐಪಿಎಲ್ ಮೊದಲಾರ್ಧದಲ್ಲಿ ಆರ್​ಸಿಬಿ ಪ್ಲೇಆಫ್ ಪ್ರವೇಶಿಸುವುದು ಅಸಾಧ್ಯ. ಮೊದಲ ತಂಡವಾಗಿ ಲೀಗ್‌ನಿಂದ ಹೊರಬೀಳುವುದು ಖಚಿತ ಎಂದು ಕ್ರಿಕೆಟ್ ತಜ್ಞರು, ಪಂಡಿತರು, ಕೆಲ ಅಭಿಮಾನಿಗಳು ಭವಿಷ್ಯ ನುಡಿದಿದ್ದರು. ಆದರೆ ಸತತ ನಾಲ್ಕು ಪಂದ್ಯಗಳಿಂದ ಗೆದ್ದು ಅವರೆಲ್ಲರ ಭವಿಷ್ಯವನ್ನು ಸುಳ್ಳಾಗಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 7ರಲ್ಲಿ ಸೋತಿದೆ. 10 ಅಂಕ ಸಂಪಾದಿಸಿ +0.217 ರನ್​ರೇಟ್ ಪಡೆದಿದೆ. ಸದ್ಯ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಆರ್‌ಸಿಬಿ ತಂಡವು ತಲಾ 12 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗಿಂತ 2 ಅಂಕಗಳಿಂದ ಹಿಂದುಳಿದಿದೆ. ಹೀಗಾಗಿ ಆರ್​ಸಿಬಿ ನಿಜವಾಗಿಯೂ ಪ್ಲೇಆಫ್‌ಗೆ ಪ್ರವೇಶಿಸಬಹುದೇ ಎಂಬ ಗೊಂದಲದಲ್ಲಿದ್ದಾರೆ ಫ್ಯಾನ್ಸ್. ನಾಲ್ಕನೇ ಸ್ಥಾನಕ್ಕಲ್ಲ, ಮೂರನೇ ಸ್ಥಾನಕ್ಕೂ ಹೋಗಲು ಆರ್​​ಸಿಬಿಗೆ ಅವಕಾಶ ಇದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.

ಆರ್​ಸಿಬಿಗೆ ಉಳಿದಿರುವ ಪಂದ್ಯಗಳು

ಮೇ 12 - ಆರ್​ಸಿಬಿ vs ಡೆಲ್ಲಿ (ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು)

ಮೇ 18 - ಆರ್​ಸಿಬಿ vs ಸಿಎಸ್​ಕೆ (ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು)

ಆರ್​​ಸಿಬಿ ಪ್ಲೇಆಫ್‌ಗೆ ನುಸುಳಲು ಎರಡು ಅತ್ಯುತ್ತಮ ಸನ್ನಿವೇಶಗಳಿವೆ. 10 ಅಂಕ ಪಡೆದಿರುವ ತಂಡಕ್ಕೆ ಉಳಿದ ಎರಡಲ್ಲಿ ಗೆದ್ದರೂ ಗರಿಷ್ಠ 14 ಅಂಕ ಪಡೆಯಲು ಸಾಧ್ಯವಾಗುವ ಕಾರಣ ಅಗ್ರ-2 ಸ್ಥಾನಕ್ಕೇರುವುದು ಅಸಾಧ್ಯ. ಏಕೆಂದರೆ ಕೆಕೆಆರ್​ ಮತ್ತು ಆರ್​ಆರ್ ಈಗಾಗಲೇ 16 ಅಂಕ ಹೊಂದಿದೆ.

ಆರ್​ಸಿಬಿ 3ನೇ ಸ್ಥಾನ ಹೇಗೆ ಪಡೆಯಬಹುದು?

 • ಆರ್​ಸಿಬಿ ಕೇವಲ ನಾಲ್ಕನೇ ಸ್ಥಾನವಲ್ಲ, 3ನೇ ಸ್ಥಾನವನ್ನೂ ಪಡೆಯಲು ಅವಕಾಶ ಇದೆ. ಅದಕ್ಕೆ ಇಲ್ಲಿದೆ ನೋಡಿ ಅವಕಾಶ.
 • ಆರ್​ಸಿಬಿ ತನ್ನ ಕೊನೆಯ 2 ಪಂದ್ಯಗಳಲ್ಲಿ ಗೆಲ್ಲಲೇಬೇಕು.
 • ಸನ್​ರೈಸರ್ಸ್ ಹೈದರಾಬಾದ್ (ಜಿಟಿ, ಡಿಸಿ ವಿರುದ್ಧ) ಎಲ್ಲಾ ಪಂದ್ಯಗಳಲ್ಲಿ ಸೋಲಬೇಕು.
 • ಅದೇ ರೀತಿ ಚೆನ್ನೈ ತನ್ನ 3 (ಜಿಟಿ, ಆರ್​ಆರ್, ಆರ್​ಸಿಬಿ​) ಪಂದ್ಯಗಳಲ್ಲೂ ಪರಾಭವಗೊಳ್ಳಬೇಕು.
 • ಮತ್ತೊಂದೆಡೆ ಲಕ್ನೋ, ಡೆಲ್ಲಿ ವಿರುದ್ಧ ಗೆಲ್ಲಬೇಕು, ಆದರೆ ಮುಂಬೈ ವಿರುದ್ಧ ಸೋಲಬೇಕು
 • ಡೆಲ್ಲಿ ತಂಡವು ಲಕ್ನೋ ಮತ್ತು ಬೆಂಗಳೂರು ವಿರುದ್ಧ ಸೋಲಬೇಕು.
 • ಹೀಗಾದಾಗ ಆರ್​ಸಿಬಿ 14 ಅಂಕಗಳೊಂದಿಗೆ 3ನೇ ಸ್ಥಾನ ಮತ್ತು ಲಕ್ನೋ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಲಿದೆ.
 • ಲಕ್ನೋ ವಿರುದ್ಧ ಡೆಲ್ಲಿ ಗೆದ್ದರೆ, ಆರ್​​ಸಿಬಿ ವಿರುದ್ಧ ಸೋಲಬೇಕು. ಆಗ ಮುಂಬೈ ವಿರುದ್ಧ ಲಕ್ನೋ ಗೆದ್ದರೂ ಆರ್​ಸಿಬಿ ಮೂರನೇ ಸ್ಥಾನದಲ್ಲೇ ಉಳಿಯಬಹುದು. ಅದಕ್ಕಾಗಿ ಲಕ್ನೋ-ಡೆಲ್ಲಿಗಿಂತ ನೆಟ್​ ರನ್ ರೇಟ್ ಉತ್ತಮವಾಗಿ ಕಾಯ್ದುಕೊಳ್ಳಬೇಕು.

ಆರ್​ಸಿಬಿ 4ನೇ ಸ್ಥಾನ ಪಡೆಯಲು ಹೇಗೆ ಸಾಧ್ಯ?

 • ಆರ್​​ಸಿಬಿ ತನ್ನ ಪ್ಲೇಆಫ್​ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲು ತನ್ನ ಎರಡೂ ಪಂದ್ಯಗಳನ್ನು ಗೆಲ್ಲಬೇಕು.
 • ಭಯ ತಂಡಗಳಿಗೂ 18 ಅಂಕ ಸಂಪಾದಿಸಲು ಅವಕಾಶವಿರುವ ಕಾರಣ ಎಸ್​ಆರ್​​ಹೆಚ್ ಮತ್ತು ಸಿಎಸ್​ಕೆ ತಂಡಗಳು ತಮ್ಮ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಅಲ್ಲದೆ ಎರಡೂ ತಂಡಗಳು ಕನಿಷ್ಠ 16 ಅಂಕ ಗಳಿಸಿದರೆ ಆರ್‌ಸಿಬಿಗೆ ಕನಸು ಭಗ್ನವಾಗಲಿದೆ.
 • ಆದಾಗ್ಯೂ, ಈ ಎರಡಲ್ಲಿ ಒಂದು ತಂಡ 16 ಅಥವಾ 18 ಅಂಕ ಗಳಿಸಿದರೆ, ಇನ್ನೊಂದು ತಂಡ 14 ಅಂಕಕ್ಕೆ ಮುಗಿಸಿದರೆ ಆರ್​ಸಿಬಿಗೆ ಮತ್ತೆ ಅವಕಾಶ ಇರಲಿದೆ. ಮತ್ತೊಂದೆಡೆ ಡೆಲ್ಲಿ vs ಲಕ್ನೋ ನಡುವಿನ ಪಂದ್ಯದಲ್ಲಿ ಯಾರೇ ಗೆದ್ದರೂ 14 ಅಂಕ ಆಗಲಿದೆ. ಇಂತಹ ಸನ್ನಿವೇಶದಲ್ಲಿ ಆರ್​ಸಿಬಿ 14 ಅಂಕಗಳಲ್ಲಿ 3 ರೀತಿಯಲ್ಲಿ ಟೈ ಆಗಲಿದೆ. ಆಗ ನೆಟ್ ರನ್​ ರೇಟ್ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
 • ಎಸ್​ಆರ್​​ಹೆಚ್​ ಎಲ್ಲಾ ಪಂದ್ಯ ಗೆಲ್ಲಬೇಕು, ಸಿಎಸ್​ಕೆ, ಡೆಲ್ಲಿ ಎಲ್ಲಾ ಸೋಲಬೇಕು. ಆಗ ಎಲ್​ಎಸ್​ಜಿ ಡೆಲ್ಲಿ ವಿರುದ್ಧ ಗೆದ್ದು ಮುಂಬೈ ವಿರುದ್ಧ ಸೋಲಬೇಕು. ಆಗ ಆರ್​ಸಿಬಿ ಮತ್ತು ಲಕ್ನೋ ತಲಾ 14 ಅಂಕ ಪಡೆಯಲಿವೆ. ನೆಟ್​ರೇಟ್​ ಕಾಯ್ದುಕೊಂಡ ತಂಡ 4ನೇ ಸ್ಥಾನ ಪಡೆಯಲಿದೆ. ಪ್ರಸ್ತುತ ಆರ್​ಸಿಬಿ ಧನಾತ್ಮಕ ನೆಟ್​ರನ್​ ರೇಟ್​ ಹೊಂದಿದೆ.
 • ಸಿಎಸ್​ಕೆ/ಎಸ್​​ಆರ್​​ಹೆಚ್​ ಮತ್ತು ಎಲ್​ಎಸ್​ಜಿ/ಡಿಸಿಗಿಂತ ಉತ್ತಮವಾದ ನೆಟ್​ರನ್ ರೇಟ್ ಹೊಂದಬೇಕು. ಲಕ್ನೋ ಮೈನಸ್ ನೆಟ್ ರನ್​ರೇಟ್​ ಹೊಂದಿರುವುದರಿಂದ ಮೇ 14 ರಂದು ನಿರ್ಣಾಯಕ ಪಂದ್ಯದಲ್ಲಿ ಡಿಸಿ ತಂಡವನ್ನು ಲಕ್ನೋ ಸೋಲಿಸಬೇಕು.

ಐಪಿಎಲ್‌ 2024 ಪಾಯಿಂಟ್ಸ್‌ ಟೇಬಲ್

 

IPL_Entry_Point