ಸ್ಟಾರ್ ಆಲ್‌ರಂಡರ್ ಕಿಂಗ್ಸ್ ಬಳಗಕ್ಕೆ ಮರಳೋದು ಡೌಟ್; ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಟಾರ್ ಆಲ್‌ರಂಡರ್ ಕಿಂಗ್ಸ್ ಬಳಗಕ್ಕೆ ಮರಳೋದು ಡೌಟ್; ಪಂಜಾಬ್ ಕಿಂಗ್ಸ್ Vs ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

ಸ್ಟಾರ್ ಆಲ್‌ರಂಡರ್ ಕಿಂಗ್ಸ್ ಬಳಗಕ್ಕೆ ಮರಳೋದು ಡೌಟ್; ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

Punjab Kings vs Sunrisers Hyderabad: ಪಂಜಾಬ್‌ ಕಿಂಗ್ಸ್‌ ತಂಡದ ಪ್ರಮುಖ ವಿದೇಶಿ ಆಲ್‌ರೌಂಡರ್‌ ಲಿಯಾಮ್ ಲಿವಿಂಗ್‌ಸ್ಟನ್, ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿಯೂ ಅವರು ಕಣಕ್ಕಿಳಿಯುವ ಕುರಿತು ಖಚಿತವಾಗಿಲ್ಲ.

ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ
ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

ಐಪಿಎಲ್‌ 2024ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಐದನೇ ಪಂದ್ಯವಾಡಲು ಸಜ್ಜಾಗಿವೆ. ಚಂಡೀಗಢದಲ್ಲಿ ನಿರ್ಮಾಣವಾಗಿರುವ ಹೊಸ ಕ್ರೀಡಾಂಗಣ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂ ಮುಲ್ಲಾನ್‌ಪುರದಲ್ಲಿ ಏಪ್ರಿಲ್ 9ರ ಮಂಗಳವಾರ ಪಂದ್ಯ ನಡೆಯುತ್ತಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಉಭಯ ತಂಡಗಳು ಆಡಿದ ಕೊನೆಯ ಪಂದ್ಯದಲ್ಲಿ ಗೆದ್ದಿದ್ದು, ಪಂದ್ಯಾವಳಿಯಲ್ಲಿ ಒಟ್ಟಾರೆ ತಲಾ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ತಲಾ ನಾಲ್ಕು ಅಂಕಗಳನ್ನು ಹೊಂದಿವೆ.

ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಆತಿಥೇಯ ಪಂಜಾಬ್‌ ಕಿಂಗ್ಸ್, ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 200 ರನ್‌ ಚೇಸಿಂಗ್‌ ಮಾಡಿ ರೋಚಕ ಗೆಲುವು ಸಾಧಿಸಿತ್ತು. ಶಶಾಂಕ್ ಸಿಂಗ್ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಇದೇ ವೇಳೆ ಅಶುತೋಷ್ ಶರ್ಮಾ‌ ಮ್ಯಾಚ್ ವಿನ್ನಿಂಗ್‌ ಆಟವಾಡಿದ್ದರು. ಆದರೆ, ತಂಡದಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ. ವೇಗಿ ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ರಾಹುಲ್ ಚಹಾರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.

ಪ್ರಮುಖ ವಿದೇಶಿ ಆಲ್‌ರೌಂಡರ್‌ ಲಿಯಾಮ್ ಲಿವಿಂಗ್‌ಸ್ಟನ್ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಪಂದ್ಯಗಳಲ್ಲಿಯೂ ಅವರು ಕಣಕ್ಕಿಳಿಯುವುದು ಅನುಮಾನ.

ತವರಿನ ಹೊರಗೆ ಮೊದಲ ಗೆಲುವು ಸಾಧಿಸುತ್ತಾ ಎಸ್‌ಆರ್‌ಎಚ್

ಪ್ಯಾಟ್‌ ಕಮಿನ್ಸ್‌ ನಾಯಕತ್ವದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಸ್ಫೋಟಕ ಪ್ರದರ್ಶನ ನೀಡುತ್ತಿದೆ. ಆದರೆ, ತವರಿನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಮಾತ್ರ ತಂಡ ಗೆದ್ದಿದ್ದು, ಹೊರಗಡೆ ನಡೆದ (ಕೋಲ್ಕತ್ತಾ, ಅಹಮದಾಬಾದ್) ಇನ್ನೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಗೆದ್ದ ಎರಡು ಪಂದ್ಯಗಳಲ್ಲಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ. ಇದೀಗ ತವರಿನ ಹೊರಗೆ ತಂಡವು ಮೊದಲ ಗೆಲುವು ಕಾಣುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ | ಆರ್​ಸಿಬಿ ಹೆಸರು ಬದಲಾಯ್ತಷ್ಟೆ, ಹಣೆಬರಹವಲ್ಲ; ಫಾಫ್ ಪಡೆಯನ್ನು ಕ್ರೂರವಾಗಿ ಟೀಕಿಸಿದ ಭಾರತದ ಮಾಜಿ ಕ್ರಿಕೆಟಿಗ

ತಂಡದಲ್ಲಿ ವೇಗವಾಗಿ ರನ್‌ ಕಲೆ‌ ಹಾಕುವ ಸ್ಫೋಟಕ ಆಟಗಾರರ ಬಳಗವಿದೆ. ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾಗಿ ಸಿಡಿಗುಂಡುಗಳಾಗಿದ್ದಾರೆ. ಆಕ್ರಮಣಕಾರಿ ಆಟದೊಂದಿಗೆ ಪವರ್‌ಪ್ಲೇನಲ್ಲಿ ರನ್‌ ಮಳೆ ಹರಿಯುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್‌, ಮರ್ಕ್ರಾಮ್‌ ಕೂಡಾ ಫಾರ್ಮ್‌ನಲ್ಲಿದ್ದಾರೆ. ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ವೇಗಿಗಳಾಗಿ ಫಾರ್ಮ್‌ನಲ್ಲಿದ್ದಾರೆ. ಆದರೆ, ಸ್ಪಿನ್ ಬಳಗವು ಸ್ಥಿರ ಪ್ರದರ್ಶನ ನೀಡದಿರುವುದು ತಂಡಕ್ಕೆ ತಲೆನೋವಾಗಿದೆ.

ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ತಂಡ

ಜಾನಿ ಬೇರ್‌ಸ್ಟೋ, ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಅಶುತೋಷ್ ಶರ್ಮಾ, ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡಾ, ರಾಹುಲ್ ಚಹಾರ್.

ಐಪಿಎಲ್‌ 2024 ಟೀಮ್‌ ಸ್ಟಾಟ್

ಸನ್‌ರೈಸರ್ಸ್‌ ಹೈದರಾಬಾದ್‌ ಸಂಭಾವ್ಯ ಆಡುವ ಬಳಗ

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್), ಶಹಬಾಜ್ ಅಹ್ಮದ್, ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್, ಮಯಾಂಕ್ ಮಾರ್ಕಾಂಡೆ, ನಿತೀಶ್ ಕುಮಾರ್ ರೆಡ್ಡಿ.

Whats_app_banner