ಕನ್ನಡ ಸುದ್ದಿ  /  ಕ್ರಿಕೆಟ್  /  ರಾಹುಲ್ ತೆವಾಟಿಯಾ ಫಿನಿಶಿಂಗ್; ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಗುಜರಾತ್‌ ಟೈಟಾನ್ಸ್

ರಾಹುಲ್ ತೆವಾಟಿಯಾ ಫಿನಿಶಿಂಗ್; ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಗುಜರಾತ್‌ ಟೈಟಾನ್ಸ್

PBKS vs GT:‌ ಐಪಿಎಲ್‌ 2024ರಲ್ಲಿ ಶುಭ್ಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ನಾಲ್ಕನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಅತ್ತ ಆತಿಥೇಯ ಪಂಜಾಬ್‌ ಕಿಂಗ್ಸ್ ತಂಡವು ತವರಿನಲ್ಲಿ ನಾಲ್ಕನೇ ಸೋಲು ಕಂಡಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಗುಜರಾತ್‌ ಟೈಟಾನ್ಸ್
ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಗುಜರಾತ್‌ ಟೈಟಾನ್ಸ್ (AP)

ಆತಿಥೇಯ ಪಂಜಾಬ್‌ ಕಿಂಗ್ಸ್‌ ವಿರುದ್ಧ ಗುಜರಾತ್‌ ಟೈಟಾನ್ಸ್‌ (Punjab Kings vs Gujarat Titans) ರೋಚಕ ಜಯ ಸಾಧಿಸಿದೆ. ಮುಲ್ಲಾನ್‌ಪುರದಲ್ಲಿ ನಡೆದ ಲೋ ಸ್ಕೋರಿಂಗ್‌ ಪಂದ್ಯದಲ್ಲಿ, ಸಾಯಿ ಕಿಶೋರ್‌ ಬೌಲಿಂಗ್‌ ಹಾಗೂ ರಾಹುಲ್‌ ತೆವಾಟಿಯಾ ಫಿನಿಶಿಂಗ್‌ ನೆರವಿಂದ ಶುಭ್ಮನ್‌ ಗಿಲ್‌ ಪಡೆಯು 3ವಿಕೆಟ್‌ಗಳಿಂದ ಗೆಲುವು ಒಲಿಸಿಕೊಂಡಿದೆ. ಐಪಿಎಲ್‌ 2024ರ ಆವೃತ್ತಿಯಲ್ಲಿ ನಾಲ್ಕನೇ ಗೆಲುವಿನೊಂದಿಗೆ ತಂಡವು ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಅತ್ತ ಪಂಜಾಬ್‌ ತಂಡವು ಟೂರ್ನಿಯಲ್ಲಿ 6ನೇ ಸೋಲು ಕಂಡಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಕಿಂಗ್ಸ್‌, ನಿಗದಿತ 20 ಓವರ್‌ಗಳಲ್ಲಿ 142 ರನ್‌ ಗಳಿಸಿ ಆಲೌಟ್‌ ಆಯ್ತು. ಗುರಿ ಬೆನ್ನಟ್ಟಿದ ಗುಜರಾತ್‌, 19.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್‌ ಕಲೆ ಹಾಕಿ ಜಯ ತನ್ನದಾಗಿಸಿಕೊಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್ ಕಿಂಗ್ಸ್, ಉತ್ತಮ ಆರಂಭ ಪಡೆಯಿತು. ಆದರೆ, ಅದನ್ನು ಕೊನೆಯವರೆಗೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಆರಂಭಿಕರಾದ ನಾಯಕ ಸ್ಯಾಮ್‌ ಕರನ್‌ ಹಾಗೂ ಪ್ರಭ್‌ಸಿಮ್ರಾನ್‌ ಸಿಂಗ್‌ ಅರ್ಧಶತಕದ ಜೊತೆಯಾಟವಾಡಿದರು. ಪ್ರಭ್‌ಸಿಮ್ರಾನ್‌ 35 ರನ್‌ ಗಳಿಸಿ ಔಟಾಗುತ್ತಿದ್ದಂತೆಯೇ, ಪಂಜಾಬ್‌ ಬಳಗದ ವಿಕೆಟ್‌ ಒಂದೊಂದಾಗಿ ಉರುಳುತ್ತಾ ಹೋದವು. ರೋಸ್ಸೋ 9 ರನ್‌ ಗಳಿಸಿದರೆ, ಕರನ್‌ 20 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಲಿವಿಂಗ್‌ಸ್ಟನ್‌ 6, ಜಿತೇಶ್‌ ಶರ್ಮಾ 13 ಹಾಗೂ ಅಶುತೋಷ್ ಶರ್ಮಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಶಶಾಂಕ್‌ ಸಿಂಗ್‌ ಆಟ ಕೂಡಾ 8 ರನ್‌ಗಳಿಗೆ ಅಂತ್ಯವಾಯ್ತು.

ಇದನ್ನೂ ಓದಿ | ಸುನಿಲ್ ನರೈನ್ ಟೀಸ್ ಮಾಡಿದ ವಿರಾಟ್; ಅಂಡರ್​ಟೇಕರ್ ಶೈಲಿಯಲ್ಲಿ ಕತ್ತು ಸೀಳ್ತೇನೆ ಎಂದ ಕೊಹ್ಲಿ, ಫನ್ನಿ ವಿಡಿಯೋ ವೈರಲ್

ಇನ್ನಿಂಗ್ಸ್‌ ಕೊನೆಯಲ್ಲಿ ಹರ್‌ಪ್ರೀತ್‌ ಬ್ರಾರ್‌ ಹಾಗೂ ಹರ್‌ಪ್ರೀತ್‌ ಸಿಂಗ್‌ ಕೆಲಕಾಲ ಉತ್ತಮ ಬ್ಯಾಟಿಂಗ್‌ ನಡೆಸಿದರು. ಬ್ರಾರ್‌ 29 ರನ್‌ ಸಿಡಿಸಿದರೆ, ಸಿಂಗ್‌ ಅಜೇಯ 14 ರನ್‌ ಗಳಿಸಿದರು. ಕೊನೆಯ ಎಸೆತದಲ್ಲಿ ತಂಡವು ಆಲೌಟ್‌ ಆಯ್ತು.‌ ಅಂತಿಮವಾಗಿ ಆತಿಥೇಯರು 142 ರನ್‌ ಗಳಿಸಲಷ್ಟೇ ಶಕ್ತರಾದರು. ಗುಜರಾತ್‌ ಪರ ಸಾಯಿ ಕಿಶೋರ್‌ 4 ವಿಕೆಟ್‌ ಪಡೆದು ಮಿಂಚಿದರು.

ಗುಜರಾತ್‌ ನೀರಸ ಚೇಸಿಂಗ್

ಗೆಲುವಿಗೆ ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ಕೂಡಾ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ವೃದ್ಧಿಮಾನ್‌ ಸಾಹಾ 13 ರನ್‌ ಗಳಿಸಿ ಔಟಾದರೆ, ನಾಯಕ ಶುಭ್ಮನ್‌ ಗಿಲ್‌ 35 ರನ್‌ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಚೆಲ್ಲಿದರು. ಡೇಂಜರಸ್‌ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ 4 ರ್‌ ಗಳಿಸಿ ಲಿವಿಂಗ್‌ಸ್ಟನ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. 31 ರನ್‌ ಗಳಿಸಿ ರಕ್ಷಣಾತ್ಮಕ ಆಟವಾಡುತ್ತಿದ್ದ ಸಾಯಿ ಸುದರ್ಶನ್‌ ಆಟ 31 ರನ್‌ಗಳಿಗೆ ಅಂತ್ಯವಾಯ್ತು. ಒಮರ್ಜಾಯ್‌ 13 ರನ್‌ ಗಳಿಸಿ ಹರ್ಷಲ್‌ ಪಟೇಲ್‌ ಎಸೆತದಲ್ಲಿ ಔಟಾದರು.

ಗೆಲುವಿನ ದಡ ಸೇರಿಸಿದ ರಾಹುಲ್‌ ತೆವಾಟಿಯಾ

ಡೆತ್‌ ಓವರ್‌ಗಳಲ್ಲಿ ರಾಹುಲ್ ತೆವಾಟಿಯಾ ಹಾಗೂ ಶಾರುಖ್‌ ಖಾನ್‌ ಅಬ್ಬರಿಸಿದರು. ಶಾರುಖ್‌ 8 ರನ್‌ ಗಳಿಸಿ ಔಟಾದರೆ, ರಶೀದ್‌ ಖಾನ್‌ ಕೂಡಾ 3 ರನ್‌ ಗಳಿಸಿ ಕೊನೆಯ ಹಂತದಲ್ಲಿ ನಿರ್ಗಮಿಸಿದರು. ರಾಹುಲ್‌ ತೆವಾಟಿಯಾ 18 ಎಸೆತಗಳಲ್ಲಿ ಅಜೇಯ 36 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

IPL_Entry_Point