ಕನ್ನಡ ಸುದ್ದಿ  /  Cricket  /  Ipl 2024 Rajasthan Royals Vs Delhi Capitals Pitch Report And Jaipur Weather Forecast Rr Vs Dc Live Streaming Jra

ರಾಜಸ್ಥಾನ ರಾಯಲ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್; ಜೈಪುರ ಪಿಚ್, ಹವಾಮಾನ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ

Rajasthan Royals vs Delhi Capitals: ಜೈಪುರದಲ್ಲಿ ಮಾರ್ಚ್ 28ರಂದು ನಡೆಯಲಿರುವ ಐಪಿಎಲ್‌ 2024ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದ ಪಿಚ್‌, ಹವಾಮಾನ ಹಾಗೂ ಲೈವ್‌ ಸ್ಟ್ರೀಮಿಂಗ್‌ ವಿವರ ಇಲ್ಲಿದೆ.

ರಾಜಸ್ಥಾನ ರಾಯಲ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ
ರಾಜಸ್ಥಾನ ರಾಯಲ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ

ಐಪಿಎಲ್‌ 2024ರ ಆವೃತ್ತಿಯ 9ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ (Rajasthan Royals vs Delhi Capitals) ತಂಡಗಳು ಮುಖಾಮುಖಿಯಾಗುತ್ತಿವೆ. ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಜಯ ಸಾಧಿಸಿರುವ ರಾಜಸ್ಥಾನ್, ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅತ್ತ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ನಾಯಕ ರಿಷಭ್ ಪಂತ್ 14 ತಿಂಗಳ ಬಳಿಕ ಮೈದಾನಕ್ಕಿಳಿದಿದ್ದು, ತಮ್ಮ ಮೊದಲ ಪಂದ್ಯದಲ್ಲಿ 13 ಎಸೆತಗಳಲ್ಲಿ 18 ರನ್ ಗಳಿಸಿದ್ದರು.‌ ಇದೀಗ ಉಭಯ ತಂಡಗಳ ನಡುವಿನ ಮುಂದಿನ ಪಂದ್ಯವು ಆರ್‌ಆರ್‌ ತವರು ಜೈಪುರದಲ್ಲಿ ನಡೆಯುತ್ತಿದೆ.

ಮಾರ್ಚ್ 28ರಂದು ಪಂದ್ಯವು ಸಂಜೆ ಸಂಜೆ 7:30ಕ್ಕೆ ಆರಂಭವಾಗಲಿದೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಟಾಸ್‌ ಪ್ರಕ್ರಿಯೆ ನಡೆಯಲಿದೆ.

ರಾಜಸ್ಥಾನ ಮತ್ತು ಡೆಲ್ಲಿ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಡಿಸಿ ತಂಡವು 13 ಪಂದ್ಯಗಳಲ್ಲಿ ಗೆದ್ದಿದ್ದರೆ, ರಾಜಸ್ಥಾನವು 14 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳ ನಡುವಿನ ಕೊನೆಯ ಐದು ಐಪಿಎಲ್ ಪಂದ್ಯಗಳಲ್ಲಿ ರಾಜಸ್ಥಾನವು ಮೂರು ಪಂದ್ಯಗಳಲ್ಲಿ‌ ಗೆದ್ದಿದೆ. 2022ರ ಆವೃತ್ತಿಯಲ್ಲಿ ಡೆಲ್ಲಿ ಕೊನೆಯ ಬಾರಿಗೆ ರಾಯಲ್ಸ್‌ ವಿರುದ್ಧ ಗೆದ್ದಿತ್ತು. ಡೆಲ್ಲಿ ವಿರುದ್ಧ ರಾಜಸ್ಥಾನ ಗಳಿಸಿದ 222 ರನ್‌ ಉಭಯ ತಂಡಗಳ ನಡುವಿನ ಗರಿಷ್ಠ ಸ್ಕೋರ್ ಆಗಿದೆ.

ಇದನ್ನೂ ಓದಿ | ಆರ್‌ಸಿಬಿಯಲ್ಲಿದ್ದಾಗ ಶಿವಂ ದುಬೆ ಎಂದಿಗೂ ಮುಕ್ತವಾಗಿರಲು ಸಾಧ್ಯವಾಗಿಲ್ಲ; ಇದು ಸಿಎಸ್‌ಕೆ ಮತ್ತು ಧೋನಿ ಮ್ಯಾಜಿಕ್‌ ಎಂದ ಎಬಿಡಿ

ಪಿಚ್ ವರದಿ

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಆವೃತ್ತಿಯ ಮೊದಲ ಪಂದ್ಯದಲ್ಲಿ, ವೇಗಿಗಳಿಗೆ ಪಿಚ್ ನೆರವಾಗಲಿಲ್ಲ. ಮತ್ತೊಂದೆಡೆ, ಬ್ಯಾಟರ್‌ಗಳು ಸುಲಭವಾಗಿ ರನ್‌ ಗಳಿಸಿದರು. ಬೌನ್ಸರ್‌ಗಳಿಗೂ ಬ್ಯಾಟ್‌ ಬೀಸಲು ಸಾಧ್ಯವಾಯ್ತು. ಸದ್ಯ ಎರಡನೇ ಪಂದ್ಯದಲ್ಲೂ ಇದೇ ರೀತಿ ಪಿಚ್‌ ವರ್ತಿಸುವ ನಿರೀಕ್ಷೆ ಇದೆ. ಈ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಆತಿಥೇಯ ತಂಡದಲ್ಲಿ ಅನುಭವಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇದ್ರ ಚಹಾಲ್ ಇದ್ದಾರೆ. ಅತ್ತ ಡೆಲ್ಲಿ ತಂಡದಲ್ಲಿ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಆಡಲಿದ್ದಾರೆ. ಉಭಯ ತಂಡಗಳ ನಡುವೆ ಪೈಪೋಟಿ ನಿರೀಕ್ಷಿಸಲಾಗಿದೆ.

ಜೈಪುರ ಹವಾಮಾನ ವರದಿ

ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಪಂದ್ಯದ ಆರಂಭದ ಸಮಯದಲ್ಲಿ ಜೈಪುರದಲ್ಲಿ ತಾಪಮಾನವು ಸುಮಾರು 34 ಡಿಗ್ರಿಗಳಷ್ಟಿರಲಿದೆ. ಸಂಜೆ ಬಳಿಕ ತಾಪಮಾನ ಕುಸಿಯಲಿದ್ದು, 30 ಡಿಗ್ರಿಗಳಿಗೆ ಇಳಿಯುವ ಸಾಧ್ಯತೆ ಇದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಪಂದ್ಯವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು.

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

‌ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಕಿ ಭುಯಿ, ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್.‌

IPL_Entry_Point