ಕನ್ನಡ ಸುದ್ದಿ  /  ಕ್ರಿಕೆಟ್  /  ರಾಜಸ್ಥಾನ್ ರಾಯಲ್ಸ್ Vs ಗುಜರಾತ್ ಟೈಟಾನ್ಸ್; ಎರಡು ಶತಕ ಸಿಡಿದ ಮೈದಾನದ ಪಿಚ್, ಹವಾಮಾನ ವರದಿ

ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್; ಎರಡು ಶತಕ ಸಿಡಿದ ಮೈದಾನದ ಪಿಚ್, ಹವಾಮಾನ ವರದಿ

RR vs GT: ಐಪಿಎಲ್‌ 17ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಏಪ್ರಿಲ್ 10ರಂದು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಜೇಯ ರಾಜಸ್ಥಾನ, ಸತತ ಐದನೇ ಗೆಲುವಿಗೆ ಎದುರು ನೋಡುತ್ತಿದೆ.

ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್
ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್

ಐಪಿಎಲ್‌ 2024ರ ಆವೃತ್ತಿಯು ರೋಚಕವಾಗಿ ಸಾಗುತ್ತಿದೆ. ಟೂರ್ನಿಯಲ್ಲಿ ಈವರೆಗೆ ನಡೆದ ಪಂದ್ಯಗಳಲ್ಲಿ ಒಂದು ತಂಡ ಅಜೇಯವಾಗಿದೆ. ಅದುವೇ ರಾಜಸ್ಥಾನ್‌ ರಾಯಲ್ಸ್ (Rajasthan Royals).‌ ಬಲಿಷ್ಠ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್‌ ಬಳಗವು, ಏಪ್ರಿಲ್ 10ರಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ (Sawai Mansingh Stadium) ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಎದುರಿಸುತ್ತಿದೆ. ಈವರೆಗೆ ಟೂರ್ನಿಯಲ್ಲಿ ಆಡಿರುವ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದಿರುವ ಆರ್‌ಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಶುಭ್ಮನ್‌ ಗಿಲ್‌ ನಾಯಕತ್ವದ ಜಿಟಿ ತಂಡ ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಸೋತು 7ನೇ ಸ್ಥಾನದಲ್ಲಿದೆ. ಕಳೆದ ಆವೃತ್ತಿಯ ಫೈನಲಿಸ್ಟ್‌ ಈ ಬಾರಿ ಟ್ರೋಫಿ ಗೆಲುವಿನತ್ತ ಮುನ್ನುಗ್ಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮುಖಾಮುಖಿ ದಾಖಲೆ

ರಾಜಸ್ಥಾನ್ ರಾಯಲ್ಸ್‌ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಈವರೆಗೆ 5 ಐಪಿಎಲ್ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಆರ್‌ಆರ್‌ ಕೇವಲ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಉಳಿದಂತೆ ಬಲಿಷ್ಠ ಜಿಟಿ 4 ಪಂದ್ಯದಲ್ಲಿ ಗೆದ್ದು ಬೀಗಿದೆ. ಐಪಿಎಲ್ 2022ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ ಎಲ್ಲಾ 3 ಪಂದ್ಯಗಳಲ್ಲಿಯೂ ಗುಜರಾತ್‌ ಗೆದ್ದಿತ್ತು. ಕಳೆದ ವರ್ಷ ಮಾತ್ರ ಒಂದು ಪಂದ್ಯದಲ್ಲಿ ಸ್ಯಾಮ್ಸನ್‌ ಪಡೆ 3 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದ ಪಿಚ್ ವರದಿ

ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂ ಮೈದಾನವು ದೊಡ್ಡದಾಗಿದ್ದು, ಇಲ್ಲಿನ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತದೆ. ಇಲ್ಲಿ ಹೆಚ್ಚು ರನ್‌ ಗಳಿಸುವುದು ತುಸು ಕಷ್ಟ. ಪಂದ್ಯದ ಆರಂಭಿಕ ಹಂತದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಇರುವುದರಿಂದ ಟಾಸ್‌ ಗೆದ್ದ ತಂಡಗಳು ಹೆಚ್ಚಾಗಿ ಮೊದಲು ಬೌಲಿಂಗ್ ಮಾಡುತ್ತವೆ. ಬೌಂಡರಿಗಳು ದೊಡ್ಡದಾಗಿರುವುದರಿಂದ ನಂತರದ ಹಂತದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ಸೂರ್ಯ, ರಿಂಕು ಜೊತೆ ಸಿಎಸ್‌ಕೆ ಸ್ಟಾರ್ ಬೇಕೆಂದ ಮಾಜಿ ಕ್ರಿಕೆಟಿಗ; ಹಾರ್ದಿಕ್ ಪಾಂಡ್ಯ ಹೆಸರೇ ಇಲ್ಲ!

ಈ ವರ್ಷ ಮೈದಾನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 187 ರನ್.‌ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ. ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಚೇಸಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ಸುಲಭ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ ಹಾಗೂ ಬಟ್ಲರ್‌ ಶತಕ ಸಿಡಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದ್ದರು.‌ ಶತಕ ಸಿಡಿಸಿದ ವಿರಾಟ್‌ ಕೂಡಾ, ನಿಧಾನಗತಿಯ ಸೆಂಚುರಿಗಾಗಿ ಟೀಕೆಗೊಳಗಾದರು. ಈ ಪಿಚ್ ಟ್ರಿಕಿಯಾಗಿದೆ ಎಂದು ಪಂದ್ಯದ ನಂತರ ಫಾಫ್ ಡು ಪ್ಲೆಸಿಸ್ ಹೇಳಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಮಂಜು ಪ್ರಮುಖ ಪಾತ್ರ ವಹಿಸಿ, ಚೇಸಿಂಗ್‌ ಸುಲಭಗೊಳಿಸಿತ್ತು.

ಜೈಪುರ ಹವಾಮಾನ ವರದಿ

ಪಂದ್ಯ ಆರಂಭದ ವೇಳೆಗೆ ಜೈಪುರದಲ್ಲಿ ತಾಪಮಾನವು ಸುಮಾರು 35 ಡಿಗ್ರಿಗಳಷ್ಟಿರುತ್ತದೆ. ಅಂತ್ಯದ ವೇಳೆಗೆ ಬಿಸಿಯು 30 ಡಿಗ್ರಿಗಳಿಗೆ ಇಳಿಯಲಿದೆ. ಪಂದ್ಯದ ದಿನ ಮಳೆಯಾಗುವ ಸಾಧ್ಯತೆಯಿಲ್ಲ.

IPL_Entry_Point