ಕನ್ನಡ ಸುದ್ದಿ  /  ಕ್ರಿಕೆಟ್  /  ರಾಜಸ್ಥಾನ್ ರಾಯಲ್ಸ್ Vs ಮುಂಬೈ ಇಂಡಿಯನ್ಸ್ 2ನೇ ಕದನ; ಸಂಭಾವ್ಯ ತಂಡ, ಪಿಚ್ ಹಾಗೂ ಹವಾಮಾನ ವರದಿ

ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ 2ನೇ ಕದನ; ಸಂಭಾವ್ಯ ತಂಡ, ಪಿಚ್ ಹಾಗೂ ಹವಾಮಾನ ವರದಿ

ಏಪ್ರಿಲ್ 22ರಂದು ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗುತ್ತಿವೆ. ಬಲಿಷ್ಠ ಎರಡು ತಂಡಗಳ ನಡುವಿನ ಪಂದ್ಯಕ್ಕೆ ಸಂಭಾವ್ಯ ತಂಡ, ಪಿಚ್‌ ಹಾಗೂ ಹವಾಮಾನ ವರದಿ ಇಲ್ಲಿದೆ.

ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಐಪಿಎಲ್‌ ಪಂದ್ಯ
ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಐಪಿಎಲ್‌ ಪಂದ್ಯ

ಐಪಿಎಲ್‌ 2024ರಲ್ಲಿ ಹ್ಯಾಟ್ರಿಕ್‌ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಮುಂಬೈ ಇಂಡಿಯನ್ಸ್, ಆ ನಂತರ ಆಡಿದ ತನ್ನ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಹಾರ್ದಿಕ್‌ ಪಾಂಡ್ಯ ಬಳಗದ ಮುಂದಿನ ಎದುರಾಳಿ ಬಲಿಷ್ಠ ರಾಜಸ್ಥಾನ್‌ ರಾಯಲ್ಸ್‌. ಕೇವಲ ಒಂದು ಸೋಲಿನೊಂದಿಗೆ ದಾಖಲೆಯ 7 ಪಂದ್ಯಗಳಲ್ಲಿ ಗೆದ್ದಿರುವ ಸಂಜು ಸ್ಯಾಮ್ಸನ್‌ ಪಡೆಯು, ಏಪ್ರಿಲ್‌ 22ರ ಸೋಮವಾರ ಜೈಪುರದಲ್ಲಿ ನಡೆಯಲಿರುವ ಹೈವೋಲ್ಟೇಜ್‌ ಪಂದ್ಯದಲ್ಲಿ ಎಂಐ ತಂಡವನ್ನು ಎದುರಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ರಾಜಸ್ಥಾನ ಪರ ನಾಯಕ ಸಂಜು ಸ್ಯಾಮ್ಸನ್ ಮತ್ತು ರಿಯಾನ್‌ ಪರಾಗ್‌ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಇವರೊಂದಿಗೆ ಜೋಸ್ ಬಟ್ಲರ್ ಕೂಡಾ ಲಯ ಕಂಡುಕೊಂಡಿದ್ದಾರೆ. ಅತ್ತ ಬಲಿಷ್ಠ ಬ್ಯಾಟಿಂಗ್ ಲೈನಪ್‌ ಹೊಂದಿರುವ ಮುಂಬೈ ತಂಡವು ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ರಾಜಸ್ಥಾನವನ್ನು ಮಣಿಸಬೇಕಿದ್ದರೆ ಬೌಲರ್‌ಗಳು ಮಿಂಚಬೇಕಿದೆ. ಮಾಜಿ ಚಾಂಪಿಯನ್‌ಗಳ ಪರ ಬುಮ್ರಾ ಒಬ್ಬರೇ 5.96ರ ಎಕಾನಮಿಯೊಂದಿಗೆ ಉತ್ತಮ ಲಯದಲ್ಲಿದ್ದಾರೆ. ಜೆರಾಲ್ಡ್ ಕೋಯೆಟ್ಜಿ ಸೇರಿದಂತೆ ಇತರರು ಸ್ಥಿರ ಪ್ರದರ್ಶನ ನೀಡುತ್ತಿಲ್ಲ.

ಟೂರ್ನಿಯಲ್ಲಿ ಉಭಯ ತಂಡಗಳ ನಡುವಣ ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನವು ಮುಂಬೈ ತವರಲ್ಲಿ ಸುಲಭ ಜಯ ಸಾಧಿಸಿತ್ತು.

ಇದನ್ನೂ ಓದಿ | DC vs SRH: 15 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದರೂ ಬೇಡದ ದಾಖಲೆ ಬರೆದ ಜೇಕ್​ ಫ್ರೇಸರ್

ಸಂಜು ಸ್ಯಾಮ್ಸನ್‌ ಬಳಗದಲ್ಲಿ ಬೌಲಿಂಗ್ ವೇಳೆ ಯಶಸ್ವಿ ಜೈಸ್ವಾಲ್ ಅಥವಾ ಜೋಸ್ ಬಟ್ಲರ್‌ ಇಂಪ್ಯಾಕ್ಟ್‌ ಪ್ಲೇಯರ್‌ ಆಡಲಿದ್ದಾರೆ. ಸದ್ಯ ಸಂದೀಪ್ ಶರ್ಮಾ ಪಂದ್ಯಕ್ಕೆ ಲಭ್ಯರಾಗುವ ಕುರಿತು ಮಾಹಿತಿ ಇಲ್ಲ. ಅತ್ತ ಮುಂಬೈ ತಂಡವು ಬೌಲಿಂಗ್ ಮಾಡುವಾಗ ಸೀಮರ್ ಆಕಾಶ್ ಮಧ್ವಾಲ್ ಅವರನ್ನು ಸೂರ್ಯಕುಮಾರ್ ಯಾದವ್ ಅವರಿಗೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿಸುತ್ತಿದೆ. ಇದೇ ತಂತ್ರ ಜೈಪುರದಲ್ಲೂ ಮುಂದುವರೆಯುವ ಸಾಧ್ಯತೆ ಇದೆ.

ಜೈಪುರ ಪಿಚ್ ವರದಿ

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣ ಪಿಚ್ ಬ್ಯಾಟಿಗ್ ಮತ್ತು ಬೌಲಿಂಗ್ ಎರಡಕ್ಕೂ ಉತ್ತಮವಾಗಿದೆ. ಮೈದಾನದಲ್ಲಿ ಉತ್ತಮ ರನ್‌ ಹರಿದು ಬರುತ್ತಿದೆ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಿಗೆ ಪಿಚ್ ಹೆಚ್ಚು ನೆರವು ನೀಡುತ್ತದೆ. ಪ್ರಸಕ್ತ ಋತುವಿನಲ್ಲಿ ಕ್ರೀಡಾಂಗಣದಲ್ಲಿ ನಡೆದ 4 ಪಂದ್ಯಗಳಲ್ಲಿ, ತಂಡಗಳು 180ಕ್ಕೂ ಹೆಚ್ಚು ರನ್ ಗಳಿಸಿವೆ.

ಆತಿಥೇಯ ರಾಯಲ್ಸ್‌ ತಂಡವು ಇಲ್ಲಿ ಆಡಿದ ಎರಡು ಪಂದ್ಯಗಳಲ್ಲಿ 185 ಮತ್ತು 193 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಂಡಿತ್ತು.‌ ಆದರೆ ಒಂದು ಪಂದ್ಯದಲ್ಲಿ ಗುಜರಾತ್ ತಂಡವು 196 ರನ್‌ ಚೇಸ್‌ ಮಾಡಿತ್ತು. ಈ ಒಂದರಲ್ಲಿ ಮಾತ್ರ ಆತಿಥೇಯ ತಂಡ ಸೋತಿದೆ.

ಜೈಪುರ ಹವಾಮಾನ ವರದಿ

ಪಂದ್ಯವು ಸಂಜೆ 7.30ಕ್ಕೆ ನಡೆಯಲಿದ್ದು, ಜೈಪುರದಲ್ಲಿ ತಾಪಮಾನವು ಸುಮಾರು 28 ಡಿಗ್ರಿಗಳಷ್ಟಿರುವ ನಿರೀಕ್ಷೆ ಇದೆ. ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ ಇಲ್ಲ.

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು‌ ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಕುಲ್ದೀಪ್ ಸೇನ್, ಯುಜ್ವೇಂದ್ರ ಚಹಾಲ್ (ಇಂಪ್ಯಾಕ್ಟ್‌ ಪ್ಲೇಯರ್).

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ಇಶಾನ್ ಕಿಶನ್ (ವಿಕೆಟ್‌ ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ತಿಲಕ್ ವರ್ಮಾ, ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೋಟ್ಜಿ, ಆಕಾಶ್ ಮಧ್ವಲ್ (ಇಂಪ್ಯಾಕ್ಟ್‌ ಪ್ಲೇಯರ್).

IPL_Entry_Point