ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಪ್ಯಾಕ್ಟ್ ಆಟಗಾರನಾಗಿ ಈ ಸ್ಪಿನ್ನರ್ ಎಂಟ್ರಿ; ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್‌ ವಿರುದ್ಧ ಆರ್‌ಸಿಬಿಯ ಸಂಭಾವ್ಯ ಆಡುವ 11ರ ಬಳಗ

ಇಂಪ್ಯಾಕ್ಟ್ ಆಟಗಾರನಾಗಿ ಈ ಸ್ಪಿನ್ನರ್ ಎಂಟ್ರಿ; ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್‌ ವಿರುದ್ಧ ಆರ್‌ಸಿಬಿಯ ಸಂಭಾವ್ಯ ಆಡುವ 11ರ ಬಳಗ

ಐಪಿಎಲ್ 2024ರ ಲೀಗ್‌ ಹಂತದಲ್ಲಿ ಕೊನೆಯ 6 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ ಪ್ರವೇಶಿಸಿರುವ ಆರ್‌ಸಿಬಿ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಆರ್‌ ತಂಡವನ್ನು ಎದುರಿಸಲಿದೆ. ಆರ್‌ಸಿಬಿಯ ಆಡುವ ಸಂಭಾವ್ಯ 11ರ ಬಳಗ ಇಲ್ಲಿದೆ.

ಇಂಪ್ಯಾಕ್ಟ್ ಆಟಗಾರನಾಗಿ ಈ ಸ್ಪಿನ್ನರ್ ಎಂಟ್ರಿಯಾಗೋದು ಖಚಿತ. ಐಪಿಎಲ್ ಎಲಿಮಿನೇಟರ್-1 ರ ಪಂದ್ಯದಲ್ಲಿ ಆರ್‌ಆರ್‌ ವಿರುದ್ಧ ಆರ್‌ಸಿಬಿಯ ಸಂಭಾವ್ಯ ಆಡುವ 11ರ ಬಳಗ ಹೀಗಿದೆ
ಇಂಪ್ಯಾಕ್ಟ್ ಆಟಗಾರನಾಗಿ ಈ ಸ್ಪಿನ್ನರ್ ಎಂಟ್ರಿಯಾಗೋದು ಖಚಿತ. ಐಪಿಎಲ್ ಎಲಿಮಿನೇಟರ್-1 ರ ಪಂದ್ಯದಲ್ಲಿ ಆರ್‌ಆರ್‌ ವಿರುದ್ಧ ಆರ್‌ಸಿಬಿಯ ಸಂಭಾವ್ಯ ಆಡುವ 11ರ ಬಳಗ ಹೀಗಿದೆ (AFP)

ಅಹಮದಾಬಾದ್ (ಗುಜರಾತ್): ನರೇಂದ್ರ ಮೋದಿ ಸ್ಟೇಡಿಂಯನಲ್ಲಿಂದು (Narendra Modi Stadium) (ಮೇ 22, ಬುಧವಾರ) ಆರ್‌ಸಿಬಿ ಮತ್ತು ಆರ್‌ಆರ್ (RCB vs RR) ನಡುವಿನ‌ ಐಪಿಎಲ್ 2024ರ ಮೊದಲ ಎಲಿಮಿನೇಟರ್ (IPL Eliminator-1) ಪಂದ್ಯ ನಡೆಯಲಿದೆ. ಲೀಗ್ ಹಂತದ ಕೊನೆಯ 6 ಪಂದ್ಯಗಳನ್ನು ಗೆದ್ದು ಯಾವುದೂ ಅಸಾಧ್ಯವಲ್ಲ ಎಂಬುದು ಸಾಬೀತು ಮಾಡಿರುವ ಫಾಫ್ ಡು ಪ್ಲೆಸಿಸ್ (Faf Du Plessis) ನೇತೃತ್ವದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಪ್ರಶಸ್ತಿ ಎತ್ತಹಿಡಿಯಲು ಇನ್ನ ಮೂರು ಮೆಟ್ಟಿಲುಗಳಲಷ್ಟೇ ಬಾಕಿ ಉಳಿದಿವೆ. ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಕಿಂಗ್ ಕೊಹ್ಲಿ, ರಜತ್ ಪಟಿದಾರ್, ಮಾಕ್ಸ್‌ವೆಲ್, ಡಿಕೆ ಅವರನ್ನೊ ಆರ್‌ಸಿಬಿಯ ಬಲಿಷ್ಠ ಪಡೆಯೇ ಕಣಕ್ಕಿಳಿಯಲಿದೆ.

ಟ್ರೆಂಡಿಂಗ್​ ಸುದ್ದಿ

17ನೇ ಆವೃತ್ತಿಯ ಐಪಿಎಲ್‌ನ ಲೀಗ್‌ ಹಂತ 8 ಪಂದ್ಯಗಳ ಪೈಕಿ ಕೇವಲ 1 ರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಫಾಫ್ ಪಡೆ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದಿದೆ. ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಅದರಲ್ಲೂ ಮೇ 18ರ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಅಮೋಘ ಗೆಲುವು ಸಾಧಿಸಿದ್ದು, ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯವಂತೆ ಮಾಡಿತ್ತು.

ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವ ಕಿಂಗ್ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಕ್ರಮಾಂಕದ ಬ್ಯಾಟರ್‌ಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಆಡುತ್ತಿದ್ದಾರೆ. ವಿಶೇಷವಾಗಿ ರಜತ್ ಪಟಿದಾರ್, ಕ್ಯಾಮರೂನ್ ಗ್ರೀನ್ ತಂಡಕ್ಕೆ ನೆರವಾಗುತ್ತಿದ್ದಾರೆ. ಸಿಎಸ್‌ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ವೆಲ್ ಮಿಂಚಿದ್ದು, ಸ್ಫೋಟಕ ಆಟದ ಮುನ್ಸೂಚನೆ ನೀಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಬೌಲಿಂಗ್ ಆರ್‌ಬಿಸಿ ಬಿಗ್ ಕಂಬ್ಯಾಕ್ ಮಾಡಲು ನೆರವಾಗಿದೆ. ಮ್ಯಾಕ್ಸ್‌ವೆಲ್ ಸಿಎಸ್‌ಕೆ ವಿರುದ್ಧ ಮಹತ್ವದ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದು ತಂಡಕ್ಕೆ ದೊಡ್ಡ ಲಾಭ ಮಾಡಿಕೊಟ್ಟಿದ್ದರು. ಮ್ಯಾಕ್ಸಿ ಮತ್ತು ಸ್ವಪ್ನಿಲ್ ಹಾಗೂ ಕರಣ್ ಶರ್ಮಾ ತನ್ನ ಸ್ಪಿನ್ ಮೋಡಿಯ ಮೂಲಕ ಹೆಚ್ಚು ವಿಕೆಟ್ ಪಡೆದರೆ ಆರ್‌ಆರ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಕಷ್ಟವೇನಲ್ಲ. ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತಷ್ಟು ಆಕ್ರಮಣಕಾರಿಯಾಗಬೇಕಿದೆ.

ಎಲಿಮಿನೇಟರ್-1 ಪಂದ್ಯದಲ್ಲಿ ಆರ್‌ಸಿಬಿಯ ಆಡುವ ಸಂಭಾವ್ಯ 11ರ ಬಳಗ

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಟಿದಾರ್, ಕ್ಯಾಮರೂನ್ ಗ್ರೀನ್, ಗ್ಲೇನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಯಶ್ ದಯಾಳ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್,

ಇಂಪ್ಯಾಕ್ಟ್ ಆಟಗಾರರು: ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಹಿಮಾಂಶು ಶರ್ಮಾ, ವೈಶಾಕ್ ವಿಜಯಕುಮಾರ್, ಸ್ವಿಪ್ನಿಲ್ ಸಿಂಗ್,

ಎಲಿಮಿನೇಟರ್-1 ಪಂದ್ಯಕ್ಕೆ ಆರ್‌ಆರ್‌ನ ಆಡುವ ಸಂಭಾವ್ಯ 11ರ ಬಳಗ

ಆರ್‌ಆರ್‌: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಡ್, ಸಂದೀಪ್ ಶರ್ಮಾ, ಅವೇಶನ್ ಖಾನ್, ನಾಂದ್ರೆ ಬರ್ಗರ್,

ಇಂಪ್ಯಾಕ್ಟ್ ಆಟಗಾರರು: ಡೊನೊವನ್ ಫೆರೇರಾ, ಕುಲದೀಪ್ ಸೇನ್, ಯುಜ್ವೇಂದ್ರ ಚಹಾಲ್, ಶುಭಂ ದುವೆ, ಕೇಶವ್ ಮಹಾರಾಜ್.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ