ಕನ್ನಡ ಸುದ್ದಿ  /  Cricket  /  Ipl 2024 Royal Challengers Bengaluru Win Toss Vs Punjab Kings In Chinnaswamy Stadium Faf Du Plessis Shikhar Dhawan Jra

ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ಧ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ; ಬಲಿಷ್ಠ ಆಡುವ ಬಳಗ ಕಣಕ್ಕೆ

Royal Challengers Bengaluru vs Punjab Kings: ಬೆಂಗಳೂರಿನಲ್ಲಿ ನಡೆಯಯುತ್ತಿರುವ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಮೊದಲಿಗೆ ಬ್ಯಾಟಿಂಗ್‌ ಮಾಡುತ್ತಿದೆ.

ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ಧ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ
ಬೆಂಗಳೂರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ಧ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ

ಐಪಿಎಲ್ 2024ರ ಆವೃತ್ತಿಯ ರೋಚಕ ಕದನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು (Royal Challengers Bengaluru vs Punjab Kings) ಮುಖಾಮುಖಿಯಾಗುತ್ತಿವೆ. 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಆರ್‌ಸಿಬಿ, ಇಂದು ತವರಿನಲ್ಲಿ ಮೊದಲ ಪಂದ್ಯ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಆರ್‌ಸಿಬಿ ತಂಡವು ಯಾವುದೇ ಬದಲಾವಣೆಗಳಿಲ್ಲದೆ ಕಣಕ್ಕಿಳಿಯುತ್ತಿದೆ. ಪಂಜಾಬ್ ಕಿಂಗ್ಸ್​ ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಬೆಂಗಳೂರಿನ ವಿರುದ್ಧ ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಧವನ್‌ ಬಳಗ ಕೂಡಾ ಯಾವುದೇ ಬದಲಾವಣೆ ಇಲ್ಲದೆ, ಕಳೆದ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಕಣಕ್ಕಿಳಿಯುತ್ತಿವೆ.

ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ವರದಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಬ್ಯಾಟರ್‌ಗಳ ಸ್ವರ್ಗ ಎಂಬುದು ತಿಳಿದಿರುವ ವಿಚಾರ. ಈ ಮೈದಾನದ ಬೌಂಡರಿ ತುಂಬಾ ಚಿಕ್ಕದಾಗಿದ್ದು, ಬ್ಯಾಟರ್‌ಗಳು ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಬಹುದು. ಇಂದಿನ ಪಂದ್ಯಕ್ಕೆ ಮೈದಾನದ ಮಧ್ಯಭಾಗದ ಸೆಂಟರ್‌ ಪಿಚ್‌ ಬಳಸಲಾಗುತ್ತಿದೆ. ಈ ವಿಕೆಟ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೋಲಿಸಿದರೆ ವೇಗದ ಬೌಲರ್​ಗಳು ಮೇಲುಗೈ ಸಾಧಿಸಲಿದ್ದಾರೆ.

ಇದನ್ನೂ ಓದಿ | ಐಪಿಎಲ್ 2024ರ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಎಲ್ಲಾ ಪಂದ್ಯಗಳು ಭಾರತದಲ್ಲೇ, ಇಲ್ಲಿದೆ ಸಂಪೂರ್ಣ ಶೆಡ್ಯೂಲ್

ಮುಖಾಮುಖಿ ದಾಖಲೆ

ಪಂಜಾಬ್‌ ತಂಡವು ಆರ್‌ಸಿಬಿಗೆ ಎಂದಿಗೂ ಬಿಸಿ ತುಪ್ಪವಾಗಿದೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳ ನಡುವೆ 31 ಪಂದ್ಯಗಳು ನಡೆದಿವೆ. ಇದರಲ್ಲಿ ಪಂಜಾಬ್ ತಂಡ ಮೇಲುಗೈ ಸಾಧಿಸಿದ್ದು 17 ಪಂದ್ಯಗಳಲ್ಲಿ ಗೆದ್ದಿದೆ. ಬೆಂಗಳೂರು ತಂಡ 14ರಲ್ಲಿ ಗೆದ್ದು ಬೀಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಕ್ಯಾಮರೂನ್ ಗ್ರೀನ್, ಅನೂಜ್ ರಾವತ್ (ವಿಕೆಟ್ ಕೀಪರ್​), ದಿನೇಶ್ ಕಾರ್ತಿಕ್, ಅಲ್ಜಾರಿ ಜೋಸೆಫ್, ಮಯಾಂಕ್ ಡಾಗರ್, ಯಶಾ ದಯಾಳ್, ಮೊಹಮ್ಮದ್ ಸಿರಾಜ್.

ಪಂಜಾಬ್ ಕಿಂಗ್ಸ್ ಆಡುವ ಬಳಗ

ಶಿಖರ್ ಧವನ್ (ನಾಯಕ), ಜಾನಿ ಬೇರ್‌ಸ್ಟೋ, ಪ್ರಭುಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹಾರ್.

ಇಂಪ್ಯಾಕ್ಟ್ ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ವಿಜಯ್‌ಕುಮಾರ್ ವೈಶಾಕ್, ಸ್ವಪ್ನಿಲ್ ಸಿಂಗ್,

ಪಂಜಾಬ್ ಕಿಂಗ್ಸ್: ಅರ್ಷದೀಪ್ ಸಿಂಗ್, ರಿಲೀ ರೊಸೊವ್, ತನಯ್ ತ್ಯಾಗರಾಜನ್, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ.