ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ Vs ಸಿಎಸ್​ಕೆ ಸೆಣಸಾಟ

IPL 2024 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ vs ಸಿಎಸ್​ಕೆ ಸೆಣಸಾಟ

IPL 2024 schedule : 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್​ 22ರಿಂದ ಟೂರ್ನಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.

ಐಪಿಎಲ್ ವೇಳಾಪಟ್ಟಿ ಪ್ರಕಟ; ಮಾರ್ಚ್ 22ರಿಂದ ಟೂರ್ನಿ ಆರಂಭ, ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ vs ಸಿಎಸ್​ಕೆ ಸೆಣಸಾಟ
ಐಪಿಎಲ್ ವೇಳಾಪಟ್ಟಿ ಪ್ರಕಟ; ಮಾರ್ಚ್ 22ರಿಂದ ಟೂರ್ನಿ ಆರಂಭ, ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ vs ಸಿಎಸ್​ಕೆ ಸೆಣಸಾಟ

ಕ್ರಿಕೆಟ್‌ ಪ್ರೇಮಿಗಳಿಗೆ ಬಿಸಿಸಿಐಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಂಣ ಮಂಡಳಿ ಪ್ರಕಟಿಸಿದೆ. 2024ರ ಐಪಿಎಲ್​ ಟೂರ್ನಿ ಮಾರ್ಚ್​ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.

ಲೋಕಸಭಾ ಚುನಾವಣೆ ಹಿನ್ನೆಲೆ ಮೊದಲ 15 ದಿನಗಳು ಕಾಲ ನಡೆಯುವ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವತ್ರಿಕ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಮುಂದಿನ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. 2019ರ ಲೋಕಸಭಾ ಚುನಾವಣೆ ಅವಧಿಯಲ್ಲೂ ಇದೇ ವಿಧಾನ ಅನುಸರಿಸಲಾಗಿತ್ತು. ಎರಡು ಹಂತಗಳಲ್ಲಿ ಟೂರ್ನಿಯನ್ನು ನಡೆಸಲಾಗಿತ್ತು. 2023ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಸದ್ಯ ಪ್ರಕಟಿಸಿರುವ ವೇಳಾಪಟ್ಟಿಯು ಮಾರ್ಚ್ 22ರಿಂದ ಏಪ್ರಿಲ್ 7ರ ತನಕ ಮಾತ್ರ ಇದೆ. ಈ ಪೈಕಿ ನಾಲ್ಕು ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ಸಂಜೆ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಪ್ರಾರಂಭವಾಗಲಿವೆ. ಡಬಲ್ ಹೆಡ್ಡರ್ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಮಾರ್ಚ್ 22ರಿಂದ ಏಪ್ರಿಲ್ 7ರ ತನಕ ವೇಳಾಪಟ್ಟಿ

1. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮಾರ್ಚ್ 22 ಚೆನ್ನೈ, ಸಂಜೆ 7:30ಕ್ಕೆ

2. ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 23, ಮೊಹಾಲಿ, ಮಧ್ಯಾಹ್ನ 3:30ಕ್ಕೆ

3. ಕೋಲ್ಕತ್ತಾ ನೈಟ್​ ರೈಡರ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 23, ಕೋಲ್ಕತ್ತಾ, ಸಂಜೆ 7:30ಕ್ಕೆ

4. ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಮಾರ್ಚ್ 24, ಜೈಪುರ ಮಧ್ಯಾಹ್ನ 3:30ಕ್ಕೆ

5. ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್, ಮಾರ್ಚ್ 24, ಅಹಮದಾಬಾದ್, ಸಂಜೆ 7:30ಕ್ಕೆ

6. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಮಾರ್ಚ್ 25, ಬೆಂಗಳೂರು, ಸಂಜೆ 7:30ಕ್ಕೆ

7. ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಮಾರ್ಚ್ 26 ಚೆನ್ನೈ ಸಂಜೆ 7:30ಕ್ಕೆ

8. ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್, ಮಾರ್ಚ್ 27, ಹೈದರಾಬಾದ್, ಸಂಜೆ 7:30ಕ್ಕೆ

9. ಆರ್ಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 28 ಜೈಪುರ ಸಂಜೆ 7:30ಕ್ಕೆ

10. ರಾಯಲ್ ಚಾಲೆಂಜರ್ಸ್ ಬೆಂಗಳೂರು, vs ಕೋಲ್ಕತ್ತಾ ನೈಟ್​ ರೈಡರ್ಸ್, ಮಾರ್ಚ್ 29 ಬೆಂಗಳೂರು ಸಂಜೆ 7:30ಕ್ಕೆ

11. ಲಕ್ನೋ ಸೂಪರ್ ಜೈಂಟ್ಸ್ vs ಪಂಜಾಬ್ ಕಿಂಗ್ಸ್, ಮಾರ್ಚ್ 30, ಲಕ್ನೋ, ಸಂಜೆ 7:30ಕ್ಕೆ

12. ಗುಜರಾತ್ ಟೈಟಾನ್ಸ್ vs ಸನ್​ರೈಸರ್ಸ್ ಹೈದರಾಬಾದ್, ಮಾರ್ಚ್ 31, ಅಹಮದಾಬಾದ್, ಮಧ್ಯಾಹ್ನ 3:30ಕ್ಕೆ

13. ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಮಾರ್ಚ್ 31, ವಿಶಾಖಪಟ್ಟಣಂ, ಸಂಜೆ 7:30ಕ್ಕೆ

14. ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಏಪ್ರಿಲ್ 1, ಮುಂಬೈ, ಸಂಜೆ 7:30ಕ್ಕೆ

15. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್, ಏಪ್ರಿಲ್ 2 ಬೆಂಗಳೂರು ಸಂಜೆ 7:30ಕ್ಕೆ

16. ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್​ ರೈಡರ್ಸ್, ಏಪ್ರಿಲ್ 3, ವಿಶಾಖಪಟ್ಟಣಂ ಸಂಜೆ 7:30ಕ್ಕೆ

17. ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಏಪ್ರಿಲ್ 4 ಅಹಮದಾಬಾದ್ ಸಂಜೆ 7:30ಕ್ಕೆ

18. ಸನ್​ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಏಪ್ರಿಲ್ 5 ಹೈದರಾಬಾದ್ ಸಂಜೆ 7:30ಕ್ಕೆ

19. ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 6 ಜೈಪುರ ಸಂಜೆ 7:30ಕ್ಕೆ

20. ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 7 ಮುಂಬೈ, ಮಧ್ಯಾಹ್ನ 3:30ಕ್ಕೆ

21. ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, ಏಪ್ರಿಲ್ 7 ಲಕ್ನೋ ಸಂಜೆ 7:30ಕ್ಕೆ