ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಗೆಲ್ಲಿಸಿದ ಅಶುತೋಷ್ ಶರ್ಮಾ ಯಾರು? ಯುವಿಯ ವೇಗದ ಅರ್ಧಶತಕ ದಾಖಲೆ ಮುರಿದಿದ್ದ ಆಟಗಾರನ ಪರಿಚಯ

ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಗೆಲ್ಲಿಸಿದ ಅಶುತೋಷ್ ಶರ್ಮಾ ಯಾರು? ಯುವಿಯ ವೇಗದ ಅರ್ಧಶತಕ ದಾಖಲೆ ಮುರಿದಿದ್ದ ಆಟಗಾರನ ಪರಿಚಯ

Who Is Ashutosh Sharma: ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್‌ ಶರ್ಮಾ, ರಾತ್ರಿ ಬೆಳಗಾಗುವುದರೊಳಗೆ ದಸುದ್ದಿಯಾಗಿದ್ದಾರೆ. ಇವರಿಬ್ಬರೂ, ಗುಜರಾತ್‌ ಟೈಟಾನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಮೋಘ ಪ್ರದರ್ಶನ ನೀಡಿದ ಅಶುತೋಷ್‌ ಶರ್ಮಾ ಯಾರು ಎಂಬುದನ್ನು ನೋಡೋಣ.

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ತಂಡ ಗೆಲ್ಲಿಸಿದ ಅಶುತೋಷ್ ಶರ್ಮಾ ಯಾರು
ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ತಂಡ ಗೆಲ್ಲಿಸಿದ ಅಶುತೋಷ್ ಶರ್ಮಾ ಯಾರು (AFP)

ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಅತಿರೋಚಕ ಜಯ ಸಾಧಿಸಿತು. ಮಾಜಿ ಚಾಂಪಿಯನ್‌ ತಂಡದ ವಿರುದ್ಧ ಅಬ್ಬರಿಸಿದ ಕಿಂಗ್ಸ್‌, ಟೂರ್ನಿಯಲ್ಲಿ ಎರಡನೇ ಜಯ ತನ್ನದಾಗಿಸಿಕೊಂಡಿತು. ರೋಚಕ ಮಾತ್ರವಲ್ಲದೆ ರೋಮಾಂಚಕ ಕದನದಲ್ಲಿ 200 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಶಿಖರ್‌ ಧವನ್‌ ಪಡೆ, ಕೊನೆಗೂ ಗೆದ್ದು ಬೀಗಿತು. ಧವನ್, ಜಾನಿ ಬೈರ್‌ಸ್ಟೋ, ಸ್ಯಾಮ್‌ ಕರನ್ ಅವರಂಥ ಅನುಭವಿ ಆಟಗಾರರೇ ವಿಫಲರಾದರೂ, ಭಾರತದ ಅನ್‌ಕ್ಯಾಪ್ಟ್‌ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟ್ರೆಂಡಿಂಗ್​ ಸುದ್ದಿ

ಪಂದ್ಯದ ಹೀರೊ ಆಗಿ ಮಿಂಚಿದವರು ಶಶಾಂಕ್‌ ಸಿಂಗ್. ಕೇವಲ 29 ಎಸೆತ ಎದುರಿಸಿದ ಅವರು, 6 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 61 ರನ್‌ ಗಳಿಸಿದರು. ಇದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದೇ ವೇಳೆ ಮತ್ತೋರ್ವ ಯುವ ಆಟಗಾರ ಅಶುತೋಷ್‌ ಶರ್ಮಾ ಆಟವನ್ನು ಮರೆಯುವಂತಿಲ್ಲ.

ಘಟಾನುಘಟಿ ಬ್ಯಾಟರ್‌ಗಳೇ ಅಬ್ಬರ ಮರೆತಾಗ ತಂಡದ ಗೆಲುವಿಗಾಗಿ ಪಣ ತೊಟ್ಟ ಅಶುತೋಷ್ ಶರ್ಮಾ, ಶಶಾಂ‌ಕ್‌ ಸಿಂಗ್‌ ಜೊತೆಗೂಡಿ ಉತ್ತಮ ಇನ್ನಿಂಗ್ಸ್‌ ಆಡಿದರು. ತಂಡದ 6 ವಿಕೆಟ್‌ ಪತನಗೊಂಡ ನಂತರ ಇಂಪ್ಯಾಕ್ಟ್ ಆಟಗಾರನಾಗಿ ಮೈದಾನಕ್ಕಿಳಿದ ಅವರು, 17 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿತ್ತು. ಮುಖ್ಯವಾಗಿ ತಂಡಕ್ಕೆ ನೆರವಾಗಿದ್ದು ಶಶಾಂಕ್ ಸಿಂಗ್ ಅವರೊಂದಿಗಿನ ಜೊತೆಯಾಟ. ಇವರಿಬ್ಬರೂ ಕೇವಲ 22 ಎಸೆತಗಳಲ್ಲಿ 43 ರನ್‌ ಪೇರಿಸಿ, ತಂಡದ ಗೆಲುವನ್ನು ಮತ್ತಷ್ಟು ಸುಲಭವಾಗಿಸಿದರು.

ಯಾರು ಈ ಅಶುತೋಷ್ ಶರ್ಮಾ?

ತಂಡದ ಗೆಲುವಿಗೆ ಶಶಾಂಕ್ ಅವರಷ್ಟೇ ಕೊಡುಗೆ ನೀಡಿದ ಆಟಗಾರ ಅಶುತೋಷ್.‌ ಈ ಆಟಗಾರ ಈಗಾಗಲೇ ಯುವರಾಜ್‌ ಸಿಂಗ್‌ ದಾಖಲೆ ಬ್ರೇಕ್‌ ಮಾಡಿ ಹೆಸರು ಮಾಡಿದ್ದಾರೆ. ಮಧ್ಯಪ್ರದೇಶದ ರತ್ಲಾಮ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಅಶುತೋಷ್‌, ಅದೇ ರಾಜ್ಯದ ಸ್ವಚ್ಛಂದ ನಗರಿ ಇಂದೋರ್‌ನಲ್ಲಿ ಬೆಳೆದವರು. 2023ರ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಅಬ್ಬರಿಸಿದಾಗಲೇ, ಇವರ ಹೆಸರು ಮುನ್ನೆಲೆಗೆ ಬಂದಿತ್ತು. ಅರುಣಾಚಲ ಪ್ರದೇಶ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಸಿಡಿಸಿದ ಅತ್ಯಂತ ವೇಗದ ಅರ್ಧಶತಕವಾಗಿದೆ.

ಇದನ್ನು ಓದಿ | ವಿರಾಟ್ ಕೊಹ್ಲಿ ಒತ್ತಡದಲ್ಲಿದ್ದಾರೆ; ಆರ್‌ಸಿಬಿಯ ಇತರ ಬ್ಯಾಟರ್‌ಗಳು ನೆರವಾಗಬೇಕು ಎಂದ ಸ್ಟೀವ್ ಸ್ಮಿತ್

ಭಾರತದ ಮಾಜಿ ಆಲ್‌ರೌಂಡರ್‌ ಹಾಗೂ ವಿಶ್ವಕಪ್‌ ಹೀರೋ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ 16 ವರ್ಷಗಳ ದಾಖಲೆಯನ್ನು ಮುರಿದಿದ್ದ ಅಶುತೋಷ್‌, ಇದೀಗ ಐಪಿಎಲ್‌ನಲ್ಲೂ ದಾಖಲೆಯ ಶಿಖರವೇರಲು ಬಂದಿದ್ದಾರೆ. 2007ರ ಟಿ20 ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ದಾಖಲೆ ಬರೆದಿದ್ದರು. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವೇಗದ ಅರ್ಧಶತಕದ ರೆಕಾರ್ಡ್‌ ನಿರ್ಮಿಸಿದ್ದರು. ಸ್ಟುವರ್ಟ್ ಬ್ರಾಡ್ ಅವರ ಓವರ್‌ನ ಎಲ್ಲಾ ಆರು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ದಾಖಲೆ ಮಾಡಿದ್ದ ಆ ಇನ್ನಿಂಗ್ಸ್‌ ದಾಖಲೆ ಪುಟ ಸೇರಿಕೊಂಡಿತ್ತು. ಅದಾದ ನಂತರ ಅದಕ್ಕೂ ಒಂದು ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿ ಅಶುತೋಷ್‌ ರೆಕಾರ್ಡ್‌ ಮಾಡಿದ್ದರು.

ಐಪಿಎಲ್‌ 2024 ಪ್ಲೇಯರ್‌ ಸ್ಟಾಟ್ಸ್

ಐಪಿಎಲ್ 2024ರ ಹರಾಜಿನಲ್ಲಿ, ಪಿಬಿಕೆಎಸ್ ಫ್ರಾಂಚೈಸ್ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಅಶುತೋಷ್ ಶರ್ಮಾ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.‌ ಮುಂದೆ ಮತ್ತಷ್ಟು ಪಂದ್ಯಗಳನ್ನು ಆಡಲಿರುವ ಅವರು, ಇನ್ನಷ್ಟು ರೆಕಾರ್ಡ್‌ ಮಾಡುವ ಸಾಧ್ಯತೆ ಇದೆ.

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಐಪಿಎಲ್‌ 2024 ಟೀಮ್‌ ಸ್ಟಾಟ್

IPL_Entry_Point