ಸಂಕಷ್ಟಕ್ಕೆ ಸಿಲುಕಿರುವ ಆರ್​ಆರ್​ಗೆ ಇನ್​ಫಾರ್ಮ್ ಡೆಲ್ಲಿ ಸವಾಲು; ಮಹತ್ವದ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಸಂಕಷ್ಟಕ್ಕೆ ಸಿಲುಕಿರುವ ಆರ್​ಆರ್​ಗೆ ಇನ್​ಫಾರ್ಮ್ ಡೆಲ್ಲಿ ಸವಾಲು; ಮಹತ್ವದ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಅಂಶಗಳು

ಸಂಕಷ್ಟಕ್ಕೆ ಸಿಲುಕಿರುವ ಆರ್​ಆರ್​ಗೆ ಇನ್​ಫಾರ್ಮ್ ಡೆಲ್ಲಿ ಸವಾಲು; ಮಹತ್ವದ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಅಂಶಗಳು

ಸಂಕಷ್ಟಕ್ಕೆ ಸಿಲುಕಿರುವ ರಾಜಸ್ಥಾನ್ ರಾಯಲ್ಸ್ ತಂಡವು ಇನ್​ಫಾರ್ಮ್ ಡೆಲ್ಲಿ ಕ್ಯಾಪಿಟಲ್ಸ್​ ಸವಾಲು ಎದುರಿಸಲು ಸಜ್ಜಾಗಿದೆ. ಮಹತ್ವದ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

ಸಂಕಷ್ಟಕ್ಕೆ ಸಿಲುಕಿರುವ ಆರ್​ಆರ್​ಗೆ ಇನ್​ಫಾರ್ಮ್ ಡೆಲ್ಲಿ ಸವಾಲು; ಮಹತ್ವದ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಅಂಶಗಳು
ಸಂಕಷ್ಟಕ್ಕೆ ಸಿಲುಕಿರುವ ಆರ್​ಆರ್​ಗೆ ಇನ್​ಫಾರ್ಮ್ ಡೆಲ್ಲಿ ಸವಾಲು; ಮಹತ್ವದ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಅಂಶಗಳು

2025ರ ಇಂಡಿಯನ್ ಪ್ರೀಮಿಯರ್ ಲೀಗ್​ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಮೊದಲ 2 ಪಂದ್ಯ ಸೋಲು, ನಂತರ ಎರಡು ಪಂದ್ಯ ಗೆಲುವು, ಬಳಿಕ ಎರಡು ಪಂದ್ಯಗಳನ್ನು ಸೋತಿರುವ ರಾಜಸ್ಥಾನ್ ರಾಯಲ್ಸ್ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಇನ್​ಫಾರ್ಮ್​ ಡೆಲ್ಲಿ ವಿರುದ್ಧ ಲಯಕ್ಕೆ ಮರಳಲು ಸಜ್ಜಾಗಿದೆ. ಅಗ್ರ ಕ್ರಮಾಂಕದ ಬಲ ಕಳೆದುಕೊಂಡಿರುವ ಆರ್​ಆರ್​, ಬ್ಯಾಟಿಂಗ್ ಡೆಪ್ತ್​ ಇಲ್ಲದಿರುವುದು ಕೂಡ ಸತತ ಸೋಲುಗಳಿಗೆ ಕಾರಣವಾಗುತ್ತಿದೆ.

ಐಪಿಎಲ್ 2025ರಲ್ಲಿ ಆರ್‌ಆರ್ ಪಂಜಾಬ್ ಕಿಂಗ್ಸ್ ನಂತರ 9.72ರ 2ನೇ ಅತ್ಯುತ್ತಮ ಪವರ್‌ಪ್ಲೇ ರನ್ ರೇಟ್​ ಹೊಂದಿರುವ ಆರ್​ಆರ್​, ಮಧ್ಯಮ ಓವರ್‌ಗಳಲ್ಲಿ ಅದು 7.86ಕ್ಕೆ ಇಳಿಯುತ್ತದೆ. ಇದು ಚೆನ್ನೈ ಸೂಪರ್ ಕಿಂಗ್ಸ್ (CSK) ನಂತರ 2ನೇ ಅತ್ಯಂತ ಕೆಟ್ಟದಾಗಿದೆ. ಈಗ ಡೆಲ್ಲಿ ವಿರುದ್ಧ ಮಧ್ಯಮ ಓವರ್​​ಗಳಲ್ಲಿ ಅಬ್ಬರಿಸುವುದು ತುಂಬಾ ಕಷ್ಟ. ಏಕೆಂದರೆ ಕುಲ್ದೀಪ್ ಈ ಓವರ್​​ಗಳಲ್ಲಿ 18 ಓವರ್‌ಗಳನ್ನು ಬೌಲ್ ಮಾಡಿದ್ದು, ಕೇವಲ 5.94ರ ಎಕಾನಮಿಯಲ್ಲಿ 9 ವಿಕೆಟ್‌ ಪಡೆದಿದ್ದಾರೆ. ನೂರ್ ಅಹ್ಮದ್ ನಂತರ 2ನೇ ಸ್ಥಾನದಲ್ಲಿದ್ದಾರೆ. ಸಮತಟ್ಟಾದ ಮೇಲ್ಮೈಯಲ್ಲಿ ಆರ್​ಆರ್​ ತಮ್ಮ ಅಸ್ಥಿರ ಬ್ಯಾಟಿಂಗ್ ಉತ್ತಮಗೊಳಿಸಲು ಬಯಸುತ್ತಿದೆ.

ಸಂಜು ಸ್ಯಾಮ್ಸನ್ ಇಲ್ಲಿಯವರೆಗೆ ಕೇವಲ ಅರ್ಧಶತಕ ಗಳಿಸಿದ್ದಾರೆ, ಆದರೆ ಗೇಮ್​ ಚೇಂಜಿಂಗ್ ಪ್ರದರ್ಶನ ಇನ್ನೂ ಬಂದಿಲ್ಲ. ರಿಯಾನ್ ಪರಾಗ್ ಫಾರ್ಮ್ ಅಸಡ್ಡೆ ತೋರುತ್ತಿದೆ, ನಿತೀಶ್ ರಾಣಾ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಗಮನಾರ್ಹವಾಗಿದೆ. ಆದರೆ ಶಿಮ್ರಾನ್ ಹೆಟ್ಮೆಯರ್ ಆಡುವ ಸ್ಲಾಟ್​ಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ. ಕಳೆದ 3 ಪಂದ್ಯಗಳಲ್ಲಿ 2 ಅರ್ಧಶತಕ ಗಳಿಸಿರುವ ಯಶಸ್ವಿ ಜೈಸ್ವಾಲ್ ಮಾತ್ರ ಸ್ವಲ್ಪ ಸ್ಥಿರತೆ ಕಂಡುಕೊಂಡಿದ್ದಾರೆ. ಆರ್​ಆರ್​​ಗೆ​ ಎಲ್ಲಾ ಬ್ಯಾಟರ್ಸ್​​ ಲಯಕ್ಕೆ ಮರಳುವ ಅನಿವಾರ್ಯ ಇದೆ.

ಡೆಲ್ಲಿ ತಂಡದಲ್ಲೂ ಸಮಸ್ಯೆಗಳು ಇಲ್ಲ ಎಂದಲ್ಲ. ಜೇಕ್ ಫ್ರೇಸರ್-ಮೆಕ್‌ಗುರ್ಕ್ ಫಾರ್ಮ್ ಡಿಸಿ ಚಿಂತೆ ಹೆಚ್ಚಿಸಿದೆ. ಐದು ಪಂದ್ಯಗಳಲ್ಲಿ 9.2ರ ಬ್ಯಾಟಿಂಗ್ ಸರಾಸರಿಯಲ್ಲಿ 46 ರನ್‌ ಗಳಿಸಿದ್ದಾರೆ. ಅವರ ಸ್ಟ್ರೈಕ್​ರೇಟ್ 100 ಇದೆ. ಕಳೆದ ವರ್ಷ ಜೇಕ್ ಫ್ರೇಸರ್ ಬಿರುಸಿನ ಬ್ಯಾಟಿಂಗ್ ಮೂಲಕ 200 ಪ್ಲಸ್ ಸ್ಟ್ರೈಕ್​​ರೇಟ್​ನೊಂದಿಗೆ ಅದ್ಭುತ ಪ್ರದರ್ಶನ ನೀಡಿದ್ದರು. ಡಿಸಿ ಮ್ಯಾನೇಜ್‌ಮೆಂಟ್ ಆತನಿಗೆ ಸಿಕ್ಕಾಪಟ್ಟೆ ಬೆಂಬಲ ನೀಡುತ್ತಿದೆ. ಇನ್ನು ಒಂದೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ ಎಂದರೆ ಪ್ಲೇಯಿಂಗ್​ 11ನಿಂದ ಹೊರಗುಳಿಯಬಹುದು.

ಡಿಸಿ ತಂಡ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಕಂಡಿದೆ. ಆದರೆ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಸದ್ಯ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆದರೆ ಆರ್​ಆರ್ ಆಡಿರುವ 6ರಲ್ಲಿ 4 ಸೋಲು ಕಂಡಿದ್ದು, 2 ಗೆಲುವು ಸಾಧಿಸಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ 8ನೇ ಸ್ಥಾನದಲ್ಲಿದೆ.

ತಂಡದ ಸುದ್ದಿ ಮತ್ತು ಸಂಭಾವ್ಯ XII

ಫಾಫ್ ಡು ಪ್ಲೆಸಿಸ್ ಅವರ ಫಿಟ್ನೆಸ್ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಫಾಫ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಆಡುತ್ತಾರೋ ಇಲ್ಲವೋ ಎನ್ನುವ ಖಚಿತತೆ ಇಲ್ಲ. ಕರುಣ್ ನಾಯರ್ 3ನೇ ಸ್ಥಾನದಲ್ಲಿ ಆಡಲಿದ್ದಾರೆ. ಪ್ಲೆಸಿಸ್ ಇನ್ನೂ ಚೇತರಿಸಿಕೊಳ್ಳದಿದ್ದರೆ, ಎಂಐ ವಿರುದ್ಧದ ಕಣಕ್ಕಿಳಿಸಿದ ಪ್ಲೇಯಿಂಗ್​ XII ನೊಂದಿಗೆ ಆಡಬಹುದು. ಮುಕೇಶ್ ಕುಮಾರ್ ಅವರೊಂದಿಗೆ ಕರುಣ್ ಇಂಪ್ಯಾಕ್ಟ್ ಸಬ್ ಆಗಿ ಕಣಕ್ಕಿಳಿಯಬಹುದು. ಫಾಫ್ ಫಿಟ್ ಆದರೆ ಜೇಕ್​​ರನ್ನು ಕೈಬಿಡಬಹುದು. ಆರ್‌ಆರ್‌ಗೆ ಯಾವುದೇ ಗಾಯದ ಸಮಸ್ಯೆಗಳಿಲ್ಲ. ಆದರೆ ತಂಡದಲ್ಲಿ ಕೆಲವು ಸಮಸ್ಯೆಗಳ ಕಡೆಗೆ ಗಮನ ನೀಡಬೇಕಿದೆ. ತುಷಾರ್ ದೇಶಪಾಂಡೆ ಬದಲಿಗೆ ಆಕಾಶ್ ಮಧ್ವಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬಹುದು. ಆದರೆ ರಾಣಾ ಬದಲಿಗೆ ಕಾರ್ತಿಕೇಯ ಮತ್ತೆ ಪ್ರಭಾವಿ ಆಟಗಾರನಾಗಿ ಬರುವ ನಿರೀಕ್ಷೆಯಿದೆ.

ಡೆಲ್ಲಿ ಕ್ಯಾಪಿಟಲ್ಸ್ (ಸಂಭವನೀಯ XII): ಫಾಫ್ ಡು ಪ್ಲೆಸಿಸ್/ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್ (ನಾಯಕ), ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್​ ಶರ್ಮಾ, ಮುಕೇಶ್ ಶರ್ಮಾ.

ರಾಜಸ್ಥಾನ್ ರಾಯಲ್ಸ್ (ಸಂಭವನೀಯ XII): ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಆಕಾಶ್ ಮಧ್ವಾಲ್/ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ, ಕುಮಾರ್ ಕಾರ್ತಿಕೇಯ.

ಅಂಕಿ-ಅಂಶ

ಐಪಿಎಲ್ 2025 ರಲ್ಲಿ ಕುಲ್ದೀಪ್ ಅವರ 5.60 ರ ಎಕಾನಮಿ.

ಐಪಿಎಲ್‌ನಲ್ಲಿ ಆರ್‌ಆರ್ ಇದುವರೆಗೆ 3ನೇ ಕಡಿಮೆ ವಿಕೆಟ್‌ ಪಡೆದ ತಂಡದವಾಗಿದೆ. ಆರು ಇನ್ನಿಂಗ್ಸ್‌ಗಳಲ್ಲಿ 29 ವಿಕೆಟ್ ಪಡೆದಿದೆ.

ಹೆಡ್-ಟು-ಹೆಡ್ ಮುಖಾಮುಖಿಯಲ್ಲಿ ಆರ್‌ಆರ್ ಸ್ವಲ್ಪ ಮುಂದಿದೆ. 29 ಪಂದ್ಯಗಳಲ್ಲಿ 15 ರಲ್ಲಿ ಗೆದ್ದಿದೆ. ಡಿಸಿ 14 ರಲ್ಲಿ ಗೆದ್ದಿದೆ.

ಐಪಿಎಲ್‌ನಲ್ಲಿ ಜೋಫ್ರಾ ಆರ್ಚರ್ ವಿರುದ್ಧ ಕೆಎಲ್ ರಾಹುಲ್ ಉತ್ತಮ ದಾಖಲೆ ಹೊಂದಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ 151 ಸ್ಟ್ರೈಕ್ ರೇಟ್‌ನಲ್ಲಿ 89 ರನ್‌ ಗಳಿಸಿದ್ದಾರೆ, ಒಮ್ಮೆ ಔಟಾಗಿದ್ದಾರೆ.

ಪಿಚ್ ರಿಪೋರ್ಟ್, ಹವಾಮಾನ ವರದಿ

ಬ್ಯಾಟಿಂಗ್ ಸ್ನೇಹಿ ಡೆಲ್ಲಿ ಪಿಚ್ ಮತ್ತೊಂದು ರನ್ ಉತ್ಸವಕ್ಕೆ ಸಾಕ್ಷಿಯಾಗಬಹುದು. ಪ್ರಸ್ತುತ ಡೆಲ್ಲಿ ಅದ್ಭುತ ಫಾರ್ಮ್​ನಲ್ಲಿರುವುದು ಹೆಚ್ಚು ಲಾಭವಾಗಬಹುದು. ಆದರೆ ಆರ್​ಆರ್​ ಬ್ಯಾಟರ್ಸ್ ಲಯಕ್ಕೆ ಮರಳಿದರೆ ಡೆಲ್ಲಿಯನ್ನು ಧೂಳೀಪಟಗೊಳಿಸಲಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಬುಧವಾರ ರಾಜಧಾನಿಯಲ್ಲಿ ಬೇಸಿಗೆಯ ದಿನವಾಗಿದ್ದು, ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಕನಿಷ್ಠ ತಾಪಮಾನ ಸುಮಾರು 29 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.