ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರ ಸಲಹೆ

ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರ ಸಲಹೆ

IPL 2025: ಬೆಟ್ಟಿಂಗ್ ಆಡಿ ಲ್ಯಾಂಬೊರ್ಗಿನಿ ಕಾರ್ ಗೆಲ್ಲೋದಿರ್ಲಿ, ಇದ್ದ ಕಾರನ್ನೂ ಮಾರೋ ಪರಿಸ್ಥಿತಿ ಬರತತಿ, ಎಚ್ಚರ ಇರ್ರೀ ಎಂದು ಎಚ್ಚರಿಸುತ್ತ ಹುಬ್ಬಳ್ಳಿ ಪೊಲೀಸರು ವಿಡಿಯೋ ಶೇರ್ ಮಾಡಿದ್ರು. ಇದಕ್ಕೆ ಸ್ಪಂದಿಸಿ ಜನ ಮಾರ್ಮಿಕವಾಗಿ, ಐಪಿಎಲ್‌ ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿ ಕೈಲೇ ಪ್ರಚಾರ ಮಾಡ್ಸಿ ಎಂದು ಸಲಹೆ ನೀಡಿದ್ದಾರೆ.

ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರು ಮಾರ್ಮಿಕ ಸಲಹೆ ನೀಡಿರುವುದು ಗಮನಸೆಳೆದಿದೆ.
ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರು ಮಾರ್ಮಿಕ ಸಲಹೆ ನೀಡಿರುವುದು ಗಮನಸೆಳೆದಿದೆ.

IPL 2025: ಭಾರತದ ಉದ್ದಗಲಕ್ಕೂ ಐಪಿಎಲ್‌ ಕ್ರಿಕೆಟ್ ಪಂದ್ಯಗಳ ಜ್ವರ ಕಾವೇರತೊಡಗಿದೆ. ಐಪಿಎಲ್‌ ಸೀಸನ್ ನಿನ್ನೆ (ಮಾರ್ಚ್ 22) ಶುರುವಾಗಿದ್ದು, ಮೇ 25ರ ತನಕ ನಡೆಯಲಿದೆ. ಈ ನಡುವೆ, ಬೆಟ್ಟಿಂಗ್ ಆಪ್‌ಗಳ ಪ್ರಮೋಟ್ ಮಾಡುವುದಕ್ಕೆ ಸೆಲೆಬ್ರಿಟಿಗಳು ಜಾಹೀರಾತಿನಲ್ಲಿ ಭಾಗವಹಿಸಿದ್ದನ್ನು ಗಮನಿಸಿ ಅವರ ವಿರುದ್ಧ ಕ್ರಮಕ್ಕೆ ಆಂಧ್ರ ಪ್ರದೇಶ ಸರ್ಕಾರ ಮುಂದಾಗಿದೆ. ಟಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವೆಲ್ಲದರ ನಡುವೆ ಕರ್ನಾಟಕದಲ್ಲಿ ಹುಬ್ಬಳ್ಳಿ ಪೊಲೀಸರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ ಬೆಟ್ಟಿಂಗ್ ಆಡಬೇಡಿ ಎಂದು ಸಂದೇಶ ಸಾರುವ ಸಾದಾ ಸೀದಾ ಲೋಕಲ್‌ ವಿಡಿಯೋ ಬಹಳ ಜನರ ಗಮನಸೆಳೆದಿದೆ. ನಾನಾ ರೀತಿ ಪ್ರತಿಕ್ರಿಯೆಗಳು ಅಲ್ಲಿ ವ್ಯಕ್ತವಾಗಿದ್ದು, ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ ಎಂಬ ಸಲಹೆ ಮಾತ್ರ ಮಾರ್ಮಿಕವಾಗಿ ಕಂಡುಬಂತು.

ಬೆಟ್ಟಿಂಗ್ ಅಡಿ ಲ್ಯಾಂಬೊರ್ಗಿನಿ ಕಾರ್ ಗೆಲ್ಲೋದಿರ್ಲಿ…

ಐಪಿಎಲ್ ಸೀಸನ್‌ನ ಮೊದಲ ಮ್ಯಾಚ್ ಶುರುವಾಗುವುದಕ್ಕೂ ಮೊದಲು, ಹುಬ್ಬಳ್ಳಿ ಪೊಲೀಸರು ಎಕ್ಸ್ ತಾಣದಲ್ಲಿ ವಿಡಿಯೋ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು, “ಬೆಟ್ಟಿಂಗ್ ಆಡಿ ಲ್ಯಾಂಬೊರ್ಗಿನಿ ಕಾರ್ ಗೆಲ್ಲೋದಿರ್ಲಿ... ಇದ್ದ ಕಾರನ್ನೂ ಮಾರೋ ಪರಿಸ್ಥಿತಿ ಬರತತಿ.. ಎಚ್ಚರ ಇರ್ರೀ.. ಕ್ರಿಕೆಟ್ ಬೆಟ್ಟಿಂಗ್ ಆಡಿ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬೆಟ್ಟಿಂಗ್ ಪ್ರಮೋಷನ್ ನೋಡಿ ಬೆಟ್ಟಿಂಗ್ ಆಡದಿರಿ” ಎಂದು ಸಂದೇಶವನ್ನೂ ಸಾರಿದ್ದರು.

ವಿಡಿಯೋದಲ್ಲಿ ಬೆಟ್ಟಿಂಗ್ ಆಪ್ಸ್ ಕುರಿತಾಗಿ ಜಾಗೃತಿ ಮೂಡಿಸುವ ಸಂದೇಶವಿದೆ. ಮೊಬೈಲ್‌ಗೆ ಮೆಸೇಜ್ ಬರುವ ದೃಶ್ಯದೊಂದಿಗೆ ವಿಡಿಯೋ ಶುರುವಾಗುತ್ತದೆ. ಯುವಕನೊಬ್ಬ ಮೊಬೈಲ್ ಎತ್ತಿಕೊಂಡು, ಈ ಮೆಸೇಜ್‌ನಿಂದ ಬೆಟ್ಟಿಂಗ್ ಆಪ್ಸ್ ಬಗ್ಗೆ ಗೊತ್ತಾಯಿತು. ಇನ್‌ಸ್ಟಾಗ್ರಾಂನಲ್ಲಿ ಕೂಡ ನಾನು ನಂಬಿಕೆ ಇರಿಸಿಕೊಂಡಿದ್ದ ಕಂಟೆಂಟ್ ಕ್ರಿಯೇಟರ್ಸ್‌ ಈ ಬೆಟ್ಟಿಂಗ್ ಆಪ್‌ ಅನ್ನು ಪ್ರಮೋಟ್ ಮಾಡಿದ್ದರು. ಅದನ್ನು ನಂಬಿ ನಾನು ಹಣ ಹೂಡಿಕೆ ಮಾಡಲಾರಂಬಿಸಿದೆ ಎಂದು ಹೇಳುತ್ತ ಬೆಟ್ಟಿಂಗ್‌ ಆಡಿ ಕಳೆದುಕೊಂಡದ್ದೇನು ಎಂಬುದನ್ನು ವಿವರಿಸಿದ ದೃಶ್ಯವಿದೆ.

ಐಪಿಎಲ್‌ ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿ ಕೈಲೇ ಪ್ರಚಾರ ಮಾಡ್ಸಿ; ಪೊಲೀಸರಿಗೆ ಜನರ ಸಲಹೆ

ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸರು ಅಪ್ಲೋಡ್ ಮಾಡಿದ ವಿಡಿಯೋ ಬಹಳ ಚರ್ಚೆಗೆ ಗ್ರಾಸವಾಗಿದೆ. ಹಲವು ರೀತಿಯ ಪ್ರತಿಕ್ರಿಯೆಗಳು ಟ್ವೀಟ್ ಕೆಳಗೆ ಕಾಣಿಸಿಕೊಂಡಿವೆ. ಈ ಪೈಕಿ ಡಿ ಯೂನಿವರ್ಸ್ ಖಾತೆಯಿಂದ “ಇಷ್ಟೆಲ್ಲ ಗೊತ್ತಿದ್ರು ಬೆಟ್ಟಿಂಗ್ apps ban ಯಾಕೆ ಮಾಡಿಲ್ಲ ಸರ್?ಇದು ನಮ್ಮ ದೇಶ ಹೋಡಿರಿ ಚೆಪ್ಪಾಳೆ” ಎಂಬ ಕಾಮೆಂಟ್ ಬಂದಿದೆ.

ಗಿರೀಶ್ ಅಲಿಯಾಸ್ ರಜತ್ ಎಂಬುವವರು, “ಸರ್ಕಾರ ನಡೀತಾ ಇರೋದೇ ಬೆಟ್ಟಿಂಗ್ ತೆರಿಗೆ ಮೇಲೆ” ಎಂದು ಹೇಳಿದ್ದಾರೆ.

ಇನ್ನೊಂದು ಖಾತೆಯಲ್ಲಿ, “ಬೆಸ್ಟ್ ಹೇಳಿದ್ದೀರ ಸರ್‌. ಈ ಸೆಲೆಬ್ರಿಟಿಗಳು ಅವರ್ ಗಳಿಕೆಗಾಗಿ ಏನ್ ಬೇಕಾದ್ರೂ adds ಮಾಡ್ತಿದಾರೆ ಆದ್ರೆ ಈ ತಲೆ ಕೆತ್ತಿರೋ ಜನ ಅವ್ರನ್ನ ನಂಬಿ ಮೋಸ ಹೋಗಿದ್ದಾರೆ. ಸರ್ಕಾರಕ್ಕೆ 30% ಹಣ ಬರ್ತಿದೆ ಜನರಿಗೆ ಏನಾದರೇನು! ಅಲ್ವಾ ?? ಸರ್ಕಾರ ಜೂಜು ಆಡಳಿಕ್ಕೆ ಸರ್ಟಿಫಿಕೇಟ್ ಕೊಟ್ಟಿದೆ ಅಷ್ಟೇ , ಅದೇ ಊರಲ್ಲಿ ಎಲೆ ಆಡಿದ್ರೆ ಅಪರಾಧ!!” ಎಂದು ಟೀಕಿಸಿದ್ಧಾರೆ.

ಪ್ರಶಾಂತ್ ಎಂಬುವವರು, “ಖಾಸಗಿ ವ್ಯಕ್ತಿಗಳು illegal(ಅವರಿಗೆ ಬೇಕಾದ ರೀತಿ ಡಿಸೈನ್) ಮಾಡಿಸಿ, ಟೌನ್, ಹಳ್ಳಿಗಳಲ್ಲಿ ಬೆಟ್ಟಿಂಗ್ ನಡೆಸುತ್ತಾರೆ, ಹತ್ತಿರದ ಪೊಲೀಸ್ ಠಾಣೆಗಳಿಗೆ ತಿಂಗಳಿಗೊಮ್ಮೆ ಯಿಂತಿಷ್ಟು ಅಂತ ಕೊಡ್ತಾರೆ. ಯಾವದೇ ಕೇಸ್ ಆಗಲ್ಲ, ಅವರಿಂದ ಮೋಸ ಹೋದವರ ವಿರುದ್ಧವೇ ಪೊಲೀಸರು ನಿಲ್ತಾರೆ” ಎಂದು ಹೇಳಿದ್ದಾರೆ.

ಮಾರ್ಮಿಕವೆನಿಸಿದ ಕಾಮೆಂಟ್ ಹೀಗಿತ್ತು ನೋಡಿ - “ಐಪಿಎಲ್‌ ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರೇಟಿಂದ ಪ್ರಚಾರ ಮಾಡಿಸಿ”. ಇನ್ನೊಂದರಲ್ಲಿ, ಬೆಟ್ಟಿಂಗ್ ಆಡಿ ಅಂತ ಯಾರೆಲ್ಲ ಪ್ರಚಾರ ಮಾಡ್ತಾರೋ ಅವರೆಲ್ಲರ ವಿರುದ್ಧ ಎಫ್‌ಐಆರ್ ದಾಖಲಿಸಿ ಎಂದು ಆಗ್ರಹಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner