Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ

Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ

2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ಮುಂಬೈ ಇಂಡಿಯನ್ಸ್ ಆಲ್​ರೌಂಡರ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ, 2024 ಸೀಸನ್‌ನಿಂದ ತಾವು ಕಲಿತ ಪಾಠಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ‘

Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ
Hardik Pandya: ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಲ ಏನೆಂದು ವಿವರಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ ಇಂಡಿಯನ್ಸ್ ಪಾಲಿಗೆ 2024 ಕರಾಳ ವರ್ಷ. 5 ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ 17ನೇ ಆವೃತ್ತಿಯ ಅಂಕ ಪಟ್ಟಿಯಲ್ಲಿ ಪಡೆದಿದ್ದ ಸ್ಥಾನ ಕೊನೆಯದ್ದು! ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್ ಮೂಲಕ ಮತ್ತೆ ಮುಂಬೈ ಇಂಡಿಯನ್ಸ್ ಸೇರಿದ ಹಾರ್ದಿಕ್ ಪಾಂಡ್ಯ ಅವರು ರೋಹಿತ್​ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಪಡೆದರು. ಆದರೆ ಮುಂಬೈ ಮಾಲೀಕರು ತೆಗೆದುಕೊಂಡ ನಿರ್ಧಾರ ಹಿಟ್​ಮ್ಯಾನ್ ಅಭಿಮಾನಿಗಳಿಗೆ ಸರಿ ಎನಿಸಲಿಲ್ಲ. ಹಾಗಾಗಿ ಹಾರ್ದಿಕ್​ಗೆ ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಅದೆಲ್ಲವನ್ನೂ ಮೆಟ್ಟಿ ನಿಲ್ಲಲು ಹಾರ್ದಿಕ್​ ಪಾಂಡ್ಯ ಮತ್ತೊಮ್ಮೆ ಸಜ್ಜಾಗಿದ್ದಾರೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ಆಲ್​ರೌಂಡರ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ, 2024 ಸೀಸನ್‌ನಿಂದ ತಾವು ಕಲಿತ ಪಾಠಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ತನ್ನ ಕಳೆದ ವರ್ಷದ ತಪ್ಪುಗಳ ಮೇಲೆ ಸಂಪೂರ್ಣ ವಿಶ್ಲೇಷಣೆ ನಡೆಸಿದ್ದೇನೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ತಂಡ ಪುನರ್​​ನಿರ್ಮಿಸಿದ್ದೇವೆ. ನೂತನ ಸೀಸನ್​ಗೂ ಮುನ್ನ ಹೊಸ ಹೊಸ ದೃಷ್ಟಿಕೋನದೊಂದಿಗೆ ಹೊಸ ಯೋಜನೆಗಳನ್ನು ಕೈಗೊಂಡಿದ್ದೇವೆ. ನಿಜಕ್ಕೂ ರೋಮಾಂಚನಕಾರಿ’ ಎಂದು ಹೇಳಿದ್ದಾರೆ.

 ತಂಡವು ಸಮತೋಲನದಿಂದ ಕೂಡಿದೆ ಎಂದ ಹಾರ್ದಿಕ್

ತಂಡದಲ್ಲಿ ಅನುಭವಿಗಳ ದಂಡೇ ಇದೆ. ಒಂದು ತಂಡವಾಗಿ ಏನು ಬೇಕಿತ್ತೋ, ಅದೆಲ್ಲವೂ ಸಿಕ್ಕಿದೆ. ನಮ್ಮ ಸ್ಪಷ್ಟತೆಗೆ ತಕ್ಕಂತೆ ತಂಡ ಸಿದ್ಧವಾಗಿದೆ. ಈ ವರ್ಷ, ವಾಂಖೆಡೆ ಮೈದಾನ ಒಂದು ಸವಾಲಿನ ಸ್ಥಳವಾಗಿದೆ ಎಂಬುದನ್ನು ಪರಿಗಣಿಸಿ ಬಲವಾದ ಬೌಲಿಂಗ್ ದಾಳಿ ನಿರ್ಮಿಸಿದ್ದೇವೆ. ಇದು ಪ್ರಾಥಮಿಕ ಉದ್ದೇಶವಾಗಿತ್ತು. ವಾಂಖೆಡೆ ಮೈದಾನವು ಹೆಚ್ಚಿನ ಸ್ಕೋರಿಂಗ್ ಪಿಚ್ ಆಗಿರುವ ಕಾರಣ ಅನುಭವ, ವೇಗ ಮತ್ತು ಸ್ವಿಂಗ್ ಮತ್ತು ಬೌನ್ಸ್​ ಹಾಕುವ ಸಾಮರ್ಥ್ಯವಿರುವ ಬೌಲರ್‌ಗಳನ್ನು ಬಯಸಿದ್ದೆವು. ಅದರಂತೆ ಸಮತೋಲಿತ ತಂಡವನ್ನು ಕಟ್ಟಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.

ನಾವು ಅಂದುಕೊಂಡ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ನಮಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಪಾಂಡ್ಯ ಹೇಳಿದ್ದಾರೆ. ಐಪಿಎಲ್‌ಗೆ ಬರುವ ಯುವ ಆಟಗಾರರು ಅತ್ಯಂತ ಪ್ರತಿಭಾನ್ವಿತರು. ನಿಮ್ಮ ಮೇಲೆ ಆತ್ಮವಿಶ್ವಾಸ ಹೆಚ್ಚು ಇರಲಿ. ಐಪಿಎಲ್​ ನಿಮ್ಮ ಪಾಲಿಗೆ ದೊಡ್ಡ ಸವಾಲು. ಮಾನಸಿಕವಾಗಿ ಸದೃಢರಾಗಿರಿ. ಇದು ನಿರ್ಣಾಯಕ ಅಂಶ. ಒಂದು ಋತುವಿನಲ್ಲಿ ಮಾತ್ರವಲ್ಲದೆ ವೃತ್ತಿಜೀವನದುದ್ದಕ್ಕೂ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಸ್ವಲ್ಪ ತಾಳ್ಮೆ, ಪ್ರತಿಭೆ, ನಿರ್ಭೀತ ವಿಧಾನ ಅನುಕರಿಸುವುದು ಅಗತ್ಯ ಎಂದು ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ.

ತನ್ನ ಬ್ಯಾಟಿಂಗ್ ವಿಧಾನದ ಕುರಿತು ಮಾತನಾಡಿದ ಹಾರ್ದಿಕ್, 'ನಾನು ಬ್ಯಾಟಿಂಗ್ ಮಾಡಲು ಕ್ರೀಸ್​​ಗೆ ಹೋದಾಗಲೆಲ್ಲಾ ಆಟವನ್ನು ವಿಶ್ಲೇಷಿಸುತ್ತೇನೆ. ನನ್ನ ನಂತರ ಯಾರು ಬ್ಯಾಟಿಂಗ್ ಮಾಡುತ್ತಾರೆ, ಆ ಹಂತದಲ್ಲಿ ಏನು ಬೇಕು? ನಾನು ಎಷ್ಟು ಅಪಾಯಗಳನ್ನು ತೆಗೆದುಕೊಳ್ಳಬಹುದು. ಸನ್ನಿವೇಶಗಳಿಗೆ ಹಠಾತ್ತನೆ ಪ್ರತಿಕ್ರಿಯಿಸುವ ಬದಲು ಹೇಗೆ ಆಡಬೇಕು ಎಂಬುದು ನನ್ನ ವಿಧಾನ. ಅಂತಿಮ ಓವರ್‌ಗೆ ಕೊಂಡೊಯ್ಯಲು ಸಾಧ್ಯವಾದರೆ, ಅದನ್ನು ಬೇಗ ಮುಗಿಸಲು ಯತ್ನಿಸುವೆ. ಅದಕ್ಕಾಗಿ ನನ್ನನ್ನು ನಾನು ಬೆಂಬಲಿಸಲು ಪ್ರಯತ್ನಿಸುತ್ತೇನೆ. ಇದು ನಾನು ಒತ್ತಡ ನಿಭಾಯಿಸುವ ವಿಧಾನ ಎಂದು ಹೇಳಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner