ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶಿಸಿದ ಖುಷಿಯಲ್ಲಿ ಬುಮ್ರಾ ಜೊತೆ ಹೀಗಾ ನಡ್ಕೊಳ್ಳೋದು ನೀತಾ ಅಂಬಾನಿ!
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶಿಸಿದ ಖುಷಿಯಲ್ಲಿ ಬುಮ್ರಾ ಜೊತೆ ಹೀಗಾ ನಡ್ಕೊಳ್ಳೋದು ನೀತಾ ಅಂಬಾನಿ!

ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಪ್ರವೇಶಿಸಿದ ಖುಷಿಯಲ್ಲಿ ಬುಮ್ರಾ ಜೊತೆ ಹೀಗಾ ನಡ್ಕೊಳ್ಳೋದು ನೀತಾ ಅಂಬಾನಿ!

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್ ಫ್ಲೇ ಆಫ್‌ಗೆ ಪ್ರವೇಶಿಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳುವ ಭರದಲ್ಲಿ ತಂಡದ ಮಾಲಕಿ ನೀತಾ ಅಂಬಾನಿ ಬುಮ್ರಾ ಜೊತೆ ಹೇಗೆ ನಡೆದುಕೊಂಡಿದ್ದಾರೆ ನೋಡಿ.

ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಿದ ಖುಷಿಗೆ ಹೀಗಾ ನಡ್ಕೊಳ್ಳೋದು ನೀತಾ ಅಂಬಾನಿ!
ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಿದ ಖುಷಿಗೆ ಹೀಗಾ ನಡ್ಕೊಳ್ಳೋದು ನೀತಾ ಅಂಬಾನಿ!

ಬುಧವಾರ (ಮೇ 21) ಐಪಿಎಲ್ ಪಂದ್ಯದ ವೇಳೆ ನಡೆದ ಘಟನೆಯೊಂದರ ಫೋಟೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ಲೇ ಆಫ್‌ ಪ್ರವೇಶಿಸಿದ ಖುಷಿ ಹಂಚಿಕೊಳ್ಳುವ ಮುನ್ನ ನೀತಾ ಅಂಬಾನಿ ಬುಮ್ರಾ ಕೈಗೆ ಸ್ಯಾನಿಟೈಸ್ ಮಾಡಿದ್ದಾರೆ. ಇದೇನಪ್ಪಾ ಇವರು ಶೇಕ್ ಹ್ಯಾಂಡ್ ಮಾಡೋಕು ಸ್ಯಾನಿಟೈಸ್ ಮಾಡಬೇಕಾ ಅಂತ ಹಲವರು ಹುಬ್ಬೇರಿಸಬಹುದು, ಆದರೆ ಇದರ ಹಿಂದಿನ ಅಸಲಿ ಕಾರಣ ಬೇರೆಯದೇ ಇದೆ.

ಭಾರತದ ವಿವಿಧ ರಾಜ್ಯಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ನಡುವೆ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ತಮ್ಮ ತಂಡದ ಆಟಗಾರರಿಗೆ ಕೋವಿಡ್ ಪ್ರೋಟೊಕಾಲ್ ನೆನೆಯುವಂತೆ ಮಾಡಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೊನೆಯ ತವರಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದ ನಂತರ, ಮುಂಬೈ ಇಂಡಿಯನ್ಸ್ ತಂಡದ ಆಟಗಾರರನ್ನು ಅಭಿನಂದಿಸುವಾಗ ನೀತಾ ಅಂಬಾನಿ ಮಾಡಿರುವ ಕೆಲಸ ಈಗ ಎಲ್ಲೆಡೆ ವೈರಲ್ ಆಗಿದೆ.

ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ ತಂಡವನ್ನು 59 ರನ್‌ಗಳಿಂದ ಸೋಲಿಸಿತ್ತು. ಈ ವೇಳೆ ಜಸ್ಪ್ರೀತ್ ಬುಮ್ರಾ ಅವರಿಗೆ ಶೇಕ್ ಹ್ಯಾಂಡ್ ಮಾಡಿ ಅಭಿನಂದಿಸುವ ಮುನ್ನ ಮಾಡಿದ ಕೆಲಸ ಎಲ್ಲರ ಗಮನ ಸೆಳೆದಿದೆ. ಶೇಕ್ ಹ್ಯಾಂಡ್ ಮಾಡುವ ಮುನ್ನ ನೀತಾ ಬುಮ್ರಾ ಕೈಗೆ ಹ್ಯಾಂಡ್ ಸ್ಯಾನಿಟೈಸರ್ ಸುರಿದಿದ್ದಾರೆ. ನಂತರ ಮುಂಬೈ ಲೆಗ್ ಸ್ಪಿನರ್ ಕರಣ್ ಶರ್ಮಾ ಜೊತೆ ಕೂಡ ಹೀಗೆ ಮಾಡಿದ್ದಾರೆ. ಬುಮ್ರಾ ನೀತಾ ಅವರ ಕೋರಿಕೆಯನ್ನು ಸಂತೋಷದಿಂದ ಸ್ವೀಕರಿಸಿದ್ದು ಮಾತ್ರವಲ್ಲ, ತಮ್ಮ ಕೈಗಳಿಗೆ ಸ್ಯಾನಿಟೈಸ್ ಮಾಡಿಕೊಂಡ ಬಳಿಕವೇ ಶೇಕ್ ಹ್ಯಾಂಡ್ ಮಾಡಿದ್ದಾರೆ. ನೀತಾ ಅಂಬಾನಿ ಬುಮ್ರಾ ಅವರ ಕೈಗಳಿಗೆ ಸ್ಯಾನಿಟೈಸ್ ಮಾಡುತ್ತಿರುವ ಫೋಟೊಗಳು ಈಗ ವೈರಲ್ ಆಗಿವೆ.

ಎಂಐ ಆಲ್‌ರೌಂಡರ್ ದೀಪಕ್ ಚಾಹರ್ ಕೂಡ ಹ್ಯಾಂಡ್ ಸ್ಯಾನಿಟೈಸರ್‌ನೊಂದಿಗೆ ಓಡಾಡುತ್ತಾ, ಎಂಐ ಮತ್ತು ಡಿಸಿ ಆಟಗಾರರ ಕೈಗಳಿಗೆ ಸ್ಯಾನಿಟೈಸರ್ ಹಾಕುತ್ತಿರುವುದನ್ನು ನೋಡಬಹುದಾಗಿದೆ.

ಎಂಐ ನಾಯಕ ಹಾರ್ದಿಕ್ ಪಾಂಡ್ಯ ಮೈದಾನದ ಸಿಬ್ಬಂದಿಗೆ ಧನ್ಯವಾದ ಹೇಳಲು ಹ್ಯಾಂಡ್‌ಶೇಕ್ ಮಾಡುವ ಬದಲು ಮುಷ್ಟಿ ಬಂಪ್ ಬಳಸಿದರು.

ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂತಹ ಭಾರತದ ವಿವಿಧ ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಪ್ರಸ್ತುತ ದೇಶದಲ್ಲಿ 250 ಕ್ಕೂ ಹೆಚ್ಚು ಕೋವಿಡ್-19 ಸಕ್ರಿಯ ಪ್ರಕರಣಗಳಿವೆ.

ಐಪಿಎಲ್ ಕೂಡ ಇದರಿಂದ ಹೊರತಾಗಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಒಂದು ಪಂದ್ಯವನ್ನು ತಪ್ಪಿಸಿಕೊಂಡರು. ಇದರಿಂದಾಗಿ ಅವರ ಭಾರತ ಆಗಮನ ವಿಳಂಬವಾಗಿತ್ತು.

ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು, ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಜೊತೆಗೆ ಮೇ 29 ರಿಂದ ಆರಂಭವಾಗುವ ಪ್ಲೇಆಫ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿರುವ ಅಗ್ರ ನಾಲ್ಕು ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.