ಐಪಿಎಲ್ 2025ಕ್ಕೆ ಹೊಸ ರೂಲ್ಸ್; ರಿಟೈನ್ ಸಂಖ್ಯೆ, ಪರ್ಸ್ ಮೊತ್ತ ಏರಿಕೆ, ಮಧ್ಯದಲ್ಲೇ ಟೂರ್ನಿ ತೊರೆದರೆ 2 ವರ್ಷ ನಿಷೇಧ-ipl 2025 player retention rules teams allowed six retentions rtm purse hike and more all you need to know prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025ಕ್ಕೆ ಹೊಸ ರೂಲ್ಸ್; ರಿಟೈನ್ ಸಂಖ್ಯೆ, ಪರ್ಸ್ ಮೊತ್ತ ಏರಿಕೆ, ಮಧ್ಯದಲ್ಲೇ ಟೂರ್ನಿ ತೊರೆದರೆ 2 ವರ್ಷ ನಿಷೇಧ

ಐಪಿಎಲ್ 2025ಕ್ಕೆ ಹೊಸ ರೂಲ್ಸ್; ರಿಟೈನ್ ಸಂಖ್ಯೆ, ಪರ್ಸ್ ಮೊತ್ತ ಏರಿಕೆ, ಮಧ್ಯದಲ್ಲೇ ಟೂರ್ನಿ ತೊರೆದರೆ 2 ವರ್ಷ ನಿಷೇಧ

IPL Retention Rules: ಐಪಿಎಲ್​ನಲ್ಲಿ ಪ್ರತಿ ತಂಡವೂ ಎಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕು? ಆರ್​​ಟಿಎಂನಲ್ಲಿ ಎಷ್ಟು ಆಟಗಾರರಿಗೆ ಅವಕಾಶ? ಪರ್ಸ್ ಮೊತ್ತ ಎಷ್ಟು? ಎಲ್ಲಾ ಪಂದ್ಯ ಆಡುವವರಿಗೆ ವಿಶೇಷ ಧನ, ಪಂದ್ಯದ ಶುಲ್ಕ ಎಷ್ಟು ಎಂಬುದರ ಮಹತ್ವದ ಮಾಹಿತಿಯನ್ನು ಬಿಸಿಸಿಐ ಹಂಚಿಕೊಂಡಿದೆ.

ಐಪಿಎಲ್ 2025ಕ್ಕೆ ಹೊಸ ರೂಲ್ಸ್
ಐಪಿಎಲ್ 2025ಕ್ಕೆ ಹೊಸ ರೂಲ್ಸ್

Indian Premier League: 2025ರ ಇಂಡಿಯನ್ ಪ್ರೀಮಿಯರ್​ ಲೀಗ್​ ಆರಂಭಕ್ಕೂ ಮುನ್ನ ಬಿಸಿಸಿಐ (BCCI) ಹೊಸ ನಿಮಯಗಳನ್ನು ಪರಿಚಯಿಸಿದೆ. ಇದೇ ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಪ್ರತಿ ತಂಡವೂ ಎಷ್ಟು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬೇಕು? ಆರ್​​ಟಿಎಂನಲ್ಲಿ ಎಷ್ಟು ಆಟಗಾರರಿಗೆ ಅವಕಾಶ? ಪರ್ಸ್ ಮೊತ್ತ ಎಷ್ಟು? ಎಲ್ಲಾ ಪಂದ್ಯ ಆಡುವವರಿಗೆ ವಿಶೇಷ ಧನ, ಪಂದ್ಯದ ಶುಲ್ಕ ಎಷ್ಟು ಎಂಬುದರ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಹರಾಜಿಗೂ ಮೊದಲು ಐವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ ಈ ಹಿಂದೆ ನಾಲ್ವರನ್ನು ಮಾತ್ರ ರಿಟೈನ್ ಮಾಡಿಕೊಳ್ಳಬಹುದಾಗಿತ್ತು. ಒಬ್ಬರನ್ನು ರೈಟ್​ ಟು ಮ್ಯಾಚ್​ ಅಂದರೆ ಆರ್​ಟಿಎಂ ಆಯ್ಕೆಗೆ ಅವಕಾಶ ನೀಡಲಾಗಿದೆ. ಒಟ್ಟು 6 ಆಟಗಾರರನ್ನು ಉಳಿಸಿಕೊಸಿಕೊಳ್ಳಲು ಅನುಮತಿ ನೀಡಿದೆ. ಆದರೆ, ಬಿಸಿಸಿಐ ಇಲ್ಲೊಂದು ಟ್ವಿಸ್ಟ್ ಅನ್ನು ಇಟ್ಟಿದೆ. ಅಲ್ಲದೆ, ಪರ್ಸ್​​ ಮೊತ್ತ 120 ಕೋಟಿಗೆ ಏರಿಸಿದೆ. ಟೂರ್ನಿಯ ಕೊನೆ ಅವಧಿಯಲ್ಲಿ ಹಲವು ಕಾರಣ ನೀಡಿ ಕೈಕೊಟ್ಟು ಹೋಗುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಹೊಸ ನಿಯಮಗಳು ಇಲ್ಲಿವೆ

ಎಲ್ಲಾ 10 ಫ್ರಾಂಚೈಸಿಗಳು ಪ್ರಸ್ತುತ ತಂಡದಲ್ಲಿರುವ ಆಟಗಾರರ ಪೈಕಿ 6 ಆಟಗಾರರನ್ನು ಉಳಿಸಿಕೊಳ್ಳಬಹುದು. ರಿಟೈನ್ 5 ಮತ್ತು ರೈಟ್ ಟು ಮ್ಯಾಚ್​ ಮೂಲಕ ಒಬ್ಬರನ್ನು ಉಳಿಸಿಕೊಳ್ಳಬೇಕು. ರಿಟೈನ್​ನ ಐವರಲ್ಲಿ ದೇಶ-ವಿದೇಶದವರು ಇರಬಹುದು. ಇಬ್ಬರು ಅನ್‌ಕ್ಯಾಪ್ಡ್‌ ಪ್ಲೇಯರ್ಸ್​ ಉಳಿಸಿಕೊಳ್ಳಲು ಅನುಮತಿ ನೀಡಿದೆ.

ಪರ್ಸ್ ಮೊತ್ತವನ್ನು ಏರಿಸಲಾಗಿದೆ. ಒಟ್ಟು 120 ಕೋಟಿಗೆ ಏರಿಸಲಾಗಿದೆ. ಇದರಲ್ಲಿ ಫ್ರಾಂಚೈಸಿಗಳು ಆಟಗಾರರಿಗೆ ಪರ್ಫಾಮೆನ್ಸ್ ಪೇ ಮತ್ತು ಮ್ಯಾಚ್ ಫೀ ಕೂಡ ನೀಡಬೇಕು. ಹಿಂದಿನ ಆವೃತ್ತಿಯಲ್ಲಿ ಒಂದು ಫ್ರಾಂಚೈಸಿ ಪರ್ಸ್ ಮೊತ್ತ 100 ಕೋಟಿ ರೂಪಾಯಿ ಇತ್ತು. 2026ರ ಐಪಿಎಲ್‌ ಟೂರ್ನಿಗೆ ಇದರ ಮೊತ್ತ 151 ಕೋಟಿ ರೂಪಾಯಿಗೆ ಏರಿಕೆ ಕಾಣಲಿದೆ. ಐಪಿಎಲ್ 2027ಕ್ಕೆ 157 ಕೋಟಿ ಆಗಲಿದೆ.

ಐಪಿಎಲ್​ನಲ್ಲಿ ಇದೇ ಮೊದಲ ಬಾರಿಗೆ ಆಟಗಾರರಿಗೆ ಪಂದ್ಯದ ಶುಲ್ಕವನ್ನು ಪರಿಚಯಿಸಲಾಗಿದೆ. ಇಂಪ್ಯಾಕ್ಟ್‌ ಪ್ಲೇಯರ್‌ ಮತ್ತು ಮೈದಾನಕ್ಕೆ ಇಳಿಯುವ ಎಲ್ಲಾ ಆಟಗಾರರು ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ಮ್ಯಾಚ್‌ ಫೀ ಪಡೆಯಲಿದ್ದಾರೆ. ಒಪ್ಪಂದ ಪಡೆಯುವ ಹೊರತಾಗಿ ಈ ಹಣವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.

ವಿದೇಶಿ ಆಟಗಾರರು ಐಪಿಎಲ್​ನಲ್ಲಿ ಆಡಲು ಇಚ್ಛಿಸಿದರೆ ಮೆಗಾ ಆಕ್ಷನ್​ಗೆ ಹೆಸರು ರಿಜಿಸ್ಟರ್ ಮಾಡಿಕೊಳ್ಳಬೇಕು. ಹೆಸರು ನೋಂದಾವಣಿ ಮಾಡಿಕೊಳ್ಳಲಿಲ್ಲ ಎಂದಾದರೆ ಅಂತಹವರು ಮುಂಬರುವ ಟೂರ್ನಿಗಳಲ್ಲಿ ಹರಾಜಿನಲ್ಲಿ ಪಾಲ್ಗೊಳ್ಳುವಂತ್ತಿಲ್ಲ.

ಒಬ್ಬ ಆಟಗಾರನನ್ನು ತಂಡವೊಂದು ಖರೀದಿಸಿದ ನಂತರ ಟೂರ್ನಿಗೆ ಹಾಜರಾಗುವುದು ಕಡ್ಡಾಯ. ಆದರೆ, ಟೂರ್ನಿಯಲ್ಲಿ ಪಾಲ್ಗೊಳ್ಳದಿದ್ದರೆ ಅಂತಹ ಆಟಗಾರನಿಗೆ ಐಪಿಎಲ್​ನಿಂದ 2 ವರ್ಷ ನಿಷೇಧ ಹೇರಲಾಗುತ್ತದೆ. ಇದು ವಿದೇಶಿ ಆಟಗಾರರಿಗೆ ಆತಂಕ ಹೆಚ್ಚಿಸಿದೆ.

ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ನಿಯಮದಲ್ಲೂ ಬದಲಾವಣೆ ತರಲಾಗಿದೆ. ಈ ನಿಯಮ ಜಾರಿಗೆ ಸಿಎಸ್​ಕೆ ಮನವಿ ಮಾಡಿತ್ತು. ಇನ್ಮುಂದೆ ಯಾವುದೇ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ನಂತರ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಸೇರಿಸಬೇಕು. ಆದರೆ, ಈ ನಿಯಮವನ್ನು 2021ರಲ್ಲಿ ಕೈ ಬಿಡಲಾಗಿತ್ತು. ಇದೀಗ ಮತ್ತೆ ಜಾರಿಗೊಳಿಸಿದೆ. ಈ ನಿಯಮ ಧೋನಿಗೆ ಅನ್ವಯವಾಗುತ್ತದೆ.

mysore-dasara_Entry_Point