ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ; ಕ್ವಾಲಿಫೈಯರ್ 1, ಕ್ವಾಲಿಫೈಯರ್ 2, ಎಲಿಮಿನೇಟರ್ ಪಂದ್ಯಗಳು ಯಾರ ನಡುವೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ; ಕ್ವಾಲಿಫೈಯರ್ 1, ಕ್ವಾಲಿಫೈಯರ್ 2, ಎಲಿಮಿನೇಟರ್ ಪಂದ್ಯಗಳು ಯಾರ ನಡುವೆ?

ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ; ಕ್ವಾಲಿಫೈಯರ್ 1, ಕ್ವಾಲಿಫೈಯರ್ 2, ಎಲಿಮಿನೇಟರ್ ಪಂದ್ಯಗಳು ಯಾರ ನಡುವೆ?

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದ ನಂತರ ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಖಚಿತಪಡಿಸಿದೆ. ಇಲ್ಲಿ ಆರ್‌ಸಿಬಿ ಹಾಗೂ ಪಂಜಾಬ್‌ ತಂಡಗಳಿಗೆ ಫೈನಲ್‌ ಪ್ರವೇಶಕ್ಕೆ ಎರಡು ಅವಕಾಶಗಳಿವೆ.

ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ; ಕ್ವಾಲಿಫೈಯರ್, ಎಲಿಮಿನೇಟರ್ ಪಂದ್ಯಗಳು ಯಾರ ನಡುವೆ?
ಐಪಿಎಲ್ 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ; ಕ್ವಾಲಿಫೈಯರ್, ಎಲಿಮಿನೇಟರ್ ಪಂದ್ಯಗಳು ಯಾರ ನಡುವೆ?

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2025ರ ಋತುವಿನ ಲೀಗ್‌ ಹಂತದ ಎಲ್ಲಾ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದೆ. ನಾಲ್ಕು ತಂಡಗಳು ಕೆಲವು ದಿನಗಳ ಹಿಂದೆಯೇ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಆದರೂ ಅಂತಿಮ ಲೀಗ್ ಪಂದ್ಯದ ಸುತ್ತ ಭಾರಿ ಕುತೂಹಲವಿತ್ತು. ಅಗ್ರ ಎರಡು ಸ್ಥಾನಿಗಳು ಯಾರಾಗ್ತಾರೆ ಎಂಬ ಕುತೂಹಲವಿತ್ತು. ಇದೀಗ ಆ ಕುತೂಹಲ ಅಂತಿಮವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದ ಬೆನ್ನಲ್ಲೇ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ. ಹೀಗಾಗಿ ತಂಡ ಕ್ವಾಲಿಫೈಯರ್‌ 1 ಪಂದ್ಯ ಆಡಲಿದೆ.

ಆರ್‌ಸಿಬಿ ತಂಡದ ಸ್ಟ್ಯಾಂಡ್-ಇನ್ ನಾಯಕ ಜಿತೇಶ್ ಶರ್ಮಾ, ಆರ್‌ಸಿಬಿ ನಾಯಕತ್ವ ವಹಿಸಿದ ಎರಡನೇ ಪಂದ್ಯದಲ್ಲಿ ಅಮೋಘ ಚೇಸಿಂಗ್‌ ನಡೆಸಿ ತಂಡಕ್ಕೆ ದಾಖಲೆಯ ಜಯ ತಂದುಕೊಟ್ಟಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡವು ನೇರವಾಗಿ ಕ್ವಾಲಿಫೈಯರ್‌ ಆಡಲು ದಾರಿ ಮಾಡಿಕೊಟ್ಟಿದ್ದಾರೆ.

ಲಕ್ನೋ ನೀಡಿದ 228 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ (30 ಎಸೆತಗಳಲ್ಲಿ 54 ರನ್) ಮತ್ತು ಫಿಲ್ ಸಾಲ್ಟ್ (19 ಎಸೆತಗಳಲ್ಲಿ 30 ರನ್) ಆಕರ್ಷಕ ಜೊತೆಯಾಟವಾಡಿದರು. ಇಬ್ಬರ ಬ್ಯಾಟ್‌ನಿಂದ ಕೇವಲ 34 ಎಸೆತಗಳಲ್ಲಿ 61 ರನ್‌ ಹರಿದು ಬಂತು. 257.58ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ನಾಯಕ ಜಿತೇಶ್‌ ಶರ್ಮಾ ಆರ್‌ಸಿಬಿ ತಂಡ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗ ದಾಖಲೆಯ ಚೇಸ್ ಅನ್ನು ಪೂರ್ಣಗೊಳಿಸುವಂತೆ ಮಾಡಿದರು.

ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್‌ನಿಂದಾಗಿ ತಂಡವು ಪಂಜಾಬ್‌ ಕಿಂಗ್ಸ್‌ ತಂಡಕ್ಕಿಂದ ತುಸು ಹಿಂದಿದೆ. ಗುಜರಾತ್ ಟೈಟನ್ಸ್ 18 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದರೆ, ಮುಂಬೈ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಐಪಿಎಲ್ 2025 ಪ್ಲೇಆಫ್ ಪಂದ್ಯಗಳು

ಲಕ್ನೋ ವಿರುದ್ಧ ಆರ್‌ಸಿಬಿ ತಂಡ ಆರು ವಿಕೆಟ್‌ಗಳ ಜಯ ಸಾಧಿಸುವುದರೊಂದಿಗೆ, ಮೇ 29ರಂದು ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ವಿರುದ್ಧ ಸೆಣಸಲಿದೆ. ಮರುದಿನ (ಮೇ 30) ಮುಂಬೈ ಮತ್ತು ಗುಜರಾತ್ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಇದೇ ಸ್ಥಳದಲ್ಲಿ ಆತಿಥ್ಯ ವಹಿಸಲಿದೆ.

ಕ್ವಾಲಿಫೈಯರ್ 1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸುತ್ತದೆ. ಸೋತ ತಂಡ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜೊತೆ ಜೂನ್ 1ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 2ರಲ್ಲಿ ಮುಖಾಮುಖಿಯಾಗಲಿವೆ. ಇದೇ ಮೈದಾನದಲ್ಲಿ ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ.

ಐಪಿಎಲ್ 2025 ಪ್ಲೇಆಫ್

  • ಕ್ವಾಲಿಫೈಯರ್ 1: ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮೇ 29, ಚಂಡೀಗಢ
  • ಎಲಿಮಿನೇಟರ್: ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ - ಮೇ 30, ಚಂಡೀಗಢ
  • ಕ್ವಾಲಿಫೈಯರ್ 2: ಕ್ವಾಲಿಫೈಯರ್ 1ರ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ - ಜೂನ್ 1, ಅಹಮದಾಬಾದ್
  • ಫೈನಲ್: ಕ್ವಾಲಿಫೈಯರ್ 1 ರ ವಿಜೇತ ತಂಡ vs ಕ್ವಾಲಿಫೈಯರ್ 2ರ ವಿಜೇತ ತಂಡ - ಜೂನ್ 3, ಅಹಮದಾಬಾದ್

ಇದನ್ನೂ ಓದಿ | ಜಿತೇಶ್ ಶರ್ಮಾ ಗುಡುಗು; ಐತಿಹಾಸಿಕ ರನ್​ ಚೇಸ್​ನೊಂದಿಗೆ ಮೊದಲ ಕ್ವಾಲಿಫೈಯರ್​ಗೆ ಲಗ್ಗೆಯಿಟ್ಟ ಆರ್​ಸಿಬಿ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.